ಇಂದು 3 ಮೇ 2025 ಶನಿವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ. ಇಂದು ಬೆಳಗ್ಗೆ09:12 ರಿಂದ 10:46 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತದೆ. ಮೀನ ರಾಶಿಯವರು ಸಾಲದ ಸುಳಿಯಲ್ಲಿ ಸಿಲುಕುವಿರಿ.
ಮೇಷ ರಾಶಿ
ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುತ್ತದೆ. ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ, ಸರ್ಕಾರಿ ಕೆಲಸದಲ್ಲಿರುವವರಿಗೆ ಅಥವಾ ಸರ್ಕಾರದ ಸವಲತ್ತು ಪಡೆಯಲು ಬಯಸುತ್ತಿರುವವರಿಗೆ ಇಂದು ಶುಭ ಸುದ್ದಿ ದೊರೆಯಲಿದೆ. ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿ ಹೆಜ್ಜೆಯಲ್ಲೂ ಜಾಗ್ರತೆಯಿಂದ ಇದ್ದರೆ ಒಳಿತು.
ವೃಷಭ ರಾಶಿ
ಬಹಳ ದಿನಗಳಿಂದ ಆಸೆ ಪಟ್ಟಿದ್ದ ಹೊಸ ವಸ್ತ್ರ, ಆಭರಣಗಳನ್ನು ಖರೀದಿಸಲಿದ್ದೀರಿ. ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿನ ಲಾಭವಿರುತ್ತದೆ. ಟ್ರಾವೆಲ್ ಬಿಸ್ನೆಸ್ ಮಾಡುವವರಿಗೆ ಉತ್ತಮ ಲಾಭವಿರುತ್ತದೆ. ಇಷ್ಟಾದರೂ ಮನಸ್ಸಿಗೆ ಸಮಾಧಾನ ಇರುವುದಿಲ್ಲ, ಏನಾದರೂ ಗೊಂದಲ ಇರುತ್ತದೆ. ಚಿಂತಿಸಬೇಡಿ, ಎಲ್ಲವೂ ಒಳಿತಾಗಲಿದೆ.
ಮಿಥುನ ರಾಶಿ
ಈ ದಿನ ಅಧಿಕ ಖರ್ಚಾಗುತ್ತದೆ, ಭವಿಷ್ಯಕ್ಕಾಗಿ ನೀವು ಕೂಡಿಟ್ಟ ಹಣ ಪೋಲಾಗಬಹುದು, ಆದ್ದರಿಂದ ಹಣಕಾಸಿನ ವಿಚಾರದಲ್ಲಿ ಜಾಗ್ರತೆಯಿಂದ ಇರಿ. ಆರೋಗ್ಯದಲ್ಲಿ ಚೇತರಿಕೆ ಆಗಲಿದೆ, ಕುಟುಂಬದಲ್ಲಿ ಗೊಂದಲದ ವಾತಾವರಣ ಇರಲಿದೆ.
ಕಟಕ ರಾಶಿ:
ಇಂದು ಉತ್ಸಾಹದ ಚಿಲುಮೆಯಾಗಿರುತ್ತೀರಿ, ಯಾವುದೇ ಕೆಲಸವನ್ನು ಖುಷಿಯಿಂದ ಮಾಡುತ್ತೀರಿ, ಇದರಿಂದ ನಿಮ್ಮ ಕೆಲಸದಲ್ಲಿ ಲಾಭವಾಗಲಿದೆ. ತಿಳಿದೋ, ತಿಳಿಯದೆಯೋ ಇಂದು ಸ್ನೇಹಿತರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಸಂಬಂಧ ಇನ್ನಷ್ಟು ಹಾಳಾಗುವ ಮುನ್ನ ಜಾಗ್ರತೆಯಿಂದ ಇರಿ, ತಾಳ್ಮೆಯಿಂದ ವ್ಯವಹರಿಸಿ, ಆಡುವ ಮಾತುಗಳ ಮೇಲೆ ಎಚ್ಚರಿಕೆ ಇರಲಿ.
ಸಿಂಹ ರಾಶಿ
ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಯಾರಾದರೂ ನಿಮಗೆ ಮೋಸ ಮಾಡಬಹುದು, ಆದ್ದರಿಂದ ಆದಷ್ಟು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯಿರಿ. ಅತಿ ಆಸೆ ಪಟ್ಟು ನಷ್ಟ ಮಾಡಿಕೊಳ್ಳದಿರಿ. ಇರುವುದರಲ್ಲಿ ತೃಪ್ತಿಯಿಂದ ಇದ್ದರೆ ಒಳಿತಾಗುತ್ತದೆ. ಜನರೊಂದಿಗೆ ವಿರೋಧ ಎದುರಿಸಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಕೂಡಾ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಮನಸ್ಸಿಗೆ ಸಮಾಧಾನ ಇರುವುದಿಲ್ಲ.
ಕನ್ಯಾ ರಾಶಿ
ಬಹಳ ದಿನಗಳ ನಿಮ್ಮ ಕನಸೊಂದು ಈ ದಿನ ನೆರವೇರಲಿದೆ. ಇದರಿಂದ ನಿಮಗೆ ಅಧಿಕ ಲಾಭವಾಗಲಿದೆ. ಹೊಸ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ. ಹೊಸ ಬಿಸ್ನೆಸ್ ಆರಂಭಿಸುವವರಿಗೆ, ಕ್ಯಾಟರಿಂಗ್ ಮಾಡುವವರಿಗೆ ಉತ್ತಮ ಲಾಭ ದೊರೆಯುತ್ತದೆ.
ತುಲಾ ರಾಶಿ
ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿಯಾಗಲಿದೆ. ಮನೆಯಲ್ಲಿ ಖುಷಿಯ ವಾತಾವರಣ ಇರಲಿದೆ. ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯಲಿದ್ದೀರಿ. ದೂರದ ಪ್ರಯಾಣ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಹೊಸ ಕೆಲಸ ಆರಂಭಿಸಿರುವವರಿಗೆ ಸಣ್ಣ ಪುಟ್ಟ ಅಡೆತಡೆಗಳು ಎದುರಾಗಬಹುದು. ಆರೋಗ್ಯವನ್ನು ಕಡೆಗಣಿಸಬೇಡಿ.
ವೃಶ್ಚಿಕ ರಾಶಿ
ಕೆಲಸ ಕಾರ್ಯಗಳಲ್ಲಿ ಯಥೇಚ್ಛವಾಗಿ ಲಾಭವಾಗಲಿದೆ, ಬಹಳ ದಿನಗಳಿಂದ ನೀವು ಆರಂಭಿಸಬೇಕೆಂದುಕೊಂಡಿದ್ದ ಕೆಲಸವನ್ನು ಇಂದು ಆರಂಭಿಸಲಿದ್ದೀರ. ಇದರಿಂದ ಯಶಸ್ಸು ದೊರೆಯಲಿದೆ. ಇಡೀ ದಿನ ಸಂತೋಷದಿಂದ ಇರಲಿದ್ದೀರಿ, ಆತ್ಮವಿಶ್ವಾಸ ಹೆಚ್ಚಲಿದೆ, ಏನೇ ಸಮಸ್ಯೆ ಬಂದರೂ ಧೈರ್ಯದಿಂದ ಎದುರಿಸಲಿದ್ದೀರಿ. ಹಿತಶತ್ರುಗಳ ಕಾಟ ಇರಲಿದೆ, ಜಾಗ್ರತೆಯಿಂದಿರಿ.
ಧನು ರಾಶಿ
ಬಹಳ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದವರಿಗೆ ಚೇತರಿಕೆ ಕಾಣಲಿದೆ, ಸಿನಿಮಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿದೆ, ಚಿನ್ನ, ಬೆಳ್ಳಿ ವ್ಯಾಪಾರ ಮಾಡುವವರಿಗೆ ಲಾಭ ಕಡಿಮೆ ಇರುತ್ತದೆ, ಆಟೋ, ಕ್ಯಾಬ್ ಚಾಲಕರಿಗೆ ಉತ್ತಮ ಆದಾಯ ದೊರೆಯಲಿದೆ.
ಮಕರ ರಾಶಿ
ಇಷ್ಟಮಿತ್ರರೊಂದಿಗೆ ಸಂತೋಷದಿಂದ ಕಾಲ ಕಳೆಯಲಿದ್ದೀರಿ, ಜೀವನದಲ್ಲಿ ಸಾಧನೆ ಮಾಡಬೇಕೆಂದುಕೊಂಡಿರುವವರು ಈ ದಿನ ಮುಂದುವರೆಯಬಹುದು, ಹೊಸ ವ್ಯಾಪಾರದಲ್ಲಿ ಹೂಡಿಕೆ ಮಾಡುವವರು ಯಶಸ್ಸು ಗಳಿಸಲಿದ್ದಾರೆ. ಇಡೀ ದಿನ ಸುಖ, ಸಂತೋಷದಿಂದ ಕೂಡಿರಲಿದೆ.
ಕುಂಭ ರಾಶಿ
ಆರೋಗ್ಯದಲ್ಲಿ ಸಮಸ್ಯೆ ಉಲ್ಬಣಗೊಳ್ಳಬಹುದು, ಜಾಗ್ರತೆಯಿಂದ ಇರಿ, ಹೊಸ ಕೆಲಸ, ಹೊಸ ವ್ಯಾಪಾರ ಆರಂಭಿಸಬೇಕು ಎಂದುಕೊಂಡಿರುವವರು ಕೆಲವು ದಿನಗಳ ಕಾಲ ಮುಂದೂಡಿದರೆ ಉತ್ತಮ. ಕಟ್ಟಡ ಕೆಲಸ ಮಾಡುವವರಿಗೆ ಒಳ್ಳೆ ಲಾಭವಾಗಲಿದೆ, ಚಾಲಕರಿಗೆ ಒತ್ತಡದ ದಿನವಾಗಿರುತ್ತದೆ, ತಾಳ್ಮೆಯಿಂದ ಕೆಲಸ ಮಾಡಿ.
ಮೀನ ರಾಶಿ
ಕೆಲಸದಲ್ಲಿ ಅಭಿವೃದ್ಧಿ ಇರಲಿದೆ. ಹಿತಶತ್ರುಗಳ ಕಾಟ ಕೂಡಾ ಹೆಚ್ಚಾಗಿರುತ್ತದೆ, ಅಧಿಕ ಖರ್ಚು ಮಾಡಲಿದ್ದೀರಿ. ಮತ್ತೊಮ್ಮೆ ಸಾಲದ ಸುಳಿಯಲಿ ಸಿಲುಕುವ ಸಾಧ್ಯತೆ ಇದೆ. ಹೊಸ ಜನರ ಪರಿಚಯವಾಗಲಿದೆ, ಆದರೆ ಅವರು ನಿಮ್ಮ ಸ್ನೇಹಕ್ಕೆ ಯೋಗ್ಯರೇ ಎಂಬುದನ್ನು ಪರಿಶೀಲಿಸಿ ಸ್ನೇಹ ಮಾಡಿ.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



