ಇಂದು ಚೈತ್ರಾ ಅವರು ತಾವು ಬಹಳ ವರ್ಷಗಳ ಕಾಲ ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯಷ್ಟೇ ಮೆಹೆಂದಿ ಶಾಸ್ತ್ರದ ಫೋಟೋಸ್ ಮತ್ತು ವಿಡಿಯೋಗಳು ವೈರಲ್ ಆಗಿದ್ದವು, ಇದೀಗ ಇವರಿಬ್ಬರ ಮದುವೆ ನಡೆದಿದ್ದು, ಮದುವೆಯ ವಿಡಿಯೋ ಸಹ ವೈರಲ್ ಆಗಿದೆ. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂದ್ರೆ ನಂಬೋದಕ್ಕೆ ಕಷ್ಟ. ಚೈತ್ರಾ ಅವರೇ ಹೇಳಿರುವ ಹಾಗೆ, 12 ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಇವರಿಬ್ಬರ ಪ್ರೀತಿ ಶುರುವಾಗಿತ್ತು. ಚೈತ್ರಾ ಅವರನ್ನು ಕಂಡರೆ ಕೋಪ ಮಾಡಿಕೊಳ್ಳುತ್ತಿದ್ದ ಇರಿಟೇಟ್ ಆಗುತ್ತಿದ್ದ ಹುಡುಗನಿಗೆ ಕೊನೆಗೆ ಆಕೆಯ ಮೇಲೆಯೇ ಪ್ರೀತಿ ಶುರುವಾಯಿತು. ಕಾಲೇಜ್ ಕ್ಯಾಂಟೀನ್ ನಲ್ಲಿ ಚೈತ್ರಾ ಅವರನ್ನು ಬೈಕೊಂಡು ಓಡಾಡುತ್ತಿದ್ದರಂತೆ, ಅವರನ್ನು ಕಂಡರೆ ನನಗೆ ಆಗೋದಿಲ್ಲ ಎಂದು ಹೇಳುತ್ತಿದ್ದರಂತೆ ಆ ಹುಡುಗ..
ನಂತರ ಅದು ಪ್ರೀತಿಯಾಗಿ ಬದಲಾಗಿದೆ. ಇಷ್ಟು ವರ್ಷಗಳ ಕಾಲ ಈ ಜೋಡಿ ಪ್ರೀತಿಸಿದ್ದು, ಇವರಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿಕೊಂಡಿದ್ದು, ಮದುವೆ ಆಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇವರಿಬ್ಬರ ಮದುವೆ ಇಂದು ನಡೆದಿದ್ದು, ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಚೈತ್ರಾ ಅವರ ಮದುವೆ ನಡೆದಿದೆ. ಇನ್ನು ಚೈತ್ರಾ ಅವರು ಮದುವೆ ಆಗಿರುವ ಹುಡುಗನ ಬಗ್ಗೆ ಹೆಚ್ಚು ಡೀಟೇಲ್ಸ್ ಇದುವರೆಗೂ ಸಿಕ್ಕಿರಲಿಲ್ಲ, ಇದೀಗ ಇವರು ಪತಿಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಇವರ ಹೆಸರು ಶ್ರೀಕಾಂತ್ ಕಶ್ಯಪ್. ಇವರು ಉಡುಪಿ ಜಿಲ್ಲೆಯ ಹಿರಿಯಡ್ಕ ಎನ್ನುವ ಊರಿನವರು. ಶ್ರೀಕಾಂತ್ ಅವರು ಅನಿಮೇಷನ್ ಓದಿದ್ದಾರೆ. ಆದರೆ ಇವರಿಗೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದ್ದು, ಅದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ..
12 ವರ್ಷಗಳ ಕಾಲ ಚೈತ್ರಾ ಅವರನ್ನು ಲವ್ ಮಾಡಿ ಈಗ ಮದುವೆಯಾಗಿದ್ದಾರೆ. ಕೊನೆಗೂ ಚೈತ್ರಾ ಅವರು ಜೀವನದಲ್ಲಿ ದೊಡ್ಡ ಹಂತವನ್ನು ತಲುಪಿದ್ದು, ಮುಂದಿನ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ. ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮದುವೆಗಿಂತ ಮೊದಲೇ ಶ್ರೀಕಾಂತ್ ಕಶ್ಯಪ್ ಅವರನ್ನು ಭೇಟಿಯಾಗಿದ್ದರು, ಹುಡುಗ ತುಂಬಾ ಸಾಫ್ಟ್ ಚೈತ್ರಾ ಅವರ ಹಾಗೆ ಮಾತನಾಡೋದಿಲ್ಲ ಎಂದು ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್ ತಿಳಿಸಿದ್ದರು. ಚೈತ್ರಾ ಅವರು ಲವ್ ಮಾಡಿ ಮದುವೆ ಆಗುತ್ತಿದ್ದಾರೆ ಎನ್ನುವುದು ಹಲವರಿಗೆ ಅರಗಿಸಿಕೊಳ್ಳಲು ಸಾಧ್ಯ ಆಗದ ವಿಷಯ ಆಗಿದ್ದು, ಮದುವೆ ಅಂತೂ ಇಂದು ನಡೆದಿದೆ.
ಇವರ ಮದುವೆಯಲ್ಲಿ ನಡೆದ ಒಂದು ವಿಶೇಷತೆ ಏನು ಎಂದರೆ ಬಿಗ್ ಬಾಸ್ ನಲ್ಲಿ ಚೈತ್ರಾ ಜೊತೆ ಟಾಮ್ ಅಂಡ್ ಜೆರ್ರಿ ರೀತಿ ಸದಾ ಫೈಟ್ ಮಾಡುತ್ತಿದ್ದ, ಕಾಲೆಳೆದು ಜಗಳ ಆಡುತ್ತಿದ್ದ ರಜತ್ ಬುಜ್ಜಿ ಅಣ್ಣನ ಸ್ಥಾನದಲ್ಲಿ ನಿಂತು ಕಾರ್ಯಗಳನ್ನು ನಡೆಸಿಕೊಟ್ಟಿದ್ದಾರೆ. ಹೌದು, ಬಾಗ್ ಬಾಸ್ ನಲ್ಲಿ ಶುರುವಾದ ಇವರ ಬಾಂಧವ್ಯ, ಬಿಗ್ ಬಾಸ್ ಮನೆಯ ಒಳಗೆ ಮತ್ತು ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಈ ಎರಡರಲ್ಲಿ ಸಹ ರಜತ್ ಮತ್ತು ಚೈತ್ರಾ ಫ್ರೆಂಡ್ಶಿಪ್ ಜಗಳದಲ್ಲೇ ಇತ್ತು. ಆದರೆ ಇಂದು ಮದುವೆಯಲ್ಲಿ ಚೈತ್ರಾ ಅಣ್ಣನ ಸ್ಥಾನದಲ್ಲಿ ರಜತ್ ನಿಂತಿದ್ದು ಬಹಳ ಸಂತೋಷದ ವಿಚಾರ. ತೆರೆಮೇಲೆ ಜಗಳ ಆಡುತ್ತಾರೆ, ಆದರೆ ತೆರೆಯ ಹಿಂದೆ ಅಣ್ಣ ತಂಗಿಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹೀಗೆ ಇರಬೇಕು ಅಲ್ಲವಾ ಸ್ನೇಹ ಮತ್ತು ಬಾಂಧವ್ಯ. ಇನ್ನು ಇದರಲ್ಲಿ ಇನ್ನಷ್ಟು ವಿಶೇಷತೆ ಸಹ ಇದೆ.
ರಜತ್ ಅವರು ಚೈತ್ರಾ ಕುಂದಾಪುರ ಅವರ ಮದುವೆ ಬಗ್ಗೆ ಮಾತನಾಡಿದ್ದು, ತಾವು ಯಾರಿಗೂ ಹೋಗೆ, ಬಾರೆ ಎಂದು ಮಾತನಾಡಿಸಿದ್ದೆ ಇಲ್ಲ, ಚೈತ್ರಾ ಕುಂದಾಪುರ ಜೊತೆ ಮಾತ್ರ ಆ ರೀತಿ ಮಾತನಾಡುತ್ತಾ ಇದ್ದಿದ್ದು, ಅವರೇ ಕರೆ ಮಾಡಿ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ನಡೆಸಿಕೊಡಬೇಕು ಎಂದು ಹೇಳಿದರಂತೆ. ಅದೇ ರೀತಿ ರಜತ್ ಅವರು ಬಂದು ಚೈತ್ರಾ ಮದುವೆಯನ್ನು ನಡೆಸಿಕೊಟ್ಟಿದ್ದಾರೆ. ಚೈತ್ರಾ ಅವರು ರಜತ್ ಕಾಲಿಗೆ ಬಿದ್ದು ಆಶೀರ್ವಾದವನ್ನು ಸಹ ಪಡೆದಿದ್ದಾರೆ. ಈ ಬಗ್ಗೆ ಮಾಧ್ಯಮದಲ್ಲಿ ಮಾತನಾಡಿರುವ ರಜತ್ ಅವರು ಫೈರ್ ಬ್ರ್ಯಾಂಡ್ ಕಾಲಿಗೆ ಬಿದ್ದಿದ್ದು ಮಜಾ ಇತ್ತು ಎಂದು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಇಂದು ಚೈತ್ರಾ ಅವರ ಮದುವೆ ಬಹಳ ಚೆನ್ನಾಗಿ ನಡೆದಿದೆ.
ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ಚೈತ್ರಾ ಕುಂದಾಪುರ ಅವರು ಹೆಚ್ಚಾಗಿ ಮಾತಿನ ಕಾರಣಕ್ಕೆ ಸುದ್ದಿಯಾಗಿದ್ದರು, ಒಂದಲ್ಲ ಒಂದು ವಿಷಯಕ್ಕೆ ಜೋರಾಗಿ ಮಾತನಾಡುವುದು, ಎಲ್ಲರ್ಸ್ ಜೊತೆಗೂ ಜಗಳ ಆಡುವುದು ಇದನ್ನೇ ಹೆಚ್ಚಾಗಿ ಮಾಡುತ್ತಿದ್ದರು ಚೈತ್ರಾ. ಈ ಕಾರಣಕ್ಕೆ ಸುದೀಪ್ ಅವರಿಂದ ಕೂಡ ಹಲವು ಸಾರಿ ಕ್ಲಾಸ್ ಕೇಳಿದ್ದಾರೆ. ಮನೆಯಲ್ಲಿ ಎಲ್ಲರೂ ಹಲವು ಸಾರಿ ಚೈತ್ರಾ ಸುಳ್ಳನ್ನೇ ಹೇಳುತ್ತಾರೆ ಎಂದಿದ್ದರು. ಬಿಗ್ ಬಾಸ್ ಮನೆಯ ಜರ್ನಿ ಅನ್ನೋದು ಕೆಲವು ದಿನಗಳ ಆಟ ಮಾತ್ರ.. ಇನ್ನು ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಸಹ ಅದೇ ರೀತಿ ಫೈರ್ ಬ್ರ್ಯಾಂಡ್ ತರವೇ ಇದ್ದರು. ಈಗ ಮದುವೆಯಾಗಿ ಹೊಸ ಜೀವನ ಶುರು ಮಾಡುತ್ತಿದ್ದಾರೆ. ಚೈತ್ರಾ ಅವರ ಹೊಸ ಜೀವನಕ್ಕೆ ಒಳ್ಳೆಯದಾಗಲಿ ಎಂದು ನಾವು ಸಹ ಹಾರೈಸೋಣ.



