ಕರ್ನಾಟಕದ ಖ್ಯಾತ ರಾಜಕಾರಣಿ ಜಮೀರ್ ಅಹ್ಮದ್ ಖಾನ್, ಇತ್ತೀಚೆಗೆ ಇವರು ಹಲವು ವಿಚಾರಗಳಿಂದ ಸುದ್ದಿ ಆಗಿದ್ದರು, ಇವರ ಬಂ*ಧನ ಯಾವಾಗ ಆಗುತ್ತದೆ ಎನ್ನುವ ಮಾತುಗಳು ಸಹ ಕೇಳಿಬಂದಿತ್ತು, ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವ ವ್ಯಕ್ತಿಗಳಲ್ಲಿ ಜಮೀರ್ ಅಹ್ಮದ್ ಖಾನ್ ಅವರು ಸಹ ಒಬ್ಬರು. ಇವರ ವಿಷಯ ಈಗ ಒಂದು ಕಡೆಯಾದರೆ ಮತ್ತೊಂದು ಜಮೀರ್ ಅಹ್ಮದ್ ಖಾನ್ ಅವರ ಮಗ ಜೈದ್ ಖಾನ್ ಅವರ ವಿಚಾರ ವೈರಲ್ ಆಗಿದೆ. ಇವರ ಬಂ*ಧನ ಯಾವಾಗ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕನ್ನಡಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಏನಾಗಿದೆ ಎಂದು ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..

ಜೈದ್ ಖಾನ್ ಅವರು ತಂದೆಯ ಹಾಗೆ ರಾಜಕಾರಣಕ್ಕೆ ಹೋಗಲಿಲ್ಲ, ಅವರಿಗೆ ಸಿನಿಮಾದಲ್ಲಿ ಹೀರೋ ಆಗಿ ನಟಿಸಬೇಕು ಎಂದು ಆಸೆ ಇತ್ತು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ಸ್ಪಷ್ಟವಾಗಿ ಕನ್ನಡ ಮಾತಾಡೋದನ್ನ ಕಲಿತು, ಡ್ಯಾನ್ಸ್, ಫೈಟಿಂಗ್, ಆಕ್ಟಿಂಗ್ ಎಲ್ಲವನ್ನು ಕಲಿತು, ಬನಾರಸ್ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬನಾರಸ್ ಸಿನಿಮಾ ತಕ್ಕ ಮಟ್ಟಿಗೆ ಯಶಸ್ಸನ್ನು ಪಡೆದು, ಜೈದ್ ಖಾನ್ ಭರವಸೆಯ ನಟ ಎನ್ನುವುದನ್ನು ಸಾಬೀತು ಪಡಿಸಿತು. ಮುಂದೆ ಇವರು ಒಳ್ಳೆಯ ಸಿನಿಮಾಗಳನ್ನು ಮಾಡಲಿ ಎನ್ನುವುದು ಕನ್ನಡ ಸಿನಿಪ್ರಿಯರ ಇಷ್ಟ ಕೂಡ ಆಗಿತ್ತು, ಅದೇ ರೀತಿ ಇವರ ಎರಡನೇ ಸಿನಿಮಾ ಕೂಡ ಅನೌನ್ಸ್ ಆಯಿತು.
ಜೈದ್ ಖಾನ್ ಅವರು ಕಲ್ಟ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಿಲ್ ವಾಲಾ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕರು ಕಲ್ಟ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಸಿನಿಮಾ ಪೂರ್ತಿ ಆಗುವ ಮೊದಲೇ ದೊಡ್ಡದೊಂದು ವಿವಾದ ಮಾಡಿಕೊಂಡಿದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ್ದ, ಸಂತೋಷ್ ಎನ್ನುವ ಡ್ರೋನ್ ಆಪರೇಟರ್ ಜೈದ್ ಖಾನ್ ಹಾಗೂ ನಿರ್ದೇಶಕರ ಮೇಲೆ ಆರೋಪ ಮಾಡಿದ್ದಾರೆ. ಬಾಕಿ ಇರುವ ಪೇಮೆಂಟ್ ಕ್ಲಿಯರ್ ಮಾಡದೆಯೇ, 1.5 ಲಕ್ಷ ಬೆಲೆ ಬಾಳುವ ಮೆಮೊರಿ ಕಾರ್ಡ್ ಅನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹಣವನ್ನು ಕ್ಲಿಯರ್ ಮಾಡಿ ಎಂದು ಕೇಳಿಕೊಂಡರು ಸಹ ಜೈದ್ ಖಾನ್ ಅವರು ಕ್ಲಿಯರ್ ಮಾಡದ ಕಾರಣ ಪ್ರಾ*ಣ ಕಳೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ..
ಕೊನೆಗೆ ಮನೆಯವರು ಸಂತೋಷ್ ಅವರನ್ನು ಕಾಪಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸಂತೋಷ್ ಅವರ ತಂಗಿ ಪೊಲೀಸ್ ಠಾಣೆಗೆ ಹೋಗಿ ಜೈದ್ ಖಾನ್ ಹಾಗೂ ನಿರ್ದೇಶಕರ ವಿರುದ್ಧ ದೂ*ರು ನೀಡಿದ್ದಾರೆ. ಆದರೆ ಪೊಲೀಸರು ಈ ಕೇಸ್ ಬಗ್ಗೆ ಯಾವ ರೀತಿಯ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದು ಇನ್ನು ಕೂಡ ತಿಳಿದುಬಂದಿಲ್ಲ. ಇತ್ತ ಹಿಂದೂಪರ ಹೋರಾಟ ಪುನೀತ್ ಕೆರೆಹಳ್ಳಿ ಸಂತೋಷ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಸಂತೋಷ್ ಅವರು ಆಸ್ಪತ್ರೆಯಲ್ಲಿ ಇರುವ ಒಂದು ವಿಡಿಯೋ ಶೇರ್ ಮಾಡಿ, ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.

“Siddaramaiah ನವರೆ ಅಮಾಯಕ ಹಿಂದೂ ಯುವಕನನ್ನು ಬೆದರಿಸಿ ಖಾಲಿ ಹಾಳೆಯ ಮೇಲೆ ಬಲವಂತವಾಗಿ ಸಹಿ ಮಾಡಿಸಿಕೊಂಡ ಸಚಿವ B.Z Zameer Ahmed Khan ಅವರ ಮಗ Zaid Khan ಮೇಲೆ FIR ಯಾವಾಗ? ಅವರ ಬಂ*ಧನ ಯಾವಾಗ? ದೂರು ನೀಡಿದರೂ FIR ಮಾಡದ ಪೊಲೀಸರು! BJP Karnataka Vijayendra Yediyurappa Prashant Makanur ಸ್ನೇಹಿತರೆ ಸಂತೋಷ್ ಗೆ ನ್ಯಾಯ ಸಿಗಬೇಕು ಎಂದರೆ ಪ್ರತಿಯೊಬ್ಬರೂ ಈ ವಿಡಿಯೋ ಶೇರ್ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿ! ತಂದೆ ಇಲ್ಲದೆ ಸಂಪೂರ್ಣ ಮನೆ ಜವಾಬ್ದಾರಿ ಹೊತ್ತಿರುವ ಹಿಂದೂ ಯುವಕನ ಪರ ಧ್ವನಿಯಾಗಿ.
ಜಮೀರ್ ನಿನಗೆ ಮಾನವೀಯತೆ ಇದ್ದರೆ ಕೂಡಲೇ ಈ ಹುಡುಗನಿಗೆ ನಿನ್ನ ಮಗನಿಂದ ಆದ ಅನ್ಯಾಯಕ್ಕೆ ಕ್ಷಮೆ ಕೇಳಿ ಪರಿಹಾರ ನೀಡು..” ಎಂದು ಬರೆದುಕೊಂಡಿದ್ದಾರೆ ಪುನೀತ್ ಕೆರೆಹಳ್ಳಿ.