ಬಹು ನಿರೀಕ್ಷೆಯ ಕ್ರಾಂತಿ ಸಿನಿಮಾ 2023ರ ಜನವರಿ 26ಕ್ಕೆ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಕ್ರಾಂತಿ ಸಿನಿಮಾ ತಂಡ ಪ್ರಮೋಷನ್ ಬ್ಯುಸಿಯಲ್ಲಿ ಓಡಾಡುತ್ತಿದೆ. ಇತ್ತೀಚಿಗೆ ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾ ಬಗ್ಗೆ ಸಂದರ್ಶನ ನೀಡಿ ಒಂದಷ್ಟು ವಿಚಾರಗಳನ್ನ ಹಂಚಿಕೊಂಡರು ಇದರಲ್ಲಿ ಪ್ರಮುಖವಾಗಿ ಅಭಿಮಾನಿಗಳ ಬಗ್ಗೆ ದಾಸ ದರ್ಶನ್ ಮಾತನಾಡಿರೋ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. “ಅಭಿಮಾನಿಗಳು ನನಗೆ ಇಷ್ಟೆಲ್ಲಾ ಪ್ರೀತಿ ತೋರಿಸುತ್ತಾರೆ. ನಾನು ಅವರ ಋಣವನ್ನ ಹೇಗೆ ತೀರಿಸಲಿ..? ಈ ಜನ್ಮದಲ್ಲಿ ತೀರಿಸಲು ಸಾಧ್ಯವೇ ಇಲ್ಲ ಬಿಡಿ” ಅನ್ನೋದನ್ನ ತುಂಬಾ ಭಾವುಕರಾಗಿ ಹೇಳಿದ್ರು ದರ್ಶನ್.

“ನನ್ನ ಪ್ರೀತಿ ಮಾಡೋ ಅಭಿಮಾನಿ ಸೆಲೆಬ್ರೆಟಿಗಳು ನನ್ನ ಕ್ರಾಂತಿ ಸಿನಿಮಾವನ್ನ ಅವರ ಸಿನಿಮಾ ಎಂಬಂತೆ ಬರೀ ಕರ್ನಾಟಕ ಅಷ್ಟೇ ಅಲ್ಲದೇ ಎಲ್ಲೆಡೆ ತುಂಬಾ ಅದ್ದೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ನಾನು ಅವರಿಗೆ ಪ್ರಚಾರ ಮಾಡಿ ಅಂತ ಹೇಳೇ ಇಲ್ಲ. ಅವರೇ ಹಣ ಖರ್ಚು ಮಾಡಿ ಇಷ್ಟೆಲ್ಲಾ ಪ್ರಮೋಷನ್ ಮಾಡುತ್ತಿದ್ದಾರೆ” ಅಂತ ಅಭಿಮಾನಿಗಳ ಬಗ್ಗೆ ತುಂಬಾ ಹೆಮ್ಮೆಯಿಂದ ಡಿ ಬಾಸ್ ದರ್ಶನ್ ಮಾತನಾಡಿದ್ರು.
“ನನ್ನಿಂದ ನನ್ನ ಅಭಿಮಾನಿಗಳು ಒಂದು ಫೋಟೋವಷ್ಟೇ ನಿರೀಕ್ಷೆ ಮಾಡುತ್ತಾರೆ. ಅದೆಷ್ಟೋ ಮಂದಿಗೆ ನಾನು ಸಿಕ್ಕೇ ಇಲ್ಲ. ಆದರೂ ಅವರು ಇಟ್ಟಿರೋ ಪ್ರೀತಿಗೆ ನಾನು ಕೈಮುಗಿಯುತ್ತೀನಿ” ಅಂತ ತುಂಬಾ ಖುಷಿಯಿಂದ ಜೀ ಕನ್ನಡ ನ್ಯೂಸ್ ಜೊತೆ ಮನದಾಳದ ಮಾತನ್ನ ಹಂಚಿಕೊಂಡರು ದರ್ಶನ್.