ಕಾಡುಪ್ರಾಣಿಗಳಲ್ಲಿ ಒಂದಾದ ಸೌಮ್ಯ ಸ್ವಭಾವದ ಜಿಂಕೆ ಸಸ್ಯಹಾರಿ ಎಂಬುದು ಭೂಮಿಯ ಮೇಲಿರುವ ಪ್ರತಿಯೊಬ್ಬನಿಗೂ ತಿಳಿದಿರುವ ವಿಚಾರ. ಜೀವನ ಪರ್ಯಂತ ಹುಲ್ಲು, ಸೊಪ್ಪನ್ನು ತಿಂದು ಬದುಕುವ ಜಿಂಕೆಯೊಂದು ಹಾವೊಂದನ್ನು ಹಿಡಿದು ತಿನ್ನುತ್ತದೆ ಎಂದರೆ ನೀವು ನಂಬುತ್ತೀರಾ. ಆಶ್ಚರ್ಯ ಎನಿಸಿದರೂ ಇದು ಸತ್ಯ. ಇಂತಹದ್ದೊಂದು ಸೋಜಿಗದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ನೋಡುಗರನ್ನು ವಿಸ್ಮಯಗೊಳಿಸುತ್ತಿದೆ. ವಿಡಿಯೋದಲ್ಲಿ ಏನಿದೆ?, ಈ ವಿಸ್ಮಯದ ಬಗ್ಗೆ ದಶಕಗಳ ಹಿಂದೆಯೇ ಕಾಲಜ್ಞಾನಿ ಬಾಬಾವಂಗಾ ಏನಿ ಹೇಳಿದ್ದರು?. ಬನ್ನಿ ನೋಡೋಣ!.
ಟ್ವಿಟ್ಟರ್ ಸೇರಿದಂತೆ ಇತರೆ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿರುವ ‘ಹಾವು ತಿಂದ ಜಿಂಕೆ’ಯ ವಿಡಿಯೋ ಕಂಡು ವೀಕ್ಷಕರು ಬೆರಗಾಗಿದ್ದಾರೆ. ಕಾಡುಪ್ರಾಣಿಗಳಲ್ಲೇ ಪ್ರಮುಖ ಸಸ್ಯಹಾರಿ ಪ್ರಾಣಿ ಎಂದು ಕರೆಯಲ್ಪಡುವ ಜಿಂಕೆಯು ಹಾವೊಂದನ್ನು ತಿನ್ನುತ್ತಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಈ ವೈರಲ್ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ Figen ಎಂಬ ವ್ಯಕ್ತಿ ಹಂಚಿಕೊಂಡಿದ್ದಾರೆ. ಜೊತೆಗೆ ‘ನಾನು ಮೊದಲ ಬಾರಿಗೆ ಮಾಂಸ ತಿನ್ನುವ ಜಿಂಕೆ ನೋಡುತ್ತಿದ್ದೇನೆ. ಜಿಂಕೆ ಸಸ್ಯಹಾರಿಯಲ್ಲವೇ?’ ಎಂದು ಬರೆದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ಗಮನಿಸಿದ ಇತರೆ ಟ್ವಿಟ್ಟಿಗರು ಕಮೆಂಟ್ ಮಳೆ ಸುರಿಸಿದ್ದು, ಕೆಲವರು ‘ಇದು Non veg ಜಿಂಕೆ’ ಎಂದರೆ ಮತ್ತೆ ಕೆಲವರು ‘ಈ ಜಿಂಕೆ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿರಬೇಕು’ ಎಂದಿದ್ದಾರೆ. ವಿಡಿಯೋದಲ್ಲಿ ರಸ್ತೆ ಬದಿ ನಿಂತಿರುವ ಜಿಂಕೆಯೊಂದು ಹಾವನ್ನು ತಿನ್ನುವ ದೃಶ್ಯವನ್ನು ಕಾಣಬಹುದು.
ನಿಜವಾಗುತ್ತಾ ಬಾಬಾವಂಗಾ ಭವಿಷ್ಯವಾಣಿ?
ಈ ವಿಡಿಯೋ ನೋಡಿದ ನಂತರ ಜಗತ್ತಿನ ಕಾಲಜ್ಞಾನಿಗಳಲ್ಲಿ ಪ್ರಮುಖರಾಗಿದ್ದ ವಿದೇಶಿ ಕಾಲಜ್ಞಾನಿ ಬಾಬಾವಂಗಾ ಹೇಳಿದ ಭವಿಷ್ಯವಾಣಿ ನೆನಪಿಸಿಕೊಂಡು ಕೆಲವರು ಅತಂಕಕ್ಕೀಡಾಗಿದ್ದಾರೆ. ಬಾಬಾವಂಗಾ ದಶಕಗಳ ಹಿಂದೆ ‘ಸಸ್ಯಹಾರಿ ಮಾಂಸ ತಿನ್ನುವಾಗ, ಮಾಂಸಹಾರಿ ಸಸ್ಯ ತಿನ್ನುವಾಗ ಭೂಮಿ ಅಂತ್ಯವಾಗುತ್ತದೆ’ ಎಂದಿದ್ದರು. ಸದ್ಯ ಹಾವು ತಿಂದ ಜಿಂಕೆಯ ವಿಡಿಯೋ ವೈರಲ್ ಆದ ನಂತರ ಬಾಬಾವಂಗಾ ಭವಿಷ್ಯವಾಣಿ ತೀವ್ರ ಚರ್ಚೆಗೀಡಾಗಿದೆ.