ಇದು ಸೋಷಿಯಲ್ ಮೀಡಿಯಾ ಯುಗ, ಈಗ ಜನರಿಗೆ ಒಬ್ಬ ಸೆಲೆಬ್ರಿಟಿ ಜೊತೆಗೆ ಕನೆಕ್ಟ್ ಆಗುವುದು ಬಹಳ ಸುಲಭ. ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಕೂಡ ಸೋಷಿಯಲ್ ಮೀಡಿಯಾ ಅಕೌಂಟ್ ಹೊಂದಿದ್ದಾರೆ. ಅವರು ಹಾಕುವ ಪೋಸ್ಟ್ ಗಳಿಗೆ ಅಭಿಮಾನಿಗಳು ಫ್ಯಾನ್ಸ್ ಗಳು ಕಾಮೆಂಟ್ಸ್ ಬರೆಯುತ್ತಾರೆ. ಅದಕ್ಕೆ ಸೆಲೆಬ್ರಿಟಿಗಳು ಕೂಡ ರಿಪ್ಲೈ ಮಾಡುವುದು ಇದೆ. ಆದರೆ ಎಲ್ಲಾ ಜನರು ಪಾಸಿಟಿವ್ ಆಗಿ ಕಾಮೆಂಟ್ಸ್ ಗಳನ್ನು ಬರೆಯುತ್ತಾರೆ. ಹಲವು ಸಾರಿ ಸೆಲೆಬ್ರಿಟಿಗಳು ಸಹ ಇದಕ್ಕೆ ರಿಯಾಕ್ಟ್ ಮಾಡದೇ ಇದ್ದುಬಿಡುತ್ತಾರೆ. ಆದರೆ ಒಂದು ಕ್ಯೂಟ್ ಆದ ಕಾಮೆಂಟ್ ಗೆ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ತಮಗೆ ರೀಲ್ಸ್ ಶೇರ್ ಮಾಡಿರುವ ಒಬ್ಬರು ಆಂಟಿಗೆ ರಿಪ್ಲೈ ಮಾಡಿದ್ದಾರೆ, ಈ ರಿಪ್ಲೈ ಈಗ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆ ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆಯುತ್ತಿದೆ.
ನಟ ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಸ್ಟಾರ್ ಹೀರೋ, ಇವರ ಸಿನಿಮಾಗಳು ಜನರಿಗೆ ತುಂಬಾ ಇಷ್ಟ. ಪೆಲ್ಲಿ ಚೂಪುಲು, ಎವಡೇ ಸುಬ್ರಹ್ಮಣ್ಯಂ ಸಿನಿಮಾ ಇಂದ ಇವರಿಗೆ ಸಕ್ಸಸ್ ಸಿಕ್ಕರೂ ಸಹ, ವಿಜಯ್ ದೇವರಕೊಂಡ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಅರ್ಜುನ್ ರೆಡ್ಡಿ ಸಿನಿಮಾ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಆಟಿಟ್ಯೂಡ್ ಅಭಿನಯ ಎಲ್ಲವೂ ಸಹ ಜನರಿಗೆ ಬಹಳ ಇಷ್ಟವಾಗಿತ್ತು. ಇದಾದ ನಂತರ ಗೀತಾ ಗೋವಿಂದಮ್ ಸೇರಿದಂತೆ ಇನ್ನಷ್ಟು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇವರ ಸಿನಿಮಾಗಳನ್ನು ರೌಡಿ ಅನ್ನೋ ಹೆಸರು ಕೂಡ ಇವರಿಗೆ ಬಂದಿದೆ..

ರೌಡಿ ಕ್ಲಾಥಿಂಗ್ ಅನ್ನೋ ಬ್ರ್ಯಾಂಡ್ ಅನ್ನು ಕೂಡ ಶುರು ಮಾಡಿದ್ದಾರೆ, ರೌಡಿ ಪಿಕ್ಚರ್ಸ್ ಅನ್ನೋ ಬ್ಯಾನರ್ ಅನ್ನು ಕೂಡ ಶುರು ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯಾ ಸ್ಟಾರ್ ಅಗಬೇಕು ಅನ್ನೋ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಲೈಗರ್ ಸಿನಿಮಾವನ್ನ ಇದೇ ಯೋಚನೆಯಲ್ಲಿ ಆಕ್ಟ್ ಮಾಡಿದರು. ಆದರೆ ಲೈಗರ್ ಸಿನಿಮಾ ಅಂದುಕೊಂಡ ಹಾಗೆ ಯಶಸ್ವಿ ಆಗಲಿಲ್ಲ, ಲೈಗರ್ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಈಗ ಕಿಂಗ್ಡಮ್ ಸಿನಿಮಾ ಮೂಲಕ ಮತ್ತೆ ಸದ್ದು ಮಾಡೋದಕ್ಕೆ ಟ್ರೈ ಮಾಡುತ್ತಿದ್ದಾರೆ. ಕಿಂಗ್ಡಮ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿ ಭಾರಿ ವೈರಲ್ ಆಗಿತ್ತು. ಈ ಸಿನಿಮಾದ ಲುಕ್ ಮತ್ತೊಂದು ಕನ್ನಡ ಸಿನಿಮಾ ನೆನಪಾಗುವ ಹಾಗೆ ಅನ್ನಿಸಿದ್ದಂತೂ ನಿಜ. ಆದರೆ ಈ ಸಿನಿಮಾ ಕೂಡ ಒಳ್ಳೆದಾಗ್ಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ..

ಇನ್ನು ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ದೇವರಕೊಂಡ ಅವರು ಸಿಕ್ಕಾಪಟ್ಟೆ ಆಕ್ಟಿವ್. ಇವರು ಫ್ಯಾನ್ಸ್ ಜೊತೆಗೆ ಕೋಡ್ಸ್ ಬಹಳ ಟಚ್ ನಲ್ಲಿರುತ್ತಾರೆ. ಆಗಾಗ ಫ್ಯಾನ್ಸ್ ಗಳಿಗೆ ಸರ್ಪ್ರೈಸ್ ಸಹ ಕೊಡುತ್ತಾರೆ. ಇವರಿಗೆ ಒಬ್ಬರು ಮಧ್ಯ ವಯಸ್ಸಿನ ಮಹಿಳೆ ಒಂದು ರೀಲ್ಸ್ ಕಳಿಸಿದ್ದಾರೆ. ಅದನ್ನು ಅವರ ಮಗಳು ಒಂದು ವಿಡಿಯೋ ಮಾಡಿ, ಶೇರ್ ಮಾಡಿದ್ದಾರೆ. ಅಮ್ಮ ಯಾಕಮ್ಮ ವಿಜಯ್ ದೇವರಕೊಂಡ ಗೆ ರೀಲ್ಸ್ ಶೇರ್ ಮಾಡಿದ್ದಿಯಾ ಎಂದು ಕೇಳುತ್ತಾರೆ, ಅದಕ್ಕೆ ಅವರ ಅಮ್ಮ ನಗುತ್ತಾರೆ. ಅದು ಅವರು ಶೇರ್ ಮಾಡಿರುವುದು ಏನು ಎಂದರೆ, ಈ ಜಾಗದಲ್ಲಿ ಉಚಿತವಾಗಿ ಬಟ್ಟೆಗೆ ಸ್ಟಿಚ್ ಮಾಡಲಾಗುತ್ತದೆ ಎಂದು ಪ್ರೊಮೋಟ್ ಮಾಡಿರುವ ವಿಡಿಯೋ ಅದಾಗಿದೆ, ಅದನ್ನು ವಿಜಯ್ ದೇವರಕೊಂಡ ಅವರಿಗೆ ಶೇರ್ ಮಾಡಿದ್ದಾರೆ.
ಅಮ್ಮ ಯಾಕಮ್ಮ ಈ ವಿಡಿಯೋ ಶೇರ್ ಮಾಡಿದ್ದೀವಿ ಎಂದಿದ್ದಾರೆ. ಹಾಗೆಯೇ ಆ ರೀಲ್ಸ್ ಗೆ ವಿಜಯ್ ದೇವರಕೊಂಡ ಅವರಿಗೆ ನಮ್ಮಮ್ಮ ಹಣ ಉಳಿಸೋದು ಹೇಗೆ ಅಂತ ಟಿಪ್ಸ್ ಕೊಡ್ತಿದ್ದಾರೆ ಎಂದು ಬರೆದಿದ್ದಾರೆ. ಈ ರೀಲ್ಸ್ ಗೆ ವಿಜಯ್ ದೇವರಕೊಂಡ ಸಹ ಕಾಮೆಂಟ್ ಬರೆದಿದ್ದು, “ಥ್ಯಾಂಕ್ ಯೂ ಆಂಟಿ.. ಇನ್ಮೇಲೆ ನಾನು ನಿಮಗೆ ಇಂಟೆರೆಸ್ಟಿಂಗ್ ಆಗಿರುವ ರೀಲ್ಸ್ ಗಳನ್ನ ಶೇರ್ ಮಾಡ್ತೀನಿ..” ಎಂದು ಬರೆದಿದ್ದಾರೆ. ವಿಜಯ್ ದೇವರಕೊಂಡ ಅವರ ಕಾಮೆಂಟ್ಸ್ ಗೆ ಅಭಿಮಾನಿಗಳು ರಿಪ್ಲೈ ಮಾಡಿ, ಲೈಕ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಈ ರೀಲ್ಸ್ ಶೇರ್ ಮಾಡಿದ್ದ ಹುಡುಗಿ, ಈಗ ನಮ್ಮಮ್ಮ ಇಂಟರೆಸ್ಟಿಂಗ್ ರೀಲ್ಸ್ ಗೋಸ್ಕರ ಕಾಯ್ತಾ ಇದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಈಗ ಮಿಲಿಯನ್ ಗಟ್ಟಲೇ ವೀಕ್ಷಣೆ ಬಂದಿದೆ.

ವಿಜಯ್ ದೇವರಕೊಂಡ ಅವರು ಎಷ್ಟು ಸಿಂಪಲ್ ಆಗಿರುವ ಹುಡುಗ, ಎಲ್ಲಾ ಫ್ಯಾನ್ಸ್ ಗಳ ಜೊತೆಗೆ ಎಷ್ಟು ಫ್ರೆಂಡ್ಲಿ ಆಗಿರುತ್ತಾರೆ ಎನ್ನುವ ವಿಷಯ ಅಭಿಮಾನಿಗಳಿಗೆ ಸಂತೋಷ ತಂದಿದೆ. ಇನ್ನು ಈ ರೀಲ್ಸ್ ಇಂದ ಆ ಹುಡುಗಿ ಮತ್ತು ಅವರ ಅಮ್ಮ ಸಹ ವೈರಲ್ ಆಗಿದ್ದು, ಮೀಡಿಯಾದಲ್ಲಿ ಆರ್ಟಿಕಲ್ ಸಹ ಸಾಕಷ್ಟು ಬಂದಿದೆ. ಇನ್ನು ವಿಜಯ್ ದೇವರಕೊಂಡ ಅವರು ಇದೇ ರೀತಿ ಬೇರೆ ವಿಷಯಕ್ಕೆ ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತಾರೆ. ಇವರು ಮತ್ತು ರಶ್ಮಿಕಾ ಮಂದಣ್ಣ ರಿಲೇಶನ್ಷಿಪ್ ನಲ್ಲಿ ಇರುವ ವಿಚಾರ ಸಿಕ್ಕಾಪಟ್ಟೆ ವೈರಲ್. ಅಭಿಮಾನಿಗಳು ಇವರಿಬ್ಬರು ಬೇಗ ಸಿಹಿ ಸುದ್ದಿ ಕೊಡಲಿ ಎಂದು ಕಾಯುತ್ತಿದ್ದಾರೆ. ಇನ್ನು ಇತ್ತೀಚೆಗೆ ನಡೆದ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬವನ್ನು ಜೋರಾಗಿಯೇ ಆಚರಣೆ ಮಾಡಿದ್ದಾರೆ. ಇಬ್ಬರು ಸಹ ಹೊರದೇಶದಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ.
ಈ ಜೋಡಿ ಹಲವು ಕಡೆಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವುದು, ಹೊರಗಡೆ ಹೋಗುವುದು ಹೀಗೆಲ್ಲಾ ಮಾಡುವಾಗ ಮಾಧ್ಯಮದವರ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಹಲವು ಬಾರಿ ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ಹಬ್ಬದ ಆಚರಣೆ ಮಾಡುವುದು ಎಲ್ಲವೂ ಆಗಿದೆ. ಇದೆಲ್ಲವೂ ಸಹ ಅಭಿಮಾನಿಗಳಲ್ಲಿ ಸಂತೋಷ ತಂದಿದ್ದು ಇದೆ, ಗೀತಾ ಗೋವಿಂದಮ್ ಸಿನಿಮಾ ಮೂಲಕ ಇವರಿಬ್ಬರ ಪರಿಚಯ ಶುರುವಾಗಿ, ನಂತರ ಇಬ್ಬರು ಲವ್ ಮಾಡುವುದಕ್ಕೆ ಶುರು ಮಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಈ ಜೋಡಿ ಸಿಹಿ ಸುದ್ದಿ ಯಾವಾಗ ಕೊಡುತ್ತಾರೆ.. ಮದುವೆ ಯಾವಾಗ ಆಗ್ತಾರೆ ಎಂದು ಕಾದು ನೋಡಬೇಕು ಅಂತಿದ್ದಾರೆ ಎಲ್ಲಾ ಫ್ಯಾನ್ಸ್.