ಜಗತ್ತನ್ನು ಕೊರೋನ ಖಾಯಿಲೆಗಿಂತ ವಿಪರೀತವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಯುವಕ-ಯುವತಿಯರ ಮಿತಿಮೀರಿದ ರೀಲ್ಸ್ ಹುಚ್ಚು. ಖ್ಯಾತಿ ಗಳಿಸುವ ಗೀಳಿಗೆ ಬಿದ್ದಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಎಲ್ಲೆಂದರಲ್ಲಿ ರೀಲ್ಸ್ ಮಾಡುತ್ತಿರುವುದು ದಿನೇ ದಿನೆ ಹೆಚ್ಚುತ್ತಿದೆ. ಇದೀಗ ಯುವತಿಯೊಬ್ಬಳು ಮುಂಬೈನ ಲೋಕಲ್ ರೈಲಿನಲ್ಲಿ ಅಸಭ್ಯವಾಗು ಬೆಲ್ಲಿ ಡ್ಯಾನ್ಸ್ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವಿಡಿಯೋ ಕಂಡಿರುವ ನೆಟ್ಟಿಗರು ಯುವತಿಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಯುವತಿಯು ನೀಲಿ ಬಣ್ಣದ ಹಸಿಬಿಸಿ ಬಟ್ಟೆ ಧರಿಸಿ, ರೈಲಿನ ಕಂಬಿ ಹಿಡಿದು ವಾಲಾಡುತ್ತಾ ಅಸಭ್ಯವಾಗಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಸ್ಯಾಂಡ್ಹರ್ಸ್ಟ್ ನಿಲ್ದಾಣಗಳ ನಡುವಿನ ಮಧ್ಯ ರೈಲ್ವೆಯ ಉಪನಗರ ವಿಭಾಗದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಆದರೂ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.
ಈ ವೈರಲ್ ವಿಡಿಯೋ ಕಂಡಿರುವ ನೆಟ್ಟಿಗರು ಈ ಯುವತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಲು ವಿಫಲಳಾಗಿರುವ ಈಕೆಯನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಲೈಕ್ಸ್ಗಾಗಿ ಜನ ಏನನ್ನೂ ಮಾಡುತ್ತಾರೆ. ಈಕೆಗೆ ಕೌನ್ಸೆಲಿಂಗ್ಗೆ ಕಳಿಸಬೇಕು. ಈ ವಿಡಿಯೋ ಮಾಡಲು ಸಹಕರಿಸಿದವರು ಯಾರೇ ಇದ್ದರೂ ಅವರಿಗೂ ಶಿಕ್ಷೆಯಾಗಬೇಕು ಎಂದು ಗುಡುಗಿದ್ದಾರೆ. ಆದರೆ ಈ ವಿಡಿಯೋ ಮಾತ್ರ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ.