ಸೋಷಿಯಲ್ ಮೀಡಿಯಾದಲ್ಲಿ ಸಾಮಾನ್ಯವಾಗಿ ನಟಿಯರಿಗೆ ಒಳ್ಳೆಯ ಆದಾಯ ಇರುತ್ತದೆ. ಇದು ಈಗ ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಬ್ರ್ಯಾಂಡ್ ಕೊಲ್ಯಾಬೋರೇಷನ್ ಗಳ ಮೂಲಕ ಹಣ ಗಳಿಸುತ್ತಾರೆ. ಇದರ ಬಗ್ಗೆ ನಟಿಯರು ಹಲವು ಬಾರಿ ಟ್ರೋಲ್ ಆಗುವುದು ಕೂಡ ಇದೆ. ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಜನರು ಕೂಡ ಅದೇ ರೀತಿ, ಸೆಲೆಬ್ರಿಟಿಗಳ ಬಗ್ಗೆ ಎಲ್ಲರ ಬಗ್ಗೆ ಅನೇಕ ವಿಚಾರಗಳ ಬಗ್ಗೆ ಕಾಮೆಂಟ್ಸ್ ಹಾಕುತ್ತಾರೆ, ಕಾಮೆಂಟ್ಸ್ ಗಳಲ್ಲಿಯೇ ಟ್ರೋಲ್ ಮಾಡುತ್ತಾರೆ. ಇಂಥ ಟ್ರೋಲ್ ಗಳಿಂದ ಆ ನಟಿಯರಿಗೆ ಬೇಸರ ಅಗೋದೇ ಇಲ್ಲ ಎಂದು ಹೇಳಲು ಸಹ ಆಗೋದಿಲ್ಲ. ಹಲವರಿಗೆ ಹರ್ಟ್ ಆಗುತ್ತದೆ. ಆದರೆ ಕೆಲವರು ಎಲ್ಲವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವ ಮೂಲಕ, ಧೈರ್ಯವಾಗಿ ಇರುತ್ತಾರೆ. ಇದರ ಬಗ್ಗೆ ಈಗ ಖ್ಯಾತ ನಟಿ ಅಮೃತಾ ಮೂರ್ತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಅಮೃತಾ ಮೂರ್ತಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಹೀರೋಯಿನ್ ಆಗಿ ಕೆರಿಯರ್ ಶುರು ಮಾಡಿದ ಇವರು ಕುಲವಧು ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡರು. ಈ ಧಾರಾವಾಹಿ ಅಮೃತಾ ಮೂರ್ತಿ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು. ಬಹಳಷ್ಟು ಎಪಿಸೋಡ್ ಗಳು ನಡೆದು ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಅಮೃತಾ ಮೂರ್ತಿ ಅವರು ಬೇರೆ ಧಾರಾವಾಹಿಗಳಲ್ಲಿ ಸಹ ನಟಿಸಿ ಹೆಸರು ಮಾಡಿದರು. ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯಲ್ಲಿ ನಟಿಸಿ, ಧಾರಾವಾಹಿಯ ಹೀರೋ ಆಗಿದ್ದ ರಘು ಅವರ ಪರಿಚಯವಾಯಿತು. ಈ ಜೋಡಿ ಪ್ರೀತಿಸಿ ಮದುವೆಯಾದರು. ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ. ರಘು ಹಾಗೂ ಅಮೃತಾ ಬಹಳ ಮುದ್ದಾದ ಜೋಡಿ..
ಅಮೃತಾ ಹಾಗೂ ರಘು ಅವರದ್ದು ಲವ್ ಮ್ಯಾರೇಜ್. ಈ ಜೋಡಿಗೆ ಮುದ್ದಾದ ಮಗು ಕೂಡ ಇದೆ. ಇಬ್ಬರು ತಮ್ಮ ಫ್ಯಾಮಿಲಿ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಹಾಗೆಯೇ ಮದುವೆ ನಂತರ ನಟನೆ ಇಂದ ಒಂದು ಬ್ರೇಕ್ ಪಡೆದಿದ್ದ ಅಮೃತಾ ಅವರು ಮತ್ತೆ ಕಂಬ್ಯಾಕ್ ಸಹ ಮಾಡಿದ್ದರು. ಕಲರ್ಸ್ ಕನ್ನಡದ ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ಅಮೃತಾ ನೆಗಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ, ಅದರಿಂದಲೂ ಜನಪ್ರಿಯತೆ ಪಡೆದರು. ನೆಗಟಿವ್ ಪಾತ್ರವನ್ನು ಕೂಡ ಮಾಡಬಲ್ಲರು ಎಂದು ತೋರಿಸಿಕೊಟ್ಟರು. ಇನ್ನು ರಘು ಅವರು ಸಹ ಧಾರಾವಾಹಿಗಳಲಿ ನಟಿಸುತ್ತಿದ್ದಾರೆ. ಇವರಿಬ್ಬರು ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಸಹ ಗುರುತಿಸಿಕೊಂಡಿದ್ದು, ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ನಟಿಸಿರುವುದು ಬಹಳ ಕಡಿಮೆಯೇ ಎಂದು ಹೇಳಬಹುದು.

ಇತ್ತೀಚೆಗೆ ಅಮೃತಾ ಅವರು ಕಲಾಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ್ದು ತಮ್ಮ ಜರ್ನಿ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಲವು ಕಹಿ ಘಟನೆಗಳ ಬಗ್ಗೆ ಕೂಡ ಅಮೃತಾ ಅವರು ಮಾತನಾಡಿದ್ದು, ಅವರು ಗರ್ಭಿಣಿ ಆಗಿದ್ದಾಗ ಕೆಲವರು ಬ್ರಾಂಡ್ ಕೋಲ್ಯಾಬೊರೇಷನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ನೆನೆದು, ಅದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ. ಅಮೃತಾ ಮೂರ್ತಿ ಅವರು ಬ್ರ್ಯಾಂಡ್ ಕೊಲ್ಯಾಬೋರೇಷನ್ ಗಳನ್ನು ಹೆಚ್ಚಾಗಿ ಮಾಡಿದ್ದು ಕೋವಿಡ್ ಸಮಯದಲ್ಲಿ. ಆ ವೇಳೆ ಹಲವರಿಗೆ ಫ್ರೀಯಾಗಿ ಕೂಡ ಪ್ರಮೋಷನ್ ಮಾಡಿಕೊಟ್ಟಿದ್ದಾರಂತೆ. ಮಹಿಳೆಯರು ಹೆಚ್ಚಾಗಿ ಸೀರೆ ಕಳಿಸುವುದು, ಮಾಡುತ್ತಾರಂತೆ. ಅವರಿಗೆ ಬ್ರ್ಯಾಂಡ್ ಮಾಡಿದ್ದಾರೆ ಅಮೃತಾ. ಆದರೆ ಇದರ ಬಗ್ಗೆ ಕೆಲವರು ಕೆಟ್ಟದಾಗಿ ಕಾಮೆಂಟ್ಸ್ ಬರೆದಿದ್ದಾರೆ. ನಿಮ್ಮ ದುಡಿಯುವುದು ಶೋಕಿ ಮಾಡುವುದು ಇದರಿಂದ ಎಂದು ಕೆಲವು ಟೀಕಿಸಿದ್ದರು.
ಅದಕ್ಕೆ ಅಮೃತಾ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. “ನಾನು ಗರ್ಭಿಣಿ ಆಗಿದ್ದ ಸಮಯದಲ್ಲಿ ಹಲವು ಬ್ರ್ಯಾಂಡ್ ಪ್ರಮೋಷನ್ ಗಳು ಬರುತ್ತಿದ್ದವು. ಬಹಳಷ್ಟು ಮಹಿಳಾ ಉದ್ಯಮಿಗಳು ಸೀರೆಗಳನ್ನು ಕಳಿಸುತ್ತಾರೆ, ಅದನ್ನೆಲ್ಲಾ ನಾನು ಪ್ರಮೋಟ್ ಮಾಡಬೇಕಿತ್ತು. ಹಲವರಿಗೆ ಫ್ರೀಯಾಗಿ ಮಾಡಿಕೊಟ್ಟಿದೀನಿ. ಬಹಳಷ್ಟು ಮಹಿಳಾ ಉದ್ಯಮಿಗಳು ಇದಕ್ಕಾಗಿ ನನ್ನನ್ನು ಅಪ್ರೋಚ್ ಮಾಡುತ್ತಿದ್ದರು. ಕರ್ನಾಟಕ ಬಿಟ್ಟು ಹೊರಗಡೆಯವರಿಗೆ ಚಾರ್ಜ್ ಮಾಡಿದ್ದೀನಿ. ಅವರ ಬ್ರ್ಯಾಂಡ್ ನ ಒಂದು ಸೀರೆಯನ್ನು ನಾನು ಪ್ರಮೋಟ್ ಮಾಡಿದರೆ, ಅವರಿಗೆ 10 ರಿಂದ 15 ಸೀರೆಗಳ ಆರ್ಡರ್ ಬಂದು, ಸೇಲ್ ಆಗುತ್ತಿದ್ದವು. ಈಗ ನಾನು ಯಾರಿಂದಲೂ ಹಣ ಪಡೆಯುವುದಿಲ್ಲ. ನನಗೆ ಖುಷಿ ಕೊಡುತ್ತದೆ ಅನ್ನುವ ಕಾರಣಕ್ಕೆ ಪ್ರಮೋಟ್ ಮಾಡ್ತೀನಿ. ಸೋಷಿಯಲ್ ಮೀಡಿಯಾ ಇಂದ ನನಗೆ ಹೊಸ ಬದುಕು ಸಿಕ್ಕಿದೆ..

ಆದರೆ ನಾನು ಶೋಕಿಗೆ ಇದನ್ನೆಲ್ಲಾ ಮಾಡ್ತೀನಿ, ಇದೇ ನನ್ನ ದುಡಿಮೆ ಎಂದು ಹಲವರು ನಾನು ಗರ್ಭಿಣಿ ಆಗಿದ್ದಾಗ ಟೀಕೆ ಮಾಡಿದ್ದರು. ನನ್ನ ಲೈಫ್ ಏನು, ಇಲ್ಲಿ ನಾನು ಏನನ್ನೆಲ್ಲಾ ಫೇಸ್ ಮಾಡಿದ್ದೇನೆ ಎಂದು ನನಗೆ ಗೊತ್ತಿದೆ. ಅದರ ಬಗ್ಗೆ ಎಲ್ಲಿಯೂ ಹೇಳಿಕೊಳ್ಳಬೇಕು ಅನ್ನುವ ಅವಶ್ಯಕತೆ ಇಲ್ಲ..” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅಮೃತಾ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಂಡುಬರುವ, ಕೇಳಿಬರುವ ವಿಚಾರದ ಬಗ್ಗೆ ಅಮೃತಾ ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ಪತಿ ರಘು ಅವರ ಬಗ್ಗೆ ಸಹ ಮಾತನಾಡಿದ್ದಾರೆ. ಕಪಲ್ ರಿಯಾಲಿಟಿ ಶೋಗಳಿಗೆ ಬನ್ನಿ ಎಂದು ಈ ಜೋಡಿಗೆ ಪ್ರತಿ ವರ್ಷ ಆಫರ್ ಬರುತ್ತದೆಯಂತೆ. ಆದರೆ ಇವರು ಹೋಗಬಾರದು ಎಂದು ನಿರ್ಧಾರ ಮಾಡಿದ್ದಾರೆ. ಗಂಡ ಹೆಂಡತಿಯಾಗಿ ಅವರಿಬ್ಬರ ನಡುವೆ ಇರುವ ಬಾಂಧವ್ಯ ಅವರ ಮಧ್ಯೆ ಮಾತ್ರ ಇರಬೇಕು ಎಂದು ನಿರ್ಧಾರ ಮಾಡಿದ್ದಾರಂತೆ.
ಇನ್ನು ರಘು ಅವರು ಒಂದು ಬ್ಯುಸಿನೆಸ್ ಶುರು ಮಾಡಬೇಕು ಎನ್ನುವ ಪ್ಲಾನ್ ನಲ್ಲಿ ಬ್ಯುಸಿನೆಸ್ ಶುರು ಮಾಡಿ, ಅದರಿಂದ ನಷ್ಟ ಆಯಿತಂತೆ. ಆಗಿನಿಂದ ಅಮೃತಾ ಅವರು ಮತ್ತೆ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದು, ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದು. ಬ್ರ್ಯಾಂಡ್ ಪ್ರಮೋಷನ್ ಇದೆಲ್ಲವನ್ನು ಶುರು ಮಾಡಿದ್ದು ಎಂದಿದ್ದಾರೆ. ರಘು ಅವರಿಗೆ ತಮ್ಮಿಂದ ಅಮೃತಾ ಅವರು ಕೆಲಸ ಮಾಡುವ ಹಾಗೆ ಆಯಿತು ಎಂದು ಬೇಸರ ಇತ್ತಂತೆ. ಆದರೆ ಅಮೃತಾ ಅವರು ಗಂಡನನ್ನು ಸಮಾಧಾನ ಮಾಡಿದ್ದು, ಇದು ದುಡಿಯುವ ಸಮಯ, ಚೆನ್ನಾಗಿ ದುಡಿಯುತ್ತೇನೆ ಎಂದು ಸಮಾಧಾನ ಮಾಡಿದರಂತೆ. ಕಷ್ಟಪಟ್ಟು ಬೆಳೆಯುವ ಕನಸಿನ ಕಡೆಗೆ ಸಾಗುತ್ತಿರುವ ಈ ಜೋಡಿಗೆ ಒಳ್ಳೆಯದಾಗಲಿ ಒಳ್ಳೆಯ ಪ್ರಾಜೆಕ್ಟ್ ಗಳು ಸಿಗಲಿ ಎಂದು ಹಾರೈಸೋಣ.