ನಿನ್ನೆ ಸಂಜೆ ಇಂದಲೂ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದವು. ಉಪೇಂದ್ರ ಅವರು ಆರೋಗ್ಯವಾಗಿಯೇ ಇದ್ದರಲ್ಲ, ಇದ್ದಕ್ಕಿದ್ದಂತೆ ಏನಾಗಿದೆ ಎಂದು ಅವರ ಅಭಿಮಾನಿಗಳು ಸಹ ಆತಂಕಕ್ಕೆ ಒಳಗಾಗಿದ್ದರು. ಉಪೇಂದ್ರ ಅವರಿಗೆ ಹುಷಾರಿಲ್ಲ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹೊರಬಂದಿತೆ ಹೊರತು ಇನ್ನೇನು ತಿಳಿದುಬಂದಿರಲಿಲ್ಲ. ಆದರೆ ಇದೀಗ ಖುದ್ದು ಉಪೇಂದ್ರ ಅವರೇ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಉಪೇಂದ್ರ ಅವರು ಸೋಷಿಯಲ್ ಮೀಡಿಯಾ ಮೂಲಕ ಎಲ್ಲಾ ಊಹಾಪೋಹಗಳಿಗೆ ಉತ್ತರ ನೀಡಿದ್ದಾರೆ..
ಉಪೇಂದ್ರ ಅವರು ಹೇಳಿರುವುದು ಏನು ಎಂದರೆ.. “ಎಲ್ಲರಿಗೂ ನಮಸ್ಕಾರ.. ನಾನು ಆರೋಗ್ಯವಾಗಿದ್ದೇನೆ.. ರೆಗ್ಯುಲರ್ ಚೆಕ್ ಅಪ್ ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ.. ಯಾವುದೇ ಊಹಾ ಪೋಹ ಗಳಿಗೆ ಕಿವಿಕೊಟ್ಟು ಗೊಂದಲಕ್ಕಿಡಾಗಬೇಡಿ.. ನಿಮ್ಮ ಪ್ರೀತಿ ಕಾಳಜಿಗೆ ಅನಂತ ಧನ್ಯವಾದಗಳು 🙏..”ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಇದರಿಂದ ಅವರ ಅಭಿಮಾನಿಗಳಿಗೆ ಸಹ ಈಗ ನೆಮ್ಮದಿಯಾಗಿದೆ. ನಮ್ಮ ಮಾಧ್ಯಮದವರು ವಿಚಾರ ಏನೂ ಇಲ್ಲದೇ, ಅದೊಂದು ಸಾಮಾನ್ಯ ಸುದ್ದಿಯೇ ಆಗಿದ್ದರೂ, ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ತಪ್ಪಲ್ಲ, ಇನ್ನಾದರೂ ಮಾಧ್ಯಮದವರು ಅರ್ಥಮಾಡಿಕೊಳ್ಳಬೇಕು ಎನ್ನುವುದು ನೆಟ್ಟಿಗರ ಬಯಕೆ ಆಗಿದೆ.

ಇನ್ನು ಉಪೇಂದ್ರ ಅವರ ಬಗ್ಗೆ ಹೇಳುವುದಾದರೆ, 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರೆ. ಇವರು ನಿರ್ದೇಶನ ಮಾಡುವ ಸಿನಿಮಾಗಳು ಎಂದರೆ ಅಭಿಮಾನಿಗಳು ಆ ಸಿನಿಮಾ ನೋಡುವುದಕ್ಕಾಗಿ ಕಾದು ಕುಳಿತಿರುತ್ತಾರೆ. ಇತ್ತೀಚೆಗೆ ತೆರೆಕಂಡ ಯುಐ ಸಿನಿಮಾಗೆ ಯಾವ ಮಟ್ಟಕ್ಕೆ ಕ್ರೇಜ್ ಇತ್ತು ನಮಗೆಲ್ಲಾ ಗೊತ್ತೇ ಇದೆ. ಇನ್ನು ಉಪೇಂದ್ರ ಅವರು ಮಾಸ್ಟರ್ ಮೈಂಡ್ ಎಂದೇ ಹೆಸರುವಾಸಿ ಆಗಿದ್ದಾರೆ. ಭಾರತ ಚಿತ್ರರಂಗದ ಹಲವು ನಿರ್ದೇಶಕರು ಉಪೇಂದ್ರ ಅವರ ಸಿನಿಮಾ ಇಂದ ಸ್ಪೂರ್ತಿ ಪಡೆಯುತ್ತಾರೆ ಎಂದು ಹಲವಾರು ನಿರ್ದೇಶಕರು ಹೇಳಿರೋದಿದೆ. ಇನ್ನು ಉಪೇಂದ್ರ ಅವರು ತಮ್ಮ ವ್ಯಕ್ತಿತ್ವದ ಕಾರಣಕ್ಕೆ ಸಹ ಎಲ್ಲರಿಗೂ ಇಷ್ಟ ಆಗುತ್ತಾರೆ..
ಉಪೇಂದ್ರ ಅವರು ರಿಯಲ್ ಸ್ಟಾರ್ ಆಗಿ, ನಿರ್ದೇಶಕರಾಗಿ ಅಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ ಸಹ, ಬಹಳ ಸಿಂಪಲ್ ಆದ ವ್ಯಕ್ತಿತ್ವ ಹೊಂದಿರುವವರು. ಇವರ ಇಂಟರ್ವ್ಯೂ ಗಳನ್ನು ನೋಡಿದರೆ, ಉಪೇಂದ್ರ ಅವರ ವ್ಯಕ್ತಿತ್ವ ಎಷ್ಟು ಶ್ರೇಷ್ಠವಾದದ್ದು ಎಂದು ಗೊತ್ತಾಗುತ್ತದೆ. ಇವರ ಚಿಂತನೆಯ ಶಕ್ತಿ ಅಷ್ಟು ಅದ್ಭುತವಾದದ್ದು, ಹಲವು ವಿಚಾರಗಳ ಬಗ್ಗೆ ಉಪೇಂದ್ರ ಅವರು ಹೇಳುವ ಮಾತುಗಳನ್ನು ಫಾಲೋ ಮಾಡಿ, ಜೀವನದಲ್ಲಿ ಉದ್ಧಾರ ಆಗಿರುವವರು ಕೂಡ ಬಹಳಷ್ಟು ಜನರು ಇದ್ದಾರೆ. ಇನ್ನು ಉಪೇಂದ್ರ ಅವರು ನಟಿಸಿ ನಿರ್ದೇಶನ ಮಾಡಿದ ಯುಐ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಗೊತ್ತೇ ಇದೆ.. ಇವರ ಮುಂದಿನ ಸಿನಿಮಾ ಬಗ್ಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಶಿವಣ್ಣ ಅವರು ಮತ್ತು ಉಪೇಂದ್ರ ಅವರು 45 ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ.

ಈ ಸಿನಿಮಾ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಆಗಬಹುದು ಎಂದು ಮಾಹಿತಿ ಸಿಕ್ಕಿದ್ದು, ಸಿನಿಮಾದ ಟೀಸರ್ ಎಲ್ಲರಿಗೂ ಬಹಳ ಇಷ್ಟವಾಗಿದೆ. ಹೈದರಾಬಾದ್, ಚೆನ್ನೈ, ಮುಂಬೈ ಎಲ್ಲಾ ಕಡೆ ಸಿನಿಮಾದ ಪ್ರೊಮೋಷನ್ ಜೋರಾಗಿ ನಡೆಯಿತು, ಎಲ್ಲಾ ಊರಿನ ಸಿನಿಮಾ ಪ್ರಿಯರು 45 ಟೀಸರ್ ನೋಡಿ ಫಿದಾ ಆಗಿದ್ದರು, ಇನ್ನು ಈ ಸಿನಿಮಾ ಬಿಟ್ಟು ಬುದ್ಧಿವಂತ2 ಸಿನಿಮಾದಲ್ಲಿ ಸಹ ಉಪೇಂದ್ರ ಅವರು ನಟಿಸಿದ್ದು, ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ, ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು ಆದರೆ ಈಗ ಸ್ವಲ್ಪ ತಡವಾಗಿ ಬಿಡುಗಡೆ ಆಗಲಿದೆ. ಇನ್ನು ಉಪೇಂದ್ರ ಅವರು ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಜನರಲ್ಲಿ ಶುರುವಾಗಿದೆ. ಹಾಗೆಯೇ ಉಪೇಂದ್ರ ಅವರು ರಾಜಕೀಯದಲ್ಲಿ ಸಹ ಆಕ್ಟಿವ್ ಆಗಿದ್ದಾರೆ.

ಪ್ರಜಾಕೀಯ ಪಕ್ಷವನ್ನು ಶುರು ಮಾಡಿದ್ದು, ಇದರಿಂದ ಹೊಸತನಕ್ಕೆ ಬುನಾದಿ ಹಾಕಬೇಕು, ತಮ್ಮ ಪಕ್ಷದ ಮೂಲಕ ಹೊಸ ಕ್ರಾಂತಿ ಮೂಡಿಸಬೇಕು ಎನ್ನುವ ಉದ್ದೇಶ ಇವರದ್ದು. ಪ್ರಜಾಕೀಯದಲ್ಲಿ ಒಂದೇ ಒಂದು ರೂಪಾಯಿ ಕೂಡ ಖರ್ಚು ಮಾಡದೆಯೇ, ಅಭ್ಯರ್ಥಿಗಳು ಏನು ಕೆಲಸ ಮಾಡಿಸುತ್ತಾರೆ, ಏನು ಪ್ರೋಗ್ರೆಸ್ ತರುತ್ತಾರೆ ಎನ್ನುವುದನ್ನು ತಿಳಿದುಕೊಂಡು ಜನರು ವೋಟ್ ಮಾಡಬೇಕು, ದುಡ್ಡು ಇಲ್ಲಿ ಮುಖ್ಯವಲ್ಲ, ಅಭಿವೃದ್ಧಿ ಮುಖ್ಯ ಎನ್ನುವುದನ್ನು ಉಪೇಂದ್ರ ಅವರು ತಿಳಿಸಿಕೊಡುತ್ತಿದ್ದಾರೆ. ಜನರಿಗೆ ಈ ಕಾನ್ಸೆಪ್ಟ್ ಅರ್ಥವಾದರೆ, ಬಹುಶಃ ನಮ್ಮ ರಾಜ್ಯ ಬದಲಾಗಬಹುದು. ಆದರೆ ಇಂಥ ವಿಚಾರಗಳು, ವೈಚಾರಿಕತೆಗಳು ಜನರಿಗೆ ಅಷ್ಟು ಸುಲಭಕ್ಕೆ ಅರ್ಥ ಆಗುವಂಥದ್ದಲ್ಲ. ಹಾಗಾಗಿ ಉಪೇಂದ್ರ ಜನರು ಯಾವಾಗ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ..
ಇನ್ನು ಉಪೇಂದ್ರ ಅವರ ಮಕ್ಕಳು ಸಹ ಸಿನಿಮಾ ಗೆ ಬರುವುದಕ್ಕೆ ಸಿದ್ಧವಾಗುತ್ತಿದ್ದಾರೆ. ಉಪೇಂದ್ರ ಅವರ ಮಗನಿಗೆ ತಂದೆಯ ನೆರಳಿನಲ್ಲಿ ಇರುವುದಕ್ಕೆ ಮನಸ್ಸಿಲ್ಲ, ತಾನು ಕೆಲಸ ಕಲಿತು, ಜನರ ಮುಂದೆ ಒಳ್ಳೆಯ ಟ್ಯಾಲೆಂಟ್ ಜೊತೆಗೆ ಬರುತ್ತೇನೆ ಎಂದು ಉಪೇಂದ್ರ ಅವರ ಮಗ ಹೇಳುತ್ತಾರೆ. ಇನ್ನು ಅವರ ಮಗಳು ಸಹ ಅದೇ ರೀತಿ, ನಾಯಕಿಯಾಗಿ ಚಿತ್ರರಂಗಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ. ಈ ರೀತಿ ಆದರೆ ಉಪೇಂದ್ರ ಅವರ ಇಡೀ ಕುಟುಂಬ ಚಿತ್ರರಂಗದಲ್ಲಿ ಇದ್ದ ಹಾಗೆ ಆಗುತ್ತದೆ. ಇವರ ಮಕ್ಕಳು ಯಾವಾಗ ಎಂಟ್ರಿ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.



