ಭಾನುವಾರ, 02 ಫೆಬ್ರವರಿ 2025: ಇಂದು ಸೂರ್ಯನಿಗೆ ಮೀಸಲಾದ ವಿಶೇಷ ದಿನ. ಈ ದಿನ ಗ್ರಹಗಳ ಚಲನೆಯನ್ನು ಪರಿಗಣಿಸಿದರೆ, ಕೆಲವು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಂತೋಷ ಇದ್ದರೆ ಕೆಲವರ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸುತ್ತದೆ. ಮೇಷ ರಾಶಿಯ ಜನರು ಇಂದು ತಮ್ಮ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ಗಮನ ಹರಿಸಬೇಕಿದೆ. ಮಿಥುನ ರಾಶಿಯ ಜನರು ಇಂದು ಹೊಸ ಕೆಲಸಕ್ಕೆ ಸೇರಬಹುದು.
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ಯಾವುದೇ ಕೆಲಸದ ನೀತಿಗಳು ಮತ್ತು ನಿಯಮಗಳಿಗೆ ನೀವು ಸಂಪೂರ್ಣ ಗಮನ ನೀಡಬೇಕು. ನಿಮ್ಮ ಹಿಂದಿನ ಕೆಲವು ತಪ್ಪುಗಳು ಬಹಿರಂಗವಾಗಬಹುದು. ಕೆಲಸದಲ್ಲಿ, ನಿಮ್ಮ ಹಿರಿಯ ಅಧಿಕಾರಿಗಳು ನಿಮಗೆ ಹೆಚ್ಚಿನ ಜವಾಬ್ದಾರಿ ನೀಡಲಿದ್ದಾರೆ. ಸ್ನೇಹಿತರಲ್ಲಿ ಒಬ್ಬರಿಗೆ ಸಹಾಯ ಮಾಡಲಿದ್ದೀರಿ. ಒಡಹುಟ್ಟಿದವರಿಂದ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಮತ್ತೊಬ್ಬರ ಚಾಡಿ ಮಾತುಗಳನ್ನು ನಂಬದಿರಿ.
ವೃಷಭ ರಾಶಿ
ಇದು ವೃಷಭ ರಾಶಿಯ ಜನರಿಗೆ ವಿವಿಧ ಆದಾಯದ ಮೂಲಗಿಂದ ಲಾಭ ದೊರೆಯಲಿದೆ. ನೀವು ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಿ. ಗಂಟಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಅದು ಸಹ ನಿವಾರಣೆ ಆಗುತ್ತದೆ. ನಿಮ್ಮ ಸಂಬಂಧಿಕರಿಂದ ಯಾರಾದರೂ ನಿಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಬರಬಹುದು. ನೀವು ಯಾವುದಾದರೂ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೀರಿ. ನಿಮಗೆ ಹೊಸ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ನಿಮ್ಮ ಮನೆಗೆ ಹೊಸ ವಾಹನವನ್ನು ತರಬಹುದು. ಕುಟುಂಬದ ಸದಸ್ಯರ ವಿವಾಹ ನಿಶ್ಚಯವಾಗುತ್ತದೆ.
ಮಿಥುನ ರಾಶಿ
ಇಂದು ಮಿಥುನ ರಾಶಿಯವರ ಆದಾಯ ಹೆಚ್ಚಳವಾಗುವ ದಿನವಾಗಿದೆ. ನೀವು ಹೊಸ ಕೆಲಸಕ್ಕೆ ಸೇರಬಹುದು. ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಮಾನಸಿಕ ಶಾಂತಿಯಿಂದಾಗಿ, ನೀವು ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತೀರಿ. ನಿಮ್ಮ ಸೋಮಾರಿತನವನ್ನು ಬಿಟ್ಟು ಮುಂದೆ ಸಾಗಿರಿ. ಚಿಕ್ಕ ಮಕ್ಕಳೊಂದಿಗೆ ಸ್ವಲ್ಪ ಸಮಯ ಮೋಜು ಮಾಡುತ್ತೀರಿ. ಪೋಷಕರು ನಿಮಗೆ ಕೆಲವು ದೊಡ್ಡ ಜವಾಬ್ದಾರಿಯನ್ನು ನೀಡಬಹುದು.
ಕಟಕ ರಾಶಿ
ಇಂದು ಮನಸ್ಸು ಏನನ್ನೋ ಚಿಂತಿಸುತ್ತಿರುತ್ತದೆ. ಯಾವುದೇ ಹೆಜ್ಜೆ ಇಡುವ ಮುನ್ನ ಹಿರಿಯ ಸದಸ್ಯರ ಅಭಿಪ್ರಾಯ ಪಡೆಯಬೇಕು. ಪ್ರಮುಖ ವಿಷಯಗಳ ಕಡೆ ಬಿಟ್ಟು ಇತರ ವಿಚಾರಗಳ ಕಡೆ ಗಮನ ಹರಿಸದಿರಿ, ಅದು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಹೊಸ ಕೋರ್ಸ್ಗೆ ತಯಾರಿ ನಡೆಸಬಹುದು. ನಿಮ್ಮ ಸಂಗಾತಿಯಿಂದ ನೀವು ಯಾವುದನ್ನೂ ರಹಸ್ಯವಾಗಿಡಬಾರದು, ಇಲ್ಲದಿದ್ದರೆ ಅದು ನಂತರ ಜಗಳಕ್ಕೆ ಕಾರಣವಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಉದ್ಯೋಗ ಹುಡುಕುತ್ತಿರುವವರು ಒಳ್ಳೆ ಸುದ್ದಿ ಕೇಳುವಿರಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ಯಾವುದೇ ಪ್ರಮುಖ ಕೆಲಸ ದೀರ್ಘಕಾಲದಿಂದ ಬಾಕಿ ಉಳಿದಿದ್ದರೆ, ಅದು ಪೂರ್ಣಗೊಳ್ಳಬಹುದು.
ಕನ್ಯಾ ರಾಶಿ
ಇಂದು ಕನ್ಯಾ ರಾಶಿಯವರಿಗೆ ಸಮಸ್ಯೆಗಳಿಂದ ಕೂಡಿದ ದಿನವಾಗಲಿದೆ. ವ್ಯಾಪಾರ ಮಾಡುವವರಿಗೆ ಉತ್ತಮ ದಿನವಾಗಿರುತ್ತದೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಲು ನೀವು ಮುಂದೆ ಬರುತ್ತೀರಿ. ಪಾಲುದಾರಿಕೆಯಲ್ಲಿ ಯಾವುದೇ ಕೆಲಸ ಮಾಡುವಾಗ ನೀವು ಸ್ವಲ್ಪ ಗಮನ ಹರಿಸಬೇಕು, ಏಕೆಂದರೆ ನೀವು ಮೋಸ ಹೋಗಬಹುದು. ಕಾನೂನು ವಿಷಯವು ನಿಮ್ಮ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ದಿನವಾಗಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಬದಲಾವಣೆಗಳಾಗಲಿವೆ. ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಸಂಬಂಳದೊಂದಿಗೆ ಒಳ್ಳೆ ಕೆಲಸ ದೊರೆಯುತ್ತದೆ. ಆಹಾರದ ಕಡೆ ಗಮನ ಕೊಡಿ, ಕರಿದ ಆಹಾರ ಪದಾರ್ಥಗಳಿಂದ ದೂರವಿರಿ. ನೆರೆಹೊರೆಯಲ್ಲಿ ಯಾವುದೇ ಚರ್ಚೆ ಉದ್ಭವಿಸಿದರೆ ಅದರಲ್ಲಿ ಮೌನವಾಗಿರಬೇಕು. ತಂದೆಯೊಂದಿಗೆ ಮನಸ್ತಾಪ ಹೊಂದುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಉತ್ತಮ ದಿನವಾಗಲಿದೆ. ಕೆಲಸದ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವ್ಯಾಪಾರ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಪ್ರತಿಫಲವನ್ನು ಪಡೆಯಲಿದ್ದೀರಿ. ನಿಮ್ಮ ಬಾಸ್ ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ, ನೀವು ಹೊರಗೆ ಹೋದಾಗ ನಿಮ್ಮ ವಸ್ತುಗಳ ಬಗ್ಗೆ ಎಚ್ಚರದಿಂದ ಇರಬೇಕು, ಇಲ್ಲದಿದ್ದರೆ ಕಳ್ಳತನವಾಗುವ ಸಂಭವವಿದೆ.
ಧನು ರಾಶಿ
ಆದಾಯದಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ಕೆಲವು ವಿಷಯಗಳು ಸವಾಲಾಗಿರುತ್ತವೆ. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ನಾಳೆ ಕುಟುಂಬದ ವಾತಾವರಣದಲ್ಲಿ ಸಮಸ್ಯೆ ಉದ್ಭವಿಸಬಹುದು. ಯಾವುದೇ ವಿವಾದ ಉಂಟಾದರೆ, ಎಲ್ಲವನ್ನೂ ಮೌನದಿಂದಲೇ ಪರಿಹಾರ ಮಾಡಿಕೊಳ್ಳಿ. ಸರ್ಕಾರದ ಯಾವುದೇ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಕೆಲಸಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾಗಬಹುದು. ಭಾವನೆಗಳ ಆಧಾರದ ಮೇಲೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ಆಸ್ತಿಯನ್ನು ಖರೀದಿಸುವಾಗ, ಅದರ ವಿವರ ತಿಳಿದುಕೊಳ್ಳಿ. ಸಮತೋಲಿತ ಆಹಾರವನ್ನು ಸೇವಿಸಬೇಕು. ಅವಿವಾಹಿತರ ಜೀವನದಲ್ಲಿ ಹೊಸ ಅತಿಥಿ ಪ್ರವೇಶಿಸಬಹುದು.
ಕುಂಭ ರಾಶಿ
ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನೀವು ಪ್ರಯತ್ನಿಸುತ್ತೀರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಸಂಪೂರ್ಣ ಗಮನ ಹರಿಸಬೇಕು. ನೀವು ವ್ಯಾಪಾರದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಮಾಡುತ್ತೀರಿ, ಅದು ನಿಮಗೆ ಒಳ್ಳೆಯದು. ಸಹೋದ್ಯೋಗಿಗಳಿಂದ ನಿಮಗೆ ತೊಂದರೆ ಉಂಟಾಗಬಹುದು.
ಮೀನ ರಾಶಿ
ಇಂದು ಮೀನ ರಾಶಿಯವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ಕೌಟುಂಬಿಕ ಸಮಸ್ಯೆಗಳು ನಿಮ್ಮ ಉದ್ವೇಗವನ್ನು ಹೆಚ್ಚಿಸುತ್ತವೆ. ನಿಮ್ಮ ವ್ಯಾಪಾರದಲ್ಲಿಯೂ ನಷ್ಟವಾಗುವ ಸಂಭವವಿದ್ದು, ಬೇರೆ ಯಾವುದಾದರೂ ಉದ್ಯೋಗದ ಆಫರ್ ಬಂದರೆ, ಯೋಚಿಸಿದ ನಂತರವೇ ಒಪ್ಪಿಕೊಳ್ಳಬೇಕು. ಯಾರಿಗಾದರೂ ಯಾವುದೇ ಭರವಸೆ ನೀಡುವ ಮೊದಲು ನೀವು ಯೋಚಿಸಬೇಕು, ಏಕೆಂದರೆ ಅದನ್ನು ಪೂರೈಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ಹಣಕಾಸಿನ ವಿಚಾರವಾಗಿ ಮೊದಲೇ ಪ್ಲ್ಯಾನ್ ಮಾಡಿದರೆ ಒಳ್ಳೆಯದು.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.



