ಬಿಗ್ ಬಾಸ್ ಮತ್ತೊಂದು ಹೆಸರು ಗಲಾಟೆ. ಈ ಹಿನ್ನೆಲೆ ಬಿಗ್ ಬಾಸ್ ಕನ್ನಡ ಸೀಸನ್ 12 ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅಶಾಂತಿಯೇ ಈ ಮನೆಯ ಲಕ್ಷಣ. ಇದು ಮನೆಯೊಳಗೆ ಹೋಗುವ ಸ್ಫರ್ಧಿಗಳಿಗೆ ಚೆನ್ನಾಗಿಯೇ ಗೊತ್ತು. ಕಾರ್ಯಕ್ರಮದ ಆಯೋಜಕರಿಗೆ ಕೂಡ ಗೊತ್ತು. ಪ್ರತಿ ವರ್ಷ ವಿವಾದಾತ್ಮಕ ವ್ಯಕ್ತಿಗಳನ್ನು ,ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮನೆಯೊಳಗೆ ಕಳುಹಿಸಲಾಗುತ್ತೆ.
ಈ ಬಾರಿಯ ಕಾರ್ಯಕ್ರಮ ಕೂಡ ಇದರಿಂದ ಹೊರತಾಗಿಲ್ಲ. ಆದರೆ.. ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ ಈ ಬಾರಿ ಮನೆಯಲ್ಲಿ ”ಕಿರಿಕ್ ಪಾರ್ಟಿ”ಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿಯೇ ಮನೆಯಲ್ಲಿ ಇಲ್ಲಿಯವರೆಗೆ ವಾಗ್ಯುದ್ದ ಮಾತ್ರ ನಡೆಯುತ್ತಿತ್ತು. ನೋಡುಗರಿಗೆ ಯಾಕೋ ಈ ಬಾರಿ ”ಬಿಗ್ ಬಾಸ್” ಸಪ್ಪೆಯಾಗಿದೆಯಲ್ಲಾ ಎನ್ನುವ ಭಾವನೆ ಕೂಡ ಬರುತ್ತಿತ್ತು.

ಆದರೆ.. ಮೊನ್ನೆಯ ದಿವಸ ಕಾರ್ಯಕ್ರಮಕ್ಕೆ ಒಂದು ದಿನದ ವಿರಾಮ ಸಿಕ್ಕಿತ್ತಲ್ಲ. ಅಲ್ಲಿಂದ ಹೊಸ ಹುರುಪು ಶುರು ಆಗಿದೆ. ಉತ್ಸಾಹದಲ್ಲಿ ಸ್ಪರ್ಧಿಗಳು ಆಟ ಆಡುತ್ತಿದ್ದಾರೆ. ಈ ಕಾರ್ಯಕ್ರಮದ ದಿಕ್ಕು ಈಗ ಬದಲಾದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ”ಬಿಗ್ ಬಾಸ್” ಮನೆಯೊಳಗೆ ವಾತಾವರಣ ಕಾವೇರಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಚಂದ್ರಪ್ರಭ ಮತ್ತು ಡಾಗ್ ಬ್ರೀಡರ್ ಸತೀಶ್ ಜಗಳ ಆಡ್ತಾರೆ . ಇದೀಗ ಅದ್ಯಾಕೋ ಸಾಕಾಗಿ ಹೋಗಿ ಸಿಟ್ಟು ನೆತ್ತಿಗೇರಿ ಜಗಳಕ್ಕೆ ನಿಂತು ಬಿಟ್ಟಿದ್ದಾರೆ. ಕಿಚನ್ ಅಲ್ಲಿದ್ದ ನೀರಿನ ಗ್ಲಾಸ್ ಅನ್ನೆ ಒಡೆದು ಹಾಕಿದ್ದಾರೆ.

ಜಂಟಿಗಳ ಜಗಳ ಹೆಚ್ಚಾಗಿದೆ. ಮೊನ್ನೆ ಮಂಜು ಭಾಷಿಣಿ ಹಾಗೂ ರಾಶಿಕಾ ಶೆಟ್ಟಿ ಕಿತ್ತಾಡಿಕೊಂಡಿದ್ದರು., ಚಂದ್ರಪ್ರಭ ಹಾಗೂ ಡಾಗ್ ಬ್ರೀಡರ್ ಸತೀಶ್ ನಡುವೆನೂ ಜಗಳ ಆಗಿದೆ. ಅದು ನಿಜಕ್ಕೂ ಭಯಂಕರ ಅನಿಸುತ್ತದೆ.



