ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ ನಿರ್ದೇಶನ ಮಾಡಿರುವ ಯುಐ ಸಿನಿಮಾ ಡಿಸೆಂಬರ್ 20ರಂದು ವಿಶ್ವಾದ್ಯಂತ ತೆರೆಕಂಡಿದೆ. 10 ವರ್ಷಗಳ ನಂತರ ಉಪೇಂದ್ರ ಅವರು ಡೈರೆಕ್ಷನ್ ಕ್ಯಾಪ್ ತೊಟ್ಟು ನಿರ್ದೇಶನ ಮಾಡಿರುವ ಸಿನಿಮಾ ಇದು. ಯುಐ ಸಿನಿಮಾ ನೋಡಿದ ಸಿನಿಪ್ರಿಯರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಶುರುವಿನಲ್ಲಿ ಬರುವ ನೀವು ಬುದ್ಧಿವಂತರಾದರೆ ಥಿಯೇಟರ್ ಇಂದ ಈಗಲೇ ಹೊರಟುಬಿಡಿ, ನೀವು ದಡ್ಡರಾದರೆ ಪೂರ್ತಿ ಸಿನಿಮಾ ನೋಡಿ ಎಂದು ಬರುವ ಕಾರ್ಡ್ ನೋಡಿ ಜನರ ಪ್ರತಿಕ್ರಿಯೆ ಬೇರೆ ಥರವೇ ಇತ್ತು. ಉಪೇಂದ್ರ ಅವರ ಸಿನಿಮಾ ಈಗ ಅರ್ಥ ಆಗೋದಿಲ್ಲ, 25, 30 ವರ್ಷ ಆದ್ಮೇಲೆ ಅರ್ಥ ಆಗುತ್ತೆ ಅನ್ನೋದು ಹಲವರ ಅಭಿಪ್ರಾಯ ಆಗಿದೆ.

ಒಟ್ಟಿನಲ್ಲಿ ಯುಐ ಸಿನಿಮಾ ಎಲ್ಲಾ ಕಡೆ, ಎಲ್ಲಾ ಭಾಷೆಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಉಪೇಂದ್ರ ಅವರ ಥರ ನಿರ್ದೇಶಕ ಇನ್ನೊಬ್ಬರು ಇರೋಕೆ ಸಾದ್ಯವಿಲ್ಲ, ಉಪೇಂದ್ರ ಅವರ ಹಾಗೆ ಇನ್ಯಾರಿಂದಲು ಯೋಚನೆ ಮಾಡೋಕು ಆಗೋದಿಲ್ಲ ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ಸಿನಿಮಾ ಬಗ್ಗೆ ಬರುತ್ತಿರುವ ಪ್ರತಿಕ್ರಿಯೆ ಜನರ ಅಭಿಪ್ರಾಯ ಇದೆಲ್ಲವೂ ಒಂದು ಕಡೆಯಾದರೆ, ಮತ್ತೊಂದು ಕಡೆ ಒಬ್ಬ ವ್ಯಕ್ತಿ ಯೂಟ್ಯೂಬ್ ನಲ್ಲಿ ಉಪೇಂದ್ರ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನನ್ನ ಜೀವನದ ಕಥೆಯನ್ನು ಉಪೇಂದ್ರ ಅವರು ಸಿನಿಮಾ ಮಾಡಿದ್ದಾರೆ, ಅವರಿಗೆ ಬೇರೆ ಕಥೆ ಸಿಗಲಿಲ್ವಾ ಎಂದು ಹೇಳಿದ್ದಾನೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
Fun Delivery Kannada ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಈ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಮಾತನಾಡಿರುವ ವ್ಯಕ್ತಿ ಯುಐ ಸಿನಿಮಾ ತನ್ನ ಜೀವನದ ಕಥೆ ಎಂದಿದ್ದಾನೆ. ಆತನ ಸ್ನೇಹಿತರು ಯುಐ ಸಿನಿಮಾ ನೋಡುವಾಗ ಆತನಿಗೆ ಕರೆಮಾಡಿ, ಉಪೇಂದ್ರ ಅವರು ನಿನ್ನ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರಂತೆ, ಆ ಮಾತು ಕೇಳುತ್ತಿದ್ದ ಹಾಗೆ ಈ ವ್ಯಕ್ತಿ ಕೂಡ ಸಿನಿಮಾ ನೋಡೋಕೆ ಆಗಿ, ಮೊದಲಿಗೆ ಬರುವ ನೀವು ಬುದ್ಧಿವಂತರಾದರೆ ಥಿಯೇಟರ್ ಇಂದ ಹೊರಡಿ ಎಂದು ಬರೆದಿದ್ದನ್ನು ನೋಡಿ ಹೊರಗಡೆ ಹೊರಟು ಹೋಗಿದ್ದನಂತೆ, ಬಳಿಕ ವಾಪಸ್ ಬಂದು ಸಿನಿಮಾ ನೋಡಿ, ಅದು ನನ್ನ ಕಥೆ ಅಂದಿದ್ದಾನೆ.
ತಾನು ಒಂದು ಬೆಟ್ಟದಲ್ಲಿ, ಕಷ್ಟಪಟ್ಟು ಜೆಲ್ಲಿ, ಸಿಮೆಂಟ್, ಮಣ್ಣು ಎಲ್ಲವನ್ನು ತೆಗೆದುಕೊಂಡು ಹೋಗಿ ಮನೆ ಮಾಡಿಕೊಂಡು ಜೀವನ ನಡೆಸುತ್ತಿರುವುದಾಗಿ ಹೇಳಿಕೊಂಡಿರುವ ಈ ವ್ಯಕ್ತಿ, 8 ವರ್ಷ ಆದಮೇಲೆ ಉಪೇಂದ್ರ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ, 3 ವರ್ಷ ಸಮಯವನ್ನ ಈ ಸಿನಿಮಾಗಾಗಿಯೇ ನೀಡಿದ್ದಾರೆ, ನನ್ನ ಕಥೆ ಹೇಳೋಕೆ 3 ವರ್ಷ ಬೇಕಾಯ್ತಾ ಎಂದಿದ್ದಾನೆ. ಉಪೇಂದ್ರ ಅವರು ಹೊಸದಾಗಿ ಏನಾದರೂ ಮಾಡಬೇಕು, ಇದು ನನ್ನ ಕಥೆ, ಸಿನಿಮಾದಲ್ಲಿ ಫೈಟ್ ಇರಲಿ, ಹಾಡುಗಳು ಇರಲಿ, ಐಟಂ ಸಾಂಗ್ಸ್ ಇರಲಿ, ಅದೆಲ್ಲ ನೋಡಿ ನಾವು ಎಂಜಾಯ್ ಮಾಡ್ತೀವಿ. ಆದರೆ ಈ ಥರ ಕಥೆಯನ್ನ ಯಾಕೆ ತೋರಿಸಬೇಕು ಎಂದು ಪ್ರಶ್ನೆ ಮಾಡಿದ್ದಾನೆ. ಹಾಗೆಯೇ ಉಪೇಂದ್ರ ಅವರು ತನಗೆ ಉತ್ತರ ಕೊಡಬೇಕು ಎಂದು ಸಹ ಹೇಳಿದ್ದಾನೆ.
ಸಧ್ಯಕ್ಕೆ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಕಷ್ಟು ಕಾಮೆಂಟ್ಸ್ ಗಳು ಸಹ ಬಂದಿದ್ದು, ಹೌದಪ್ಪಾ ಉಪೇಂದ್ರ ಅವರಿಗೆ ತಲೆ ಇಲ್ಲ, ನಿನ್ನ ಕಥೆ ತಗೊಂಡು ಸಿನಿಮಾ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ವಿಡಿಯೋ ಇಂದ ನೀನು ಫೇಮಸ್ ಆಗ್ತೀಯಾ ಬಿಡು ಎನ್ನುತ್ತಿದ್ದಾರೆ. ಉಪೇಂದ್ರ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅಂದ್ರೆ ಅದರಲ್ಲಿ ಇರುವ ಕಾನ್ಸೆಪ್ಟ್ ವಿಭಿನ್ನವಾಗಿ ಇರುತ್ತದೆ, ಅಷ್ಟು ಸುಲಭಕ್ಕೆ ಎಲ್ಲರಿಗೂ ಅರ್ಥ ಆಗುವ ವಿಷಯ ಸಹ ಆಗಿರುವುದಿಲ್ಲ. ಹಾಗಾಗಿ ಯುಐ ಸಿನಿಮಾ ಜನರ ತಲೆಗೆ ಹುಳ ಬಿಟ್ಟಿರುವುದಂತೂ ನಿಜ. ಅದೇ ಕಾರಣಕ್ಕೆ ಹಲವರು ಹೀಗೆ ಬೇರೆ ರೀತಿಯಲ್ಲೇ ರಿಯಾಕ್ಟ್ ಮಾಡುತ್ತಿದ್ದಾರೆ