ಅನಿರುದ್ದ್ ಒಬ್ಬ ಭಾರತೀಯ ನಟ, ಗಾಯಕ, ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ. ಕನ್ನಡ ಚಲನಚಿತ್ರ ನಟರಾದ ಇವರು ವಿಷ್ಣುವರ್ಧನ ಮತ್ತು ಭಾರತಿ ವಿಷ್ಣುವರ್ಧನ್ ಅವರ ಅಳಿಯ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮೊದಲು ಕನ್ನಡ ಚಿತ್ರರಂಗದಲ್ಲಿ ಅವರ ಕೆಲಸಕ್ಕಾಗಿ ಹೆಸರುವಾಸಿಯಾದ ಅನಿರುದ್ದ್ ಅವರ ವೃತ್ತಿಜೀವನವು ಕನ್ನಡ, ಮರಾಠಿ ಸಿನಿಮಾ ಗಳಿಗೂ ಮುಂದುವರೆದಿದೆ. ಜೊತೆಗೆ ಜೊತೆ ಜೊತೆಯಲಿ ಕನ್ನಡ ಸೀರಿಯಲ್ ಪಾತ್ರಕ್ಕಾಗಿ ಅವರು ತುಂಬಾನೆ ಹೆಸರುವಾಸಿಯಾಗಿದ್ದರು.ಇವರನ್ನು ಸ್ಯಾಂಡಲ್ ವುಡ್ ನ ಕುಡಿ ಎಂದರೂ ತಪ್ಪಾಗದು.

ಏಕೆಂದರೆ ಹಲವು ಸಿನಿಮಾಗಳಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬುವ ಕೆಲಸ ವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಜೇಷ್ಠ, ರಾಮ ಶಾಮ ಭಾಮಾ, ನೀನೆಲ್ಲೋ ನಾನಲ್ಲೇ ಇವರು ಪ್ರಮುಖ ಸಿನಿಮಾಗಳು. ಕೆಲ ಕಾಲ ಸಿನಿಮಾ ರಂಗದಿಂದ ದೂರ ಉಳಿದ ಇವರು ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸಿ ಆ ಮೂಲಕ ಜನ ಮನ್ನಣೆ ಗಳಿಸುತ್ತಾರೆ. ಅದಾದ ನಂತರ ಕೆಲ ಕಾರಣಗಳಿಗೆ ಧಾರವಾಹಿಯನ್ನು ಬಿಡುತ್ತಾರೆ. ಇದೀಗ ಹೀರೋ ಆಗಿ ಮತ್ತೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಅವರ ಹೊಸ ಸಿನಿಮಾದ ಚಿತ್ರ ಕತೆ ಪೂಜೆ ವಿಷ್ಣುವರ್ಧನ್ ಸ್ಮಾರಕದಲ್ಲಿ ನಡೆದಿದೆ. ಮೊದಲು ಚಿತ್ರರಂಗಕ್ಕೆ ಕಾಲಿಟ್ಟಾಗ ದೊಡ್ಡ ಹೀರೋ ಆಗಬೇಕೆಂದು ಕನಸು ಹೊತ್ತುಕೊಂಡಿದ್ದ ಅನಿರುದ್ದ್ ಅದನ್ನು ಅರ್ಧದಲ್ಲೇ ನಿಲ್ಲಿಸಿ ಸೀರಿಯಲ್ ನತ್ತ ಬರುತ್ತಾರೆ. ಇದೀಗ ಮತ್ತೆ ಬೆಳ್ಳಿ ತೆರೆಗೆ ಎಂಟ್ರಿ ಕೊಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ಹೊಸ ಸಿನಿಮಾಕ್ಕೆ ಚಾಲನೆ ಮೈಸೂರಿನ ವಿಷ್ಣುವರ್ಧನ್ ಸ್ಮಾರಕದ ಬಳಿ ದೊರೆತಿದೆ.
ಅನಿರುದ್ದ್ ನಾಯಕ ನಟನಾಗಿ ನಟಿಸುವ ಈ ಚಿತ್ರದ ನಿರ್ದೇಶನವನ್ನು ಎಂ. ಆನಂದ್ರಾಜ್ ಮಾಡಿದ್ದಾರೆ. ಇವರು ರಾಘು ಎಂಬ ಸಿನಿಮಾವನ್ನೂ ಸಹ ನಿರ್ದೇಶನ ಮಾಡಿದ್ದರು. ಪ್ರಸ್ತುತ ಈ ಚಿತ್ರದ ಚಿತ್ರ ಕಥೆ ಪೂಜೆ ಮೈಸೂರಿನಲ್ಲಿ ನಡೆಯುವ ಸಂದರ್ಭದಲ್ಲಿ ಹಿರಿಯ ನಟಿ ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಆಗಮಿಸಿ ಶುಭಕೋರಿದ್ದರು. ಈ ಸಿನಿಮಾದ ಚಿತ್ರೀಕರಣ ಆಗಸ್ಟ್ 10ರಿಂದ ಪ್ರಾರಂಭವಾಗಲಿದ್ದು, ಬೆಂಗಳೂರು, ಮಂಗಳೂರು, ತುಮಕೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ದಂಪ್ತಿ ಪಿಕ್ಚರ್ ಲಾಂಛನ ದ ಮೂಲಕ ಈ ಸಿನಿಮಾ ನಿರ್ಮಾಣವಾಗಲಿದೆ.
ಹಾಗು ಇದು ಅವರ ಮೊದಲ ಸಿನಿಮಾ. ಈ ಸಿನಿಮಾದ ನಿರ್ದೇಶಕ ವಿಜಯ ರಾಘವೇಂದ್ರ ಅವರ ಜೊತೆ ರಾಘು ಸಿನಿಮಾ ಮಾಡಿದ್ದರು. ಇದೀಗ ಹೊಸ ಯೋಜನೆಯೊಂದಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾದ ಕಥೆಯನ್ನೂ ಸ್ವತಃ ಅವರೇ ಬರೆದಿದ್ದಾರೆ . ನರಸಿಂಹಮೂರ್ತಿ ಫೈಟ್ ಕೊರಿಯೊಗ್ರಫಿ ಹಾಗೂ ಮಾಧುರಿ ಪರಶುರಾಮ್ ಅವರ ಡ್ಯಾನ್ಸ್ ಕೊರಿಯೋಗ್ರಾಫಿ ಈ ಸಿನಿಮಾದಲ್ಲಿ ಮೂಡಿ ಬರಲಿದೆ. ಇನ್ನು ಸಿನಿಮಾದ ನಾಯಕಿಯಾಗಿ ನಿಧಿ ಸುಬ್ಬಯ್ಯ ಹಾಗೂ ರೇಚಲ್ ಡೇವಿಡ್ ಇದ್ದಾರೆ.
ಪೋಷಕ ಪಾತ್ರಗಳಲ್ಲಿ ನಟ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಹಾಗೂ ಇನ್ನೂ ಕೆಲವರಿದ್ದಾರೆ. ಸಿನಿಮಾವು ಡಾರ್ಕ್ ಕಾಮಿಡಿ ಥ್ರಿಲ್ಲರ್ ಜಾನರ್ಗೆ ಸೇರಿದ್ದು , ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಶೀಘ್ರದಲ್ಲಿಯೇ ಸಿನಿಮಾದ ಟೈಟಲ್ ಅನ್ನು ಘೋಷಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ.ನಿರ್ದೇಶಕರ ಪ್ರಯತ್ನ ಹಾಗೂ ಅನಿರುದ್ದ್ ರವರ ಪರಿಶ್ರಮಕ್ಕೆ ಖಂಡಿತ ಬೆಲೆ ಸಿಕ್ಕೇ ಸಿಗುತ್ತದೆ.ಈ ಸಿನಿಮಾ ಜನರ ನಿರೀಕ್ಷೆಯನ್ನು ತಲುಪಲಿದೆ ಎಂದಿದ್ದಾರೆ ನಿರ್ದೇಶಕ ಆನಂದ್ ರಾಜ್