ಚಿತ್ರರಂಗ ಎಂದಮೇಲೆ ಅಲ್ಲಿ ಪಾರ್ಟಿಗಳು, ಸೆಲೆಬ್ರೇಷನ್ ಗಳು ಇದೆಲ್ಲವೂ ಕಾಮನ್. ಆದರೆ ಯಾವುದೇ ಪಾರ್ಟಿ ಮಾಡಿದರೂ ಅಥವಾ ಸೆಲೆಬ್ರೇಷನ್ ಇದ್ದರೂ ಕೆಲವು ರೂಲ್ಸ್ ಗಳಿವೆ. ಅದೆಲ್ಲವನ್ನು ಪಾಲಿಸಲೇಬೇಕು. ಸರ್ಕಾರದ ರೂಲ್ಸ್ ಫಾಲೋ ಮಾಡದೇ ಹೋದರೆ, ಅಂಥವರು ಪೊಲೀಸರ ಕೈಗೆ ಸಿಕ್ಕಿಬಿದ್ದರೆ, ತಕ್ಕ ಶಿಕ್ಷೆ ಅನುಭವಿಸುತ್ತಾರೆ. ಇಂಥ ಹಲವು ಕೇಸ್ ಗಳನ್ನು ನಾವು ನೋಡಿದ್ದೇವೆ. ಇದೀಗ ಖ್ಯಾತ ತೆಲುಗು ಗಾಯಕಿ ಮಂಗ್ಲಿ ಅವರು ಇಂಥದ್ದೊಂದು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಇವರ ಬರ್ತ್ ಡೇ ಪಾರ್ಟಿ ನಡೆದಿದ್ದು, ಅಲ್ಲಿ ಗಾಂ*ಜಾ ಜೊತೆಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ತಪಾಸಣೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಆಗಿರುವುದು ಏನು? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ.. ಮಂಗ್ಲಿ ಕೇಸ್ ನ ಪಿನ್ ಟು ಪಿನ್ ಡೀಟೇಲ್ಸ್..

ಗಾಯಕಿ ಮಂಗ್ಲಿ ಮೊದಲಿಗೆ ಜಾನಪದ ಹಾಡುಗಳನ್ನು ಹಾಡುತ್ತಾ ಹೆಚ್ಚು ಜನಪ್ರಿಯತೆ ಪಡೆದುಕೊಂಡವರು. ಮಂಗ್ಲಿ ಮತ್ತು ಅವರ ತಂಗಿ ಇಬ್ಬರು ಕೂಡ ತಮ್ಮ ವಿಭಿನ್ನ ಕಂಠಗಳಿಂದ ಗುರುತಿಸಿಕೊಂಡವರು. ಇಂಥ ಮಂಗ್ಲಿ ಅವರು ತೆಲುಗು ಮತ್ತು ಕನ್ನಡ ಎರಡು ಭಾಷೆಯಲ್ಲಿ ಹಾಡುಗಳನ್ನು ಹಾಡಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇವರು ಹಾಡಿರುವ ಬಹುತೇಕ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗುತ್ತಿದೆ ಎನ್ನುವ ವಿಷಯ ಗೊತ್ತೇ ಇದೆ. ಕನ್ನಡದಲ್ಲಿ ಕೂಡ ಇವರಿಗೆ ಬಹಳ ಬೇಡಿಕೆ ಇದೆ. ತೆಲುಗಿನಲ್ಲಿ ಕೂಡ ಒಳ್ಳೆಯ ಹಾಡುಗಳನ್ನು ಹಾಡಿದ್ದಾರೆ. ದರ್ಶನ್ ಅವರ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಹಾಡಿನ ತೆಲುಗು ವರ್ಷನ್ ಹಾಡಿದ್ದು ಮಂಗ್ಲಿ ಅವರು. ಆ ಹಾಡಿನ ಮೂಲಕ ಇವರಿಗೆ ಇದ್ದ ಜನಪ್ರಿಯತೆ ಹೆಚ್ಚಾಯಿತು ಎಂದು ಹೇಳಿದರೆ ತಪ್ಪಲ್ಲ.
ಈ ಹಾಡಿನಿಂದ ಕನ್ನಡದಲ್ಲಿ ಕೂಡ ಇವರಿಗೆ ಜನಪ್ರಿಯತೆ ಹೆಚ್ಚಾಯಿತು. ಅರ್ಜುನ್ ಜನ್ಯ ಅವರು ಸಹ ಮಂಗ್ಲಿ ಅವರಿಗೆ ಕನ್ನಡದಲ್ಲಿ ಹಾಡುವ ಅವಕಾಶವನ್ನು ನೀಡಿದ್ದಾರೆ. ಹೀಗೆ ಜನಪ್ರಿಯತೆ ಹೊಂದಿರುವ ಮಂಗ್ಲಿ ಹೊಂದಿರುವ ಮಂಗ್ಲಿ ಅವರು ಹೈದರಾಬಾದ್ ನ ರೆಸಾರ್ಟ್ ಒಂದರಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳುವ ವೇಳೆ ಎಡವಟ್ಟು ನಡೆದಿದೆ. ಹೈದರಾಬಾದ್ ನ ತ್ರಿಪುರಾ ರೆಸಾರ್ಟ್ ನಲ್ಲಿ ಮಂಗ್ಲಿ ಬರ್ತ್ ಡೇ ಸೆಲೆಬ್ರೇಷನ್ ನಡೆದಿತ್ತು. ಮಂಗ್ಲಿ ಹುಟ್ಟುಹಬ್ಬಕ್ಕೆ ಅವರ ಆತ್ಮೀಯ ಬಳಗ ಮತ್ತು ಚಿತ್ರರಂಗದ ಗಣ್ಯರು ಎಲ್ಲರನ್ನು ಕರೆಯಲಾಗಿತ್ತು. ಎಲ್ಲರೂ ಪಾರ್ಟಿಗೆ ಬಂದು ಎಂಜಾಯ್ ಮಾಡುತ್ತಿದ್ದರು. ಆದರೆ ಈ ಪಾರ್ಟಿ ಬಗ್ಗೆ ಪೊಲೀಸರಿಗೆ ಕೂಡ ಮಾಹಿತಿ ಸಿಕ್ಕಿತ್ತು. ಮಂಗ್ಲಿ ಅವರ ಪಾರ್ಟಿಯಲ್ಲಿ ವಿದೇಶಿ ಮದ್ಯ ಮತ್ತು ಗಾಂ*ಜಾ ಬಳಕೆ ಆಗಿದೆ ಎಂದು ಸುದ್ದಿ ಸಿಕ್ಕಿದೆ.

ಅದನ್ನು ಹುಡುಕಿಕೊಂಡು ಪೊಲೀಸರು ಬಂದಿದ್ದಾರೆ. ರೆಸಾರ್ಟ್ ನಲ್ಲಿ ಮಂಗ್ಲಿ ಅವರ ಕಡೆಯ 50ಕ್ಕಿಂತ ಹೆಚ್ಚು ಜನರು, ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿದ್ದರು. ಕುಡಿದು, ತಿಂದು ಎಂಜಾಯ್ ಮಾಡುತ್ತಿದ್ದರು, ಆ ವೇಳೆಯೇ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳವನ್ನು ದಾಳಿ ಮಾಡಿ, ಅಲ್ಲಿದ್ದವರನ್ನೆಲ್ಲಾ ಟೆಸ್ಟ್ ಮಾಡುವುದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಷ್ಟು ಜನರ ಪೈಕಿ ಸುಮಾರು 9 ಜನರಲ್ಲಿ ಪಾಸಿಟಿವ್ ರಿಸಲ್ಟ್ ಬಂದಿದೆ ಎಂದು ಮಾಹಿತಿ ಸಿಕ್ಕಿದೆ. ತ್ರಿಪುರಾ ರೆಸಾರ್ಟ್ ಗೆ ವಿದೇಶಿ ಮದ್ಯ ಮತ್ತು ಗಾಂ**ಜಾ ಸಪ್ಲೈ ಆಗುತ್ತಿದೆ ಎನ್ನುವ ವಿಷಯ ಪೊಲೀಸರಿಗೆ ಹೇಗೆ ತಿಳಿದುಬಂದಿತು ಎನ್ನುವ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ, ಆದರೆ ಪೊಲೀಸರು ತಮ್ಮ ಕೆಲಸವನ್ನು ಮಾಡಿ, ಸಮಯಕ್ಕೆ ಸರಿಯಾಗಿ ರೆಸಾರ್ಟ್ ಗೆ ಹೋಗಿ, ಎಲ್ಲವನ್ನು ಚೆಕ್ ಮಾಡಿ, ಎಲ್ಲರನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ.
ಸಿನಿಮಾ ರಂಗದಲ್ಲಿ ಸೆಲೆಬ್ರಿಟಿಗಳು ಬರ್ತ್ ಡೇ ಪಾರ್ಟಿ ಕೊಡುವುದು ಎಲ್ಲವೂ ಕಾಮನ್, ಆದರೆ ಈ ರೀತಿ ಮಾಡುವುದು ತಪ್ಪು ಎನ್ನುತ್ತಿದ್ದಾರೆ ನೆಟ್ಟಿಗರು. ಮಂಗ್ಲಿ ಅವರ ಕಂಠಕ್ಕೆ, ಅವರ ಗಾಯನಕ್ಕೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇತ್ತು. ಇವರ ವಿಶಿಷ್ಟವಾದ ಕಂಠವನ್ನು ಸಾಕಷ್ಟು ಜನರು ಇಷ್ಟಪಡುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಮಂಗ್ಲಿ ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಬಗ್ಗೆ ಮಂಗ್ಲಿ ಕಡೆಯಿಂದ ಇನ್ನು ಕೂಡ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಪೊಲೀಸರು ಕೂಡ ಈ ಒಂದು ಪ್ರಕರಣದ ಬಗ್ಗೆ ಹೆಚ್ಚು ಅಪ್ಡೇಟ್ಸ್ ಗಳನ್ನು ಕೊಡಬೇಕಿದೆ. ಮಂಗ್ಲಿ ಏನು ಹೇಳುತ್ತಾರೆ ಎನ್ನುವುದನ್ನು ಸಹ ಕಾದು ನೋಡಬೇಕಿದೆ.

ಇನ್ನು ಇಂಥ ಘಟನೆಗಳು ಬಾಲಿವುಡ್ ನಲ್ಲಿ ನಡೆಯುತ್ತಿದ್ದ ವಿಷಯ ಕಾಮನ್, ಹಲವು ಬಾರಿ ಈ ರೀತಿ ಆಗುವುದನ್ನು ನೋಡಿದ್ದೇವೆ. ಆದರೆ ದಕ್ಷಿಣದಲ್ಲಿ ಕೂಡ ಈ ರೀತಿ ಆಗುತ್ತಿರುವುದು ಆಶ್ಚರ್ಯ ತರುವಂಥ ವಿಷಯ ಆಗಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಈ ರೀತಿ ಆಗುವುದು ಬಹಳ ಕಡಿಮೆ. ಈಗ ಮಂಗ್ಲಿ ಕೇಸ್ ನಲ್ಲಿ ಹೀಗೆಲ್ಲಾ ಆಗಿರುವುದು ಅವರ ಮೇಲೆ ಜನರಿಗೆ ಇದ್ದ ಅಭಿಪ್ರಾಯವನ್ನು ಸಹ ಬದಲಾಯಿಸಿದೆ. ಜನರು ಮಂಗ್ಲಿ ಅವರಿಂದ ಇದನ್ನೆಲ್ಲ ನಿರೀಕ್ಷೆಯನ್ನೇ ಮಾಡಿರಲಿಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಸಂಪಾದನೆ ಮಾಡಿದ ಗೌರವ ಮರಿಯಾದೆ ಎಲ್ಲಕ್ಕೂ ಈಗ ಧಕ್ಕೆ ಬಂದ ಹಾಗೆ ತೋರುತ್ತಿದೆ. ಮಂಗ್ಲಿ ಅವರು ಇದರಿಂದ ಹೇಗೆ ಹೊರಗಡೆ ಬರುತ್ತಾರೆ ಎಂದು ಕಾದು ನೋಡಬೇಕಿದೆ.



