ಚಿತ್ರರಂಗದಲ್ಲಿ ಕಲಾವಿದರಿಗೆ ಸಿಗುವಷ್ಟು ಗೌರವ, ಗುರುತಿಸುವಿಕೆ, ಜನಪ್ರಿಯತೆ ಇದೆಲ್ಲವೂ ಕೂಡ ತೆರೆಹಿಂದೆ ಕೆಲಸ ಮಾಡುವ ಕಲಾವಿದರಿಗೆ ಸಿಗುವುದಿಲ್ಲ. ನಮಗೆ ಗೊತ್ತೇ ಇರದ ಹಲವು ಸಾಧಕರು ನಾವು ಊಹೆ ಮಾಡಿಕೊಂಡಿರದ ಹಾಗೆ ಬದುಕುತ್ತಾರೆ. ಇಂದು ನಾವು ತಿಳಿಸುತ್ತಿರುವ ಹೆಣ್ಣುಮಗಳು ಕೂಡ ಇದೇ ರೀತಿ ತೆರೆಯ ಹಿಂದೆ ಬಹಳಷ್ಟು ಕೆಲಸ ಮಾಡಿಯು ಹೆಚ್ಚು ಜನರಿಗೆ ಗೊತ್ತಿರದ ಕಲಾವಿದೆ. ಇವರ ಹೆಸರು ಸರ್ವಮಂಗಳ. ಇಂದು ಇವರು ನಮ್ಮ ಜೊತೆಗೆ ಇಲ್ಲದೇ ಹೋದರು, ಕನ್ನಡಿಗರಾಗಿ ನಾವೆಲ್ಲರೂ ಸಹ ಇವರ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ, ಹೆಚ್ಚು ಜನರಿಗೆ ಇಂಥ ಕಲಾವಿದರ ಬಗ್ಗೆ ಗೊತ್ತಾಗಬೇಕು..
80ರ ದಶಕದ ಕೊನೆ ಇಂದ 90ರ ದಶಕದವರೆಗು ಕನ್ನಡ ಚಿತ್ರರಂಗಕ್ಕೆ ಹಲವು ನಾಯಕಿಯರು ಪರಿಚಯವಾದರು. ಅವರಲ್ಲಿ ಪ್ರಮುಖವಾಗಿ ಹೆಸರು ಮಾಡಿದವರು ಸುಧಾರಾಣಿ ಅವರು, ಶ್ರುತಿ ಅವರು, ಮಾಲಾಶ್ರೀ ಅವರು, ಭವ್ಯ ಅವರು, ತಾರಾ ಅವರು. ಇವರುಗಳ ಪೈಕಿ ಸುಧಾರಾಣಿ ಅವರು, ಭವ್ಯ ಅವರು, ತಾರಾ ಅವರು ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿಕೊಂಡರೆ, ಮಾಲಾಶ್ರೀ ಅವರು ಮತ್ತು ಶ್ರುತಿ ಅವರು ಡಬ್ ಮಾಡುತ್ತಿರಲಿಲ್ಲ. ಅವರಿಗೆ ಬೇರೆ ಕಂಠದಾನ ಕಲಾವಿದೆ ಡಬ್ ಮಾಡುತ್ತಿದ್ದರು. ಅದರಲ್ಲೂ ಮಾಲಾಶ್ರೀ ಅವರು ಡಬ್ ಮಾಡುತ್ತಿದ್ದವರು ಸರ್ವಮಂಗಳ ಅವರು. ಮಾಲಾಶ್ರೀ ಅವರು ಹೀರೋಯಿನ್ ಆಗಿ ನಟಿಸಿದ ಬಹುತೇಕ ಸಿನಿಮಾಗೆ ಸರ್ವಮಂಗಳ ಅವರೇ ಧ್ವನಿ ನೀಡಿದ್ದರು.

ಮಾಲಾಶ್ರೀ ಅವರು ಶರೀರ ಆದರೆ, ಶಾರೀರದಂತೆ ಇದ್ದವರು ಸರ್ವಮಂಗಳ ಅವರು. ಇವರು ಅದ್ಭುತವಾದ ಕಂಠದಾನ ಕಲಾವಿದೆ, ಮಾಲಾಶ್ರೀ ಅವರ ಅಭಿನಯಕ್ಕೆ ಅಷ್ಟೇ ಅಚ್ಚುಕಟ್ಟಾಗಿ ಡಬ್ಬಿಂಗ್ ಮಾಡುತ್ತಿದ್ದರು ಸರ್ವಮಂಗಳ. ಜೊತೆಗೆ ಇವರು ಕೆಲವು ಸಿನಿಮಾಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಹಾಗೂ ಸಣ್ಣಪುಟ್ಟ ಪಾತ್ರಗಳಲ್ಲಿ ಕೆಲವು ಹಳೆಯ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಸರ್ವಮಂಗಳ ಅವರು. ಆದರೆ ಇವರಿಗೆ ಹೆಚ್ಚು ಹೆಸರು ಮತ್ತು ಜನಪ್ರಿಯತೆ ತಂದುಕೊಟ್ಟಿದ್ದು ಕಂಠದಾನ, ಮಾಲಾಶ್ರೀ ಅವರ ಸಿನಿಮಾಗಳಿಂದ ಇವರಿಗೆ ಹೆಚ್ಚು ಹೆಸರು ಸಹ ಬಂದಿತ್ತು. ಆದರೆ ಇವರು ಹೆಚ್ಚು ವರ್ಷಗಳ ಕಾಲ ಚಿತ್ರರಂಗದಲ್ಲಿ ಉಳಿಯಲು ಸಾಧ್ಯ ಆಗಲಿಲ್ಲ.

ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದ್ದರು ಸಹ, ಆರ್ಥಿಕವಾಗಿ ಇವರ ಪರಿಸ್ಥಿತಿ ತುಂಬಾ ಚೆನ್ನಾಗೇನು ಇರಲಿಲ್ಲ. ಹಾಗೆಯೇ ಇವರಿಗೆ ಅನಾರೋಗ್ಯ ಕೂಡ ಉಂಟಾಯಿತು. ಆದರೆ ಅದಕ್ಕೆ ಸರಿಯಾದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅನಾರೋಗ್ಯಕ್ಕೆ ತುತ್ತಾದ ಸರ್ವಮಂಗಳ ಅವರು ಅದೇ ಸ್ಥಿತಿಯಲ್ಲಿ ಕೊನೆಯುಸಿರೆಳೆದರು. ಇವರು ಹೋದ ನಂತರ ಇವರಷ್ಟೇ ಚೆನ್ನಾಗಿ ಡಬ್ಬಿಂಗ್ ಮಾಡುವ ಕಲಾವಿದೆಯನ್ನು ಹುಡುಕಲು ಕನ್ನಡ ಚಿತ್ರರಂಗಕ್ಕೆ ಬಹಳ ಕಷ್ಟವಾಯಿತು, ಇಂದಿಗೂ ಅವರಷ್ಟು ಒಳ್ಳೆಯ ಡಬ್ಬಿಂಗ್ ಕಲಾವಿದೆ ಮತ್ತೆ ಬಂದಿಲ್ಲ ಎಂದರೂ ಸಹ ತಪ್ಪಲ್ಲ. ಇವರನ್ನು ಕಳೆದುಕೊಂಡಿದ್ದು, ಕನ್ನಡ ಚಿತ್ರರಂಗದ ನಷ್ಟ.

ಸರ್ವಮಂಗಳ ಅವರು ಅ#ನಾರೋಗ್ಯಕ್ಕೆ ಒಳಗಾದಾಗ ಬಹುಶಃ ಯಾರಾದರೂ ಸಹ ಸಹಾಯ ಮಾಡಿದ್ದರೆ, ಸರ್ವಮಂಗಳ ಅವರು ಬದುಕುಳಿದಿರುತ್ತಿದ್ದರೋ ಏನೋ. ಈಗ ಅವರು ಇಲ್ಲ ಎನ್ನುವುದು ಎಷ್ಟು ಸತ್ಯವೋ, ಅದೇ ರೀತಿ ಇಂಥ ಕಲಾವಿದರನ್ನು ಮರೆಯುವುದು ಅಥವಾ ಇಂಥ ಕಲಾವಿದರಿಗೆ ಗೌರವ ಕೊಡದೇ ಇರುವುದು ತಪ್ಪು. ಕನ್ನಡ ಚಿತ್ರರಂಗದಲ್ಲಿ ಈ ರೀತಿ ತೆರೆಮರೆಯಲ್ಲೇ ಉಳಿದು ಹೋಗಿರುವ ಅನೇಕ ಕಲಾವಿದರು ಇದ್ದಾರೆ, ಅವರು ಸಹ ಇವರ ಹಾಗೆ ಕಳೆದು ಹೋಗಬಹುದು. ಹಾಗಾಗಿ ನಮ್ಮ ಕಲಾವಿದರನ್ನು ಉಳಿಸಿಕೊಳ್ಳುವುದು ನಮ್ಮ ಚಿತ್ರರಂಗದ ಕರ್ತವ್ಯ..



