ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತವೆ. ಈ ಮದುವೆ ವಿಡಿಯೋದಲ್ಲಿಯೂ ಸೊಸೆ ಸಾರ್ವಜನಿಕವಾಗಿ ತನ್ನ ಸೋದರ ಮಾವನ ಜೊತೆ ಈ ರೀತಿ ನಡೆದುಕೊಂಡಿರುವುದು ಅತಿಥಿಗಳೂ ಬೆಚ್ಚಿ ಬೀಳುವಂತೆ ಮಾಡಿರುವುದನ್ನು ಕಾಣಬಹುದು.
ಸೋದರ ಮಾವ ಮತ್ತು ಸೊಸೆಯ ನಡುವಿನ ಸಂಬಂಧ ಹೇಗಿರುತ್ತದೆ ಎಂದು ನಿಮಗೆಲ್ಲಾ ಗೊತ್ತೇ ಇರುತ್ತದೆ. ಹೆಚ್ಚೇನು ವಿವರಿಸಬೇಕಿಲ್ಲ. ಅವರ ಮಧ್ಯೆ ವಿನೋದ ಮತ್ತು ತಮಾಷೆ ಯಾವಾಗಲೂ ನಡೆಯುತ್ತದೆ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಸೋದರ ಮಾವ ಮತ್ತು ಸೊಸೆಯ ವಿಡಿಯೋ ನೋಡಿದ ನಂತರ, ಬಹುಶಃ ಸೊಸೆ ತನ್ನ ಸೋದರಮಾವನ ಜೊತೆ ಇಷ್ಟೆಲ್ಲಾ ಅನೋನ್ಯವಾಗಿರದನ್ನ ನಾವು ನೋಡುತ್ತಿರುವುದು ಇದೇ ಮೊದಲು ಎಂದು ಹೇಳುತ್ತೀರಿ. ಅಸಲಿಗೆ ಇಲ್ಲಿ ನಡೆದಿರುವುದಿಷ್ಟೇ…ತನ್ನ ಅಕ್ಕನ ಮದುವೆಯಲ್ಲಿ ಸೊಸೆ ಸೋದರಮಾವನಿಗೆ ಬಲವಂತವಾಗಿ ಮುತ್ತು ಕೊಟ್ಟಿದ್ದಾಳೆ. ಅದೂ ಎಲ್ಲಾ ಸಂಬಂಧಿಕರು ಮತ್ತು ಅತಿಥಿಗಳ ಮುಂದೆ. ಅಷ್ಟೇ ಅಲ್ಲ ಆ ಸಮಯದಲ್ಲಿ ವಧು ಕೂಡ ಅಲ್ಲಿಯೇ ಇದ್ದಳು.
ಸೋದರ ಮಾವನಿಗೆ ಮುತ್ತು
ಮದುವೆಯ ಸಂದರ್ಭದಲ್ಲಿ ವಧು-ವರರು ವೇದಿಕೆಯ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು . ಈ ಮಧ್ಯೆ, ಅತಿಥಿಗಳು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಒಬ್ಬೊಬ್ಬರಾಗಿ ಬರುತ್ತಾರೆ. ಸೊಸೆಯ ಸರದಿ ಬಂದಾಗ ಆಕೆ ವೇದಿಕೆಯ ಮೇಲೆ ಹೋಗಿ ತನ್ನ ಸೋದರಮಾವನ ಬಳಿ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾಳೆ. ಫೋಟೋ ತೆಗೆಯುತ್ತಿರುವಾಗ ಸೊಸೆ ತನ್ನ ಸೋದರ ಮಾವನನ್ನು ಹಿಡಿದು ಬಲವಂತವಾಗಿ ಚುಂಬಿಸುತ್ತಾಳೆ. ಸೋದರ ಮಾವ ಅವಳನ್ನು ತಡೆಯಲು ಶತಪ್ರಯತ್ನ ಮಾಡಿದರೂ ಸೊಸೆ ಒಪ್ಪದೆ ಎಲ್ಲರ ಮುಂದೆ ಕೆನ್ನೆಗೆ ಮುತ್ತಿಡುತ್ತಾಳೆ.
ಸೊಸೆಯ ನಡೆ ನೋಡಿ ಅಚ್ಚರಿಗೊಂಡ ಅತಿಥಿಗಳು
ಸೊಸೆಯ ಈ ಕಾರ್ಯವನ್ನು ಕಂಡು ವಧು-ವರರ ಜೊತೆಗೆ ಅಲ್ಲಿದ್ದ ಅತಿಥಿಗಳೆಲ್ಲರ ಕಣ್ಣುಗಳು ಅರಳಿದವು. ಪಾಪ ವಧು ತನ್ನ ಸಹೋದರಿಯ ಈ ಕಾರ್ಯಕ್ಕೆ ಏನು ಹೇಳಬೇಕೋ ಗೊತ್ತಾಗದೆ ಪೆಚ್ಚಾಗಿದ್ದಾಳೆ. ಸೊಸೆಯ ಈ ನಡೆಗೆ ಮದುವೆಗೆ ಬಂದ ಅತಿಥಿಗಳು ಫುಲ್ ಶಾಕ್ ಆಗಿದ್ದಾರೆ. ಈ ಘಟನೆಯನ್ನು ನೋಡಿ ಎಲ್ಲರಿಗೂ ತುಸು ಶಾಕ್ ಆಗಿದೆ. ಈ ವೈರಲ್ ವಿಡಿಯೋವನ್ನು Instagram ನಲ್ಲಿ @butterfly__mahi ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಲಕ್ಷಾಂತರ ಜನರು ಇದನ್ನು ನೋಡಿದ್ದಾರೆ ಮತ್ತು ಸಾವಿರಾರು ಜನರು ಲೈಕ್ ಮಾಡಿದ್ದಾರೆ. ಅಲ್ಲದೇ ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ತಮ್ಮದೇ ಆದ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.