ಇತ್ತೀಚೆಗೆ ಚೈತ್ರಾ ಕುಂದಾಪುರ ಅವರು ತಾವು ಬಹಳ ವರ್ಷಗಳ ಕಾಲ ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೆಹೆಂದಿ ಫೋಟೋಸ್ ಮತ್ತು ಮದುವೆ ವಿಡಿಯೋಗಳು ಅದೆಲ್ಲವು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂದ್ರೆ ನಂಬೋದಕ್ಕೆ ಕಷ್ಟ. ಚೈತ್ರಾ ಅವರೇ ಹೇಳಿರುವ ಹಾಗೆ, 12 ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಇವರಿಬ್ಬರ ಪ್ರೀತಿ ಶುರುವಾಗಿತ್ತು. ಚೈತ್ರಾ ಅವರನ್ನು ಕಂಡರೆ ಕೋಪ ಮಾಡಿಕೊಳ್ಳುತ್ತಿದ್ದ ಇರಿಟೇಟ್ ಆಗುತ್ತಿದ್ದ ಹುಡುಗನಿಗೆ ಕೊನೆಗೆ ಆಕೆಯ ಮೇಲೆಯೇ ಪ್ರೀತಿ ಶುರುವಾಯಿತು. ಕಾಲೇಜ್ ಕ್ಯಾಂಟೀನ್ ನಲ್ಲಿ ಚೈತ್ರಾ ಅವರನ್ನು ಬೈಕೊಂಡು ಓಡಾಡುತ್ತಿದ್ದರಂತೆ, ಅವರನ್ನು ಕಂಡರೆ ನನಗೆ ಆಗೋದಿಲ್ಲ ಎಂದು ಹೇಳುತ್ತಿದ್ದರಂತೆ ಆ ಹುಡುಗ. ನಂತರ ಅದು ಪ್ರೀತಿಯಾಗಿ ಬದಲಾಗಿದೆ.

ಇಷ್ಟು ವರ್ಷಗಳ ಕಾಲ ಈ ಜೋಡಿ ಪ್ರೀತಿಸಿದ್ದು, ಇವರಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿಕೊಂಡಿದ್ದು, ಮದುವೆ ಆಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇವರಿಬ್ಬರ ಮದುವೆ ಇಂದು ನಡೆದಿದ್ದು, ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಚೈತ್ರಾ ಅವರ ಮದುವೆ ನಡೆಯಿತು. ಚೈತ್ರಾ ಕುಂದಾಪುರ ಅವರ ಪತಿಯ ಹೆಸರು ಶ್ರೀಕಾಂತ್ ಕಶ್ಯಪ್. ಇವರು ಉಡುಪಿ ಜಿಲ್ಲೆಯ ಹಿರಿಯಡ್ಕ ಎನ್ನುವ ಊರಿನವರು. ಶ್ರೀಕಾಂತ್ ಅವರು ಅನಿಮೇಷನ್ ಓದಿದ್ದಾರೆ. ಆದರೆ ಇವರಿಗೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದ್ದು, ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. 12 ವರ್ಷಗಳ ಕಾಲ ಚೈತ್ರಾ ಅವರನ್ನು ಲವ್ ಮಾಡಿ ಈಗ ಮದುವೆಯಾಗಿದ್ದಾರೆ. ಕೊನೆಗೂ ಚೈತ್ರಾ ಅವರು ಜೀವನದಲ್ಲಿ ದೊಡ್ಡ ಹಂತವನ್ನು ತಲುಪಿದ್ದು, ಮುಂದಿನ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ.
ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮದುವೆಗಿಂತ ಮೊದಲೇ ಶ್ರೀಕಾಂತ್ ಕಶ್ಯಪ್ ಅವರನ್ನು ಭೇಟಿಯಾಗಿದ್ದರು, ಹುಡುಗ ತುಂಬಾ ಸಾಫ್ಟ್ ಚೈತ್ರಾ ಅವರ ಹಾಗೆ ಮಾತನಾಡೋದಿಲ್ಲ ಎಂದು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್ ತಿಳಿಸಿದ್ದರು. ಚೈತ್ರಾ ಅವರು ಲವ್ ಮಾಡಿ ಮದುವೆ ಆಗುತ್ತಿದ್ದಾರೆ ಎನ್ನುವುದು ಹಲವರಿಗೆ ಅರಗಿಸಿಕೊಳ್ಳಲು ಸಾಧ್ಯ ಆಗದ ವಿಷಯ ಆಗಿದ್ದು, ಕೊನೆಗು ಇವರ ಮದುವೆ ನಡೆದಿದೆ. ಚೈತ್ರಾ ಅವರು ಬಹಳ ಸಂತೋಷದಿಂದ ಇದ್ದಾರೆ. ಇನ್ನು ಚೈತ್ರಾ ಕುಂದಾಪುರ ಅವರ ಮದುವೆ ನಡೆದಿದ್ದು ಉಡುಪಿಯ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ. ಇವರ ಮದುವೆಗೆ ಬಿಗ್ ಬಾಸ್ ಶೋನ ಸಾಕಷ್ಟು ಸ್ಪರ್ಧಿಗಳು ಬಂದು ಶುಭ ಕೋರಿದರು. ಈ ಜೋಡಿಯ ಮದುವೆ ನಡೆದು ತಿಂಗಳುಗಳು ಕಳೆದು ಹೋಗಿದೆ..

ಮದುವೆ ಜೊತೆಗೆ ಕೆಲವು ವಿವಾದಗಳು ಸಹ ನಡೆಯಿತು. ಚೈತ್ರಾ ಕುಂದಾಪುರ ಅವರ ತಂದೆಯೇ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು, ಅದೆಲ್ಲದಕ್ಕೂ ಚೈತ್ರಾ ಸಹ ಉತ್ತರ ಕೊಟ್ಟಿದ್ದರು. ತಮ್ಮ ತಂದೆ ಯಾವತ್ತೂ ಸಹ ತಮ್ಮನ್ನು ನೋಡಿಕೊಂಡಿಲ್ಲ, ಕುಡಿದು ಹೀಗೆಲ್ಲಾ ಮಾತನಾಡುತ್ತಾರೆ ಎಂದಿದ್ದರು. ಇದೆಲ್ಲವೂ ಒಂದು ಕಡೆಯಾದರೆ, ಚೈತ್ರ ಕುಂದಾಪುರ ಮತ್ತು ಅವರ ಗಂಡ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೊದಲೆಲ್ಲಾ ಚೈತ್ರಾ ಅವರಿಗೆ ಜೀವ ಬೆ*ದರಿಕೆ ಕರೆಗಳು ಬರುತ್ತಿದ್ದವಂತೆ. ಏಳೆಂಟು ವರ್ಷಗಳ ಹಿಂದೆ ಇದೆಲ್ಲವೂ ನಡೆದಿದೆ. ಅದಕ್ಕೆ ಕಾರಣ ಚೈತ್ರಾ ಕುಂದಾಪುರ ಅವರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿದ್ದವರು, ಭಾಷೆಯ ಬಗ್ಗೆ ಹೆಚ್ಚು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದವರು.
ಹಾಗಾಗಿ ಚೈತ್ರಾ ಅವರಿಗೆ ಅಂಥ ಕರೆಗಳು ಬರುತ್ತಿದ್ದವಂತೆ. ಚೈತ್ರಾ ಅವರಿಗೆ ಮಾತ್ರವಲ್ಲ, ಅವರ ಪತಿಗೂ ಕರೆಗಳು ಬರುತ್ತಿದ್ದವಂತೆ. ಆದರೆ ಅದರ ಬಗ್ಗೆ ಅವರಿಬ್ಬರು ತಮಾಷೆಯಾಗಿ ಮಾತನಾಡುತ್ತಿದ್ದರಂತೆ. ಇವರಿಬ್ಬರು ಕೂಡ ಯಾವತ್ತೂ ಇಬ್ಬರೇ ಎಲ್ಲೂ ಹೊರಗಡೆ ಹೋಗುವುದಿಲ್ಲವಂತೆ. ಸದಾ ಮೂರು ಅಥವಾ ನಾಲ್ಕು ಹುಡುಗರು ಜೊತೆಯಲ್ಲಿ ಇರುತ್ತಾರಂತೆ, ಅದು ಚೈತ್ರಾ ಅವರ ಸೇಫ್ಟಿಗಾಗಿ. ಈ ರೀತಿಯ ಜೀವನವನ್ನು ನಡೆಸುತ್ತಿದ್ದಾರೆ ಚೈತ್ರಾ ಅವರು. ಯಾವುದೇ ವಿರೋಧಿಗಳು, ತಮ್ಮ ವಿರುದ್ಧ ಸ್ಕೆಚ್ ಹಾಕಿ, ತಮ್ಮನ್ನು ತಮ್ಮ ಗಂಡನನ್ನು ಮುಗಿಸಲು ಆಗೋದಿಲ್ಲ ಎಂದು ಚೈತ್ರಾ ಹೇಳಿದ್ದಾರೆ. ಚೈತ್ರಾ ಅವರ ಗಂಡ ಶ್ರೀಕಾಂತ್ ಅವರು ಕೂಡ ಈ ವಿಷಯದ ಬಗ್ಗೆ ಮಾತನಾಡಿ, ಮೂರ್ನಾಲ್ಕು ವರ್ಷಗಳ ಹಿಂದೆ ಕೂಡ ಈ ರೀತಿ ಸಾಕಷ್ಟು ಕರೆಗಳು ಬರುತ್ತಿದ್ದವು ಎಂದು ಹೇಳಿದ್ದಾರೆ..

ಇನ್ನು ಮುಂದುವರೆದು ಮಾತನಾಡಿರುವ ಚೈತ್ರಾ ಕುಂದಾಪುರ ಅವರು, ತಾವು ತಮ್ಮ ಪತಿಯ ಜೊತೆಗೆ ಬದುಕಬೇಕೋ ಅಥವಾ ಸಾಯಬೇಕೋ ಎನ್ನುವುದು ದೇವರ ನಿರ್ಧಾರವೇ ಹೊರತು ಇನ್ಯಾರ ನಿರ್ಧಾರವು ಅಲ್ಲ, ನಮ್ಮ ವಿರೋಧಿಗಳು ಕೂಡ ಅದನ್ನು ನಿರ್ಧರಿಸುವುದಕ್ಕೆ ಆಗೋದಿಲ್ಲ ಎಂದು ಹೇಳಿದ್ದಾರೆ. ಆದರೆ ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಈ ರೀತಿಯ ಕರೆಗಳು ಬರುವುದಕ್ಕೆ ಕಡಿಮೆ ಆಗಿದೆಯಂತೆ. ಈಗ ಆ ಟೆನ್ಷನ್ ಗಳು ಇಲ್ಲದೆಯೇ, ಇಬ್ಬರೂ ಖುಷಿಯಾಗಿ ಇದ್ದಾರಂತೆ. ಒಟ್ಟಿನಲ್ಲಿ ಈ ಜೋಡಿ ದಾಂಪತ್ಯ ಜೀವನವನ್ನು ಬಹಳ ಸಂತೋಷದಿಂದ ಕಳೆಯುತ್ತಿದ್ದಾರೆ. ಈ ಜೋಡಿ ಹೊಸ ಟಿವಿ ಶೋಗಳಲ್ಲಿ ಏನಾದರು ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ಚೈತ್ರಾ ಅವರ ಮೇಲೆ ಜನರಿಗೆ ಇದ್ದ ಅಭಿಪ್ರಾಯ ಬಿಗ್ ಬಾಸ್ ಶೋ ಇಂದ ಪೂರ್ತಿಯಾಗಿ ಕಡಿಮೆಯಾಗಿದೆ.
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೆಚ್ಚಾಗಿ ಸುಳ್ಳು ಹೇಳಿ, ಗಾಸಿಪ್ ಕಾರಣಕ್ಕೆ ಸುದ್ದಿಯಾಗಿದ್ದರು, ಸುದೀಪ್ ಅವರು ಕೂಡ ಚೈತ್ರಾ ಅವರ ಮಾತನ್ನು ನಿಲ್ಲಿಸುವುದಕ್ಕೆ ಬಹಳ ಸಾರಿ ಟ್ರೈ ಮಾಡಿದ್ದಾರೆ. ಇನ್ನು ರಜತ್ ಮತ್ತು ಚೈತ್ರಾ ಜಗಳ ಎಷ್ಟು ವೈರಲ್ ಆಗುತ್ತಿತ್ತು, ಜನರಿಗೆ ಎಷ್ಟು ಇಷ್ಟ ಆಗುತ್ತಿತ್ತು ಎಂದು ನಮಗೆಲ್ಲಾ ಗೊತ್ತೇ ಇದೆ. ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕೂಡ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇನ್ನು ಚೈತ್ರಾ ಕುಂದಾಪುರ ಮದುವೆಯಲ್ಲಿ ರಜತ್ ಅವರು ಅಣ್ಣನ ಸ್ಥಾನದಲ್ಲಿ ನಿಂತು, ಎಲ್ಲಾ ಕಾರ್ಯಗಳನ್ನು ನಡೆಸಿಕೊಟ್ಟಿದ್ದರು, ಇದು ನಿಜಕ್ಕೂ ಮೆಚ್ಚುವಂಥ ವಿಷಯ ಆಗಿದೆ.



