ತಮಿಳು ಚಿತ್ರರಂಗದಲ್ಲಿ ನಂ.1 ಹಾಸ್ಯ ನಟ ಎಂದರೆ ಅದು ವಡಿವೇಲು ಎಂದು ಅನುಮಾನವಿಲ್ಲದೆ ಹೇಳಬಹದು. ಆದರೆ ಇದೇ ವಡಿವೇಲು ತಮಗಿರುವ ಜನಪ್ರಿಯರೆಯಷ್ಟೇ ವಿವಾದಗಳಿಂದ ಸುದ್ದಿಯಾದವರು. ಸದ್ಯ, ಈ ಖ್ಯಾತ ಹಾಸ್ಯ ನಟನ ಬಗ್ಗೆ ದಶಕಗಳ ಹಿಂದಿನ ನೀಲಿ ಚಿತ್ರ ತಾರೆ ಶಕೀಲ ಮಾತನಾಡಿದ್ದು, ಗಂಭೀರ ಆರೋಪ ಮಾಡಿದ್ದಾರೆ.

ಹಾಸ್ಯ ಪಾತ್ರಗಳಿಂದಲೇ ಜನಮೆಚ್ಚುಗೆ ಗಳಿಸಿದ್ದ ವಡಿವೇಲು ಇತ್ತೀಚೆಗೆ ಬಿಡುಗಡೆಯಾದ ‘ಮಾನ್ನನ್ನ್’ ಸಿನಿಮಾ ಮೂಲಕ ಗಂಭೀರ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ 90ರ ದಶಕದ ಟಾಪ್ ನೀಲಿ ಚಿತ್ರ ತಾರೆ ಶಕೀಲ ತಮ್ಮ ‘ಗಲಾಟಾ ವಾಯ್ಸ್’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ತಮಿಳಿನ ಹಾಸ್ಯ ನಟಿ ಪ್ರೇಮ ಪ್ರಿಯ ಅವರೊಂದಿಗೆ ಮಾತನಾಡುತ್ತಾ ವಡಿವೇಲು ಅವರ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಶಕೀಲ ಅವರೊಂದಿಗೆ ಮಾತನಾಡುತ್ತಾ ನಟಿ ಪ್ರೇಮ ಪ್ರಿಯಾ, ‘ವಡಿವೇಲು ನನ್ನ ಹಲವು ಸಿನಿಮಾ ಅವಕಾಶಗಳನ್ನು ತಪ್ಪಿಸಿದ್ದಾರೆ. ಸಿನಿಮಾ ಸೆಟ್ನಲ್ಲಿ ನನ್ನನ್ನು ಕಂಡರೆ ಸಾಕು ನಿರ್ದೇಶಕರಿಗೆ ಹೇಳಿ ಸೆಟ್ನಿಂದಲೇ ಹೊರಗೆ ಕಳುಹಿಸುತ್ತಿದ್ದರು. ಹಲವು ನಟಿಯರಿಗೆ ವಡಿವೇಲು ಅವರಿಂದ ಇಂತಹ ಅನುಭವಗಳಾಗಿದೆ. ಹಲವು ಅವಕಾಶಗಳನ್ನು ಅವರು ತಪ್ಪಿಸಿದ್ದಾರೆ’ ಎಂದಿದ್ದಾರೆ.
ಇದೇ ವೇಳೆ ನಟಿ ಶಕೀಲ, ‘ನೀವು ಹೆಚ್ಚೇನು ವಡಿವೇಲು ಬಗ್ಗೆ ಹೇಳಬೇಕಾಗಿಲ್ಲ. ವಡಿವೇಲು ಎಂತಹ ಮನುಷ್ಯ, ಸೆಟ್ನಲ್ಲಿ ನಟಿಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದೆಲ್ಲ ಗೊತ್ತು’ ಎಂದಿದ್ದಾರೆ. ಈ ಹೇಳಿಕೆ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ವಡಿವೇಲು ಅವರ ನಡತೆಯ ಬಗ್ಗೆ ಚರ್ಚೆಗಳಾಗುತ್ತಿವೆ.



