ಟಾಲಿವುಡ್ನ ಹಿರಿಯನಟ ಚಿರಂಜೀವಿ ಅವರು ಇಂದಿಗೂ ಕೂಡ ಸ್ಟಾರ್ ಹೀರೋ. ಇವತ್ತಿಗೂ ಇವರಿಗೆ ಇರುವ ಕ್ರೇಜ್ ಒಂಚೂರು ಕಡಿಮೆ ಆಗಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಚಿರಂಜೀವಿ ಅವರು ಬ್ಯುಸಿ ಆಗಿದ್ದಾರೆ. ಇವರ ಆಕ್ಟಿಂಗ್ ಮತ್ತು ಡ್ಯಾನ್ಸ್ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಆಂಧ್ರ, ತೆಲಂಗಾಣ ಮಾತ್ರವಲ್ಲ, ಚಿರಂಜೀವಿ ಅವರಿಗೆ ಭಾರತದ ಎಲ್ಲೆಡೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. 70ರ ದಶಕದಿಂದ ಈಗಿನವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ನಟ ಇವರು. ಇಂಥ ಚಿರಂಜೀವಿ ಅವರು ಇದೀಗ ಮೊಮ್ಮಕ್ಕಳ ವಿಚಾರಕ್ಕೆ ಕೊಟ್ಟಿರುವ ಚಿರಂಜೀವಿ ವಿವಾದಿತ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಿರಿಯನಟರಾಗಿ ಚಿರಂಜೀವಿ ಅವರು ಈ ರೀತಿ ಹೇಳಬಾರದಿತ್ತು ಎನ್ನುತ್ತಿದ್ದಾರೆ ಫ್ಯಾನ್ಸ್. ಅಷ್ಟಕ್ಕೂ ಆ ಚಿರಂಜೀವಿ ವಿವಾದಿತ ಹೇಳಿಕೆ ಏನು ಎಂಬುದನ್ನು ತಿಳಿಸುತ್ತೇವೆ ನೋಡಿ.
ನಟ ಚಿರಂಜೀವಿ ಅವರು ಇತ್ತೀಚೆಗೆ ಬ್ರಹ್ಮ ಆನಂದಮ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ತಮ್ಮ ಮನೆಯ ವಿಚಾರ ಎಂದ ಬಗ್ಗೆ ಮಾತನಾಡಿದ ಚಿರಂಜೀವಿ ಅವರು, “ನಮ್ಮ ಮನೆ ಈಗ ಹೆಣ್ಣುಮಕ್ಕಳ ಹಾಸ್ಟೆಲ್ ರೀತಿ ಆಗಿದೆ, ನಾನು ಹಾಸ್ಟೆಲ್ ವಾರ್ಡನ್ ಅನ್ನಿಸುತ್ತಿದೆ. ವಂಶದ ಉತ್ತರಾಧಿಕಾರಿ ಆಗಿ ಆದರೂ ಒಂದು ಗಂಡು ಮಗು ಮನೆಯಲ್ಲಿ ಬೇಕಿತ್ತು. ಚರಣ್ ಗೆ ಆದರೂ ಗಂಡು ಮಗು ಆಗುತ್ತೆ ಅಂದುಕೊಂಡಿದ್ದೆ, ಅವನಿಗೂ ಹೆಣ್ಣು ಮಗು ಆಗಿದೆ..” ಎಂದಿದ್ದಾರೆ. ಹಾಗೆಯೇ, “ಮನೆಯಲ್ಲಿದ್ದರೆ ಎಲ್ಲರೂ ಹೆಣ್ಣುಮಕ್ಕಳೆ ಇದ್ದಾರೆ, ಅವರ ನಡುವೆ ಇರೋ ಹಾಗೆ ಅನ್ನಿಸುತ್ತದೆ. ಒಂದು ಗಂಡು ಮಗು ಕೂಡ ಇರಬೇಕಿತ್ತು ಎಂದು ಹೇಳಿದ್ದಾರೆ ಚಿರಂಜೀವಿ ಅವರು. ಈ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿರಂಜೀವಿ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತಿದೆ.

ಈ ಆಧುನಿಕ ಯುಗದಲ್ಲಿ ಕೂಡ ಚಿರಂಜೀವಿ ಅವರು ಉತ್ತರಾಧಿಕಾರಿಯಾಗಿ ಗಂಡು ಮಗು ಬೇಕಿತ್ತು ಅನ್ನುತ್ತಿದ್ದಾರಲ್ಲ, ಗಂಡು ಮಕ್ಕಳು ಹೆಣ್ಣುಮಕ್ಕಳು ಎಲ್ಲರೂ ಸಮಾನರು, ಗಂಡು ಹೆಣ್ಣು ಎಂಬ ಬೇಧ ಮಾಡಬಾರದು, ಅಂಥದ್ರಲ್ಲಿ ಚಿರಂಜೀವಿ ಅವರು ಅಷ್ಟು ದೊಡ್ಡ ನಟರಾಗಿ ಹೀಗೆಲ್ಲಾ ಹೇಳಬಾರದಾಗಿತ್ತು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಚಿರಂಜೀವಿ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ಅವರ ಹೆಸರು ಶ್ರೀಜಾ ಮತ್ತು ಸುಶ್ಮಿತಾ. ಇವರಿಬ್ಬರಿಗೂ ಕೂಡ ಇಬ್ಬರು ಹೆಣ್ಣುಮಕ್ಕಳು. ಶ್ರೀಜಾ ಅವರ ಮಕ್ಕಳ ಹೆಸರು ನಿವ್ರಿತಿ ಮತ್ತು ನವಿಷ್ಕಾ. ಇನ್ನು ಸುಶ್ಮಿತಾ ಅವರಿಗೆ ಕೂಡ ಇಬ್ಬರು ಹೆಣ್ಣುಮಕ್ಕಳು. ಹಾಗಾಗಿ ಚಿರಂಜೀವಿ ಅವರು ರಾಮ್ ಚರಣ್ ಅವರಿಗೆ ಗಂಡು ಮಗು ಹುಟ್ಟಲಿ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರಂತೆ.

ಆದರೆ ಅವರ ನಿರೀಕ್ಷೆಯಂತೆ ನಡೆಯಲಿಲ್ಲ, ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಕೂಡ ಹೆಣ್ಣುಮಗುವೆ ಜನಿಸಿತು. ಇವರಿಬ್ಬರ ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರನ್ನು ಇಟ್ಟಿದ್ದಾರೆ. ಈ ಜೋಡಿ ತಮ್ಮ ಮಗಳ ಜೊತೆಗೆ ಬಹಳ ಖುಷಿಯಾಗಿದ್ದಾರೆ. ಮಗಳು ಹುಟ್ಟಿರುವುದು ರಾಮ್ ಚರಣ್ ಅವರಿಗೆ ಸಹ ಬಹಳ ಸಂತೋಷ ತಂದಿತ್ತು. ಆದರೆ ಈಗ ಚಿರಂಜೀವಿ ಅವರು ನೀಡಿರುವ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೆಣ್ಣುಮಗು ಲಕ್ಷ್ಮಿ ಇದ್ದ ಹಾಗೆ, ಮಕ್ಕಳು ಅಂದ್ರೆ ಎಲ್ಲಾರು ಒಂದೇ ಥರ. ಅಂಥದ್ರಲ್ಲಿ ಚಿರಂಜೀವಿ ಅವರು ಈ ರೀತಿ ಹೇಳಬಾರದಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು. ಒಬ್ಬ ಹಿರಿಯ ನಟರಾಗಿ ಚಿರಂಜೀವಿ ಅವರು ಹುಷಾರಾಗಿ ಮಾತನಾಡಬೇಕು, ಒಂದು ಹೇಳಿಕೆ ಕೊಡುವ ಮೊದಲು ಯೋಚಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಚಿರಂಜೀವಿ ಅವರ ಹೊಸ ಸಿನಿಮಾ ಯಾವುದು ಕೂಡ ಇನ್ನು ಬಿಡುಗಡೆ ಆಗಿಲ್ಲ. ಇನ್ನು ರಾಮ್ ಚರಣ್ ಅವರ ಗೇಮ್ ಚೇಂಜರ್ ಸಿನಿಮಾ ಬಿಡುಗಡೆಯಾಗಿ ಸೋತಿದೆ, ಈ ಸಿನಿಮಾ ಮೇಲೆ ಎಲ್ಲರಿಗು ಭಾರಿ ನಿರೀಕ್ಷೆ ಇತ್ತು, ಖ್ಯಾತ ನಿರ್ದೇಶಕ ಶಂಕರ್ ಅವರ ಸಿನಿಮಾ ಆಗಿರುವ ಕಾರಣ, ಗೇಮ್ ಚೇಂಜರ್ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟು ಆಗಿತ್ತು, ಆದರೆ ಈಗ ಎಲ್ಲವೂ ತಲೆಕೆಳಗಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ರಾಮ್ ಚರಣ್ ಅವರ ಮುಂದಿನ ಸಿನಿಮಾ ಉಪೇನ ಫೇಮ್ ಬುಚ್ಚಿ ಬಾಬು ಜೊತೆ ಆಗಿದ್ದು, ಈ ಸಿನಿಮಾದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣ ಅವರು ಸಹ ಅಭಿನಯಿಸಲಿದ್ದಾರೆ. ಈ ಸಿನಿಮಾ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಇದೆ.