ಈ ವರ್ಷದ ಕಳೆದ ಆರೇಳು ತಿಂಗಳ ಸಮಯದಿಂದ ನಟ ದರ್ಶನ್ ಮತ್ತು ಅವರ ಕುಟುಂಬ ಎಷ್ಟೆಲ್ಲಾ ತೊಂದರೆಗಳು ಕಷ್ಟಗಳನ್ನು ಅನುಭವಿಸಿದೆ ಎನ್ನುವ ವಿಷಯ ಗೊತ್ತೇ ಇದೆ. ಇಲ್ಲಿ ಏನಾಯಿತು ಅನ್ನೋದು ಅವರಿಗೆ ಮಾತ್ರ ಗೊತ್ತಿರುತ್ತದೆ. ಗೊತ್ತಿದ್ದು ನಡೆಯಿತೋ, ಗೊತ್ತಿಲ್ಲದೇ ನಡೆಯಿತೋ ಯಾವುದು ಅರ್ಥ ಆಗುವುದಕ್ಕಿಂತ ಮೊದಲೇ ದರ್ಶನ್ ಅವರು ಜೈಲು ಸೇರಿದ್ದರು. ಆರು ತಿಂಗಳುಗಳ ಕಾಲ ಎರಡು ಜೈಲುಗಳಲ್ಲಿ ಬಳಲಿ ಬೆಂಡಾಗಿ ಹೋಗಿದ್ದಾರೆ ನಟ ದರ್ಶನ್. ಈಗ ಅವರು ಹೊರಗಡೆ ಬಂದಿರಬಹುದು, ಆದರೆ ಕೇಸ್ ಇನ್ನು ಮುಗಿದಿಲ್ಲ. ವಿಚಾರಣೆ ಇದ್ದಾಗ ಹೋಗಬೇಕಾಗುತ್ತದೆ. ಪರ್ಮಿಶನ್ ಇಲ್ಲದೆಯೇ ಎಲ್ಲೂ ಹೋಗಲು ಸಾಧ್ಯವಿಲ್ಲ.

ದರ್ಶನ್ ಅವರ ಆರೋಗ್ಯದಲ್ಲಿ ಕೂಡ ಸಮಸ್ಯೆ ಉಂಟಾಗಿದೆ. ಆದರೆ ಆಸ್ಪತ್ರೆಗೆ ಹೋಗಬಹುದು, ಮನೆಯಲ್ಲಿ ಇರಬಹುದು ಎನ್ನುವುದೊಂದೆ ಸಮಾಧಾನ ಮಾಡಿಕೊಳ್ಳಬಹುದಾದ ವಿಷಯ. ಈ ಆರೇಳು ತಿಂಗಳ ಸಮಯದಲ್ಲಿ ದರ್ಶನ್ ಅವರ ಜೊತೆಗೆ ಸ್ಥಿರವಾಗಿ ನಿಂತು ಅವರನ್ನು ಹೊರಗಡೆ ಕರೆದುಕೊಂಡು ಬರುವವರೆಗೂ ಛಲ ಬಿಡದೇ ಇದ್ದಿದ್ದು, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು. ಮತ್ತು ದರ್ಶನ್ ಅವರ ಕುಟುಂಬ, ಅವರ ತಮ್ಮ, ತಾಯಿ ಮತ್ತು ಮಗ. ವಿಜಯಲಕ್ಷ್ಮಿ ಅವರ ಸಪೋರ್ಟ್ ಮತ್ತು ಅವರ ಧೈರ್ಯವನ್ನು ಇಲ್ಲಿ ನಾವು ಮೆಚ್ಚಿಕೊಳ್ಳಲೇಬೇಕು. ಇನ್ನು ವಿಜಯಲಕ್ಷ್ಮಿ ಅವರು ಈ ವೇಳೆ ಎಲ್ಲವನ್ನು ಹೇಗೆ ಹ್ಯಾಂಡಲ್ ಮಡಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಬಗ್ಗೆ ದರ್ಶನ್ ಅವರ ತಮ್ಮ ದಿನಕರ್ ಮಾತನಾಡಿದ್ದಾರೆ. ದಿನಕರ್ ತೂಗುದೀಪ್ ಅವರು ನಿರ್ದೇಶನ ಮಾಡಿರುವ ರಾಯಲ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಪ್ರೆಸ್ ಮೀಟ್ ವೇಳೆ ದಿನಕರ್ ಅವರು ವಿಜಯಲಕ್ಷ್ಮೀ ಅವರ ಬಗ್ಗೆ ಮಾತನಾಡಿದ್ದು, ಅತ್ತಿಗೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ದಿನಕರ್ ಅವರು ಹೇಳುವ ಪ್ರಕಾರ, ವಿಜಯಲಕ್ಷ್ಮಿ ಅವರು ತುಂಬಾ ಧೈರ್ಯವಾಗಿ ಕಾಂಫಿಡೆಂಟ್ ಆಗಿ ಇದ್ದಾರಂತೆ. ದಿನಕರ್ ಅವರಿಗೆ ಏನು ಈ ಥರ ಆಗೋಯ್ತಲ್ಲ ಅಂತ ಟೆನ್ಷನ್ ಆಗುತ್ತಿತ್ತಂತೆ, ಆಗೆಲ್ಲಾ ವಿಜಯಲಕ್ಷ್ಮೀ ಅವರೇ ಸಮಾಧಾನ ಮಾಡಿ, ಟೆನ್ಷನ್ ಮಾಡ್ಕೋಬೇಡ ದಿನು. ನಾನಿದ್ದೀನಲ್ಲಾ ನಾನು ಎಲ್ಲವನ್ನ ನೋಡಿಕೊಳ್ತೀನಿ, ನಿಮ್ಮ ಅಣ್ಣನ್ನ ಹೊರಗಡೆ ಕರ್ಕೊಂಡು ಬರ್ತೀನಿ ಅಂದಿದ್ದರಂತೆ.

ಎಲ್ಲವನ್ನು ಧೈರ್ಯವಾಗಿ ಹ್ಯಾಂಡಲ್ ಮಾಡುತ್ತಿದ್ದರಂತೆ. ದಿನಕರ್ ಅವರು ಕುಗ್ಗಿ ಹೋದಾಗ ವಿಜಯಲಕ್ಷ್ಮೀ ಅವರೇ ಧೈರ್ಯ ತುಂಬುತ್ತಿದ್ದರಂತೆ. ದರ್ಶನ್ ಅವರ ಮಗ ವಿನಿಷ್ ಕೂಡ ಅಪ್ಪ ಸೂಪರ್ ಮ್ಯಾನ್ ಇದ್ದ ಹಾಗೆ ಅವರಿಗೆ ಏನು ಆಗಲ್ಲ, ಸತ್ಯ ಒಂದು ದಿನ ಹೊರಗೆ ಬಂದೇ ಬರುತ್ತೆ, ಅಪ್ಪ ಕೂಡ ಹೊರಗೆ ಬರ್ತಾರೆ ಎಂದು ಧೈರ್ಯವಾಗಿ ಇದ್ದನಂತೆ. ದರ್ಶನ್ ಅವರ ತಾಯಿ ಮೀನಾ ಅವರು, ವಿಜಿ ಅಂಥ ಸೊಸೆ ಪಡೆಯೋಕೆ ನಾನು ಪುಣ್ಯ ಮಾಡಿದ್ದೇ, ವಿಜಿ ಎಲ್ಲವನ್ನ ನೋಡಿಕೊಳ್ತಾಳೆ, ನಾವು ಭಯ ಪಡೋದು ಬೇಡ ಎಂದು ದಿನಕರ್ ಅವರ ಜೊತೆ ಹೇಳಿದರಂತೆ. ಒಬ್ಬ ಅತ್ತೆ ಸೊಸೆಗೆ ಈ ಥರ ಹೇಳೋದು ಸಾಮಾನ್ಯ ವಿಷಯ ಅಲ್ಲ. ಮೀನಾ ಅವರು ಈ ರೀತಿ ಹೇಳಿದ್ದಾರೆ ಅಂದ್ರೆ, ವಿಜಯಲಕ್ಷ್ಮೀ ಅವರ ಪ್ರಯತ್ನ, ಶ್ರಮ ಹೇಗಿತ್ತು ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು.
ಈ ವಿಚಾರಗಳನ್ನು ಹಂಚಿಕೊಂಡ ದಿನಕರ್ ಅವರು ವಿಜಯಲಕ್ಷ್ಮೀ ಅವರು ಎಷ್ಟು ಧೈರ್ಯವಾಗಿ ಎಲ್ಲವನ್ನು ಎದುರಿಸಿದ್ದಾರೆ ಅನ್ನೋದನ್ನ ತಿಳಿಸಿದ್ದಾರೆ. ಇನ್ನು ಹೊರಗಿನ ಜನ ಮತ್ತು ಅಭಿಮಾನಿಗಳು ಕೂಡ ವಿಜಯಲಕ್ಷ್ಮಿ ಅವರು ಗಂಡನಿಗಾಗಿ ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಎಂದು ವಿಜಯಲಕ್ಷ್ಮೀ ಅವರನ್ನು ಹೊಗಳುತ್ತಿದ್ದಾರೆ. ನಿಜಕ್ಕೂ ಅವರ ಹೇಗೆ ಎಲ್ಲವನ್ನು ಹ್ಯಾಂಡಲ್ ಮಾಡಿ, ದರ್ಶನ್ ಅವರನ್ನ ಹೊರಗಡೆ ಕರ್ಕೊಂಡು ಬಂದಿದ್ದಾರೆ ಅನ್ನೋದನ್ನ ಮೆಚ್ಚಲೇಬೇಕು. ಕುಟುಂಬದ ಜೊತೆಗೆ ಒಬ್ಬ ಹೆಣ್ಣು ಹೇಗೆ ನಿಲ್ಲುತ್ತಾಳೆ, ತನ್ನ ಕುಟುಂಬವನ್ನ ಕಾಪಾಡಿಕೊಳ್ಳಲು ಏನೆಲ್ಲಾ ಮಾಡುತ್ತಾಳೆ ಅನ್ನೋದನ್ನ ವಿಜಯಲಕ್ಷ್ಮಿ ಅವರಿಂದ ಎಲ್ಲರೂ ಕಲಿತುಕೊಳ್ಳಬೇಕು.