ಆಪ್ತಮಿತ್ರ ಇದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಬಗ್ಗೆ ಹಲವು ಅದ್ಭುತವಾದ ವಿಚಾರಗಳು ಹಾಗೆ ಕೆಲವು ಬೇಸರದ ವಿಚಾರಗಳು ಸಹ ಇದೆ. ಆಪ್ತಮಿತ್ರ ವಿಷ್ಣುವರ್ಧನ್ ಅವರು, ಸೌಂದರ್ಯ ಅವರು, ರಮೇಶ್ ಅವರು, ಪ್ರೇಮಾ ಅವರು, ಅವಿನಾಶ್ ಅವರು, ದ್ವಾರಕೀಶ್ ಅವರು ಹೀಗೆ ಘಟಾನುಘಟಿಗಳೇ ನಟಿಸಿರುವ ಸಿನಿಮಾ. ಮೂಲ ಚಿತ್ರ ಮಲಯಾಳಂ ಆದರೂ ಕನ್ನಡದಲ್ಲಿ ಈ ಸಿನಿಮಾಗೆ ಸಿಕ್ಕ ಪ್ರೋತ್ಸಾಹ, ಈ ಸಿನಿಮಾ ಕಂಡ ಸಕ್ಸಸ್ ಕಡಿಮೆ ಅಂತೂ ಇಲ್ಲ. ಆದರೆ ಸಿನಿಮಾ ಬಿಡುಗಡೆ ಅಗುವುದಕ್ಕಿಂತ ಮೊದಲೇ ಸಿನಿಮಾದ ಹೀರೋಯಿನ್ ಸೌಂದರ್ಯ ಅವರು ವಿಧಿವಶರಾಗಿದ್ದು ಬಹಳ ನೋವಿನ ವಿಚಾರ. ಅಂಥದ್ದೊಂದು ಘಟನೆ ನಡೆಯುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ.. ಹಾಗೆಯೇ ಅಷ್ಟು ಸುಂದರವಾಗಿದ್ದ ಸೌಂದರ್ಯ ಅವರು ಆ ರೀತಿ ಅಂತ್ಯವಾಗುತ್ತಾರೆ ಅನ್ನೋದು ಇವತ್ತಿಗೂ ನಂಬಲು ಅಸಾಧ್ಯವಾದ ವಿಷಯ.

ಇವತ್ತಿಗೂ ಸೌಂದರ್ಯ ಅವರನ್ನು ನೆನೆದರೆ ಬೇಸರ ಆಗುತ್ತದೆ. ಅವರು ಇದ್ದಿದ್ದರೆ ಕನ್ನಡ ಚಿತ್ರರಂಗಕ್ಕೆ ಕೀರ್ತಿ ತರುತ್ತಿದ್ದರು. ಸೌಂದರ್ಯ ಅವರು ಅಪ್ಪಟ ಕನ್ನಡದ ಹುಡುಗಿ, ಇವರ ತಂದೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದವರು. ಸೌಂದರ್ಯ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಕೂಡ ಕನ್ನಡ ಸಿನಿಮಾ ಮೂಲಕವೇ. ಆದರೆ ಇವರಿಗೆ ಕನ್ನಡದಲ್ಲಿ ಅಂದುಕೊಂಡ ಹಾಗೆ ಒಳ್ಳೆಯ ಯಶಸ್ಸು ಮತ್ತು ಅವಕಾಶಗಳು ಎರಡು ಕೂಡ ಸಿಗಲಿಲ್ಲ. ಬಳಿಕ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಹ ನಟಿಸಿದರು. ಆ ಎಲ್ಲಾ ಭಾಷೆಗಳಲ್ಲಿ ಸಹ ಯಶಸ್ಸು ಪಡೆದರು. ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದರು. ಕನ್ನಡದಲ್ಲಿ ಇವರು ನಟಿಸಿದ್ದು ಕಡಿಮೆ ಸಿನಿಮಾಗಳಲ್ಲಿ ಆದರೂ ಸಹ ಅವುಗಳು ನೆನಪಿನಲ್ಲಿ ಇಟ್ಟುಕೊಳ್ಳುವಂಥ ಸಿನಿಮಾಗಳು. ಹಾಗೆಯೇ ಜನರಿಗೂ ಸಹ ಇವರ ಬಗ್ಗೆ ವಿಶೇಷವಾದ ಗೌರವ ಮತ್ತು ಅಭಿಮಾನ ಇದೆ.

ಇಂಥ ವಿಶೇಷವಾದ ನಟಿ ಸೌಂದರ್ಯ ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ ಆಪ್ತಮಿತ್ರ. ಇದು ಮಲಯಾಳಂ ನ ಮಣಿಚಿತ್ರತಾಳ್ ಸಿನಿಮಾದ ರಿಮೇಕ್ ಆಗಿತ್ತು. ಈ ಸಿನಿಮಾ ನಿರ್ಮಾಣ ಆಗೋ ವೇಳೆ, ನಿರ್ಮಾಪಕ ದ್ವಾರಕೀಶ್ ಅವರು ಸಂಕಷ್ಟದಲ್ಲಿದ್ದರು ಹಾಗೆಯೇ ವಿಷ್ಣುವರ್ಧನ್ ಅವರ ಜೊತೆಗೆ ಹಿಂದೆ ಮನಸ್ತಾಪ ಕೂಡ ಆಗಿತ್ತು. ಆದರೆ ಇವರಿಬ್ಬರು ಮತ್ತೆ ಒಂದಾಗಿ, ಜೊತೆಯಾಗಿ ಮಾಡಿದ ಸಿನಿಮಾ ಆಪ್ತಮಿತ್ರ. ಬಿಡುಗಡೆಯಾದ ನಂತರ ಯಾವ ಪರಿ ಯಶಸ್ಸು ಪಡೆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ಸಿನಿಮಾ ಬಿಡುಗಡೆ ಅಗುವುದಕ್ಕಿಂತ ಸೌಂದರ್ಯ ಅವರ ವಿಚಾರದಲ್ಲಿ ಅಂಥದ್ದೊಂದು ಘೋರವಾದ ಘಟನೆ ನಡೆದು ಹೋಯಿತು. ಇದು ಚಿತ್ರತಂಡಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕ ಅಪಾರವಾದ ನೋವು ತಂದ ಘಟನೆ. 21 ವರ್ಷ ಆಗಿದ್ದರು ಸಹ, ಇವತ್ತಿಗು ಆ ಕಹಿ ಘಟನೆಯನ್ನು ಯಾರು ಮರೆತಿಲ್ಲ.

ನಟಿ ಸೌಂದರ್ಯ ಅವರು ಆಪ್ತಮಿತ್ರ ಸಿನಿಮಾ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದ್ದರು, ಒಂದೆರಡು ತೆಲುಗು ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದರು. ಆ ವೇಳೆ ಸೌಂದರ್ಯ ಅವರು ರಾಜಕಾರಣಕ್ಕೆ ಬರುವ ಹಂತದಲ್ಲಿದ್ದರು, ಆ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು, ಜನರಿಗೆ ಸಹಾಯ ಮಾಡಬೇಕು ಎನ್ನುವುದು ಸೌಂದರ್ಯ ಹಾಗೂ ಅವರ ಅಣ್ಣನ ಆಸೆ ಆಗಿತ್ತು. ಅದೇ ನಿಟ್ಟಿನಲ್ಲಿ ಪ್ರಚಾರಕ್ಕಾಗಿ ಬೆಂಗಳೂರಿನಿಂದ ಕರೀಂ ನಗರಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗುವಾಗ ಆ ದುರ್ಘಟನೆ ನಡೆದು ಹೋಯಿತು. ಆ ದಿನ ಆ ಸುದ್ದಿ ಬಂದಾಗ ಇಡೀ ಕರ್ನಾಟಕ ಕಣ್ಣೀರು ಹಾಕಿತ್ತು. ಹೆಸರಿಗೆ ತಕ್ಕ ಹಾಗೆಯೇ ಇದ್ದ ಸೌಂದರ್ಯ ಅವರು ಆ ರೀತಿಯಾಗಿ ಅಂತ್ಯವಾಗಿದ್ದು, ಎಲ್ಲರಿಗೂ ಬಹಳ ನೋವು ತಂದಿತ್ತು. ಆಗ ಅವರಿಗೆ ಕೇವಲ 28 ವರ್ಷ ವಯಸ್ಸು. ಸಮಾಜಕ್ಕೆ, ಜನರಿಗೆ ಒಳ್ಳೆಯದು ಮಾಡಿಬೇಕು ಅಂದುಕೊಂಡಿದ್ದ ಹುಡುಗಿಗೆ ಈ ರೀತಿ ಆಗಿ ಹೋಯಿತು.

ಇದು ಎಷ್ಟು ನೋವಿನ ಸಂಗತಿ ಅಲ್ಲವೇ.. ಸೌಂದರ್ಯ ಅವರಿಗೆ ಈ ರೀತಿ ಆದಾಗ ಕೆಲವರು ಇದು ರಾಜಕೀಯದ ಕಾರಣಕ್ಕೆ ಪ್ಲಾನ್ ಮಾಡಿ ಆಗಿರುವ ಘಟನೆ ಎಂದರು. ಇನ್ನು ಕೆಲವರು ಸಿನಿಮಾ ದೆವ್ವದ ಕಥೆಯ ರೀತಿ ಆಗಿದ್ದ ಕಾರಣ, ನಾಗವಲ್ಲಿಯ ಪ್ರಭಾವ ಎಂದು ಕೂಡ ಹೇಳಿದರು. ಆದರೆ ಅಸಲಿ ವಿಚಾರ ಇದೇನಾ ಅಥವಾ ಇದೆಲ್ಲವೂ ಕಾಕತಾಳೀಯ ಅಷ್ಟೇನಾ ಎಂದು ಇವತ್ತಿಗೂ ಉತ್ತರ ಸಿಕ್ಕಿಲ್ಲ. ಆದರೆ ಸೌಂದರ್ಯ ಅವರಿಗೆ ಆ ರೀತಿ ಆಗಿದ್ದು, ಮತ್ತು ನಾಗವಲ್ಲಿ ವಿಷಯಕ್ಕೆ ಸಂಬಂಧಿಸಿದ ಹಾಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಆಪ್ತಮಿತ್ರ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ ಗುರುಕಿರಣ್ ಅವರಿಗೂ ಪ್ರಶ್ನೆ ಕೇಳಲಾಗಿತ್ತು, ಸೌಂದರ್ಯ ಅವರು ಹೋದ ನಂತರ ಅವರಿಗೂ ನಾಗವಲ್ಲಿಯ ಕಾಟ ಇತ್ತಾ ಎಂದು ಕೇಳಲಾಗಿದೆ. ಅದಕ್ಕೆ ಗುರುಕಿರಣ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಗುರುಕಿರಣ್ ಅವರು ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಇದೇ ಘಟನೆ ಬಗ್ಗೆ ಪ್ರಶ್ನೆ ಕೇಳಿದ್ದು, ಗುರುಕಿರಣ್ ಅವರು ಕೊಟ್ಟ ಉತ್ತರ ಹೀಗಿತ್ತು.. “ನಾಗವಲ್ಲಿ ನನಗೆ ಕಾಟ ಏನು ಕೊಟ್ಟಿಲ್ಲ. ಆದರೆ ಸೌಂದರ್ಯ ಅವರಿಗೆ ಆ ರೀತಿ ಆದ ನಂತರ ರಾತ್ರಿ ಹೊತ್ತಲ್ಲಿ ಸ್ಟುಡಿಯೋ ಒಳಗೆ ಕೆಲಸ ಮಾಡೋಕೆ ಸ್ವಲ್ಪ ಭಯ ಆಗ್ತಿತ್ತು. ಅದು ಆಗ ತಾನೇ ನಡೆದ ಘಟನೆ, ಹಾಟ್ ಟಾಪಿಕ್ ಆಗಿ ತುಂಬಾ ಚರ್ಚೆ ಆಗ್ತಿತ್ತು. ಆ ಕಾರಣಕ್ಕೆ ಸ್ವಲ್ಪ ಭಯ ಆಗೋದು ಸ್ಟುಡಿಯೋನಲ್ಲಿ ರಾತ್ರಿ ಹೊತ್ತಲ್ಲಿ ಕೆಲಸ ಮಾಡೋಕೆ. ಸ್ಟುಡಿಯೋ ನಮ್ಮ ಮನೆಯಲ್ಲೇ ಇತ್ತು..” ಎಂದು ಗುರುಕಿರಣ್ ಅವರು ಹೇಳಿದ್ದಾರೆ. ಈ ಉತ್ತರ ಒಂದು ರೀತಿಯಲ್ಲಿ ನಮಗು ಭಯ ಅನ್ನಿಸುವ ಹಾಗೆ ಮಾಡುತ್ತದೆ. ಆದರೆ ಆಪ್ತಮಿತ್ರ ಸಿನಿಮಾ ಬಿಡುಗಡೆ ಆದಮೇಲೆ ಅತಿದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.
ಥಿಯೇಟರ್ ಗಳಲ್ಲಿ ಒಂದು ವರ್ಷದ ಪ್ರದರ್ಶನ ಕಂಡಿತ್ತು. ವಿಷ್ಣು ಸರ್ ಹಾಗೂ ಸೌಂದರ್ಯ ಅವರ ಅಭಿನಯವನ್ನು ಇವತ್ತಿಗು ಯಾರು ಮರೆತಿಲ್ಲ. ಬಿಡುಗಡೆಯಾಗಿ 20 ವರ್ಷ ಆಗಿದ್ದರೂ ಸಹ ಇವತ್ತಿಗೂ ಕನ್ನಡದಲ್ಲಿ ಅದ್ಭುತವಾದ ಥ್ರಿಲ್ ಕೊಡುವ ಸಿನಿಮಾ ಇದು ಎಂದು ಹೇಳಿದರು ತಪ್ಪಲ್ಲ. ರಾ ರಾ ಹಾಡನ್ನು ನೋಡಿದರೆ, ಸೌಂದರ್ಯ ಅವರು ಎಂಥಾ ಅದ್ಭುತ ಅಭಿನೇತ್ರಿ ಎಂದು ಗೊತ್ತಾಗುತ್ತದೆ. ಈ ಸಿನಿಮಾ ಮಾಡಿದಾಗ ಸೌಂದರ್ಯ ಅವರು, ಪಾರ್ಟ್ 2 ಆಪ್ತರಕ್ಷಕ ಮಾಡಿದಾದ ವಿಷ್ಣುದಾದ ಅವರ ಅಗಲಿಕೆ ನಿಜಕ್ಕೂ ಕನ್ನಡ ಸಿನಿಮಾಪ್ರಿಯರಿಗೆ ಬಹಳ ನೋವು ತಂದ ಘಟನೆಗಳು. ಇವರಿಬ್ಬರು ಅಷ್ಟು ಬೇಗ ಹೋಗುವಂಥ ವ್ಯಕ್ತಿಗಳಲ್ಲ. ಆ ಅಗಲಿಕೆಯ ನೋವು ಇವತ್ತಿಗೂ ಎಲ್ಲರಲ್ಲೂ ಇದೆ..



