ಇಂದು ಗುರುವಾರ, 19 ಡಿಸೆಂಬರ್ 2024. ಈ ದಿನ 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದಿನ ಭವಿಷ್ಯ ನೋಡಿ.
ಮೇಷ ರಾಶಿ
ನಿಮ್ಮ ಆದಾಯ ವೃದ್ಧಿಯಾಗುತ್ತದೆ. ಕೆಲಸದ ವಿಷಯದಲ್ಲಿ ನೀವು ಅಭಿವೃದ್ಧಿ ಹೊಂದಲಿದ್ದೀರಿ. ಮಕ್ಕಳಿಂದ ಒಳ್ಳೆ ಸುದ್ದಿಗಳನ್ನು ಕೇಳಬಹುದು. ಪ್ರೀತಿಪಾತ್ರರು ಹೇಳಿದ ವಿಚಾರಗಳ ಬಗ್ಗೆ ಸಂಪೂರ್ಣ ಗಮನ ಕೊಡಬೇಕು, ಇಲ್ಲವಾದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ವಿದ್ಯಾರ್ಥಿಗಳು ಪರೀಕ್ಷೆ ತಯಾರಿಯಲ್ಲಿ ನಿರತರಾಗಿರುತ್ತಾರೆ, ಆಗ ಮಾತ್ರ ಅವರು ಯಶಸ್ಸನ್ನು ಸಾಧಿಸುತ್ತಾರೆ. ಕುಟುಂಬದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ನಿಮಗೆ ಬೇಸರವಾದರೂ, ನಂತರ ಪರಿಹಾರ ದೊರೆಯುತ್ತದೆ.
ವೃಷಭ ರಾಶಿ
ಕಚೇರಿಯಲ್ಲಿ ನಿಮ್ಮ ಹಿರಿಯ ಅಧಿಕಾರಿಗಳಿಂದ ನೀವು ಶುಭ ಸುದ್ದಿಯನ್ನು ಪಡೆಯಬಹುದು. ಯಾವುದೇ ಒಪ್ಪಂದಕ್ಕೆ ಸಂಬಂಧಿಸಿದಂತೆ ನೀವು ಸಮಸ್ಯೆ ಅನುಭವಿಸುತ್ತಿದ್ದರೆ, ಅದು ಶೀಘ್ರದಲ್ಲೇ ಸರಿ ಆಗಲಿದೆ. ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ನಿಮ್ಮ ಮಕ್ಕಳು ಯಾವುದೇ ಪರೀಕ್ಷೆ ಎದುರಿಸಿದ್ದರೆ ಫಲಿತಾಂಶ ಅವರ ಪರವಾಗಿ ಬರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ. ನಿಮ್ಮ ಸಮಸ್ಯೆಗಳನ್ನು ನೀವು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿದ್ದೀರಿ.
ಮಿಥುನ ರಾಶಿ
ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ತೆಗೆದುಕೊಳ್ಳುವ ನಿರ್ಧಾರದಿಂದ ನೀವು ಬಹಳ ಖುಷಿಯಾಗಿರುತ್ತೀರಿ. ಪ್ರಮುಖ ವಿಚಾರಗಳಲ್ಲಿ ನೀವು ನೀವು ಅಸಡ್ಡೆ ತೋರಿಸುವುದನ್ನು ತಪ್ಪಿಸಬೇಕು. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಕೆಲಸದಲ್ಲಿ ಸಹೋದರ ಮತ್ತು ಸಹೋದರಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಕೆಲಸದ ಸ್ಥಳದಲ್ಲಿ, ನೀವು ಕೆಲವು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ವ್ಯವಹಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು, ಅದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ.
ಕಟಕ ರಾಶಿ
ಹಣಕಾಸಿನ ದೃಷ್ಟಿಕೋನದಿಂದ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ನೀವು ಅಜಾಗರೂಕರಾಗಿದ್ದರೆ, ನಿಮ್ಮ ಕೆಲವು ಹಳೆಯ ಕಾಯಿಲೆಗಳು ಮರುಕಳಿಸಿ ಮತ್ತೆ ಸಮಸ್ಯೆ ತಂದೊಡ್ಡಬಹುದು. ತಾಯಿ ನಿಮಗೆ ಕೆಲವು ಪ್ರಮುಖ ಜವಾಬ್ದಾರಿಯನ್ನು ನೀಡಬಹುದು, ಆದರೆ ನೀವು ಭಯಪಡುವ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಎದುರಿಸುತ್ತಿರುವ ಅಡೆತಡೆಗಳು ನಿವಾರಣೆಯಾಗುತ್ತದೆ. ಅಪಾಯಕಾರಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಬೇಕು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
.ಸಿಂಹ ರಾಶಿ
ನಿಮ್ಮ ಯಾವುದೇ ಕೆಲಸವು ದೀರ್ಘಕಾಲದವರೆಗೆ ಬಾಕಿ ಉಳಿದಿದ್ದರೆ, ಅದನ್ನು ಇಂದು ಪೂರ್ಣಗೊಳಿಸಬಹುದು. ಹಣದ ವಿಷಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ವ್ಯಾಪಾರ ಯೋಜನೆಗಳ ಸಂಪೂರ್ಣ ಲಾಭವನ್ನು ಪಡೆಯುವಿರಿ. ಸರ್ಕಾರದ ಯಾವುದೇ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಿ.
ಕನ್ಯಾ ರಾಶಿ
ನಿಮ್ಮ ಮನಸ್ಸಿನಲ್ಲಿ ಪ್ರೀತಿ ಮತ್ತು ಸಹಕಾರದ ಭಾವನೆಗಳಿವೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ನೀವು ಒಟ್ಟಿಗೆ ಕುಳಿತು ಕುಟುಂಬದ ಸಮಸ್ಯೆಗಳನ್ನು ಪರಿಹರಿಸಿದರೆ ಅದು ನಿಮಗೆ ಒಳ್ಳೆಯದು. ಹೊರಗಿನವರೊಂದಿಗೆ ಅನಾವಶ್ಯಕವಾಗಿ ಮಾತನಾಡಬೇಡಿ. ಹೊಸ ಕೆಲಸಗಳಲ್ಲಿ ಹೂಡಿಕೆ ಮಾಡಲು ಯೋಜಿಸಬಹುದು. ಹಳೆಯ ತಪ್ಪಿನಿಂದ ಪಾಠ ಕಲಿಯಬೇಕಾಗುತ್ತದೆ. ಹೊಸ ವ್ಯಕ್ತಿಯೊಬ್ಬರು ನಿಮ್ಮನ್ನು ಭೇಟಿ ಆಗಲಿದ್ದಾರೆ.
ತುಲಾ ರಾಶಿ
ಎಂದೋ ಒಮ್ಮೆ ನೀವು ಕಳೆದುಕೊಂಡಿದ್ದ ಹಣ ಮತ್ತೆ ನಿಮ್ಮ ಕೈ ಸೇರಲಿದೆ. ನೀವು ಕೆಲಸದ ವಿಚಾರದಲ್ಲಿ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ವ್ಯಾಪಾರದಲ್ಲಿ ದೊಡ್ಡ ಸಾಧನೆ ಮಾಡಲಿದ್ದೀರಿ. ಹಣದ ಬಗ್ಗೆ ಸ್ವಲ್ಪ ಬುದ್ಧಿವಂತಿಕೆಯನ್ನು ತೋರಿಸುವ ಮೂಲಕ ನೀವು ಮುಂದುವರಿಯಬೇಕು. ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ವ್ಯವಹಾರದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ನೀವು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು, ಖರ್ಚು ಕಡಿಮೆ ಮಾಡಿ ಸಾಧ್ಯವಾದಷ್ಟೂ ಉಳಿತಾಯದ ಕಡೆ ಗಮನ ನೀಡಿ. ಅದು ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ. ಸ್ನೇಹಿತರೊಂದಿಗೆ ಹೊರಗೆ ಹೋಗಲು ನೀವು ಯೋಜಿಸಬಹುದು. ನಿಮ್ಮ ಆಸೆಗಳು ಈಡೇರಿದರೆ ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಹಿರಿಯ ಸದಸ್ಯರ ನೆರವಿನಿಂದ ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರೆ ಅದು ನಿಮಗೆ ಒಳ್ಳೆಯದು.
ಧನು ರಾಶಿ
ನಿಮ್ಮ ಸಂಗಾತಿಯೊಂದಿಗೆ ಇದ್ದ ಮನಸ್ತಾಪ ಇಂದು ದೂರಾಗುತ್ತದೆ. ನಿಮ್ಮ ಸಹೋದ್ಯೋಗಿಗಳ ಬಗ್ಗೆ ಸ್ವಲ್ಪ ಬೇಸರ ಉಂಟಾಗಬಹುದು. ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡಿದರೆ ಅದರಲ್ಲಿ ನೀವು ತಪ್ಪು ಮಾಡುವ ಸಾಧ್ಯತೆ ಇರುತ್ತದೆ, ಆದ್ದರಿಂದ ಆತುರಪಡದೆ ನಿಧಾನವಾಗಿ ಕೆಲಸ ಮಾಡಿ. ಸಾಮಾಜಿಕ ಕಾರ್ಯದಲ್ಲಿ ಪ್ರಗತಿ ಸಾಧಿಸುವಿರಿ. ಕುಟುಂಬದ ಸದಸ್ಯರ ಮದುವೆಯಲ್ಲಿ ಯಾವುದೇ ಅಡೆತಡೆಗಳು ಇದ್ದಲ್ಲಿ, ನಿಮ್ಮ ಸಂಬಂಧಿಕರ ಸಹಾಯದಿಂದ ಅವು ಪರಿಹಾರವಾಗುತ್ತದೆ.
ಮಕರ ರಾಶಿ
ರಹಸ್ಯ ಶತ್ರುಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ಸರ್ಕಾರದ ಯೋಜನೆಗಳ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ. ವಿವಾಹಿತರ ಜೀವನದಲ್ಲಿ ಹೊಸ ಅತಿಥಿ ಪ್ರವೇಶಿಸಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಯಾರನ್ನೂ ಅವಲಂಬಿಸಬೇಕಾಗಿಲ್ಲ. ನಿಮ್ಮ ಮಗುವಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಸಂಪೂರ್ಣ ಗಮನ ನೀಡದಿದ್ದರೆ, ನಂತರದ ಪರಿಣಾಮಗಳನ್ನು ನೀವು ಅನುಭವಿಸಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ವಿರೋಧಿಗಳು ಹುಟ್ಟಿಕೊಳ್ಳಬಹುದು.
ಕುಂಭ ರಾಶಿ
ನಿಮ್ಮ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ ಅದಕ್ಕೆ ಪರಿಹಾರ ಪಡೆಯುವಿರಿ. ನೀವು ಯಾವುದೇ ದೈಹಿಕ ಸಮಸ್ಯೆ ಹೊಂದಿದ್ದರೆ ಅದೂ ಸರಿ ಆಗಲಿದೆ. ಪ್ರೀತಿಯಲ್ಲಿರುವವರು ತಮ್ಮ ಸಂಗಾತಿಯೊಂದಿಗೆ ಸಂತೋಷದ ಸಮಯ ಕಳೆಯುತ್ತಾರೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾದರೆ, ಅದು ನಿಮಗೆ ಸಂತೋಷ ನೀಡುತ್ತದೆ. ಬಹಳ ದಿನಗಳ ನಂತರ ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮ್ಮನ್ನು ಭೇಟಿಯಾಗಲು ಬರುತ್ತಾರೆ. ಸಾಲ ತೀರಿಸುವಿರಿ.
ಮೀನ ರಾಶಿ
ಅರ್ಧಕ್ಕೆ ನಿಂತ ಕಾರ್ಯಗಳ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು, ಆಗ ಮಾತ್ರ ಅವು ಪೂರ್ಣಗೊಳ್ಳುತ್ತವೆ. ಕೆಲಸದ ವಿಚಾರದಲ್ಲಿ ಕುಟುಂಬದ ಯಾರಿಗಾದರೂ ಒತ್ತಡ ಇದ್ದರೆ ಅದೂ ದೂರವಾಗುತ್ತದೆ. ನಿಮ್ಮ ಕೆಲಸದ ಪ್ರದೇಶದಲ್ಲಿ ನೀವು ಯಾರನ್ನೂ ಅವಲಂಬಿಸಬೇಕಾಗಿಲ್ಲ, ಆದ್ದರಿಂದ ಯಾರ ಸಲಹೆಯನ್ನು ಅನುಸರಿಸಬೇಡಿ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ಎಲ್ಲಾ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.



