ರಾಕಿ ಭಾಯ್ ಅವತಾರದ ನಂತರ ಯಶ್ ಅವರ ಮುಂದಿನ ಸಿನಿಮಾ ಟಾಕ್ಸಿಕ್. ನಿನ್ನೆ ಯಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಟಾಕ್ಸಿಕ್ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಿದೆ. ಟಾಕ್ಸಿಕ್ ಟೀಸರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಯೂಟ್ಯೂಬ್ ನಲ್ಲಿ ಈಗಾಗಲೇ ದಾಖಲೆ ಬರೆದಿದೆ ಟಾಕ್ಸಿಕ್. ಗ್ಯಾಂಗ್ಸ್ಟರ್ ಲುಕ್ ನಲ್ಲಿ ಯಶ್ ಅವರು ಕಾಣಿಸಿಕೊಂಡಿದ್ದು, ಕ್ಲಬ್ ಒಂದರಲ್ಲಿ ಯಶ್ ಅವರು ಪಾರ್ಟಿ ಸೀನ್ ನಲ್ಲಿರುವ ಟೀಸರ್ ಬಿಡುಗಡೆ ಆಗಿದೆ. ಟೀಸರ್ ರಿಲೀಸ್ ಆಗಿ 24 ಗಂಟೆಯ ಒಳಗೆ 28 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಪಡೆದು, ಮುನ್ನುಗ್ಗುತ್ತಿದೆ. ಯಶ್ ಅವರ ಕ್ರೇಜ್ ಅಂದ್ರೆ ಹಾಗೇ, ಅವರು ಬಂದಮೇಲೆ ಅವರದ್ದೇ ಹವಾ ಇರುತ್ತದೆ..
ಟಾಕ್ಸಿಕ್ ಸಿನಿಮಾದಲ್ಲಿ ವಿದೇಶಿ ಹುಡುಗಿಯ ಜೊತೆಗೆ ಯಶ್ ಹೆಜ್ಜೆ ಹಾಕಿದ್ದು ಟೀಸರ್ ಕಿಕ್ಕೇರಿಸಿದೆ. ಟೀಸರ್ ಇಂದಲೇ ಟಾಕ್ಸಿಕ್ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟು ಹೆಚ್ಚಾಗಿದೆ ಎಂದರೂ ತಪ್ಪಲ್ಲ. ಟಾಕ್ಸಿಕ್ ಸಿನಿಮಾ ಶೂಟಿಂಗ್ ಗೋವಾ, ಮುಂಬೈ ಸೇರಿದಂತೆ ಹಲವು ಊರುಗಳಲ್ಲಿ ನಡೆದಿದ್ದು, ನಿನ್ನೆ ತಂಡದ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ರಾಕಿ ಭಾಯ್. ಟಾಕ್ಸಿಕ್ ಟೀಸರ್ ಬಿಡುಗಡೆಯಾಗಿ, ಜನರಿಗೆ ಇಷ್ಟ ಆಗಿದೆ. ಇನ್ನು ಯಶ್ ಅವರು ಈ ಸಿನಿಮಾತೆ ಪಡೆದಿರುವ ಎಷ್ಟು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಯಶ್ ಅವರು ಈ ಸಿನಿಮಾದಲ್ಲಿ ನಟನೆ ಮಾಡುವುದರ ಜೊತೆಗೆ ನಿರ್ಮಾಣ ಸಹ ಮಾಡಿದ್ದಾರೆ.

ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ನಿರ್ಮಾಣದಲ್ಲಿ ಸಹ ತೊಡಗಿಕೊಂಡಿದ್ದಾರೆ. ಹಾಗೆಯೇ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕೂಡ ನಿರ್ಮಾಣ ಮಾಡುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ಯಶ್ ಅವರು ಟಾಕ್ಸಿಕ್ ಸಿನಿಮಾಗಾಗಿ 50 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇದಷ್ಟೇ ಅಲ್ಲದೇ, ಸಿನಿಮಾದ ಲಾಭದ ಅಂಶದಲ್ಲಿ ಇಷ್ಟು ಪರ್ಸೆಂಟೇಜ್ ಪಡೆಯುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಕತೆ ಗೋವಾದಲ್ಲಿ ನಡೆಯುವ ಡ್ರ*ಗ್ ಪೆಡ್ಲಿಂಗ್ ಬಗ್ಗೆ ಇರಲಿದೆ ಎಂದು ಮಾಹಿತಿ ಸಿಕ್ಕಿದೆ.
ಟಾಕ್ಸಿಕ್ ಕಥೆ ಬಹಳ ಇಂಟರೆಸ್ಟಿಂಗ್ ಆಗಿದ್ದು, ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಟಾಕ್ಸಿಕ್ ಸಿನಿಮಾದಲ್ಲಿ ಸಂಯುಕ್ತ ಮೆನನ್ ಅವರು ಹೀರೋಯಿನ್ ಆಗಿದ್ದಾರೆ ಎಂದು ತಿಳಿದುಬಂದಿದ್ದು, ಇವರಿಗೆ 1 ಕೋಟಿ ಸಂಭಾವನೆ ಕೊಡಲಾಗಿದೆಯಂತೆ. ಇನ್ನು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ಸಹ ನಟಿಸಿದ್ದು, ಅವರಿಗೆ 3 ಕೋಟಿ ಸಂಭಾವನೆ ಕೊಡಲಾಗಿದೆಯಂತೆ. ಇನ್ನುಳಿದ ಹಾಗೆ ಮಲಯಾಳಂ ಇಂದ ಹಾಗೂ ಬೇರೆ ಭಾಷೆ ಇಂದ ಉತ್ತಮ ಕಲಾವಿದರು ಟಾಕ್ಸಿಕ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾ ಬಿಡುಗಡೆ ಬಗ್ಗೆ ಇನ್ನೂ ಸಹ ಚಿತ್ರತಂಡ ಮಾಹಿತಿ ಕೊಟ್ಟಿಲ್ಲ, ಆದರೆ ಈ ವರ್ಷಾಂತ್ಯಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ.
ನಟ ಯಶ್ ಅವರು ಕೆಜಿಎಫ್ ಚಾಪ್ಟರ್ 2 ನಂತರ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಇದು. ಟಾಕ್ಸಿಕ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿದೆ, ಹಾಲಿವುಡ್ ಸಂಸ್ಥೆ ಸಹ ಟಾಕ್ಸಿಕ್ ಸಿನಿಮಾ ತಂಡದ ಜೊತೆಗೆ ಕೊಲ್ಯಾಬೊರೇಟ್ ಆಗಲಿದೆ ಎನ್ನುವ ಸುದ್ದಿ ಸಹ ಕೆಲವು ದಿನಗಳ ಹಿಂದೆಯಷ್ಟೇ ವೈರಲ್ ಆಗಿತ್ತು. ಹೀಗೆ ಟಾಕ್ಸಿಕ್ ಬಗ್ಗೆ ಒಂದರ ನಂತರ ಒಂದು ಎಕ್ಸೈಟಿಂಗ್ ಎನ್ನಿಸುವಂಥ ಹಲವು ಸುದ್ದಿಗಳು ಕೇಳಿಬರುತ್ತಲೇ ಇದ್ದು, ಕನ್ನಡ ಚಿತ್ರಪ್ರೇಮಿಗಳಲ್ಲಿ ಇರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡುತ್ತಲೇ ಹೋಗುತ್ತಿದೆ. ಯಶ್ ಅವರು ಈ ಬಾರಿ ಕೆಜಿಎಫ್2 ಗಿಂತ ಹೆಚ್ಚು ಸದ್ದು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.