ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಕುಮಾರ್ ವಿವಾದದ ಬೆನ್ನಲೇ ಇನ್ನೊಂದು ಚರ್ಚೆ ಕನ್ನಡ ಚಿತ್ರರಂಗವನ್ನು ಕಾಡುತ್ತಿದೆ. ಇದೀಗ ಚಿತ್ರ ರಂಗಕ್ಕೆ ನಾಯಕ ಯಾರಾಗಬಹುದು ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಎಲ್ಲರೂ ಶಿವಣ್ಣ ನ ಹೆಸರನ್ನು ಮುಂದಿಟ್ಟಿದ್ದಾರೆ. ಶಿವಣ್ಣ ಇದಕ್ಕೆ ಏನು ಪ್ರತ್ಯುತ್ತರ ನೀಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಕನ್ನಡ ಚಿತ್ರರಂಗವೊಂದು ಸಾಗರವಿದ್ದಂತೆ. ಇಲ್ಲಿ ಬಿಡುವಿಲ್ಲದಂತೆ ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತವೆ. ಹಲವಾರು ನಾಯಕರು ಒಳ್ಳೊಳ್ಳೆ ಕಥೆಯ ಮೂಲಕ ಚಿತ್ರರಂಗದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸುತ್ತಿದ್ದಾರೆ.

ಇದೀಗ ಈ ಚಿತ್ರರಂಗಕ್ಕೆ ನಾಯಕನ ಕೊರತೆ ಎದುರಾಗಿದೆ. ಅಂಬರೀಷ್ ನಂತರ ನಾಯಕತ್ವದ ಜವಾಬ್ದಾರಿ ಯಾರೂ ತೆಗೆದುಕೊಂಡಿಲ್ಲ. ಚಿತ್ರರಂಗವನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುವ ನಟರು ಇದ್ದಾರೆ ಆದರೂ ಯಾರೂ ಈ ವರೆಗೂ ಮುಂದೆ ಬಂದಿಲ್ಲ. ಏಕೆಂದರೆ ನಾಯಕತ್ವ ವಹಿಸಿಕೊಂಡರೆ ನಿಷ್ಠುರರಾಗಬೇಕೆಂಬ ಮನೋಭಾವನೆಯಿಂದ. ಈ ನಾಯಕನ ಸ್ಥಾನವನ್ನು ಮುನ್ನಡೆಸುವವರು ಯಾರೆಂದು ಕೇಳಿದಾಗಲೆಲ್ಲಾ ಶಿವರಾಜ್ ಕುಮಾರ್ ಹೆಸರು ಮೊದಲಿಗೆ ಬರುತ್ತದೆ. ಆದರೆ ಶಿವಣ್ಣ ಇದಕ್ಕೆ ಒಪ್ಪಿಕೊಳ್ಳುತ್ತಿಲ್ಲ.
ಜುಲೈ 22ರಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡದ ಜೊತೆ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿ ಶುಭಹಾರೈಸಿದ ಶಿವರಾಜ್ ಕುಮಾರ್ ಗೆ ಮತ್ತೆ ಪತ್ರಕರ್ತರು ಅದೇ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ಶಿವಣ್ಣ “ಈ ನಾಯಕತ್ವದ ವಿಚಾರದಲ್ಲಿ ನನಗೆ ಆಸಕ್ತಿ ಕಡಿಮೆ ಇದೆ. ಚಿತ್ರರಂಗದಲ್ಲಿ ರವಿಚಂದ್ರನ್, ಶ್ರೀನಾಥ್, ಅನಂತ್ ನಾಗ್ ಇಂತಹ ಹಲವು ಹಿರಿಯ ದಿಗ್ಗಜರಿದ್ದಾರೆ. ಚಿತ್ರರಂಗ ನಡೆಸಲು ಇವರೆಲ್ಲರ ಬೆಂಬಲ ಬೇಕಾಗುತ್ತದೆ “ಎಂದಿದ್ದಾರೆ.
ಸುದೀಪ್ ಹಾಗೂ ಕುಮಾರ್ ವಿವಾದದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, “ರವಿಚಂದ್ರನ್ ಅವರು ಏನು ಹೇಳುತ್ತಾರೋ ಆ ಮಾತಿಗೆ ನಾವು ಬದ್ಧ. ಬಹಳ ವರ್ಷಗಳಿಂದಲೂ ನಾವು ಗೆಳೆಯರು. ಅವರು ಹೇಳಿದ ಮಾತೇ ನನ್ನ ಮಾತೂ ಆಗಿರುತ್ತದೆ” ಎಂದಿದ್ದಾರೆ. ”ಚಿತ್ರರಂಗವೆಲ್ಲ ಒಂದೇ ಕುಟುಂಬ. ಸುದೀಪ್ ನನ್ನ ಸಹೋದರರಿದ್ದಂತೆ, ನಿರ್ಮಾಪಕರು ಅನ್ನದಾತರು. ಒಂದು ಕುಟುಂಬ ಎಂದ ಮೇಲೆ ಇಂಥಹಾ ಸಣ್ಣ-ಪುಟ್ಟ ಸಮಸ್ಯೆಗಳು ಬಂದು ಹೋಗುತ್ತಿರುತ್ತವೆ. ಎಲ್ಲಾ ಸಮಸ್ಯೆಗಳು ಇನ್ನೊಂದೆರಡು ದಿನಗಳಲ್ಲಿ ಬಗೆಹರಿಯಲಿವೆ. ಶೀಘ್ರವೇ ಎಲ್ಲವೂ ಸರಿಯಾಗಲಿದೆ “ಎಂದಿದ್ದಾರೆ…
ಶಿವರಾಜ್ ಕುಮಾರ್ ಹಲವಾರು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಈ ವಯಸ್ಸಿನಲ್ಲೂ ಬ್ಯುಸಿಯಾಗಿದ್ದಾರೆ. ಇದು ಅವರಿಗೆ ಚಿತ್ರರಂಗದ ಮೇಲಿರುವ ಅಭಿಮಾನವನ್ನು ಎತ್ತಿ ತೋರಿಸುತ್ತದೆ. ಡಾನ್ಸ್ ಕರ್ನಾಟಕ ಡಾನ್ಸ್ ನಲ್ಲೂ ತೀರ್ಪುಗಾರನಾಗಿ ಜನರ ಮನ ಗೆದ್ದಿದ್ದಾರೆ. ಇವರು ನಟಿಸಿದ ತಮಿಳು ಸಿನಿಮಾ ಒಂದು ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ.