ನಟಿ ಸಮಂತಾ ಹಾಗು ಅವರ ಮಾಜಿ ಪತಿ ನಾಗ ಚೈತನ್ಯ ಅವರ ವಿಚಾರ ಮಾಧ್ಯಮಗಳ ಎದುರು ಚರ್ಚೆ ಆಗುತ್ತಲೇ ಇರುತ್ತದೆ. ಇವರಿಬ್ಬರು ಏನೇ ಮಾಡಿದರೂ ಸುದ್ದಿಯಾಗುತ್ತದೆ. ಚೈ ಮತ್ತು ಸ್ಯಾಮ್ ವಿಚ್ಛೇದನ ಪಡೆದ ನಂತರ ಸಮಂತಾ ಇನ್ನು ಸಿಂಗಲ್ ಆಗಿಯೇ ಇದ್ದಾರೆ, ಆದರೆ ನಾಗಚೈತನ್ಯ ಅವರು ಮಾತ್ರ ಹೊಸ ಗರ್ಲ್ ಫ್ರೆಂಡ್ ಜೊತೆಗೆ ಸುತ್ತಾಡಿಕೊಂಡು, ಇತ್ತೀಚೆಗೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡರು. ಅಷ್ಟೇ ಅಲ್ಲದೇ ಇದೇ ಡಿಸೆಂಬರ್ 4ರಂದು ಅವರಿಬ್ಬರ ಮದುವೆ ಕೂಡ ನಡೆಯುತ್ತಿದೆ. ಆದರೆ ಸಮಂತಾ ಅವರ ಬದುಕಿನಲ್ಲಿ ಈಗ ಸೂತಕದ ಛಾಯೆ ಶುರುವಾಗಿದೆ. ಅವರ ತಂದೆ ವಿಧಿವಶರಾಗಿದ್ದಾರೆ.

ನಿನ್ನೆ ಎಲ್ಲಾ ನಾಗಚೈತನ್ಯ ಅವರ ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ ನಡೆದಿದೆ. ನಟಿ ಶೋಭಿತ ಧೂಳಿಪಾಲ ಅವರೊಡನೆ ನಾಗಚೈತನ್ಯ ಮದುವೆ ನಡೆಯುತ್ತಿದ್ದು, ಡಿಸೆಂಬರ್ 4ರಂದು ಅವರಿಬ್ಬರ ಮದುವೆ. ಈ ವಿಶೇಷವಾಗಿ ಮದುವೆಗಿಂತ ಮುಂಚಿನ ಕಾರ್ಯಕ್ರಮಗಳು ಈಗಾಗಲೇ ಶುರುವಾಗಿದ್ದು, ನಿನ್ನೆ ಅವರಿಬ್ಬರ ಹಳದಿ ಸಂಭ್ರಮ ಜೋರಾಗಿಯೇ ನಡೆದಿದೆ. ಫೋಟೋಗಳು ಸಹ ಎಲ್ಲೆಡೆ ವೈರಲ್ ಆಗಿದೆ. ನಾಗಚೈತನ್ಯ ಎರಡನೇ ಮದುವೆ, ವಿಜೃಂಭಣೆಯಿಂದ ನಡೆಯುತ್ತಿದೆ. ಒಬ್ಬರಿಗೆ ಮದುವೆ ನಡೆಯುತ್ತಿದ್ದರೆ, ಇನ್ನೊಬ್ಬರ ಮನೆಯಲ್ಲಿ ದುಃಖ ಮನೆಮಾಡಿದೆ. ಹೌದು ನಟಿ ಸಮಂತಾ ಅವರ ತಂದೆ ನಿನ್ನೆ ವಿಧಿಶರಾಗಿದ್ದಾರೆ.
ನಟಿ ಸಮಂತಾ ಅವರ ತಂದೆ ಜೋಸೆಫ್ ಪ್ರಭು ಅವರು ನಿನ್ನೆ ವಿಧಿವಶರಾಗಿದ್ದು, ಸಮಂತಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಶೇರ್ ಮಾಡುವ ಮೂಲಕ ಈ ದುಃಖದ ವಿಷಯವನ್ನು ಹಂಚಿಕೊಂಡರು. ಸಮಂತಾ ಅವರ ತಂದೆ ಜೋಸೆಫ್ ಪ್ರಭು ಅವರ ನಿಧನದ ಸುದ್ದಿ ಸಮಂತಾ ಅವರಿಗೆ ಬಹಳ ನೋವು ತಂದಿದೆ, ಅವರ ಇಡೀ ಕುಟುಂಬಕ್ಕೆ ಈ ನೋವಿನಿಂದ ಹೊರ ಬರುವುದು ತುಂಬಾ ಕಷ್ಟ, ಇಂಥ ಸಮಯದಲ್ಲಿ ಭಗವಂತ ಅವರ ಇಡೀ ಕುಟುಂಬಕ್ಕೆ ನೆಮ್ಮದಿ ಮತ್ತು ಸಂತೋಷವನ್ನು ತಂದುಕೊಡಲಿ ಎನ್ನುವುದು ಸಮಂತಾ ಅವರ ಅಭಿಮಾನಿಗಳ ಕೋರಿಕೆ ಆಗಿದೆ. ಇನ್ನು ಸಮಂತಾ ಅವರ ಪರಿಸ್ಥಿತಿ ನೆನೆಸಿಕೊಂಡರೆ ಎಂಥವರಿಗೂ ಬೇಸರ ಆಗದೆ ಇರದು.

ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಬಹಳಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಅವರ ಆರೋಗ್ಯ ಹದಗೆಟ್ಟು, ಬಹಳ ಕಷ್ಟಪಟ್ಟು ಅದರಿಂದ ಚೇತರಿಸಿಕೊಂಡು, ಫೀನಿಕ್ಸ್ ಪಕ್ಷಿಯಂತೆ ವಾಪಸ್ ಬಂದರು. ವೆಬ್ ಸೀರೀಸ್ ಅಭಿನಯದಲ್ಲಿ ತೊಡಗಿಸಿಕೊಂಡರು, ಅವರನ್ನು ಹಲವರು ಟ್ರೋಲ್ ಮಾಡಿದರೂ ಸಹ ಅವೆಲ್ಲವನ್ನೂ ಎದುರಿಸಿ ಸ್ಟ್ರಾಂಗ್ ಆಗಿ ನಿಂತರು. ವೃತ್ತಿಯಲ್ಲಿನ ಯಶಸ್ಸು ಅವರನ್ನು ಬಿಡಲಿಲ್ಲ, ಆದರೆ ವೈಯಕ್ತಿಕವಾಗಿ ಬಹಳ ನೋವು ಅನುಭವಿಸುತ್ತಾರೆ ಸಮಂತಾ. ಈಗ ತಂದೆಯನ್ನು ಸಹ ಕಳೆದುಕೊಂಡು, ಅವರ ದುಃಖ ಇಮ್ಮಡಿ ಆಗಿದೆ. ಸಮಂತಾ ಅವರಿಗೆ ಈಗ ಇದ್ದದ್ದೇ ಅವರ ತಂದೆ ತಾಯಿ, ಇಬ್ಬರು ಬಹಳ ಸಪೋರ್ಟಿವ್ ಆಗಿದ್ದರು.
ಅಂಥ ತಂದೆಯನ್ನು ಕಳೆದುಕೊಂಡಿದ್ದಾರೆ. ಸಮಂತಾ ಅವರು ತಮ್ಮ ಕುಟುಂಬದ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಸಮಂತಾ ಅವರ ತಂದೆ ಜೋಸೆಫ್ ಪ್ರಭು ಅವರು ಟೀಚರ್, ಇನ್ನು ಸಮಂತಾ ಅವರಿಗೆ ಇಬ್ಬರು ಅಣ್ಣಂದಿರು. ಅವರ ಕುಟುಂಬ ತುಂಬಾ ಪ್ರೈವೇಟ್. ಹಾಗೂ ಸರಳ ವ್ಯಕ್ತಿಗಳು, ಅವರು ಯಾರು ಕೂಡ ಎಲ್ಲಿಯು ಮಾಧ್ಯಮಗಳ ಮುಂದೆ ಒಂದು ದಿನವೂ ಕಾಣಿಸಿಕೊಂಡಿಲ್ಲ. ಆದರೆ ಈಗ ಈ ರೀತಿ ಆಗಿರುವುದು ನಿಜಕ್ಕೂ ಬೇಸರದ ವಿಚಾರ ಆಗಿದೆ. ಈ ನೋವನ್ನು ಭರಿಸುವ ಶಕ್ತಿಯನ್ನು ಸಮಂತಾ ಅವರ ಕುಟುಂಬಕ್ಕೆ ದೇವರು ಕೊಡಲಿ, ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ.



