ವಿಶ್ವಕಂಡ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಅಗ್ರಸ್ಥಾನಿ. ಡೆಲ್ಲಿ ಡ್ಯಾಷರ್, ರನ್ ಮಷಿನ್, ಕಿಂಗ್ ಕೊಹ್ಲಿ ಎಂದೆಲ್ಲ ಬಿರುದು ಗಳಿಸಿರುವ ಕೊಹ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿ ಯಶಸ್ಸಿನ ತುತ್ತ ತುದಿಯಲ್ಲಿದ್ದಾರೆ.ಇಂತಹಾ ಕೊಹ್ಲಿ ಹಿಂದೊಮ್ಮೆ ಸೌತ್ ಆಫ್ರಿಕಾದಲ್ಲಿ ಕುಖ್ಯಾತರ ಕಳ್ಳರ ಗ್ಯಾಂಗ್ ನಡುವೆ ತಗಲಾಕೊಂಡಿದ್ರು ಅಂದ್ರೆ ನೀವು ನಂಬಲೇ ಬೇಕು. ಈ ವಿಚಾರವನ್ನು ಕೊಹ್ಲಿಯ ಬಹುಕಾಲದ ಗೆಳೆಯ ಇದೀಗ ರಿವೀಲ್ ಮಾಡಿದ್ದಾರೆ.

ಕಿಂಗ್ ಕೊಹ್ಲಿ ಯಾರೆಂದು ಗೊತ್ತಿಲ್ಲದವರು ಜಗತ್ತಿನಲ್ಲಿ ಯಾರು ಇರಲಿಕ್ಕಿಲ್ಲ. ಆದರೆ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಡುವುದಕ್ಕೂ ಮುನ್ನ ಕೊಹ್ಲಿಯ ಹೆಸರು ಅಷ್ಟಾಗಿ ಯಾರಿಗೂ ತಿಳಿದಿರಲಿಲ್ಲ. ಅದೇ ಟೈಮಲ್ಲಿ ಕೊಹ್ಲಿ ಕಳ್ಳರ ಕೈಗೆ ತಗಲಾಕೊಂಡಿದ್ರು. ಅಂಡರ್ 19 ವಿಶ್ವಕಪ್ ಟೂರ್ನಿಗಾಗಿ ಸೌತ್ ಆಫ್ರಿಕಾಕ್ಕೆ ಹೋದಾಗ ಈ ಘಟನೆ ನಡೆದಿತ್ತು. ಕೊಹ್ಲಿಗೆ ಮಟನ್ ರೋಲ್ ಅಂದ್ರೆ ತುಂಬಾ ಇಷ್ಟ.ಹೀಗಾಗಿ ಸೌತ್ ಆಫ್ರಿಕಾ ಟೂರ್ ವೇಳೆ ಮಟನ್ ರೋಲ್ ಹುಡುಕುತ್ತ ಹೊರಟಿದ್ದರು.
ಕೊಹ್ಲಿ ತಮ ಟೀಂ ಮೇಟ್ ಪ್ರದೀಪ್ ಸಂಗ್ವಾನ್ ಜೊತೆ ಮಟನ್ ರೋಲ್ ತಿನ್ನಲು ಹೋಗಿದ್ರು. ಇದೇ ವೇಳೆ ಸೌತ್ ಆಫ್ರಿಕಾದ ಕಳ್ಳರ ಕಾಟದ ಬಗ್ಗೆ ಡ್ರೈವರ್ ಎಚ್ಚರಿಸಿದ್ದರೂ ಕೂಡ, ಕೊಹ್ಲಿ ಅದನ್ನು ಲೆಕ್ಕಿಸದೆ ಹೋಗಿದ್ರು. ಇದೇ ಸಮಯಕ್ಕೆ ಆಫ್ರಿಕಾದ ಕಳ್ಳರ ಗ್ಯಾಂಗ್ ಇವರ ಮೇಲೆ ದಾಳಿ ಮಾಡಿತ್ತು. ಅಷ್ಟಕ್ಕೇ ಸುಮ್ಮನಾಗದ ಕಳ್ಳರು ಇವರ ಹಿಂದೆಯೇ ಅಟ್ಟಿಸಿಕೊಂಡು ಬಂದಿದ್ದರಂತೆ. ಕಳ್ಳರ ಕೈಗೆ ಸಿಕ್ಕಿ, ಅವರಿಂದ ಕೊಹ್ಲಿ ತಪ್ಪಿಸಿಕೊಂಡು ಬಂದ ಕತೆಯನ್ನ ಅವರ ಗೆಳೆಯ ಪ್ರದೀಪ್ ಸಂಗ್ವಾನ್ ಇತ್ತೀಚೆಗಷ್ಟೇ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.