ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಶೋ ಇನ್ನೇನು ಕೆಲವೇ ತಿಂಗಳುಗಳಲ್ಲಿ ಹೊಸ ಸೀಸನ್ ಶುರುವಾಗಲಿದೆ. ಬಿಗ್ ಬಾಸ್ ಶೋ ಶುರುವಾಗುತ್ತದೆ ಎಂದರೆ ಎಲ್ಲರಲ್ಲೂ ವಿಶೇಷವಾದ ಕುತೂಹಲ ಇದ್ದೇ ಇರುತ್ತದೆ. ವಿಶೇಷವಾಗಿ ಬರುವ ಸ್ಪರ್ಧಿಗಳು ಯಾರ್ಯಾರು, ಸಿನಿಮಾದವರು ಯಾರು ಬರುತ್ತಾರೆ, ಕಿರುತೆರೆಯವರು ಯಾರು ಬರುತ್ತಾರೆ? ಹೀಗೆ ಅನೇಕ ವಿಚಾರಗಳ ಬಗ್ಗೆ ಜನರಲ್ಲಿ ಕುತೂಹಲ ಇರುತ್ತದೆ. ಈ ಸೀಸನ್ ನಲ್ಲೂ ಆ ಕುತೂಹಲ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಾರಾ ಎನ್ನುವುದೇ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಆಗಿದೆ. ಯಾಕೆಂದರೆ ಕಳೆದ ಸೀಸನ್ ನಲ್ಲಿ ಸುದೀಪ್ ಅವರು, ಮುಂದಿನ ಸೀಸನ್ ಇಂದ ತಾವು ನಿರೂಪಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.

ಸೀಸನ್ ಶುರುವಿನಲ್ಲಿ ಮತ್ತು ಸೀಸನ್ ಮುಗಿದ ಮೇಲೆ ಎರಡು ಸಾರಿ ಟ್ವೀಟ್ ಮಾಡುವ ಮೂಲಕ ಸುದೀಪ್ ಅವರು, ಇದು ತಮ್ಮ ಕೊನೆಯ ಸೀಸನ್ ಎಂದು ತಿಳಿಸಿದ್ದರು. ಅಭಿಮಾನಿಗಳಿಗೆ ಇದರಿಂದ ಬಹಳ ಬೇಸರ ಆಗಿತ್ತು, ಏಕೆಂದರೆ ಬಹಳಷ್ಟು ಜನರು ಬಿಗ್ ಬಾಸ್ ಶೋ ನೋಡೋದೇ ಸುದೀಪ್ ಅವರಿಗೋಸ್ಕರ. ಸುದೀಪ್ ಅವರ ನೇರ ನಡೆ, ನಿರೂಪಣೆ ಮಾಡುವ ಶೈಲಿ, ಇದೆಲ್ಲವನ್ನು ನೋಡಿಯೇ ಸಾಕಷ್ಟು ಜನರು ಬಿಗ್ ಬಾಸ್ ಶೋ ನೋಡುತ್ತಾರೆ. ಆದರೆ ಕಿಚ್ಚ ಸುದೀಪ್ ಅವರೇ ಶೋ ಇಂದ ಹೊರ ಬಂದರೆ ಬೇರೆ ಯಾರು ಕೂಡ ಶೋ ನೋಡೋದಿಲ್ಲ ಎಂದು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಕಲರ್ಸ್ ವಾಹಿನಿ, ಸುದೀಪ್ ಅವರನ್ನು ಹೇಗಾದರೂ ಮಾಡಿ ಒಪ್ಪಿಸಿ ಶೋಗೆ ಕರೆತರುತ್ತೇವೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದರು. ಅದೇ ರೀತಿ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ.
ಹೌದು, ಕೆಲವು ದಿನಗಳ ಹಿಂದೆ ಸುದೀಪ್ ಅವರು ಮತ್ತೆ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಾರೆ ಎನ್ನುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕಲರ್ಸ್ ಕನ್ನಡ ವಾಹಿನಿ ಸುದೀಪ್ ಅವರನ್ನು ಒಪ್ಪಿಸಿದೆ, ಸುದೀಪ್ ಅವರು ಕೆಲವು ಸಾಲಿಡ್ ಕಂಡೀಷನ್ ಗಳನ್ನು ಹಾಕಿದ್ದು, ಅದಕ್ಕೆಲ್ಲಾ ವಾಹಿನಿಯವರು ಒಪ್ಪಿದರೆ, ಸುದೀಪ್ ಅವರೇ ಬಿಗ್ ಬಾಸ್ ಶೋ ನಿರೂಪಕರಾಗಿ ಮುಂದುವರೆಯುತ್ತಾರೆ ಎನ್ನಲಾಗಿತ್ತು. ಸುದೀಪ್ ಅವರು ಇತ್ತೀಚೆಗೆ ಒಂದು ಇಂಟರ್ವ್ಯೂ ನಲ್ಲಿ ಕಾಣಿಸಿಕೊಂಡಾಗ ಈ ಬಗ್ಗೆ ಪ್ರಶ್ನೆ ಕೇಳಲಾಯಿತು, ಅದಕ್ಕೆ ಸುದೀಪ್ ಅವರು ಉತ್ತರ ಕೊಟ್ಟಿಲ್ಲ. ಸೂಕ್ತ ವೇದಿಕೆಯಲ್ಲಿ ಬಿಗ್ ಬಾಸ್ ವಿಚಾರ ಮಾತನಾಡುತ್ತೇನೆ ಎಂದರು. ಆದರೆ ಅವರೇ ವಾಪಸ್ ಬರುತ್ತಾರೆ ಎನ್ನುವ ಚರ್ಚೆ ಮಾತ್ರ ನಡೆಯುತ್ತಲೇ ಇದೆ. ಇದರ ಬಗ್ಗೆ ತಿಳಿಯಲು ಇನ್ನು ಕೆಲ ಸಮಯ ಕಾಯಬೇಕಿದೆ.

ಇದರ ಜೊತೆಗೆ ಸಧ್ಯಕ್ಕೆ ವೈರಲ್ ಆಗಿರುವ ಮತ್ತೊಂದು ವಿಷಯ ಏನು ಎಂದರೆ, ಬಿಗ್ ಬಾಸ್ ಮನೆಗೆ ಈ ಬಾರಿ ಬರುವ ಸ್ಪರ್ಧಿಗಳು ಯಾರ್ ಯಾರು ಎನ್ನುವುದು. ಹೌದು, ಈ ವಿಚಾರ ಪ್ರತಿ ಸೀಸನ್ ಶುರು ಆಗುವುದಕ್ಕಿಂತ ಮೊದಲು ಚರ್ಚೆಯಲ್ಲಿ ಇರುತ್ತದೆ. ಅದೇ ರೀತಿ ಈ ವರ್ಷ ಕೂಡ ಚರ್ಚೆಯಲ್ಲಿದೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಸ್ಪರ್ಧಿಗಳ ಹುಡುಕಾಟದಲ್ಲಿದ್ದು ಕೆಲವರನ್ನು ಅಪ್ರೋಚ್ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಆ ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ಎಂದು ಫುಲ್ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ..
ಮೊದಲನೆಯದಾಗಿ ನಿರೂಪಕ ಚಂದನ್ ಶರ್ಮ ಅವರನ್ನು ಕಲರ್ಸ್ ಕನ್ನಡ ವಾಹಿನಿ ಸಂಪರ್ಕ ಮಾಡಿದೆಯಂತೆ. ಹೌದು, ಇವರು ಈಗಾಗಲೇ ಕೆಲವು ಸಾರಿ ಚಾನೆಲ್ ಆಫೀಸ್ ಗೆ ಬಂದು ಹೋಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಕಿರುತೆರೆ ಮತ್ತು ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ ಜೋಯಿಸ್ ಅವರನ್ನು ಕೂಡ ಬಿಗ್ ಬಾಸ್ ತಂಡ ಅಪ್ರೋಚ್ ಮಾಡಿದೆ ಎನ್ನಲಾಗಿದ್ದು, ಇದಕ್ಕೆ ಅರ್ಚನಾ ಅವರು ಒಪ್ಪಿಗೆ ಕೊಟ್ಟಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಇನ್ನು ಕೂಡ ಸ್ಪಷ್ಟನೆ ಸಿಕ್ಕಿಲ್ಲ. ಹಾಗೆಯೇ ಕಿರುತೆರೆಯಲ್ಲಿ ಫೇಮಸ್ ಆಗಿ, ಬಳಿಕ ಹೊಂದಿಸಿ ಬರೆಯಿರಿ, ಗಜಾನನ ಗೆಳೆಯರ ಬಳಗ ಹಾಗೂ ಇನ್ನಿತರ ಸಿನಿಮಾಗಳಲ್ಲ ಬ್ಯುಸಿ ಆಗಿರುವ ನಟ ಶ್ರೀ ಮಹಾದೇವ್ ಅವರನ್ನು ಬಿಗ್ ಬಾಸ್ ತಂಡ ಅಪ್ರೋಚ್ ಮಾಡಿದೆ. ಇವರು ಬಿಗ್ ಬಾಸ್ ಗೆ ಬರುತ್ತಾರಾ ಎಂದು ಕಾದು ನೋಡಬೇಕಿದೆ. ಶ್ರೀ ಹಾಗೂ ಅರ್ಚನಾ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿರುವ ವಿಷಯ ನಮಗೆಲ್ಲಾ ಗೊತ್ತೇ ಇದೆ.

ಡಾ. ಬ್ರೋ ಅವರನ್ನು ಕೂಡ ಕಲರ್ಸ್ ಕನ್ನಡ ಚಾನೆಲ್ ಅಪ್ರೋಚ್ ಮಾಡಿದೆ. ಈಗಾಗಲೇ ತಾವು ಬಿಗ್ ಬಾಸ್ ಮನೆಗೆ ಹೋಗೋದಿಲ್ಲ ಎಂದು ಡಾ. ಬ್ರೋ ಹೇಳಿದ್ದಾರೆ, ಆದರೆ ಇವರನ್ನು ಶೋಗೆ ಕರೆತರಬೇಕು ಎನ್ನುವ ಪ್ರಯತ್ನ ಕಲರ್ಸ್ ಕನ್ನಡ ವಾಹಿನಿ ಇಂದ ನಡೆಯುತ್ತಲೇ ಇದೆ. ಇನ್ನು ನಟಿ ಪ್ರಿಯಾಂಕ ಉಪೇಂದ್ರ ಅವರನ್ನು ಅಪ್ರೋಚ್ ಮಾಡಲಾಗಿದೆ. ಕೆಲವು ದಿನಗಳ ಕಾಲ ಗೆಸ್ಟ್ ಆಗಿ ಇರುವುದಕ್ಕೆ ಪ್ರಿಯಾಂಕ ಅವರನ್ನು ಅಪ್ರೋಚ್ ಮಾಡಲಾಗಿದ್ದು, ಅವರು ರಿಜೆಕ್ಟ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಈ ಬಾರಿ ಒಳ್ಳೆಯ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಕಲರ್ಸ್ ಕನ್ನಡ ತಯಾರಿ ನಡೆಸಿದೆ. ಯಾರೆಲ್ಲಾ ಬರುತ್ತಾರೆ ಎಂದು ಕಾದು ನೋಡಬೇಕಿದೆ.



