ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಪತಿ ನಿಕ್ ಜೋನಸ್ ಕುಟುಂಬ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಇತ್ತೀಚೆಗೆ ನಿಕ್ ಹಾಗೂ ಅವರ ಸಹೋದರರಾದ ಕೆವಿನ್ ಜೋನಸ್ ಹಾಗೂ ಜೋ ಜೋನಸ್ ನ್ಯೂಯಾರ್ಕ್ನಲ್ಲಿ ಕಾರ್ಯಕ್ರಮವೊಂದನ್ನು ನೀಡಿದ್ದಾರೆ. ವೇಳೆ ನಿಕ್ ಕಡೆ ಬ್ರಾ ಒಂದು ಬಂದು ಬಿದ್ದಿದೆ. ಇದನ್ನು ನೋಡಿ ಅವರಿಗೆ ಒಮ್ಮೆ ಅಚ್ಚರಿ ಆಗಿದೆ. ಅವರು ವಿಚಲಿತಗೊಳ್ಳದೆ ಹಾಡನ್ನು ಮುಂದುವರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

https://www.instagram.com/reel/Cxt_c5mrM95/?utm_source=ig_web_copy_link
ಪ್ರಿಯಾಂಕ ಚೋಪ್ರಾ ಅವರನ್ನು ನಿಕ್ ಜೋನಸ್ ವಿವಾಹವಾದ ನಂತರ ಅವರಿಗೆ ಭಾರತದ ಜೊತೆ ನಂಟು ಬೆಳೆದಿದೆ. ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆ ಆದ ಬಳಿಕ ಅವರು ಭಾರತದ ಆಚಾರ-ವಿಚಾರಗಳನ್ನು ಪಾಲಿಸುತ್ತಿದ್ದಾರೆ. ಗಣೇಶ ಚತುರ್ಥಿ ಮೊದಲಾದ ಹಬ್ಬಗಳನ್ನು ನಿಕ್ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗಿದ್ದಾರೆ.ಇದೀಗ ಕಾರ್ಯಕ್ರಮದ ವೇಳೆ ಮಹಿಳೆಯೊಬ್ಬಳು ಬ್ರಾ ಎಸೆದಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.
ವಯಸ್ಸಿನಲ್ಲಿ ನಿಕ್ ಅವರಿಗಿಂತ ಪ್ರಿಯಾಂಕಾ ದೊಡ್ಡವರು. ಇಬ್ಬರೂ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇವರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಇದನ್ನು ಪ್ರಿಯಾಂಕಾ ಅಲ್ಲಗಳೆದರು. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಜುಲೈನಲ್ಲಿ ಪ್ರಿಯಾಂಕಾ ಬರ್ತ್ಡೇ ಇತ್ತು. ಪತಿ ಹಾಗೂ ಮಗಳು ಮಾಲ್ತಿ ಜೊತೆ ಇಬ್ಬರೂ ವಿದೇಶದಲ್ಲಿ ಸುತ್ತಾಟ ನಡೆಸಿ ಬಂದಿದ್ದರು. ಸದ್ಯ, ವೈರಲ್ ವಿಡಿಯೋದ ಬಗ್ಗೆ ನಿಕ್ ಅಥವಾ ಪ್ರಿಯಾಂಕ ಯಾವುದೇ ವಿಚಾರವನ್ನು ಹಂಚಿಕೊಂಡಿಲ್ಲ.



