ನಟಿ ಸಮಂತಾ ರುತ್ ಪ್ರಭು ಅವರು ಅನೇಕ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ಸಮಂತಾ ಹಾಗೂ ಬಾಲಿವುಡ್ ನಟ ವರುಣ್ ಧವನ್ ಅಭಿನಯಿಸಿರುವ ಸಿಟಾಡೆಲ್ ಹನಿ ಬನಿ ವೆಬ್ ಸೀರೀಸ್ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗಿದೆ. ಈ ವೇಳೆ ವೆಬ್ ಸೀರೀಸ್ ಪ್ರೊಮೋಷನ್ ಗಳಲ್ಲಿ ಭಾಗಿಯಾಗಿದ್ದಾರೆ ಸ್ಯಾಮ್. ಅನೇಕ ಇಂಟರ್ವ್ಯೂಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದು, ಒಂದು ಇಂಟರ್ವ್ಯೂನಲ್ಲಿ ಅವನಿಗಾಗಿ ಅಷ್ಟೆಲ್ಲಾ ಮಾಡಿದ್ದು ವೇಸ್ಟ್ ಎಂದು ಹೇಳಿದ್ದಾರೆ. ಮಾಜಿ ಪತಿ ಬಗ್ಗೆ ಸಮಂತಾ ಅವರು ಕೊಟ್ಟಿರುವ ಹೇಳಿಕೆ, ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಇವರಿಬ್ಬರು ಸಹ ಐದಾರು ವರ್ಷಗಳ ಕಾಲ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾದ ಜೋಡಿ. ಇವರ ದಾಂಪತ್ಯ ಜೀವನ ಹೆಚ್ಚು ಸಮಯ ಉಳಿಯಲಿಲ್ಲ ಎನ್ನುವುದು ಬೇಸರದ ವಿಷಯ. ಆದರೆ ಈ ಜೋಡಿ ದೂರ ಆಗಿದ್ದರ ಬಗ್ಗೆ ಈಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇಬ್ಬರು ತಮ್ಮ ಕೆರಿಯರ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇವರ ಬಗ್ಗೆ ಚರ್ಚೆಗಳು ಮಾತ್ರ ನಿಲ್ಲುತ್ತಿಲ್ಲ. ಈ ವೇಳೆ ಇಂಟರ್ವ್ಯೂ ಒಂದರಲ್ಲಿ ಸಮಂತಾ ಅವರು ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಮಗೆಲ್ಲಾ ಗೊತ್ತಿರುವ ಹಾಗೆ ಸಮಂತಾ ಅವರ ಮಾಜಿ ಪತಿ ನಟ ನಾಗಚೈತನ್ಯ ಎರಡನೇ ಮದುವೆಗೆ ತಯಾರಾಗಿದ್ದಾರೆ. ಮತ್ತೊಬ್ಬ ಖ್ಯಾತ ನಟಿ ಶೋಭಿತಾ ಧೂಳಿಪಾಲ ಅವರ ಜೊತೆಗೆ ನಾಗಚೈತನ್ಯ ಮದುವೆ ನಡೆಯಲಿದೆ. ಇಬ್ಬರ ನಿಶ್ಚಿತಾರ್ಥ ಕೂಡ ಈಗಾಗಲೇ ನೆರವೇರಿದೆ. ಈ ವೇಳೆ ಸಮಂತಾ ಅವರು ನೀಡಿರುವ ಈ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆಲವರು ಹೇಳುವ ಪ್ರಕಾರ ನಾಗಚೈತನ್ಯ ಅವರು ಸಮಂತಾ ಅವರೊಡನೆ ಇದ್ದಾಗಲೇ ಶೋಭಿತಾ ಅವರನ್ನು ಪ್ರೀತಿಸುತ್ತಿದ್ದರು, ಅವರ ಜೊತೆಗೆ ರಿಲೇಶನ್ಷಿಪ್ ನಲ್ಲಿ ಇದ್ದರು ಈ ಕಾರಣಕ್ಕೆ ಸಮಂತಾ ಅವರು ತಮಗೆ ಮೋಸ ಆಗಿದ್ದಕ್ಕೆ ಆ ಸಂಬಂಧದಿಂದ ಹೊರಬಂದರು ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ.

ಆದರೆ ಇದರಲ್ಲಿ ಯಾವುದು ನಿಜವೋ, ಯಾವುದು ಸುಳ್ಳೋ ಎಂದು ಮಾತ್ರ ಗೊತ್ತಿಲ್ಲ. ಒಟ್ಟಿನಲ್ಲಿ ಇವರಿಬ್ಬರು ಈಗ ದೂರ ಆಗಿ 3 ವರ್ಷಗಳು ಕಳೆದು ಹೋಗಿದೆ. ಆದರೆ ಇಂದಿಗು ಚರ್ಚೆ ಮಾತ್ರ ಕಡಿಮೆ ಆಗಿಲ್ಲ. ಇನ್ನು ಸಮಂತಾ ಅವರು ನೀಡಿರುವ ಹೇಳಿಕೆ ಏನು ಎಂದು ನೋಡುವುದಾದರೆ, ನಟಿ ಸಮಂತಾ ಅವರು ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು, ಅಲ್ಲಿ ಸಮಂತಾ ಅವರನ್ನು ಸಂದರ್ಶನ ಮಾಡುತ್ತಿದ್ದವರು ಅವರ ಸಹನಟ ವರುಣ್ ಧವನ್. ವರುಣ್ ಅವರು ಸಮಂತಾ ಅವರಿಗೆ ಒಂದು ಪ್ರಶ್ನೆ ಕೇಳಿದರು. ಇದುವರೆಗೂ ನೀವು ಖರ್ಚು ಮಾಡಿರುವ ಹಣದಲ್ಲಿ ಇದು ತುಂಬಾ ವೇಸ್ಟ್ ಖರ್ಚು ಎಂದು ಅನ್ನಿಸಿದ್ದು ಯಾವುದಕ್ಕೆ ಎಂದು ಕೇಳಿದರು, ಈ ಪ್ರಶ್ನೆಗೆ ಸಮಂತಾ ಕೊಟ್ಟ ಉತ್ತರವೇ ಇಂದು ವೈರಲ್ ಆಗಿರುವುದು.
ವರುಣ್ ಧವನ್ ಕೇಳಿದ ಪ್ರಶ್ನೆಗೆ ಸಮಂತಾ ಕೊಟ್ಟ ಉತ್ತರ, ನನ್ನ ಎಕ್ಸ್ ಗೆ ಕೊಟ್ಟ ದುಬಾರಿ ಗಿಫ್ಟ್ ಗಳಿಗೆ ಖರ್ಚು ಮಾಡಿದ ಹಣ ಎಂದು ಹೇಳಿದರು. ಆಗ ಶಾಕ್ ಆದ ವರುಣ್ ಎಷ್ಟಿರಬಹುದು ಎಂದು ಕೂಡ ಕೇಳಿದರು. ಅದಕ್ಕೆ ಉತ್ತರಿಸಿದ ಸಮಂತಾ, ಒಂದಷ್ಟು ಎಂದು ಹೇಳಿದರು. ಸಮಂತಾ ಅವರು ಯಾವ ಅರ್ಥದಲ್ಲಿ ಈ ರೀತಿ ಹೇಳಿದರೋ ಗೊತ್ತಿಲ್ಲ, ಆದರೆ ಅವರ ಹೇಳಿಕೆ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಸಮಂತಾ ಅವರ ಮನಸ್ಸಿಗೆ ಆಗಿರುವ ಗಾಯಕ್ಕೆ ಈ ಮಾತುಗಳು ಸರಿಯಾಗಿದೆ, ಅವರು ಇನ್ನು ಚೆನ್ನಾಗಿ ಮಾತನಾಡಬೇಕು ಎನ್ನುತ್ತಿದ್ದಾರೆ. ಇನ್ನು ಕೆಲವರು ನಾಗಚೈತನ್ಯ ಸುಮ್ಮನೆ ಇದ್ದಾರೆ, ಸಮಂತಾ ಈ ರೀತಿ ಆಡುತ್ತಿದ್ದಾರೆ ಎನ್ನುತ್ತಿದ್ದಾರೆ.