ನಮ್ಮ ಭಾರತ ದೇಶದ ಆಹಾರ ಪದ್ಧತಿ ಎಷ್ಟೋ ಸಾವಿರಾರು ವರ್ಷಗಳ ಹಿಂದಿನದು ವೈಜ್ಞಾನಿಕವಾಗಿ ಹೌದು. ಯಾವುದೇ ಹಬ್ಬಗಳಲ್ಲಿ ನೋಡಬಹುದು ಉಪ್ಪು ಮತ್ತು ಉಪ್ಪಿನಕಾಯಿ ನಂತರ ಒಂದು ಕೋಸಂಬರಿಯನ್ನು ಅಥವಾ ಮೊಳಕೆ ಬಂದ ಕಾಳನ್ನು ತಿನ್ನುವುದರಿಂದ ನಿಜವಾಗಿಯೂ ಪೌಷ್ಟಿಕತೆ ಸಿಗುತ್ತದೆ. ಈ ಮೊಳಕೆ ಬಂದದ್ದು ಅಥವಾ ಸೊಪ್ಪು ಮತ್ತು ತರಕಾರಿಗಳಲ್ಲಿ ಹೆಚ್ಚು ವಿಟಮಿನ್ಗಳಿವೆ ಹಾಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂದ್ರೆ ನಾವು ಮುಂದೆ ಏನು ತೊಂದರೆಗೆ ಕಾರಣವಾಗಬಹುದು. ಎಂದು ನಾವು ನೋಡಿಕೊಳ್ಳುವುದು ಮುಖ್ಯ. ನಮಗೆ ಹಿತವಾಗಿರುವುದು, ಮಿತವಾಗಿರೋದು ತುಂಬಾ ಮುಖ್ಯ. ಹೆಚ್ಚಾಗಿ ಇವುಗಳನ್ನು ತಿಂದರೆ ಜೀರ್ಣಶಕ್ತಿಗೆ ತೊಂದರೆಯಾಗುತ್ತದೆ.
ಈ ಹಸಿರು ತರಕಾರಿ, ಸೊಪ್ಪುಗಳನ್ನು ಹಸುಗಳಿಗೆ ಕೊಟ್ಟರೆ ಅವುಗಳು ಜಗಿದುಕೊಂಡೆ ಇರುತ್ತದೆ. ಇದರಿಂದ ಜೀರ್ಣಶಕ್ತಿ ವೇಗವಾಗಿ ಆಗುವುದಿಲ್ಲ. ಈ ಹಸಿರು ಸೊಪ್ಪು ತರಕಾರಿಗಳನ್ನು ಆಯುರ್ವೇದದಲ್ಲಿ ಹೇಳುವುದೇನೆಂದರೆ, ಮೊದಲು ಇವುಗಳನ್ನು ಬೇಯಿಸಿ ನಂತರ ಅದರಲ್ಲಿ ನೀರನ್ನು ತೆಗೆದು ತುಪ್ಪ ಅಥವಾ ಎಣ್ಣೆಯನ್ನು ಬೆರೆಸಿದರು ಸಹ ದೋಷಗಳು ಸಂಪೂರ್ಣವಾಗಿ ಹೋಗುವುದಿಲ್ಲ. ಎಂದು ಆಯುರ್ವೇದ ಹೇಳುತ್ತದೆ. ಆದರೂ ಹೆಚ್ಚು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ.
ಪೌಷ್ಟಿಕತೆ ಇದೆ ಎಂದು ಮಕ್ಕಳಿಗೆ ಅಥವಾ ವೃದ್ಧರಿಗೆ ಇಂತಹವುಗಳನ್ನು ಕೊಟ್ಟರೆ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡಿದಂತಾಗುತ್ತದೆ. ಇದರಿಂದ ಪೌಷ್ಟಿಕತೆ ಬರಲಿ ಎಂದು ಮೊಳಕೆ ಕಾಳುಗಳನ್ನು ಕಡಿಮೆ ಪ್ರಮಾಣದಲ್ಲಿ ನೀಡುವುದು ಉತ್ತಮ. ಇವುಗಳನ್ನು ಹೆಚ್ಚು ತಿಂದರೆ ಫಂಗಸ್ಗಳು ಬರುವ ಸಾಧ್ಯತೆಯೂ ಇದೆ. ಆರೋಗ್ಯದಲ್ಲಿ ಏರುಪೇರುಗಳನ್ನು ಕಾಣಬಹುದು.
ಹಾಗೆ ತಮ್ಮ ಜೀರ್ಣಶಕ್ತಿಗೆ ತಕ್ಕಂತೆ ಪ್ರಮಾಣದಲ್ಲಿ ನಾವು ತೆಗೆದುಕೊಳ್ಳಬೇಕು.
ಆಯುರ್ವೇದದಲ್ಲಿ ಬೇಯಿಸಿದಾಗ ಮಾತ್ರ ಲಗುತ್ವ ಬರುತ್ತದೆ. ಇದರಿಂದಾಗಿ ಹೆಚ್ಚು ಜಾಗರತೆಯಿಂದ ಹಸಿ ತರಕಾರಿ, ಮೊಳಕೆ ಕಾಳುಗಳನ್ನು ಹುಷಾರಾಗಿ ತೆಗೆದುಕೊಳ್ಳಿ. ನೀರಲ್ಲಿ ನೆನೆಸುವುದರ ಮೂಲಕ ಕಾಳುಗಳನ್ನು ಸೇವಿಸುವುದು, ಉತ್ತಮ ಗ್ಯಾಸ್ಟಿಕ್ ನಂತಹ ತೊಂದರೆಗಳು ಬರುವುದಿಲ್ಲ. ಹೆಸರುಕಾಳನ್ನು ನೀರಲ್ಲಿ ನೆನೆಸಿ ತಿನ್ನುವುದರಿಂದ ಪಚನಕ್ಕೆ ಯೋಗ್ಯ ಎಂದು ಹೇಳಬಹುದು. ಆದರೆ ನ್ಯಾಚುರಲ್ ಫುಡ್ ಗಳು ತುಂಬಾ ಉತ್ತಮ ಎಂದಾಗ ನಾವು ರೋಗಿಗಳಗೋದು ಹೆಚ್ಚು. ಇದರ ಬಗ್ಗೆ ಹೆಚ್ಚು ಗಮನವಹಿಸೋಣ. ನಮಗೆ ಜಠರ ಸ್ನೇಹಿಯಾಗುವ ಆಹಾರ ಮಾತ್ರ ಒಗ್ಗುತ್ತದೆ, ಅನ್ನೋದಾಗಿದೆ.