ಇದು ಸಾಮಾನ್ಯವಾಗಿ ಪುರುಷರಲ್ಲಿ, ಮಹಿಳೆಯರಲ್ಲಿ ,ವಯಸ್ಸಾದವರಲ್ಲಿ ಮಕ್ಕಳಲ್ಲಿ ಕಾಡುವಂತಹ ವಿಶೇಷವಾದ ಸಮಸ್ಯೆ. ಇದರ ಕಾರಣಗಳೆಂದರೆ ಇತ್ತೀಚಿನ ದಿನಗಳಲ್ಲಿ ದೈಹಿಕ ಶಕ್ತಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇತ್ತೀಚಿನ ದಿನದಲ್ಲಿ ಆಹಾರ ಸೇವನೆ ಮಾಡಲು ಸಮಯ ಇಲ್ಲದೆ ಇರುವ ಪರಿಸ್ಥಿತಿ ಬಂದೊಡಗಿದೆ, ಒತ್ತಡದ ಬದುಕಲ್ಲಿ ಬದುಕುತ್ತಿದ್ದೇವೆ ,ಇದರಿಂದ ದೇಹ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಜೊತೆಗೆ ದೇಹಕ್ಕೆ ವ್ಯಾಯಾಮಗಳಿಲ್ಲದೆ ಮತ್ತು ಕೂತು ಕೆಲಸ ಮಾಡುವುದರಿಂದ ಕೆಳಬೆನ್ನು ತೊಂದರೆ ಹೆಚ್ಚಾಗಿ ಕಂಡುಬರುತ್ತದೆ. ಇನ್ನು ಹೆಚ್ಚಿನ ಸಮಯ ಕೂತು ಕೆಲಸ ಮಾಡುವುದರಿಂದ ದೇಹದ ಭಾರ ಸೊಂಟಕ್ಕೆ ಬೀಳುವುದರಿಂದ ಹೆಚ್ಚಿನ ನೋವು ಕಾಡುತ್ತದೆ. ಇದು ಸೊಂಟದ ಬಿಗಿಯನ್ನು ಮಾಡುತ್ತಿದೆ.
ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಓದಿನ ಒಂದು ಒತ್ತಡದಿಂದ ಅಂದರೆ ಪುಸ್ತಕಗಳನ್ನು ಹೆಚ್ಚಾಗಿ ಬ್ಯಾಗ್ ನಲ್ಲಿ ಹೊತ್ತು ಕೊಂಡು ಹೋಗುವುದರಿಂದ ಒಂದು ರೀತಿಯ ಕೆಳಬೆನ್ನೂ ಸಮಸ್ಯೆಗಳು ಕಂಡುಬರುತ್ತದೆ. ಇನ್ನು ವಯಸ್ಸಾದ ಮೇಲೆ ಒಂದು ವಯಸ್ಸಿನ ಅನ್ವಯ ಅವರಲ್ಲೂ ಯಾವುದೇ ಕೆಲಸ ಕಾರ್ಯಗಳಿಲ್ಲದೆ ಮೂಳೆಗಳಲ್ಲಿ ನೋವು ಹೆಚ್ಚಾಗಿ ಕಂಡುಬರುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ತಮ್ಮ ಕನಿಷ್ಠ ಸಮಯವನ್ನು ವ್ಯಾಯಾಮಕ್ಕೆ ಕೊಡದೆ ಇರುವುದು. ಇದಕ್ಕೆ ಕಾರಣವಾಗಿದೆ. ಹಾಲಿನ ಉತ್ಪನ್ನಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇದರಿಂದ ಕ್ಯಾಲ್ಸಿಯಮ್ ಮತ್ತು ಇನ್ನಿತರ ಪೌಷ್ಟಿಕಾಂಶಗಳು ಸಿಗುತ್ತದೆ. ಮತ್ತು ಸೊಪ್ಪು ತರಕಾರಿಗಳ ಬಳಕೆಯಿಂದ ಒಳ್ಳೆಯದು, ದೇಹಕ್ಕೆ ಹೆಚ್ಚಿನ ಆರಾಮ ನೀಡುವುದು ಒಳ್ಳೆಯದು. ಇದನ್ನು ಎಲ್ಲವನ್ನು ನಿರ್ಲಕ್ಷಿಸಿದರೆ ಇದರಿಂದ ದೇಹಕ್ಕೆ ಅನೇಕ ತೊಂದರೆಗಳು ಪರಿಣಾಮಿಸುತ್ತದೆ. ಒಟ್ಟಾರೆ ಯಾವುದೇ ತೊಂದರೆಗಳು ಪರಿಹಾರವಾಗುವುದಿಲ್ಲ. ಇದರಿಂದಾಗಿ ಸಾಕಷ್ಟು ಬದಲಾವಣೆಗಳನ್ನು ತೆಗೆದುಕೊಂಡು ನಿವಾರಣೆ ಮಾಡಿಕೊಳ್ಳಬಹುದು.
ದಿನದ ಅರ್ಧ ಗಂಟೆ ವ್ಯಾಯಾಮಕ್ಕೆ ಅವಕಾಶ ಕೊಡಿ. ದಿನಕ್ಕೆ ಎರಡು ಲೋಟ ಹಾಲನ್ನು ಕುಡಿಯಿರಿ. ಅಭ್ಯಂಗ ಸ್ನಾನವನ್ನು ಮಾಡಿ. ಇದರಿಂದ ಮಸಲ್ ಸೆಳೆತಗಳನ್ನು ಪರಿಹರಿಸಿಕೊಳ್ಳಬಹುದು. ಇಂತಹ ಒಂದು ಒಳ್ಳೆಯ ಅಭ್ಯಾಸವನ್ನು ಈ ಸಮಯದಲ್ಲಿ ಮೀಸಲಿಟ್ಟರೆ ಚಿಕ್ಕ ಪುಟ್ಟ ಪರಿಹಾರಗಳಲ್ಲಿ ಪರಿಹರಿಸಿ ಪರಿಹರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಳಿಗಾಗಿ ಯೋಗದ ಬೆಟ್ಟದ ಚಿಕಿತ್ಸೆಗೆ ಮುಂದಾಗುವುದು ಸೂಕ್ತ.