ದಿನದಿಂದ ದಿನಕ್ಕೆ ಬೆಳೆಯುತ್ತಿರುವ “ರಶ್ಮಿಕಾ” ಅವರನ್ನು ನೋಡಿ ಕೆಲ ಮಂದಿ ಹೊಟ್ಟೆ ಕಿಚ್ಚಿಗೆ ಕೆಲ ಟೀಕೆಗಳು ಮಾತುಗಳು ಸಹ ಕೇಳಬೇಕಾಯಿತು.ಅದ್ರಲ್ಲೂ ಕನ್ನಡದ ನೆಚ್ಚಿನ ನಟ “ರಕ್ಷಿತ್” ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡು ತನಗೆ ಅವರಿಗಿಂತ ದೊಡ್ಡ ಮಟ್ಟದ ಹೆಸರು ಬಂದ ಕೊಡಲೇ ಅವರೊಟ್ಟಿಗೆ ಬ್ರೇಕಪ್ ಮಾಡಿಕೊಂಡಿದ್ದು ಮತ್ತಷ್ಟು ಮಾತುಗಳನ್ನು ಕೇಳುವಂತೆ ಮಡಿತ್ತು. ಅದ್ರಲ್ಲೂ ಬೇರೆ ಭಾಷೆಯಲ್ಲಿ ಅವರ ಬೇಡಿಕೆ ಹೆಚ್ಚಿದ ನಂತರ ನಮ್ಮ ಕನ್ನಡವನ್ನು ಹಾಗೂ ಕನ್ನಡಿಗರನ್ನು ಮರೆಯುತ್ತಿರುವುದನ್ನು ನೋಡಿ ನಮ್ಮ ಕನ್ನಡಿಗರ ಕಣ್ಣು ಕೆಂಪಾಗ ತೊಡಗಿತು. ಹೀಗೆ ದಿನ ಕಳೆಯುತ್ತಾ ರಶ್ಮಿಕಾ ಅವರ ಬೆಳವಣಿಗೆ ಉತ್ತಂಗಕ್ಕೆ ಏರುತ್ತಿದ್ದಂತೆ ಅವರ ವರ್ತನೆ ಕೂಡ ಬಹಳ ಮಿತಿ ಮೀರುತ್ತಾ ಬಂದಿದೆ.ಈಗಾಗಲೇ ಈ ನಟಿ ತಮ್ಮ ನಟನೆಯ ಮೂಲಕ ಎಲ್ಲರನ್ನೂ ಸೆಳೆದು ನಮ್ಮ ಸ್ಯಾಂಡಲ್ವುಡ್ ಅಲ್ಲದೆ ಟಾಲಿವುಡ್,ಕಾಲಿವುಡ್ ಅಲ್ಲದೆ ಬಾಲಿವುಡ್ ನಲ್ಲೂ ಬಿಸಿ ಇದ್ದಾರೆ.

ಹೀಗೆ ದಿನದಿಂದ ದಿನಕ್ಕೆ ಸಾಕಷ್ಟು ಸಿನಿಮಾಗಳನ್ನು ಕೈ ತುಂಬಿಸಿಕೊಳ್ಳುತ್ತಿರುವುದರಿಂದಲೇ ಅವರ ವರ್ತನೆ ಬಹಳ ಬದಲಾಗಿದೆ ಎಂದು ಎದ್ದು ಕಾಣುತ್ತಿದೆ. ಇತ್ತೀಚೆಗೆ ನಡೆದ ಯೂಟ್ಯೂಬ್ ಚಾನಲ್ ನ ಸಂದರ್ಶನ ದಲ್ಲಿ ತಮ್ಮ ಮೊದಲ ಕನ್ನಡ ಸಿನಿಮಾದ ಬಗ್ಗೆ ಕೇಳಿದಾಗ ಆ ಸಂಧರ್ಭದಲ್ಲಿ ತಮ್ಮನ್ನು ಬಣ್ಣದ ಲೋಕಕ್ಕೆ ಪರಿಚಯ ಮಾಡಿಕೊಟ್ಟ ಪರ್ವ ಸಂಸ್ಥೆಯ ಹೆಸರಾಗಲಿ ಅಥವಾ ಆ ನಾಯನಾಗಿದ್ದ ರಕ್ಷಿತ್ ಶೆಟ್ಟಿ ಹೆಸರಾಗಲಿ ಸೂಚಿಸದೆ ಬೆರಳು ಸನ್ನೆಯ ಮೂಲಕ ತಿಳಿಸಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು.ಈಗ ಆ ಕೋಪ ಬ್ಯಾನ್ ರೋಪ ಪಡೆದುಕೊಂಡಿದೆ.
ಕನ್ನಡ ಭಾಷೆ ಹಾಗೂ ಕನ್ನಡ ಕಲಾವಿದರನ್ನು ಗೌರವಿಸದೆ ಇರುವ ಕಾರಣ ಕನ್ನಡ ಇಂಡಸ್ಟ್ರಿ ಯವರು ರಶ್ಮಿಕಾ ಅವರನ್ನು ಬ್ಯಾನ್ ಮಾಡಿದ್ದಾರೆ.ಇದ್ರಿಂದ ರಶ್ಮಿಕಾ ಅವರ ಬಣ್ಣದ ಬದುಕಿಗೆ ದೊಡ್ಡ ಪಾಠ ವಾಗುತ್ತದೆ ಎಂದು ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಚಾರವಾಗಿ ಟಾಲಿವುಡ್ ನ ನಿರ್ದೇಶಕ ರಶ್ಮಿಕಾ ಅವರ ವರ್ತನೆ ಬಗ್ಗೆ ಟ್ವಿಟ್ ಮುಕಾಂತರ ತಿಳಿಸಿದ್ದಾರೆ. ಆ ನಿರ್ದೇಶಕ ಯಾರು ಹಾಗೂ ಏನೆನೆಲ್ಲಾ ಹೇಳಿದ್ದಾರೆ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ರಶ್ಮಿಕಾ ಅವರು ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಚಲೋ ಸಿನಿಮಾ ಮೂಲಕ. ಈ ಸಿನಿಮಾದಲ್ಲಿ ಟಾಲಿವುಡ್ ನಲ್ಲಿ ಈಗಾಗಲೇ ಪರಿಚಯಿಸಿಕೊಂಡಿದ್ದ “ಶೌರ್ಯ” ಅವರೊಟ್ಟಿಗೆ ತೆರೆ ಹಂಚಿಕೊಂಡಿದ್ದರು.ಆ ಚಿತ್ರ ಯಶಸ್ವಿಯಾದ ಬಳಿಕ ಟ್ವಿಟರ್ ನಲ್ಲಿ ಯಾರೊಬ್ಬರ ಹೆಸರು ಕೂಡ ಸೂಚಿಸಿರಲಿಲ್ಲ.ಇದೀಗ ತಮ್ಮ ಚೊಚ್ಚಲ ಚಿತ್ರದ ಜನರಿಗೆ ಈ ರೀತಿ ಮಾಡಿರುವುದು ಅವರ ವರ್ತನೆ ಎತ್ತಿ ಹಿಡಿಯುತ್ತಿದೆ “ತೋಟ ಪ್ರಸಾದ್” ಟ್ವಿಟರ್ ಮುಕಾಂತರ ತಿಳಿಸಿದ್ದಾರೆ.



