ತಮಿಳಿನ ಖ್ಯಾತ ನಟ ವಿಶಾಲ್ ಅವರ ಆರೋಗ್ಯದ ಸುದ್ದಿ ಒಂದೆರಡು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶಾಲ್ ಅವರ 13 ವರ್ಷ ಹಳೆಯ ಮದಗಜರಾಜ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರೆಸ್ ಮೀಟ್ ಗೆ ವಿಶಾಲ್ ಅವರು ಬಂದಿದ್ದರು. ಆದರೆ ವಿಶಾಲ್ ಅವರು ಸಂಪೂರ್ಣ ಬದಲಾದ ಹಾಗೆ ಕಂಡರು. ಬಹಳ ವೀಕ್ ಆಗಿದ್ದರು, ನಿಲ್ಲುವುದಕ್ಕೆ ಸಹ ಅವರಿಗೆ ಕಷ್ಟ ಆಗುತ್ತಿತ್ತು, ಮಾತಾನಾಡುವುದಕ್ಕೆ ಅವರ ಧ್ವನಿ ನಡುಗುತ್ತಿತ್ತು, ವಿಶಾಲ್ ಅವರನ್ನು ಈ ಸ್ಥಿತಿಯಲ್ಲಿ ನೋಡಿ ನೆಟ್ಟಿಗರಿಗೆ ದೊಡ್ಡ ಶಾಕ್ ಆಗಿತ್ತು. ಅಷ್ಟಕ್ಕೂ ವಿಶಾಲ್ ಅವರಿಗೆ ಏನಾಗಿದೆ ಎನ್ನುವ ಪ್ರಶ್ನೆ ಶುರುವಾಗಿದೆ.

ನಟ ವಿಶಾಲ್ ಅವರು ಪ್ರೀ ರಿಲೀಸ್ ಈವೆಂಟ್ ನಲ್ಲಿ ಕೈಯಲ್ಲಿ ಮೈಕ್ ಹಿಡಿದುಕೊಂಡು ನಿಲ್ಲುವುದಕ್ಕೆ ಸಹ ಕಷ್ಟಪಟ್ಟರು. ಅವರ ಮಾತುಗಳಲ್ಲಿ ನಡುಕ ಇತ್ತು. ಕುಳಿತು ಮಾತನಾಡಿ ಎಂದು ಆಂಕರ್ ಹೇಳಿದರು ಸಹ ವಿಶಾಲ್ ಅವರು ನಿಂತೆ ಮಾತನಾಡಿದರು. ವಿಶಾಲ್ ಅವರಿಗೆ ವೈರಲ್ ಫೀವರ್ ಆಗಿದೆ, ಹಾಗಾಗಿ ವೀಕ್ ಆಗಿದ್ದಾರೆ ಎಂದು ಸ್ಪಷ್ಟನೆ ಸಹ ಸಿಕ್ಕಿತು. ಆದರೆ ಜನರಿಗೆ ಬೇರೆಯದೇ ಅನುಮಾನಗಳು ಶುರುವಾದವು. ವಿಶಾಲ್ ಅವರ ಕತ್ತಿನಲ್ಲಿ ಒಂದು ಮಾರ್ಕ್ ಇದೆ. ಹಾಗಾಗಿ ಗಂಭೀರ ಆರೋಗ್ಯ ಸಮಸ್ಯೆ ಆಗಿರಬಹುದು ಎಂದು ಕೆಲವರು ಊಹೆ ಮಾಡುತ್ತಿದ್ದಾರೆ. ಇನ್ನು ಕೆಲವರು ಅವನ್ ಇವನ್ ಸಿನಿಮಾ ಸಮಯದಿಂದ ಇವರ ಆರೋಗ್ಯಕ್ಕೆ ಸಮಸ್ಯೆ ಆಗಿದೆ ಎನ್ನುತ್ತಿದ್ದಾರೆ..
ಅವನ್ ಇವನ್ ಸಿನಿಮಾದಲ್ಲಿ ಕಣ್ಣುಗಳು ನಾರ್ಮಲ್ ಆಗಿ ಇರಬಾರದು ಎನ್ನುವ ಕಾರಣಕ್ಕೆ ಆಪರೇಷನ್ ಮಾಡಿಸಿಕೊಳ್ಳಲಾಗಿತ್ತು. ಆ ಎಫೆಕ್ಟ್ ಸಹ ಇನ್ನು ಇರಬಹುದು, ಆ ನಿರ್ದೇಶಕರಿಂದಲೇ ವಿಶಾಲ್ ಅವರ ಆರೋಗ್ಯ ಹಾಳಾಗಿದೆ ಎನ್ನುವುದು ಕೆಲವರ ವಾದ ಆಗಿದೆ. ವಿಶಾಲ್ ಅವರಿಗೆ ಏನೇ ಆಗಿದ್ದರು ಅವರು ಬೇಗ ಹುಷಾರಾಗಿ ಮೊದಲಿನ ಹಾಗೆ ಆಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ. ಇವರ ಆರೋಗ್ಯದ ಬಗ್ಗೆ ಇಷ್ಟೆಲ್ಲಾ ಊಹಾಪೋಹಗಳು ಸೌಂಡ್ ಮಾಡುತ್ತಿರುವಾಗ ವಿಶಾಲ್ ಅವರು ಡಾಕ್ಟರ್ ಕೊಟ್ಟಿರುವ ರಿಪೋರ್ಟ್ ಅನ್ನು ರಿವೀಲ್ ಮಾಡಿದ್ದಾರೆ, ಇದರಿಂದ ಅವರಿಗೆ ನಿಜಕ್ಕೂ ಏನಾಗಿದೆ ಎನ್ನುವ ವಿಷಯ ಸ್ಪಷ್ಟವಾಗಿ ತಿಳಿದುಬಂದಿದೆ..

ಹೌದು, ನಟ ವಿಶಾಲ್ ಅವರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಲ್ಲಿನ ವೈದ್ಯರು ವಿಶಾಲ್ ಅವರ ಹೆಲ್ತ್ ರಿಪೋರ್ಟ್ ನೀಡಿದ್ದಾರೆ. ಅದರ ಅನುಸಾರ ವಿಶಾಲ್ ಅವರಿಗೆ ಗಂಭೀರವಾದ ಸಮಸ್ಯೆ ಆಗಿಲ್ಲ, ವೈರಲ್ ಫೀವರ್ ಹೆಚ್ಚಾಗಿರುವ ಕಾರಣ ವೈದ್ಯರು ಅವರಿಗೆ ಕೆಲ ದಿನಗಳ ಕಾಲ ಬೆಡ್ ರೆಸ್ಟ್ ನಲ್ಲಿ ಇರಬೇಕು ಎಂದು ರಿಪೋರ್ಟ್ ನಲ್ಲಿ ತಿಳಿಸಿದ್ದಾರೆ. ಇದನ್ನು ನೋಡಿದ ಮೇಲೆ ನೆಟ್ಟಿಗರಿಗೆ ಮನವರಿಕೆ ಆಗಿದೆ. ವಿಶಾಲ್ ಅವರಿಗೆ ಏನು ಆಗಿಲ್ಲ, ಬಹಳ ಬೇಗ ಸುಧಾರಿಸಿಕೊಂಡು, ಹುಷಾರಾಗಿ ವಾಪಸ್ ಬರುತ್ತಾರೆ ಎಂದು ನಂಬಿಕೆ ಬಂದಿದೆ. ಇವರ ಸಿನಿಮಾ ನೋಡೋಕೆ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ.
ವಿಶಾಲ್ ಅವರ ಮದಗಜರಾಜ ಸಿನಿಮಾ 13 ವರ್ಷಗಳ ಹಿಂದೆ ತಯಾರಾಗಿರುವ ಸಿನಿಮಾ. ಸುಂದರ್ ಸಿ ಅವರು ನಿರ್ದೇಶನ ಮಾಡಿದ್ದು, ವರಲಕ್ಷ್ಮೀ ಶರತ್ ಕುಮಾರ್ ಹಾಗೂ ಅಂಜಲಿ ಇಬ್ಬರು ಸಹ ವಿಶಾಲ್ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲಿದ್ದು, ಈ ವರ್ಷ ಸಂಕ್ರಾಂತಿ ಹಬ್ಬಕ್ಕೆ ಬೇರೆ ಯಾವುದೇ ದೊಡ್ಡ ತಮಿಳು ಸಿನಿಮಾ ಬಿಡುಗಡೆ ಆಗುತ್ತಿಲ್ಲದ ಕಾರಣ ವಿಶಾಲ್ ಅವರ ಹಳೆಯ ಸಿನಿಮಾಗೆ ಯಾವ ರೀತಿ ಜನರ ಪ್ರತಿಕ್ರಿಯೆ ಸಿಗುತ್ತದೆ ಎಂದು ಕಾದು ನೋಡಬೇಕಿದೆ. ಇವರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಟ್ಟು ಚೇತರಿಸಿಕೊಳ್ಳುವುದು ಕೂಡ ಈಗ ಬಹಳ ಮುಖ್ಯ ಆಗಿದೆ.