ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ ಅಗ್ನಿಸಾಕ್ಷಿಯ ಸನ್ನಿಧಿ ಎಲ್ಲರ ಮನೆ ಮಗಳು, ಎಲ್ಲಾ ಹುಡುಗರ ಕ್ರಶ್ ಎಂದು ಹೇಳಿದರು ತಪ್ಪಲ್ಲ. ಅಷ್ಟರ ಮಟ್ಟಿಗೆ ಜನಪ್ರಿಯತೆ ಹೊಂದಿತ್ತು ಈ ಪಾತ್ರ. ಈಗ ವೈಷ್ಣವಿ ಅವರು ಸೀತಾರಾಮ ಧಾರಾವಾಹಿಯ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರ ಸಹ ಜನರಿಗೆ ಅಷ್ಟೇ ಇಷ್ಟವಾಗಿದೆ. ಸೀತಾರಾಮನ ಪ್ರೀತಿ, ಸೀತಾ ಸಿಹಿ ಬಾಂಡಿಂಗ್ ಇದೆಲ್ಲವೂ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ.. ಇಷ್ಟು ಒಳ್ಳೆಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ವೈಷ್ಣವಿ ಅವರು ಇದೀಗ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಇದೆಲ್ಲದರ ಜೊತೆಗೆ ಈಗ ಬದುಕಿನಲ್ಲಿ ಹೊಸ ಹೆಜ್ಜೆ ಇಡುವುದಕ್ಕೆ ಸಜ್ಜಾಗಿದ್ದಾರೆ.

ನಟಿ ವೈಷ್ಣವಿ ಅವರ ಜರ್ನಿ ಕೆಲವು ವರ್ಷಗಳದ್ದಷ್ಟೇ ಅಲ್ಲ. ಇವರು. ಬಹಳ ಚಿಕ್ಕವರಿರುವಾಗಲೇ, ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಅದ್ಭುತವಾದ ಡ್ಯಾನ್ಸರ್ ಸಹ ಹೌದು. ಕ್ಲಾಸಿಕಲ್ ಡ್ಯಾನ್ಸ್ ಅನ್ನು ಕಲಿತಿರುವ ಇವರು ಬಹಳ ಟ್ಯಾಲೆಂಟೆಡ್ ಹುಡುಗಿ. ಡ್ಯಾನ್ಸ್ ಶೋ ಬಳಿಕ ವೈಷ್ಣವಿ ಅವರು ಜೀಕನ್ನಡ ವಾಹಿನಿಯಲ್ಲೇ ದೇವಿ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಈ ಧಾರಾವಾಹಿ ಸಹ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಂತರ ಸ್ವಲ್ಪ ಗ್ಯಾಪ್ ಪಡೆದು ನಟಿಸಿದ ಧಾರಾವಾಹಿಯೇ ಅಗ್ನಿಸಾಕ್ಷಿ. ಈ ಧಾರಾವಾಹಿಯ ಕ್ರೇಜ್ ಇವತ್ತಿಗೂ ಕಡಿಮೆ ಆಗಿಲ್ಲ. ಜನರು ಅಗ್ನಿಸಾಕ್ಷಿ ಸಿದ್ಧಾರ್ಥ್ ಸನ್ನಿಧಿಯನ್ನ ಇಂದಿಗು ಮರೆತಿಲ್ಲ. ಈಗಲೂ ಈ ಧಾರಾವಾಹಿಯನ್ನು ಮತ್ತೆ ಟೆಲಿಕಾಸ್ಟ್ ಮಾಡಿದರೆ, ಮೊದಲು ಇದ್ದಷ್ಟೇ ಕ್ರೇಜ್ ಇರುತ್ತದೆ..
ಅಷ್ಟು ಕ್ರೇಜ್ ಹೊಂದಿದೆ ಅಗ್ನಿಸಾಕ್ಷಿ ಧಾರವಾಹಿ. ಅಗ್ನಿಸಾಕ್ಷಿ ನಂತರ ಇನ್ಯಾವುದೇ ಧಾರಾವಾಹಿಯನ್ನು ಒಪ್ಪಿಕೊಳ್ಳದೇ ದೊಡ್ಡ ಗ್ಯಾಪ್ ಪಡೆದ ಬಳಿಕ ವೈಷ್ಣವಿ ಅವರು ಕಾಣಿಸಿಕೊಳ್ಳುತ್ತಿರುವುದು ಸೀತಾರಾಮ ಧಾರಾವಾಹಿಯಲ್ಲಿ. ಈ ಧಾರಾವಾಹಿ ಸಹ ಅಗ್ನಿಸಾಕ್ಷಿ ತರಹವೆ ಕ್ರೇಜ್ ಹೊಂದಿದೆ. ಇದರಲ್ಲಿ ಜನರಿಗೆ ಸಿಹಿ ಮತ್ತು ಸೀತಾಳ ತಾಯಿ ಮಗಳ ಬಾಂಧವ್ಯ ಸಹ ತುಂಬಾ ಇಷ್ಟವಾಯಿತು. ಉತ್ತಮವಾಗಿ ಮುನ್ನುಗ್ಗುತ್ತಿದೆ ಸೀತಾರಾಮ ಧಾರಾವಾಹಿ. ಧಾರಾವಾಹಿಯ ಜೊತೆಗೆ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಹ ತುಂಬಾ ಆಕ್ಟಿವ್. ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇವರದ್ದೇ ಆದ ಯೂಟ್ಯೂಬ್ ಚಾನೆಲ್ ಸಹ ಇದೆ, ಈಗಾಗಲೇ ವೈಷ್ಣವಿ ಅವರಿಗೆ ಯೂಟ್ಯೂಬ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಚಂದಾದಾರರು ಇದ್ದಾರೆ. ಯೂಟ್ಯೂಬ್ ನಲ್ಲಿ ಯಶಸ್ವಿ ಮಹಿಳೆ ಆಗಿದ್ದಾರೆ.
ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹ ತೊಡಗಿಸಿಕೊಂಡಿರುವ ವೈಷ್ಣವಿ ಅವರು, ಇದೀಗ ವೈಯಕ್ತಿಕ ಜೀವನದಲ್ಲಿ ಮುಂದಿನ ಹಂತಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಹೌದು ಮೊನ್ನೆಯಷ್ಟೇ ವೈಷ್ಣವಿ ಅವರ ಎಂಗೇಜ್ಮೆಂಟ್ ನಡೆದಿದೆ. ಫೋಟೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ವೈಷ್ಣವಿ ಅವರು ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಎಲ್ಲರ ಸಮ್ಮುಖದಲ್ಲಿ ಅನುಕೂಲ್ ಮಿಶ್ರ ಅವರೊಡನೆ ಎಂಗೇಜ್ ಆಗಿದ್ದು, ಹೆಣ್ಣುಮಕ್ಕಳ ಡ್ರೀಮ್ ಅಂತೆ ಇತ್ತು ಇವರ ಎಂಗೇಜ್ಮೆಂಟ್. ವೈಷ್ಣವಿ ಅವರು ಈ ಎಂಗೇಜ್ಮೆಂಟ್ ಇಂದ ಬಹಳ ಸಂತೋಷವಾಗಿದ್ದಾರೆ. ವೈಷ್ಣವಿ ಅವರ ಮದುವೆ ಯಾವಾಗ, ಯಾರೊಡನೆ ಮದುವೆ ಆಗುತ್ತಾರೆ ಎಂದು ಅವರ ಫ್ಯಾನ್ಸ್ ಕಾಯುತ್ತಿದ್ದರು. ಆ ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಅದ್ಧೂರಿಯಾಗಿ ನಡೆದಿದೆ ಎಂಗೇಜ್ಮೆಂಟ್ ಕಾರ್ಯಕ್ರಮ.
ಎಂಗೇಜ್ಮೆಂಟ್ ಆದ ನಂತರ ವೈಷ್ಣವಿ ಅವರ ಮುಂದಿನ ನಡೆ ಬಗ್ಗೆ, ಹುಡುಗ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು, ಅದಕ್ಕೆಲ್ಲಾ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ. ಮೊದಲಿಗೆ ವೈಷ್ಣವಿ ಅವರು ಮದುವೆಯಾದ ಮೇಲೆ ವಿದೇಶಕ್ಕೆ ಹೊರಟು ಹೋಗುತ್ತಾರೆ ಎನ್ನುವ ಗಾಸಿಪ್ ವೈರಲ್ ಆಗಿತ್ತು, ಅದಕ್ಕೆ ವೈಷ್ಣವಿ ಅವರು ಉತ್ತರ ಕೊಟ್ಟಿದ್ದು, ಅನುಕೂಲ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ನಾನು ನಟಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ, ಮದುವೆಯಾದ ನಂತರ ಕೂಡ ನಾನು ನಟಿಸುತ್ತೇನೆ ಎಂದು ಹೇಳಿದ್ದಾರೆ ವೈಷ್ಣವಿ. ಇನ್ನು ಅನುಕೂಲ್ ಅವರಿಗೆ ವೈಷ್ಣವಿ ಅವರ ಸೀತಾ ಪಾತ್ರ ತುಂಬಾ ಇಷ್ಟವಂತೆ, ಪ್ರತಿದಿನ ಧಾರಾವಾಹಿ ನೋಡುತ್ತಾರಂತೆ. ಏನಾಗಿದೆ ಎಂದು ಅಪ್ಡೇಟ್ ಮಾಡುತ್ತಾರಂತೆ, ವೈಷ್ಣವಿ ಅವರು ಕೂಡ ಅಷ್ಟು ನೋಟೀಸ್ ಮಾಡಿರುವುದಿಲ್ಲವಂತೆ.
ಅನುಕೂಲ್ ಅವರು ಬೆಂಗಳೂರಿನಲ್ಲೇ ಇರುವುದರಿಂದ ತಾವು ಕೂಡ ಇಲ್ಲೇ ಇರುವುದಾಗಿ ಹೇಳಿದ್ದಾರೆ ವೈಷ್ಣವಿ. ಇನ್ನು ಇವರಿಬ್ಬರದ್ದು ಲವ್ ಮ್ಯಾರೇಜ್ ಅಲ್ಲ ಅರೇಂಜ್ಡ್ ಮ್ಯಾರೇಜ್ ಎಂದು ತಿಳಿಸಿದ್ದಾರೆ. ಮ್ಯಾಟ್ರಿಮೋನಿ ಸೈಟ್ ನಲ್ಲಿ ಹುಡುಕಿ ಸಿಕ್ಕಿದ್ದು, ಜಾತಕ ಎಕ್ಸ್ಛೇಂಜ್ ಆದ ನಂತರ, ಎರಡು ಕುಟುಂಬಕ್ಕೆ ಒಪ್ಪಿಗೆ ಆಯಿತು ಎಂದು ತಿಳಿಸಿದ್ದಾರೆ. ಒಂದು ವರ್ಷದಿಂದ ಇಬ್ಬರು ಜೊತೆಯಾಗಿದ್ದಾರೆ, ಒಂದು ವರ್ಷದ ಹಿಂದೆ ಪರಿಚಯ ಆಗಿದ್ದು, ಒಂದು ವರ್ಷಗಳ ಕಾಲ ಸಮಯ ತೆಗೆದುಕೊಂಡು ಬದುಕಿನ ಬಗ್ಗೆ ನಿರ್ಧಾರ ಮಾಡಿದ್ದಾರೆ, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಇಬ್ಬರೂ ಕೂಡ ಮದುವೆಯಾಗಲಿದ್ದು, ಮದುವೆ ಡೇಟ್ ಅನ್ನು ತಿಳಿಸುತ್ತೇನೆ ಎಂದು ವೈಷ್ಣವಿ ಅವರು ತಿಳಿಸಿದ್ದಾರೆ.
ಇನ್ನು ವೈಷ್ಣವಿ ಅವರ ಎಂಗೇಜ್ಮೆಂಟ್ ಸುದ್ದಿ ವೈರಲ್ ಆಗುತ್ತಿದ್ದ ಹಾಗೆಯೇ, ಕೆಲವರು ಟ್ರೋಲ್ ಮಾಡಿದ್ದರು, ಕನ್ನಡ ಗೊತ್ತಿಲ್ಲದ ಹೊರರಾಜ್ಯದ ಹುಡುಗನ ಜೊತೆಗೆ ಮದುವೆ ಆಗಬೇಕಿತ್ತಾ ಎಂದು ಟ್ರೋಲ್ ಮಾಡಿದ್ದಿದೆ. ಅದಕ್ಕೆಲ್ಲಾ ಉತ್ತರ ಕೊಟ್ಟಿರುವ ವೈಷ್ಣವಿ ಅವರು, ಅವರ ಹೆಸರನ್ನೇ ಬದಲಾಯಿಸಿದ್ದರು, ಅವರ ಹೆಸರು ಅನುಕೂಲ್, ಅಕಾಯ್ ಎಂದು ಬರೆದಿದ್ದರು. ತಪ್ಪು ಸುದ್ದಿಗಳನ್ನು ಬರೆಯಬೇಡಿ ಎಂದು ಟ್ರೋಲ್ ಮಾಡುವವರಿಗೆ ಮನವಿ ಮಾಡಿಕೊಂಡಿದ್ದಾರೆ. ವೈಷ್ಣವಿ ಅವರಿಗೆ ಒಳ್ಳೆಯದಾಗಲಿ ಎಂದು ನಾವು ಕೂಡ ವಿಶ್ ಮಾಡೋಣ..