ಪ್ರಪಂಚದ ಹಲವು ದೇಶಗಳಲ್ಲಿ ಹಿಂದೂ ದೇವಾಲಯಗಳಿವೆ. ಅದರಲ್ಲಿಯೂ ಮುಸ್ಲಿಂ ರಾಷ್ಟ್ರಗಳಲ್ಲಿಯೂ ಹಿಂದೂ ದೇವಾಲಯಗಳಿವೆ. ಅಲ್ಲಿನ ಹಿಂದೂಗಳು ಸಹ ಪೂಜೆ, ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. ಆದರೆ, ಇಲ್ಲೊಂದು ದೇಶದಲ್ಲಿ ಮಾತ್ರ ಹಿಂದೂಗಳು ಪೂಜೆ-ಪುನಸ್ಕಾರಗಳನ್ನು ಮಾಡುವಂತಿಲ್ಲ. ಒಂದು ವೇಳೆ ಹಾಗೆನಾದ್ರೂ ಮಾಡಿದ್ರೆ ಜೈಲು ಗ್ಯಾರೆಂಟಿಯಂತೆ. ಇದ್ಯಾವುದಪ್ಪ ಹಿಂದೂ ಆಚರಣೆಗೆ ನಿಷೇಧ ಏರಿವು ದೇಶ ಅಂದರೆ ಇಲ್ಲಿರುವ ಮಾಹಿತಿ ಓದಿ….
ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಅಲ್ಲವೆ ಅಲ್ಲ….
ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಸೇರಿದಂತೆ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸಬಹುದು. ವಾಸ್ತವವಾಗಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಸ್ಥಳಗಳಲ್ಲಿ ಹಿಂದೂ ದೇವಾಲಯಗಳಿವೆ, ಅಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತದೆ ಮತ್ತು ಪ್ರಾರ್ಥನೆಗಳನ್ನು ನಿರ್ಬಂಧಗಳಿಲ್ಲದೆ ನಡೆಸಲಾಗುತ್ತದೆ. ಆದರೆ ಭಾರತದ ಈ ಒಂದು ನೆರೆಯ ದೇಶದಲ್ಲಿ ಹಿಂದೂ ದೇವಾಲಯವನ್ನು ನಿರ್ಮಿಸುವುದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೂಜೆ ಮಾಡಿದರೂ ಸಹ ಗೌಪ್ಯವಾಗಿ ಮಾಡಬೇಕಿದೆ.

ದ್ವೀಪ ರಾಷ್ಟ್ರ ಮಾಲ್ದಿವ್ಸ್ನಲ್ಲಿ ಇಸ್ಲಾಮಿಕ್ಗೆ ಆದ್ಯತೆ:
ಈ ಹಿಂದೆ ಹಿಂದೂ ಹಾಗೂ ಬೌದ್ಧ ಸಾಮ್ರಾಜ್ಯಗಳಿಗೆ ನೆಲೆಯಾಗಿದ್ದ ಮಾಲ್ದಿವ್ಸ್ ಇಂದು ಹಿಂದೂ ಸೇರಿದಂತೆ ಇನ್ನಿತರ ಧರ್ಮಗಳಿಗೆ ಆದ್ಯತೆ ನೀಡುವುದಿಲ್ಲ ಎಂಬುದು ಆಶ್ಚರ್ಯವೇ ಸರಿ. ಮಾಲ್ದಿವ್ಸ್ ಸಂವಿಧಾನದ ಪ್ರಕಾರ, ಎಲ್ಲಾ ನಾಗರಿಕರು ಮುಸ್ಲಿಮರಾಗಿರಬೇಕು. ಇಸ್ಲಾಮೇತರ ಧಾರ್ಮಿಕ ಆಚರಣೆಗಳು, ಚಿಹ್ನೆಗಳು ಹಾಗೂ ಪೂಜಾ ಸ್ಥಳಗಳ ವಿರುದ್ಧ ದೇಶವು ಕಠಿಣ ಕಾನೂನುಗಳನ್ನು ಹೊಂದಿದೆ. ಈ ಹಿನ್ನೆಲೆ ಇಲ್ಲಿ ದೇವಾಲಯಗಳು ಸೇರಿದಂತೆ ಇತರ ಧರ್ಮದ ಪವಿತ್ರ ಸ್ಥಳಗಳನ್ನು ಸ್ಥಾಪಿಸುವುದು ಅಸಾಧ್ಯವೇ ಸರಿ.
ಕಟ್ಟುನಿಟ್ಟಿನ ಧಾರ್ಮಿಕ ಕಾನೂನು ಹೊಂದಿರುವ ಮಾಲ್ದಿವ್ಸ್:
ಸುಮಾರು 5,50,000 ಜನಸಂಖ್ಯೆಯನ್ನು ಹೊಂದಿರುವ ಮಾಲ್ದಿವ್ಸ್, ಸಾವಿರಾರು ವಿದೇಶಿ ಕಾರ್ಮಿಕರು, ಮುಖ್ಯವಾಗಿ ಭಾರತ ಹಾಗೂ ಶ್ರೀಲಂಕಾ ಮೂಲದವರು ಇಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಹಾಸ್ಪೆಟಾಲಿಟಿ(ಆತಿಥ್ಯ) ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಟ್ಟುನಿಟ್ಟಿನ ಧಾರ್ಮಿಕ ಕಾನೂನು ಹೊಂದಿರುವ ಈ ದೇಶದಲ್ಲಿ ಹಿಂದೂ ಹಬ್ಬಗಳು ಅಥವಾ ಹಿಂದೂ ಪದ್ಧತಿಯನ್ನು ಸಾರ್ವಜನಿಕವಾಗಿ ಆಚರಿಸಲು ಅನುಮತಿಯಲ್ಲ. ಭಾರತದೊಂದಿಗೆ ಏರಿಳಿತದ ಸಂಬಂಧವನ್ನು ಮಾಲ್ದಿವ್ಸ್ ಹೊಂದಿದ್ದರೂ ಸಹ, ತರಕಾರಿ, ನೀರು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ರಫ್ತಾಗುವುದು ಭಾರತದಿಂದಲೇ. ಆದರೂ ಸಹ ಸಂಪೂರ್ಣವಾಗಿ ಇಸ್ಲಾಮಿಕ್ ಧರ್ಮವನ್ನು ಆಚರಿಸುವುದು ಇಲ್ಲಿನ ಸಂವಿಧಾನಿಕ ನಿಯಮ.
ಭೌಗೋಳಿಕವಾಗಿ ಒಂದು ಸಣ್ಣ ದೇಶ:
ಕೇವಲ 298 ಚದರ ಕಿ.ಮೀ. ಭೌಗೋಳಿಕ ವಿಸ್ತೀರ್ಣ ಹೊಂದಿರುವ ಮಾಲ್ದಿವ್ಸ್, ಭಾರತದ ರಾಜಧಾನಿ ದೆಹಲಿ 1483 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಇದಕ್ಕೆ ಹೋಲಿಸಿದರೆ ಮಾಲ್ದಿವ್ಸ್ ಐದರಲ್ಲಿ ಒಂದು ಭಾಗ ಮಾತ್ರವಿದೆ. ಇನ್ನೂ ನಮ್ಮ ದೇಶದ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ 492 ಚ.ಕಿ.ಮೀ ವಿಸ್ಥಾರವಾಗಿದ್ದು, ಇದಕ್ಕಿಂತಲೂ ಮಾಲ್ದಿವ್ಸ್ ಕಡಿಮೆ ವ್ಯಾಪ್ತಿಯಲ್ಲಿ ನೆಲೆಯೂರಿದೆ.
ಇನ್ನೂ 1192 ಸಣ್ಣ-ಸಣ್ಣ ದ್ವೀಪಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಮಾಲ್ದಿವ್ಸ್ನಲ್ಲಿ 200 ಮಾತ್ರ ಜನವಸತಿಗೆ ಯೋಗ್ಯವಾಗಿವೆ. ಭಾರತದ ದಕ್ಷಿಣ ರಾಜ್ಯವಾದ ಕೇರಳದ ಕೊಚ್ಚಿಯಿಂದ 450-500 ಕಿ.ಮೀ. ದೂರದಲ್ಲಿದೆ. ಭೌಗೋಳಿಕವಾಗಿ ಭಾರತಕ್ಕೆ ಹತ್ತಿರವಿರುವ ಈ ದೇಶದ ಧಾರ್ಮಿಕ ಚೌಕಟ್ಟು, ಇಲ್ಲಿನಷ್ಟೇ ಸ್ವಾತಂತ್ರ್ಯವಾಗಿಲ್ಲ ಎಂಬುದು ಅಷ್ಟೇ ಸತ್ಯ.

ಹಿಂದೂ ದೇವಾಲಯಗಳು ಏಕೆ ಇಲ್ಲ…..?
ಮಾಲ್ದಿವ್ಸ್ ದೇಶವು 2008ರಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತಂದಿದ್ದು, 100% ಇಸ್ಲಾಮಿಕ್ ರಾಷ್ಟçವೆಂದು ಘೋಷಿಸಿಕೊಂಡಿದೆ. ವಿಧಿ 9ರ ಪ್ರಕಾರ, ಮುಸ್ಲಿಮರು ಮಾತ್ರ ಮಾಲ್ದಿವ್ಸ್ನ ಪೌರತ್ವವನ್ನು ಪಡೆಯಬಹುದು. ಇಸ್ಲಾಮೇತರ ಧರ್ಮದ ಆಚರಣೆ, ಪ್ರಚಾರ ಅಥವಾ ಸಾರ್ವಜನಿಕ ಆಚರಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಹಾಗಾಗಿ, ಮಾಲ್ದಿವ್ಸ್ನಲ್ಲಿ ಹಿಂದೂ ದೇವಾಲಯ, ಕ್ರಿಶ್ಚಿಯನರ ಚರ್ಚ್, ಪಂಜಾಬಿಗಳ ಗುರುದ್ವಾರ ಸೇರಿದಂತೆ ಇತರ ಯಾವುದೇ ಧರ್ಮದ ಪೂಜಾ ಸ್ಥಳಗಳನ್ನು ನಿರ್ಮಿಸುವುದು ನಿಷಿದ್ಧ.
ಬಹಿರಂಗ ಧಾರ್ಮಿಕ ಸಮಾರಂಭಕ್ಕೆ ತಡೆ:
ಮಾಹಿತಿಯ ಪ್ರಕಾರ ಮಾಲ್ದಿವ್ಸ್ನಲ್ಲಿ 1500ರಿಂದ 2000 ಮಂದಿ ಹಿಂದೂಗಳು ಕೆಲಸದ ದೃಷ್ಟಿಯಿಂದ ಅಲ್ಲಿ ವಾಸಿಸುತ್ತಿದ್ದಾರೆ. ಆದರೆ, ಯಾರೊಬ್ಬರು ಸಹ ತಮ್ಮ ಧಾರ್ಮಿಕ ಹಬ್ಬ ಹರಿದಿನಗಳನ್ನು ಬಹಿರಂಗವಾಗಿ ಆಚರಿಸುವಂತಿಲ್ಲ. ಈ ಮೂಲಕ ಮಾಲ್ದಿವ್ಸ್ ಸರ್ಕಾರ ಮಸೀದಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ.
ಧಾರ್ಮಿಕ ಕಾನೂನು ಉಲ್ಲಂಘಿಸಿದರೆ ಜೈಲು ಫಿಕ್ಸ್:
ವಿಗ್ರಹಾರಾಧನೆ, ಧಾರ್ಮಿಕ ಸಭೆಗಳನ್ನು ನಡೆಸುವುದು ಅಸಾಧ್ಯವೇ ಸರಿ. ಆದ್ದರಿಂದ ಹಿಂದೂ ವಲಸಿಗರು ತಮ್ಮ ಮನೆಗಳಲ್ಲಿ ಗೌಪ್ಯವಾಗಿ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ. ಹಾಗೆಯೇ, ಧಾರ್ಮಿಕ ವಸ್ತುಗಳು, ಇನ್ನಿತರ ಚಿಹ್ನೆಗಳನ್ನು ಮಾಲ್ದಿವ್ಸ್ನಲ್ಲಿ ಸುಲಭವಾಗಿ ದೊರೆಯುವುದಿಲ್ಲ. ವಿಮಾನ ನಿಲ್ದಾಣದಲ್ಲಿಯೂ ಸಹ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಾರೆ. ಒಂದು ವೇಳೆ, ಇಸ್ಲಾಮೇತರ ಧರ್ಮದ ವಸ್ತುಗಳು ದೊರೆತರೆ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಇನ್ನೂ ಇಲ್ಲಿಯ ಧಾರ್ಮಿಕ ಕಾನೂನನ್ನು ಉಲ್ಲಂಘಿಸಿದರೆ ದಂಡ, ಜೈಲು ಶಿಕ್ಷೆ ಅಥವಾ ಗಡಿಪಾರು ಮಾಡಬಹುದು. ಈ ಕಠಿಣ ನೀತಿಯಿಂದಾಗಿಯೇ, ಯಾವೊಬ್ಬ ವ್ಯಕ್ತಿ ಅಥವಾ ಸಂಸ್ಥೆ ಇಲ್ಲಿ ಹಿಂದೂ ದೇವಾಲಯವನ್ನು ಕಟ್ಟುವ ಸಾಹಸಕ್ಕೆ ಕೈ ಹಾಕುವುದಿಲ್ಲ.

ಹಿಂದೂ, ಬೌದ್ಧ ದೇಶವಾಗಿದ್ದ ಮಾಲ್ದಿವ್ಸ್:
12ನೇ ಶತಮಾನದವರೆಗೂ ಮಾಲ್ದಿವ್ಸ್ನಲ್ಲಿಯೂ ಸಹ ರಾಜರು ಹಾಗೂ ಸಾಮಾನ್ಯ ಜನರು ಹಿಂದೂ ಹಾಗೂ ಬೌದ್ಧ ಧರ್ಮಗಳನ್ನು ಅನುಸರಿಸುತ್ತಿದ್ದರು. ಯಾವಾಗ ಅರಬ್ ವ್ಯಾಪಾರಿಗಳು ಮತ್ತು ಸೂಫೀ ಬೋಧಕರು ಮಾಲ್ದಿವ್ಸ್ಗೆ ಬರಲಾರಂಭಿಸಿದರು, ಆಗ ಅಲ್ಲಿನ ಆಡಳಿತಗಾರರು ಇಸ್ಲಾಂಗೆ ಮತಾಂತರಗೊಂಡರು. ನಂತರ ಇಡೀ ಜನಸಂಖ್ಯೆ ಇಸ್ಲಾಂ ಧರ್ಮವನ್ನು ಅಳವಡಿಸಿಕೊಂಡಿತು. ಆ ಮೂಲಕ ಕ್ರಿ.ಶ.1153ರಲ್ಲಿ ಮಾಲ್ದಿವ್ಸ್ ಅಧಿಕೃತವಾಗಿ ಇಸ್ಲಾಮಿಕ್ ರಾಷ್ಟ್ರವಾಗಿ ಮಾರ್ಪಟ್ಟಿತು.
ಹಿಂದಿದ್ದ ದೇವಾಲಯಗಳ ಧ್ವಂಸ:
ಹಿಂದೂ ಹಾಗೂ ಬೌದ್ಧ ಆಳ್ವಿಕೆಯಲ್ಲಿ ಸ್ಥಾಪಿಸಲಾಗಿದ್ದ ದೇವಾಲಯಗಳನ್ನು ನಾಸಪಡಿಸಲಾಯಿತು. ಅವುಗಳ ಅವಶೇಷಗಳ ಮೇಲೆ ಮಸೀದಿಗಳನ್ನು ನಿರ್ಮಿಸಲಾಯಿತು. ಇನ್ನೂ ಕೆಲವನ್ನು ಮಸೀದಿಗಳಾಗಿ ಬಳಸಿಕೊಳ್ಳಲಾಯಿತು.



