ನಟ ವಿಜಯ್ ಅವರು ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ಎಂದೇ ಗುರುತಿಸಿಕೊಂಡಿದ್ದಾರೆ. ಭರ್ಜರಿ ಹಿಟ್ ಸಿನಿಮಾ ನಿನಗಾಗಿ ಮೂಲಕ ಇವರು ಹೀರೋ ಆಗಿ ಎಂಟ್ರಿ ಕೊಟ್ಟರು. ಆದರೆ ಅದಕ್ಕಿಂತ ಮೊದಲೇ ಅದ್ಭುತವಾದ ಸಿನಿಮಾಗಳಲ್ಲಿ ಬಾಲನಟನಾಗಿ ಗುರುತಿಸಿಕೊಂಡಿದ್ದವರು. ಹೀರೋ ಆದಮೇಲೆ ಕಮರ್ಶಿಯಲ್ ಆಗಿ ಯಶಸ್ಸು ಸಿಗಲಿಲ್ಲ ಎಂದರೂ ಇವರು ಆಯ್ಕೆ ಮಾಡಿಕೊಳ್ಳುವ ಸಿನಿಮಾದ ಕಥೆ ಅದ್ಭುತವಾಗಿ ಇರುತ್ತದೆ ಎಂದರೆ ತಪ್ಪಲ್ಲ. ಭಾವನಾತ್ಮಕ, ಕ್ರೈಮ್ ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಗಳ ಸಿನಿಮಾಗಳಲ್ಲಿ ಕೂಡ ಅಭಿನಯಿಸಿ, ಒಳ್ಳೆಯ ಕಾಂಟೆಂಟ್ ಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಿರುವ ಅಪರೂಪದ ನಟರಲ್ಲಿ ವಿಜಯ್ ರಾಘವೇಂದ್ರ ಅವರು ಕೂಡ ಒಬ್ಬರು.
ವಿಜಯ್ ರಾಘವೇಂದ್ರ ಅವರು ಸಿನಿಮಾ ಮತ್ತು ನಟನೆ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ ಪಾಡ್ ಕಾಸ್ಟ್ ಶೋ ಒಂದನ್ನು ಸಹ ಶುರು ಮಾಡಿದ್ದಾರೆ. ತಮ್ಮ ಪತ್ನಿಯ ನೆನಪುಗಳನ್ನು ಹಂಚಿಕೊಂಡ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ವಿಜಯ್ ರಾಘವೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಸ್ಪಂದನಾ ಅವರ ಬಗ್ಗೆ ಬರೆಯುವ ಬರಹಗಳು ಎಲ್ಲರ ಮನಮುಟ್ಟುವಂಥದ್ದು. ಇವರ ಬರಹಗಳು ಮನಸ್ಸಿನಾಳದ ಭಾವನೆಗಳನ್ನು ಓದುಗರಿಗೆ ಅರ್ಥ ಮಾಡಿಸುತ್ತದೆ. ಹಾಗೆಯೇ ಆ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದೇ ರೀತಿ ಇದೀಗ ಮತ್ತೊಂದು ಪೋಸ್ಟ್ ಕೂಡ ವೈರಲ್ ಆಗಿದೆ.
ಎರಡು ವರ್ಷಗಳ ಹಿಂದೆ ಜೊತೆಯಲ್ಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆ ಹೋದಾಗ ದಾಕಿದ್ದ ಶರ್ಟನ್ನೇ ನನಗರಿಯದೆಯೇ ಈ ದಿನವೂ ಕೊಲ್ಲೂರು ಅಮ್ಮನ ದರ್ಶನ ಪಡೆಯಲು ಹೋದಾಗ ಹಾಕಿದ್ದೆ…I LOVE YOU ಚಿನ್ನ..” ಎಂದು ನಟ ವಿಜಯ್ ರಾಘವೇಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ವಿಜಯ್ ರಾಘವೇಂದ್ರ ಅವರಿಗೆ ಹೆಂಡತಿಯ ಮೇಲಿರುವ ಪ್ರೀತಿಯನ್ನು ಕಂಡು, ಬೆರಗಾಗಿದ್ದಾರೆ. ನಿಜವಾದ ಪ್ರೀತಿ ಇದ್ದಾಗ ಮಾತ್ರ ಇದೆಲ್ಲವೂ ನಡೆಯೋಕೆ ಸಾಧ್ಯ, ಸ್ಪಂದನಾ ಮೇಡಂ ಯಾವಾಗಲೂ ನಿಮ್ಮ ಜೊತೆಗೆ ಇದ್ದಾರೆ ಇರುತ್ತಾರೆ ಎಂದು ಅಭಿಮಾನಿಗಳು ವಿಜಯ್ ರಾಘವೇಂದ್ರ ಅವರಿಗೆ ಹುಮ್ಮಸ್ಸು ತುಂಬುತ್ತಿದ್ದಾರೆ.
ಇನ್ನು ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಜೋಡಿಯ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಖ್ಯಾತ ಪೊಲೀಸ್ ಆಫೀಸರ್ ಮಗಳಾದ ಸ್ಪಂದನಾ ಅವರು ವಿಜಯ್ ರಾಘವೇಂದ್ರ ಅವರೊಡನೆ ಮದುವೆಯಾದ ನಂತರ, ಇವರಿಬ್ಬರ ಜೋಡಿಯನ್ನು ಇಷ್ಟಪಡದೇ ಇರುವವರು ಇರೋದಕ್ಕೆ ಸಾಧ್ಯವಿಲ್ಲ ಎಂದು ಅನ್ನಿಸಿದ್ದೆ ಹೆಚ್ಚು. ಯಾಕೆಂದರೆ ಈ ಜೋಡಿಯ ನಡುವೆ ಇದ್ದ ಅನ್ಯೋನ್ಯತೆ, ಪ್ರೀತಿ ಎಲ್ಲವೂ ಆ ಹಂತದಲ್ಲಿತ್ತು, ವಿಜಯ್ ರಾಘವೇಂದ್ರ ಅವರಿಗೆ ಹೆಂಡತಿಯನ್ನು ಕಂಡರೆ ಅಷ್ಟು ಪ್ರೀತಿ. ಅವರ ಪ್ರತಿಯೊಂದು ಪೋಸ್ಟ್ ನಲ್ಲಿ ಕೂಡ ಆ ಪ್ರೀಯಿ ಎದ್ದು ಕಾಣುತ್ತದೆ. ಈ ಜೋಡಿಗೆ ಒಬ್ಬ ಮಗ ಇದ್ದಾನೆ. ಇವರ ಮಗನ ಹೆಸರು ಶೌರ್ಯ. ಶೌರ್ಯನಿಗೆ ಈಗ 14 ವರ್ಷ. ಇಷ್ಟು ಸುಂದರವಾದ ಕುಟುಂಬದ ಮೇಲೆ ಯಾರ ದೃಷ್ಟಿ ಬಿದ್ದಿತೋ..
ಸ್ಪಂದನಾ ಅವರು ಬ್ಯಾಂಕಾಕ್ ಗೆ ಪ್ರವಾಸಕ್ಕಾಗಿ ಹೋಗಿದ್ದಾಗ ಅಲ್ಲಿಯೇ ವಿಧಿವಶರಾದರು. ಅಷ್ಟು ಚಿಕ್ಕ ವಯಸ್ಸಿಗೆ ಸ್ಪಂದನಾ ಅವರು ವಿಧಿವಶರಾಗಿದ್ದು, ನಿಜಕ್ಕೂ ಎಲ್ಲರಿಗೂ ಆಶ್ಚರ್ಯ ತಂದುಕೊಟ್ಟ ಸಂಗತಿ ಆಗಿತ್ತು. ಇನ್ನು ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯನ್ನು ಪ್ರತಿ ಕ್ಷಣ ನೆನಪಿಸಿಕೊಳ್ಳುವುದು ಮತ್ತು ಆ ನೆನಪಿನ ಬಗ್ಗೆ ಎಲ್ಲರ ಜೊತೆಗೂ ಹಂಚಿಕೊಳ್ಳುವುದನ್ನು ನೋಡಿದರೆ, ಇಂಥ ಗಂಡ ಎಲ್ಲಾ ಹೆಣ್ಣುಮಕ್ಕಳಿಗೂ ಸಿಗಬೇಕು ಹಾಗೆಯೇ ಸ್ಪಂದನಾ ಅವರಂಥ ಹೆಂಡತಿ ಎಲ್ಲಾ ಗಂಡು ಮಕ್ಕಳಿಗೂ ಸಿಗಬೇಕು ಎಂದು ಅನ್ನಿಸದೆ ಇರದು. ಇದ್ದಾಗ ಎಲ್ಲರೂ ಪ್ರೀತಿ ತೋರಿಸುತ್ತಾರೆ, ಆದರೆ ಒಬ್ಬ ವ್ಯಕ್ತಿ ಇಲ್ಲದೇ ಇದ್ದಾಗ ಅವರ ಬಗ್ಗೆ ಪ್ರೀತಿ ಉಳಿಸಿಕೊಂಡು ಹೋಗುವುದೇ ನಿಜವಾದ ಪ್ರೀತಿ.



