ಇಂದು ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಜೋಡಿಯ ಮದುವೆ 2 ದಶಕದ ಹಿಂದೆ ಸರಳವಾಗಿ, ಕೇವಲ ಕುಟುಂಬದವರ ಸಮ್ಮುಖದಲ್ಲಿ ಧರ್ಮಸ್ಥಳ ದೇವಸ್ಥಾನದಲ್ಲಿ ಮದುವೆಯಾದರು. ಬಳಿಕ ಬೆಂಗಳೂರಿನಲ್ಲಿ ಇವರ ರಿಸೆಪ್ಶನ್ ಸಹ ಜೋರಾಗಿ ನಡೆದಿತ್ತು. ಇಷ್ಟು ವರ್ಷಗಳ ದಾಂಪತ್ಯ ಜೀವನದಲ್ಲಿ ಏಳು ಬೀಳುಗಳನ್ನು ಕಂಡಿರುವ ಈ ಜೋಡಿ, ಜೊತೆಯಾಗಿರುವುದು ಸಂತೋಷದ ವಿಚಾರ. ಈ ವಿಶೇಷ ದಿವಸ ದರ್ಶನ್ ಅವರ ಅಭಿಮಾನಿಗಳು ಸಹ ಸ್ಪೆಷಲ್ ಪೋಸ್ಟ್ ಗಳನ್ನು ಹಾಕಿ, ತಮ್ಮ ಮೆಚ್ಚಿನ ಜೋಡಿಗೆ ವಿಶ್ ಮಾಡುತ್ತಿದ್ದಾರೆ. ಇನ್ನು ವಿಜಯಲಕ್ಷ್ಮಿ ಅವರು ಸಹ ಗಂಡನ ಜೊತೆಗಿರುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಶೇಷ ಪೋಸ್ಟ್ ಬಗ್ಗೆ ಹಾಗೂ ವಿಶೇಷ ದಿವಸದ ಬಗ್ಗೆ ಪೂರ್ತಿ ಡೀಟೇಲ್ಸ್ ಇಲ್ಲಿದೆ ನೋಡಿ..
ಮೊದಲಿಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ, ಡಿಬಾಸ್ ಅವರಿಗೆ ಪರಿಚಯ ಇರುವ ಹುಡುಗಿ ಆಗಿದ್ದರು ವಿಜಯಲಕ್ಷ್ಮಿ ಅವರು, ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ. ಪ್ರೀತಿಸುತ್ತಿದ್ದ ಈ ಜೋಡಿ, ಮನೆಯವರನ್ನು ಒಪ್ಪಿಸಿ ಸಂತೋಷದಿಂದ ಮದುವೆಯಾದರು. ಎಲ್ಲರ ಆಶೀರ್ವಾದ ಈ ಜೋಡಿಗೆ ಸಿಕ್ಕಿತು. ಇನ್ನು ಶುರುವಿನಲ್ಲಿ ಈ ಜೋಡಿ ಬಹಳ ಚೆನ್ನಾಗಿದ್ದರು, ಈ ಜೋಡಿಗೆ ಒಬ್ಬ ಮಗ ಇದ್ದಾನೆ. ಇವರ ಮಗನ ಹೆಸರು ವಿನಿಶ್. ಅಪ್ಪ ಅಮ್ಮನ ಜೊತೆಗೆ ಸದಾ ಸಪೋರ್ಟಿವ್ ಆಗಿರುವ ಮಗ ಆಗಿದ್ದಾನೆ ವಿನಿಷ್. ಇನ್ನು ಈ ಜೋಡಿ ಮಗನ ಬಗ್ಗೆ ಬಹಳ ಪ್ರೀತಿ ಹೊಂದಿದ್ದಾರೆ, ಇಬ್ಬರೂ ಮಗನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಂದು ಈ ಕುಟುಂಬ ಇಷ್ಟು ಚೆನ್ನಾಗಿರುವುದಕ್ಕೆ ವಿಜಯಲಕ್ಷ್ಮಿ ಅವರೇ ಕಾರಣ ಎಂದು ಹೇಳಿದರೂ ಸಹ ತಪ್ಪಲ್ಲ.

ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಯ ನಡುವೆ ಹಲವು ಸಾರಿ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಎದುರಾಗಿದ್ದು ಇದೆ, ಅದೆಲ್ಲವನ್ನು ಎದುರಿಸಿದ್ದಾರೆ. ದೂರ ಆಗುವ ಸಂದರ್ಭ ಬಂದರೂ ಸಹ ವಿಜಯಲಕ್ಷ್ಮೀ ಅವರು ಧೃತಿಗೆಡಲಿಲ್ಲ, ತಮ್ಮ ಸಂಸಾರವನ್ನು ಸಹ ಬಿಟ್ಟುಕೊಡಲಿಲ್ಲ. ಬಹಳ ಚೆನ್ನಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಕಳೆದ ವರ್ಷ ದರ್ಶನ್ ಅವರು ಎಷ್ಟು ದೊಡ್ಡ ಕಷ್ಟದಲ್ಲಿ ಸಿಲುಕಿಕೊಂಡರು, ತಪ್ಪು ಮಾಡಿದರು ಎಂದು ನಮಗೆಲ್ಲಾ ಗೊತ್ತೇ ಇದೆ. ಆ ವೇಳೆ ದರ್ಶನ್ ಅವರ ಜೊತೆಗೆ ಯಾರು ಕೂಡ ನಿಲ್ಲಲಿಲ್ಲ, ಎಲ್ಲರೂ ಅವರನ್ನು ಬಿಟ್ಟು ಹೋದರು. ಆದರೆ ದರ್ಶನ್ ಅವರ ಜೊತೆಯಾಗಿ ನಿಂತಿದ್ದು ವಿಜಯಲಕ್ಷ್ಮಿ ದರ್ಶನ್ ಅವರು ಮಾತ್ರ. ದರ್ಶನ್ ಅವರು ಆ ವೇಳೆ ವಿಜಯಲಕ್ಷ್ಮೀ ಅವರನ್ನು ಇನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು ಎಂದು ಹೇಳಿದರೆ ಖಂಡಿತ ತಪ್ಪಲ್ಲ.
ವಿಜಯಲಕ್ಷ್ಮಿ ಅವರು ಬಹಳ ಕಷ್ಟಪಟ್ಟು ದರ್ಶನ್ ಅವರನ್ನು ಇದೆಲ್ಲದರಿಂದ ಹೊರತಂದರು. ದರ್ಶನ್ ಅವರ ತಾಯಿ ಮತ್ತು ತಮ್ಮ ಇಬ್ಬರೂ ಸಹ ದರ್ಶನ್ ಅವರನ್ನು ಇಷ್ಟು ಬೇಗ ಕರೆದುಕೊಂಡು ಬರುವುದಕ್ಕೆ ಆಗುತ್ತದೋ, ಇಲ್ಲವೋ, ಏನಾಗುತ್ತದೆಯೋ ಎಲ್ಲವೂ ಸಮಸ್ಯೆಗಳೇ ಆಗಬಹುದು ಎಂದು ಭಯಪಟ್ಟಿದ್ದರು. ಆದರೆ ವಿಜಯಲಕ್ಷ್ಮಿ ಅವರು ಎಲ್ಲರಿಗೂ ಧೈರ್ಯ ತುಂಬಿದ್ದರು. ಏನೇ ಆಗಲಿ, ದರ್ಶನ್ ಅವರನ್ನು ಖಂಡಿತವಾಗಿ ಕಷ್ಟದಿಂದ ಪಾರು ಮಾಡಿ ಕರೆದುಕೊಂಡು ಬರುವುದಾಗಿ ಹೇಳಿದ್ದರು ವಿಜಯಲಕ್ಷ್ಮೀ ಅವರು. ಅದೇ ರೀತಿ ಅಂದುಕೊಂಡ ಹಾಗೆ ಮಾಡಿದರು, ಏನೇ ಆದರು ಧೃತಿಗೆಡದೆ ದರ್ಶನ್ ಅವರನ್ನು ಉಳಿಸಿದರು. ಈಗ ದರ್ಶನ್ ಅವರ ಪೂರ್ತಿಯಾಗಿ ನೋಡಿಕೊಳ್ಳುತ್ತಿರುವುದು ವಿಜಯಲಕ್ಷ್ಮಿ ಅವರೇ.
ದರ್ಶನ್ ಅವರ ಲೈಫ್ ಅನ್ನು ಪೂರ್ತಿಯಾಗಿ ಬದಲಾಯಿಸಿ, ಒಳ್ಳೇ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದರೂ ತಪ್ಪಲ್ಲ. ಇನ್ನು ಇಂದು ಈ ಜೋಡಿಗೆ ವಿಶೇಷ ದಿವಸ. ಇಂದು ಅವರಿಬ್ಬರ ವಿವಾಹ ವಾರ್ಷಿಕೋತ್ಸವ, ದರ್ಶನ್ ಅವರ ಬದುಕಿಗೆ ವಿಜಯಲಕ್ಷ್ಮಿ ಅವರು ಬಂದು, ಅವರ ಮನೆಯ ದೀಪವಾಗಿ ಬೆಳಗುವುದಕ್ಕೆ ಶುರುವಾದ ದಿನ. ಈ ವಿಶೇಷವಾದ ವಿಜಯಲಕ್ಷ್ಮಿ ಅವರು ದರ್ಶನ್ ಅವರ ಜೊತೆಗಿರುವ ವಿಶೇಷವಾದ ಫೋಟೋ ಒಂದನ್ನು ಶೇರ್ ಮಾಡಿ, “Eternal..” ಎಂದು ಬರೆದುಕೊಂಡಿದ್ದಾರೆ.. ಆ ಒಂದು ಪದವೇ ದರ್ಶನ್ ಅವರ ಬಗ್ಗೆ ಇವರಿಗೆ ಎಷ್ಟು ಪ್ರೀತಿ ಇದೆ ಎಂದು ತಿಳಿಸುತ್ತದೆ. ಈ ಜೋಡಿ ಮೇಲೆ ಯಾರ ದೃಷ್ಟಿ ಕೂಡ ಬೀಳದೇ ಇರಲಿ, ಇವರಿಬ್ಬರು ಹೀಗೆ ಸಂತೋಷವಾಗಿ ಇರಲಿ ಎನ್ನುವುದೇ ಇವರಿಬ್ಬರ ಅಭಿಮಾನಿಗಳ ಆಸೆ ಆಗಿದೆ. ವಿಜಯಲಕ್ಷ್ಮಿ ಅವರ ಜೊತೆಗಿದ್ದರೆ ದರ್ಶನ್ ಅವರು ಬಹಳ ಚೆನ್ನಾಗಿರುತ್ತಾರೆ ಎನ್ನುವುದು ಎಲ್ಲರ ಅಭಿಪ್ರಾಯ.
ಇನ್ನು ದರ್ಶನ್ ಅವರು ಹೊರಗಡೆ ಬಂದ ನಂತರ, ವಿಜಯಲಕ್ಷ್ಮಿ ಅವರು ಅದೆಷ್ಟು ದೇವಸ್ಥಾನಗಳಿಗೆ ಹೋಗಿ, ಪೂಜೆ ಮಾಡಿಸಿ, ದರ್ಶನ್ ಅವರಿಗೆ ಒಳ್ಳೆಯದಾಯಲಿ ಎಂದು ಕೇಳಿಕೊಂಡರು ಎಂದು ಗೊತ್ತೇ ಇದೆ. ಇನ್ನು ದರ್ಶನ್ ಅವರು ಸಹ ಕುಟುಂಬದ ಜೊತೆಗೆ ಹಲವು ದೇವಸ್ಥಾನಗಳಿಗೆ ಹೋಗಿ ಬಂದರು. ಹೀಗೆ ಕುಟುಂಬ ಅನ್ನೋದು ಎಲ್ಕರನ್ನು ಕೂಡ ಬದಲಾಯಿಸುತ್ತಿದೆ. ಈಗ ದರ್ಶನ್ ಅವರು ಮಿಲನಾ ಪ್ರಕಾಶ್ ಅವರ ನಿರ್ದೇಶನದ ಡೆವಿಲ್ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೈಸೂರಿನಲ್ಲಿ, ಹಾಗೂ ಹೊರರಾಜ್ಯಗಳಲ್ಲಿ ಎಲ್ಲಾ ಕಡೆ ಸಿನಿಮಾದ ಶೂಟಿಂಗ್ ನಲ್ಲಿ ದರ್ಶನ್ ಅವರು ಭಾಗವಹಿಸಿದ್ದಾರೆ. ಎಲ್ಲಾ ಕಡೆಗೂ ಕುಟುಂಬದ ಜೊತೆಯೇ ಹೋಗಿ ಬಂದರು. ಈಗ ಹೊಸ ಲುಕ್ ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ.
ಇನ್ನು ದರ್ಶನ್ ಅವರು ಸಹ ಈಗ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬಕ್ಕೆ ಕೊಡುತ್ತಿರುವುದು ಸಂತೋಷದ ವಿಷಯ. ಇಂದು ಈ ಜೋಡಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ಕೆಲವು ಫೋಟೋಗಳು ವೈರಲ್ ಆಗಿದ್ದು, ದರ್ಶನ್ ಅವರು ಕ್ಲೀನ್ ಶೇವ್ ಲುಕ್ ನಲ್ಲಿ, ಬಹಳ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಸ್ ನೋಡಿ, ಫ್ಯಾನ್ಸ್ ಸಹ ಬಹಳ ಸಂತೋಷಪಟ್ಟಿದ್ದು, ಇಬ್ಬರು ಯಾವಾಗಲೂ ಹೀಗೆ ಇರಲಿ ಎನ್ನುತ್ತಿದ್ದಾರೆ. ಇನ್ನು ಡೆವಿಲ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿರುವುದನ್ನು ನೋಡಿದರೆ, ಬಹುಶಃ ಇದೇ ವರ್ಷ ಸಿನಿಮಾ ಬಿಡುಗಡೆ ಆಗುವುದರಲ್ಲಿ ಸಂಶಯವಿಲ್ಲ. ದಸರಾ ಹಬ್ಬಕ್ಕ ಅಥವಾ ಹೊಸ ವರ್ಷದ ವೇಳೆಗೆ ಸಿನಿಮಾ ತೆರೆಕಾಣುತ್ತಾ ಅಥವಾ ಹೊಸ ಅಪ್ಡೇಟ್ ಯಾವಾಗ ಸಿಗುತ್ತದೆ ಎಂದು ಕಾದು ನೋಡಬೇಕಿದೆ.



