ಸಾಹಸಸಿಂಹ ವಿಷ್ಣುವರ್ಧನ್ ಅವರು ಕನ್ನಡದ ಅದ್ಭುತ ಕಲಾವಿದರಲ್ಲಿ ಒಬ್ಬರು. ಆಕ್ಷನ್ ಸಿನಿಮಾ ಆಗಲಿ, ಮನಸ್ಸಿಗೆ ಸಂತೋಷ ತರುವಂತ ಕಥೆಯೇ ಆಗಲಿ ಯಾವುದೇ ಕಥಾಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಬಲ್ಲ ಕಲಾವಿದರು ವಿಷ್ಣು ಸರ್. ಇವರ ಜೊತೆಗೆ ನಟಿಸಬೇಕು ಎನ್ನುವ ಆಸೆ ಎಲ್ಲರಲ್ಲೂ ಇತ್ತು. ಅದೇ ರೀತಿ ನಟಿ ಸುಧಾರಾಣಿ ಅವರಿಗು ಇತ್ತು. ವಿಷ್ಣು ಸರ್ ಹಾಗೂ ಸುಧಾರಾಣಿ ಅವರು ಎರಡು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಆದರೆ ಅವುಗಳಲ್ಲಿ ಪೂರ್ಣ ಪ್ರಮಾಣದ ನಾಯಕ ನಾಯಕಿಯಾಗಿ ಅಭಿನಯಿಸಿರಲಿಲ್ಲ.
ಆದರೆ ಹಾಲುಂಡ ತವರು ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಬೇಕಿತ್ತು. ಕಾರಣಾಂತರಗಳಿಂದ ಸುಧಾರಾಣಿ ಅವರು ಈ ಸಿನಿಮಾ ಇಂದ ಹಿಂದೆ ಸರಿಯಬೇಕಾಯಿತು. ಈ ಕುರಿತು ಇತ್ತೀಚಿನ ಸಂದರ್ಶನ ಒಂದರಲ್ಲಿ ಸುಧಾರಾಣಿ ಅವರು ತಿಳಿಸಿದ್ದಾರೆ.. ಕನ್ನಡದ ಕ್ಲಾಸಿಕ್ ಸಿನಿಮಾಗಳ ಸಾಲಿಗೆ ಸೇರುವುದು ಹಾಲುಂಡ ತವರು ಸಿನಿಮಾ. ಡಿ ರಾಜೇಂದ್ರ ಬಾಬು ಅವರ ನಿರ್ದೇಶನದಲ್ಲಿ, ವಿಷ್ಣುವರ್ಧನ್, ಸಿತಾರ, ಪಂಡರೀಬಾಯಿ, ಪ್ರಮೀಳಾ ಜೋಷಾಯಿ, ಶ್ರೀನಿವಾಸ್ ಮೂರ್ತಿ ಸೇರಿದಂತೆ ದೊಡ್ಡ ತಾರಾಗಣ ಹೊಂದಿದ್ದ ಸಿನಿಮಾ ಇದು.

ಹಾಲುಂಡ ತವರು ಸಿನಿಮಾ ಪಕ್ಕಾ ಮಹಿಳಾ ಪ್ರಧಾನ ಸಿನಿಮಾ, 1994ರಲ್ಲಿ ತೆರೆಕಂಡು ಹೆಂಗೆಳೆಯರ ಮನಸ್ಸು ಗೆದ್ದಿದ್ದ ಸಿನಿಮಾ ಇದು. ಸಿತಾರ ಹಾಗೂ ವಿಷ್ಣುವರ್ಧನ್ ಅವರ ಜೋಡಿ ಎಲ್ಲರಿಗೂ ಮೆಚ್ಚುಗೆ ಆಗಿತ್ತು, ಈ ಸಿನಿಮಾದ ಹಾಡುಗಳು ಇಂದಿಗೂ ಅಷ್ಟೇ ಫೇಮಸ್. ಆದರೆ ಈ ಸಿನಿಮಾಗೆ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದು ನಟಿ ಸುಧಾರಾಣಿ ಅವರು. ಹೌದು, ವಿಷ್ಣು ಸರ್ ಹಾಗೂ ಸುಧಾರಾಣಿ ಇಬ್ಬರ ಡೇಟ್ ಕೂಡ ಹೊಂದಿಕೆಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ, ಇನ್ನು ಮೂರು ದಿನಗಳಲ್ಲಿ ಶೂಟಿಂಗ್ ಶುರುವಾಗಬೇಕು ಎನ್ನುವ ವೇಳೆ ಸುಧಾರಾಣಿ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಯಿತಂತೆ.
ಅವರಿಗೆ ಅಪೆಂಡಿಕ್ಸ್ ಆಗಿ, ತಕ್ಷಣವೇ ಆಪರೇಷನ್ ಮಾಡಲೇಬೇಕು ಎನ್ನುವ ಪರಿಸ್ಥಿತಿ ಬಂದಿತ್ತಂತೆ. ಆದರೆ ಚಿತ್ರತಂಡಕ್ಕೆ ಕಾಯುವ ಸಂದರ್ಭ ಇರಲಿಲ್ಲ, ತಕ್ಷಣವೇ ಶೂಟಿಂಗ್ ನಡೆಯಬೇಕಿತ್ತು. ಪರಿಸ್ಥಿತಿ ಹೀಗಿದ್ದ ಕಾರಣ ಸುಧಾರಾಣಿ ಅವರು ಹಾಲುಂಡ ತವರು ಸಿನಿಮಾ ಇಂದ ಹೊರಗಡೆ ಬರಬೇಕಾಯಿತು. ನಂತರ ಸಿತಾರ ಅವರನ್ನು ಆಯ್ಕೆ ಮಾಡಿ, ಹಾಲುಂಡ ತವರು ಸಿನಿಮಾ ಮುಂದುವರೆಯಿತು. ಸಿನಿಮಾ ಬಿಡುಗಡೆ ಆದ ನಂತರ ಮಾಡಿದ ದಾಖಲೆ, ಆ ಯಶಸ್ಸು ಎಲ್ಲವೂ ಇಂದಿಗೂ ಎವರ್ ಗ್ರೀನ್. ಹಾಲುಂಡ ತವರು ಸಿನಿಮಾದ ಒಂದೊಂದು ಹಾಡುಗಳು ಸಹ ಜನರಿಗೆ ಈಗಲೂ ಮೆಚ್ಚಿನ ಹಾಡುಗಳಾಗಿವೆ.
ಇನ್ನು ಸುಧಾರಾಣಿ ಅವರು ಹಾಗೂ ವಿಷ್ಣುವರ್ಧನ್ ಅವರು ಮಹಾಕ್ಷತ್ರಿಯ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅದರಲ್ಲಿ ಸುಧಾರಾಣಿ ಅವರದ್ದು ದ್ವಿಪಾತ್ರ, ಒಂದು ಪಾತ್ರ ವಿಷ್ಣುವರ್ಧನ್ ಅವರಿಗೆ ಜೋಡಿ ಆಗುವ ಹಾಗೆ ಇರುತ್ತದೆ, ಆದರೆ ಆ ಪಾತ್ರ ವಿಷ್ಣುವರ್ಧನ್ ಅವರಿಂದಲೇ ಸಾಯುವ ಸನ್ನಿವೇಶ ಇದೆ. ಇನ್ನೊಂದು ಪಾತ್ರ ರಾಮ್ ಕುಮಾರ್ ಅವರಿಗೆ ಜೋಡಿ. ಇದೊಂದೇ ಅಲ್ಲದೇ ಕೋಣ ಈದೈತೆ ಸಿನಿಮಾದಲ್ಲಿ ಇಬ್ಬರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಇಬ್ಬರೂ ಜೊತೆಯಾಗಿ ಅಭಿನಯಿಸಲು ಸಾಧ್ಯವಾಗಲೇ ಇಲ್ಲ. ಈ ಒಂದು ವಿಚಾರದಲ್ಲಿ ಸುಧಾರಾಣಿ ಅವರಿಗೂ ಬೇಸರವಿದೆ, ವಿಷ್ಣುವರ್ಧನ್ ಅವರೊಡನೆ ಒಂದು ಸಿನಿಮಾ ಮಾಡಬೇಕು ಎನ್ನುವ ಆಸೆ ಅವರಿಗಿತ್ತು.