ಮಧುಮೇಹ ಹಾಗೂ ರಕ್ತದೊತ್ತಡ ಎಂಬ ಎರಡು ರೋಗಗಳು ಈಗ ಸರ್ವೇಸಾಮಾನ್ಯವಾಗಿವೆ. ರಕ್ತದೊತ್ತಡ ಪರೀಕ್ಷೆ ಅಷ್ಟು ಭಾದಿಸದಿದ್ದರು, ಮಧುಮೇಹ ಪರೀಕ್ಷೆ ಮಾತ್ರ ನೋವುಂಟು ಮಾಡುವ ವಿಧಾನ. ಹಾಗಾಗಿ, ಮಧುಮೇಹಿಗಳಿಗೆ ದೊಡ್ಡ ತಲೆನೋವು ಎಂದರೆ ಪ್ರತಿಭಾರಿ ಪರೀಕ್ಷೆ ಮಾಡಬೇಕಾದರು ಬೆರಳಿ ತುದಿಯನ್ನು ಚುಚ್ಚಿಸಿಕೊಂಡು ನರಳುವುದಾಗಿದೆ. ಖ್ಯಾತ ಎಂಡೊಕ್ರಿನೊಲೊಜಿಸ್ಟ್ ವೈದ್ಯೆ ರೋಶನಿ ಸಂಘನಿ ಅವರು ಬೆರಳ ತುದಿ ಚುಚ್ಚದೆ ರಕ್ತ ಪರೀಕ್ಷೆ ಹೇಗೆ ಮಾಡಬಹುದು ಎಂಬ ಮಾಹಿತಿಯನ್ನು ಖಾಸಗಿ ಸಂಸ್ಥೆಯೊAದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊAಡಿದ್ದಾರೆ. ಹಾಗಾದ್ರೆ, ಬೆರಳ ತುದಿ ಚುಚ್ಚಿಸಿಕೊಳ್ಳದೆ ಹೇಗೆ ರಕ್ತ ಪರೀಕ್ಷೆಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ತಿಳಿಯಲು ಉತ್ಸುಕರಾಗಿದ್ದರೆ ಅದರ ಸಂಪೂರ್ಣ ವಿವರ ಇಲ್ಲಿದೆ ನೋಡಿ….

ಮಧುಮೇಹ ಪರೀಕ್ಷೆಯಲ್ಲಿ ನೋವಾಗುತ್ತದೆ ಎನ್ನುವುದಕ್ಕಿಂತ ಕೆಲವರು ಸರಿಯಾದ ಮಾರ್ಗದಲ್ಲಿ ಸೂಜಿಯನ್ನು ಚುಚ್ಚದ ಕಾರಣವೇ ಅನಗತ್ಯ ನೋವು ಹಾಗೂ ಅಸ್ವಸ್ಥೆಗೆ ಕಾರಣವಾಗ ಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುವಾಗ ಮಾಡುವ ಮತ್ತೊಂದು ಅತಿ ದೊಡ್ಡ ತಪ್ಪೆಂದರೆ ಪರೀಕ್ಷಾರ್ಥಿಯ ಬೆರಳಿನ ಅತ್ಯಂತ ಸೂಕ್ಷö್ಮ ಭಾಗಕ್ಕೆ ಸೂಜಿ ಚುಚ್ಚುವುದಾಗಿದ್ದು, ಹೆಚ್ಚು ನೋವನ್ನುಂಟು ಮಾಡುತ್ತದೆ. ಜನರು ಚುಚ್ಚುವುದನ್ನು ಏಕೆ ಇಷ್ಟವಾಗುವುದಿಲ್ಲ ಎನ್ನುತ್ತಾರೆಂದರೆ ಹಲವರಿಗೆ ಹೇಗೆ ಚುಚ್ಚ ಬೇಕು ಎಂಬುದು ತಿಳಿದಿರುವುದಿಲ್ಲ. ಅವರು ಯಾವ ಭಾಗ ಅತಿ ಹೆಚ್ಚು ನೋವುಂಟು ಮಾಡುತ್ತದೆಯೋ ಅದೇ ಭಾಗಕ್ಕೆ ಚುಚ್ಚುತ್ತಾರೆ. ನಮ್ಮ ಬೆರಳಿನ ತುದಿಯಿಂದ ಕಣ್ಣು ಮುಚ್ಚಿಕೊಂಡು ನಮ್ಮ ಬೆರಳಿನ ತುದಿಯ ಮೂಲಕ ಪ್ರಪಂಚವನ್ನು ಗ್ರಹಿಸಬಹುದು. ಅಷ್ಟು ಶಕ್ತಿಶಾಲಿಯಾಗಿರುವ ಬೆರಳಿನ ತುದಿಯ ಮಧ್ಯ ಭಾಗವನ್ನು ಸೂಜಿಯ ಮೂಲಕ ಚುಚ್ಚುವುದು ಹಿಂಸಾತ್ಮಕ ಎನ್ನುವುದು ಡಾ. ರೋಶನಿ ಅವರ ಅಭಿಪ್ರಾಯ.
ನಮಸ್ತೆ ತಂತ್ರ ಬಳಸಿ
ರೋಶನಿ ಅವರು ಬೆರಳ ತುದಿಯ ಮಧ್ಯ ಭಾಗವನ್ನು ಚುಚ್ಚುವುದರ ಬದಲಾಗಿ ಪರ್ಯಾಯ ಸ್ಥಳವೊಂದನ್ನು ಸೂಚಿಸಿದ್ದಾರೆ. ನಾವು ನಮಸ್ತೆ ಮಾಡಿದಾಗ ಬೆರಳುಗಳ ಎರಡು ಅಂಚುಗಳು ಕಾಣಸಿಗುತ್ತವೆ. ಆ ಭಾಗಕ್ಕೆ ಸೂಜಿಯಿಂದ ಚುಚ್ಚಿದರೆ ಹೆಚ್ಚು ನೋವಾಗುವುದಿಲ್ಲ. ಹಾಗೆಯೇ, ಹಲವು ಯೋಗಮುದ್ರೆಗಳಿವೆ. ಅವುಗಳಲ್ಲಿ ಯಾವುದಾದರೂ ಒಂದು ಮುದ್ರೆಯನ್ನು ಪ್ರಯೋಗಿಸಿದಾಗ ಕಾಣುವ ಅಂಚುಗಳಿಗೆ ಸೂಜಿಯನ್ನು ಚುಚ್ಚಿದರೂ ಸಹ ಹೆಚ್ಚು ನೋವಾಗುವುದಿಲ್ಲ. ಒಟ್ಟಾರೆ, ೫ ಬೆರಳಿನ ತುದಿಯ ಮಧ್ಯ ಭಾಗದ ಬದಲಾಗಿ ಪ್ರತಿ ಬೆರಳಿನ ಅಂಚಿನ ಭಾಗಗಳನ್ನು ಮಧುಮೇಹ ಪರೀಕ್ಷೆಗೆ ಬಳಸಿಕೊಳ್ಳಬಹುದು. ಜೊತೆಗೆ, ನಾವು ಸೇವಿಸುವ ಆಹಾರ ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಕ್ಷಣ ಮಾಹಿತಿಯನ್ನು ನೀಡುತ್ತದೆ ಎಂಬುದು ರೋಶನಿಯವರ ಮಾತಾಗಿದೆ.

ರಕ್ತಪರೀಕ್ಷೆಗಿವೆ ಹಲವು ಪರ್ಯಾಯ ಮಾರ್ಗ
ಪ್ರಮಾಣೀಕೃತ ಮಧುಮೇಹ ಶಿಕ್ಷಕಿ ಕನ್ನಿಕ ಮಲ್ಹೋತ್ರಾ ಅವರ ಪ್ರಕಾರ ಕೆಲವು ವಿಧಾನಗಳು ಹಾಗೂ ಸಾಧನಗಳು ಕಡಿಮೆ ನೋವನ್ನುಂಟು ಮಾಡುವ ಆದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಅವುಗಳಲ್ಲಿ ಪ್ರಮುಖವಾದದ್ದು ರಕ್ತದ ಗ್ಲೂಕೋಸ್ ಮೀಟರ್. ಕೆಲವು ಗ್ಲೂಕೋಸ್ ಮೀಟರ್ಗಳಿಗೆ ಸಣ್ಣ ರಕ್ತದ ಮಾದರಿಗಳೇ ಸಾಕಾಗುತ್ತವೆ. ಇದರಿಂದ ಆಳವಾದ ಚುಚ್ಚುವಿಕೆಯ ಅಗತ್ಯ ಬೀಳುವುದಿಲ್ಲ ಹಾಗೂ ಹೆಚ್ಚು ನೋವಿಗೆ ಗುರಿಯಾಗಬೇಕಾಗುವುದಿಲ್ಲ. ಇನ್ನೊಂದು ಕಂಟಿನ್ಯೂಸ್ ಗ್ಲೂಕೋಸ್ ಮಾನಿಟರಿಂಗ್ ವಿಧಾನ ಇದು ಚರ್ಮದಡಿಯಲ್ಲಿರುವ ಸಂವೇದಕಗಳನ್ನು ಬಳಸಿಕೊಂಡು ಗ್ಲೂಕೋಸ್ ಮಟ್ಟವನ್ನು ನಿರಂತರವಾಗಿ ಟ್ರಾö್ಯಕ್ ಮಾಡುತ್ತದೆ. ಆ ಮೂಲಕ ಬೆರಳಿನ ತುದಿಯನ್ನು ಚುಚ್ಚುವ ಪ್ರಮೇಯವೇ ಬರುವುದಿಲ್ಲ ಎನ್ನುತ್ತಾರೆ ಕನ್ನಿಕ ಮಲ್ಹೋತ್ರ.



