ಗೀತಾ ಗೋವಿಂದಮ್ ಹಾಗೂ ಅರ್ಜುನ್ ರೆಡ್ಡಿ ಸಿನಿಮಾ ಇಂದ ಬಹಳ ಫೇಮಸ್ ಆದವರು ನಟ ವಿಜಯ್ ದೇವರಕೊಂಡ. ತೆಲುಗು ಚಿತ್ರರಂಗದ ಈ ನಟ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ನಟ ವಿಜಯ್ ದೇವರಕೊಂಡ ಅವರು ಸಿನಿಮಾ ವಿಚಾರಗಳ ಜೊತೆಗೆ ವೈಯಕ್ತಿಕ ಜೀವನದ ವಿಚಾರಗಳಿಂದ ಕೂಡ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಡೇಟಿಂಗ್, ಗರ್ಲ್ ಫ್ರೆಂಡ್ ವಿಚಾರಕ್ಕೆ ಇವರ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಒಂದು ಸಂದರ್ಶನದಲ್ಲಿ ತಾವು ಸಹನಟಿ ಜೊತೆಗೆ ಡೇಟಿಂಗ್ ಮಾಡುತ್ತಿರುವುದಾಗಿ ವಿಜಯ್ ದೇವರಕೊಂಡ ಒಪ್ಪಿಕೊಂಡಿದ್ದಾರೆ. ಇದರಿಂದ ಅವರ ಮಹಿಳಾ ಅಭಿಮಾನಿಗಳಿಗೆ ಬೇಸರವಾಗಿದೆ.

ಹೌದು, ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಬಾಲಿವುಡ್ ನ ಕರ್ಲಿ ಟೇಲ್ಸ್ ಯೂಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿರುವ ವಿಜಯ್ ದೇವರಕೊಂಡ ಅವರು ಮದುವೆ, ಲವ್, ರಿಲೇಶನ್ಷಿಪ್ ಇವುಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಾವು ಡೇಟಿಂಗ್ ಮಾಡುತ್ತಿರುವ ಬಗ್ಗೆ ಕೂಡ ಓಪನ್ ಆಗಿ ಹೇಳಿಕೊಂಡಿದ್ದಾರೆ. ಆದರೆ ಡೇಟ್ ಮಾಡುತ್ತಿರುವ ಹುಡುಗಿ ಯಾರು ಅನ್ನೋದನ್ನ ಮಾತ್ರ ರಿವೀಲ್ ಮಾಡಿಲ್ಲ. ಆದರೆ ಇವರು ಡೇಟಿಂಗ್ ಮಾಡ್ತಿರೋದು ರಶ್ಮಿಕಾ ಮಂದಣ್ಣ ಅವರೊಡನೆ ಎನ್ನುವುದು ಬಹಿರಂಗ ಸತ್ಯ ಎಂದರು ತಪ್ಪಲ್ಲ.
ವಿಜಯ್ ದೇವರಕೊಂಡ ಕರ್ಲಿ ಟೇಲ್ಸ್ ಸಂದರ್ಶನದಲ್ಲಿ ಯಾರಾದರೂ ನಮ್ಮನ್ನು ಪ್ರೀತಿಸಿದರೆ, ಕಾಳಜಿ ತೋರಿಸಿದರೆ ಹೇಗಿರುತ್ತದೆ ಅನ್ನೋದು ನನಗೆ ಗೊತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆಗ ನಿರೂಪಕಿ, ಹಾಗಿದ್ರೆ ನೀವು ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ, ಅದಕ್ಕೆ ವಿಜಯ್ ದೇವರಕೊಂಡ ನನಗೀಗ 35 ವರ್ಷ ನಾನು ಸಿಂಗಲ್ ಅಂದ್ರೆ ಯಾರಾದರು ನಂಬುತ್ತಾರಾ ಎಂದು ಹೇಳಿದ್ದಾರೆ. ಹಾಗೆಯೇ ಸಹನಟಿ ಜೊತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಮದುವೆ ಬಗ್ಗೆ ಕೂಡ ಮಾತನಾಡಿ, ಮದುವೆ ಅನ್ನೋದು ಹುಡುಗಿಯರಿಗೆ ಕಷ್ಟ, ಅದು ಅವರ ವೃತ್ತಿಗೆ ತೊಂದರೆ ಆಗಬಾರದು ಎಂದು ಹೇಳಿದ್ದಾರೆ.
ಜೊತೆಗೆ ತಮ್ಮ ಸ್ವಭಾವದ ಬಗ್ಗೆ ಮಾತನಾಡಿ, ನಾನು ತುಂಬಾ ಸಮಯ ಒಬ್ಬ ವ್ಯಕ್ತಿಯನ್ನ ನೋಡಿ, ಅವರ ವ್ಯಕ್ತಿತ್ವವನ್ನ ಅರ್ಥ ಮಾಡಿಕೊಂಡ ನಂತರವೇ ಅವರಿಗೆ ಹತ್ತಿರವಾಗುತ್ತೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಶೋನಲ್ಲಿ ವಿಜಯ್ ದೇವರಕೊಂಡ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಮಾತುಗಳನ್ನ ಕೇಳಿ ಅವರ ಮಹಿಳಾ ಅಭಿಮಾನಿಗಳಿಗೆ ಬೇಸರ ಆಗಿರುವುದಂತೂ ನಿಜ. ಇನ್ನು ವಿಜಯ್ ದೇವರಕೊಂಡ ಯಾರ ಜೊತೆ ಡೇಟಿಂಗ್ ಮಾಡುತ್ತಿರಬಹುದು ಎನ್ನುವ ವಿಚಾರ ಸಹ ಈಗ ಕೇಳಿಬರುತ್ತಿದೆ, ಎಲ್ಲರ ಉತ್ತರವು ಒಂದೇ, ರಶ್ಮಿಕಾ ಮಂದಣ್ಣ ಎಂದು. ಏಕೆಂದರೆ ಬಹಳ ಸಮಯದಿಂದ ಇವರಿಬ್ಬರ ಡೇಟಿಂಗ್ ವಿಚಾರ ಬಹಳ ಸದ್ದು ಮಾಡುತ್ತಿದೆ.
ಏಕೆಂದರೆ ಇವರಿಬ್ಬರು ಹಲವು ಸಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇಬ್ಬರು ಜೊತೆಯಾಗಿ ಹಬ್ಬಗಳ ಆಚರಣೆ ಮಾಡುತ್ತಾರೆ. ಈ ವರ್ಷ ದೀಪಾವಳಿ ಹಬ್ಬದ ವೇಳೆ ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿದ್ದ ಫೋಟೋಗಳು, ವಿಜಯ್ ದೇವರಕೊಂಡ ಅವರ ಮನೆಯಲ್ಲೇ ಆಚರಣೆ ಮಾಡಿದ ಹಾಗಿತ್ತು. ಹಾಗಾಗಿ ಇವರಿಬ್ಬರು ಡೇಟಿಂಗ್ ಮಾಡುತ್ತಿರಬಹುದು ಎನ್ನುವ ವಿಷಯ ಸುದ್ದಿಯಾಗುತ್ತಿರುತ್ತದೆ. ಹಾಗೆಯೇ ಇವರಿಬ್ಬರು ಬೇಗ ಮದುವೆ ಮಾಡಿಕೊಳ್ಳಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.