ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ ನಟಿ ವೈಭವಿ ಜಗದೀಶ್. ಬೋಲ್ಡ್ ಭಂಗಿಯ ಬಗೆಬಗೆ ಫೋಟೋಗಳನ್ನು ಯಾವ ಮುಲಾಜಿಲ್ಲದೇ ಶೇರ್ ಮಾಡುತ್ತಾರೆ ಈ ಬೆಡಗಿ. ಇದೀಗ ಇದೇ ವೈಭವಿ, ತೂಕ ಇಳಿಸಿಕೊಂಡು ಮತ್ತಷ್ಟು ಸಪೂರವಾಗಿದ್ದಾರೆ. ಬಿಕಿನಿ ಸೇರಿದಂತೆ ಇನ್ನಿತರ ಹಸಿಬಿಸಿ ಬಟ್ಟೆ ಧರಿಸಿ ವೈಭವಿ ಮಾದಕ ಭಂಗಿಯಲ್ಲಿ ಕಂಗೊಳಿಸಿದ್ದು ಕೆಲವು ಹಾಟ್&ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಹಿರಿಯ ನಟ ಜೈ ಜಗದೀಶ್ ಅವರಿಗೆ ಮೂರು ಜನ ಪುತ್ರಿಯರು. ಅವರಲ್ಲಿ ಹಿರಿ ಮಗಳಾದ ವೈಭವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ಸದಾ ಇನ್ಸ್ಟಾಗ್ರಾಂನಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುವ ಮೂಲಕವೇ ವೈಭವಿ ಸುದ್ದಿಯಲ್ಲಿರುತ್ತಾರೆ. ಬಿಕಿನಿ ಅವತಾರದಲ್ಲೂ ಕಾಣಿಸಿಕೊಳ್ಳುವ ವೈಭವಿ, ತಮ್ಮ ವಿದೇಶಿ ಪ್ರವಾಸದ ಕಲರ್ ಫುಲ್ ಫೋಟೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚಿನ ಕೆಲ ದಿನಗಳಿಂದ ನಟಿ ವೈಭವಿ ಬದಲಾಗಿದ್ದಾರೆ. ಆ ಬದಲಾವಣೆಯನ್ನು ಸ್ವತಃ ಅವರ ಇನ್ಸ್ಟಾಗ್ರಾ ಫಾಲೋವರ್ಸ್ ಗಮನಿಸಿ ಪ್ರಶ್ನೆ ಮಾಡಿದ್ದಾರೆ. ಕೇವಲ ಮೂರೇ ತಿಂಗಳ ಹಿಂದೆ ಅತಿಯಾದ ತೂಕವಿದ್ದ ವೈಭವಿ, ಇದೀಗ ಸಪೂರ ಸುಂದರಿಯಾಗಿ ಬದಲಾಗಿದ್ದಾರೆ. ಈ ವೇಟ್ಲಾಸ್ನ ಗುಟ್ಟೇನು ಎಂದು ಸಾಕಷ್ಟು ಮಂದಿ ನಟಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಫಿಟ್ನೆಸ್, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು, ಬಳುಕುವ ಬಳ್ಳಿಯಂತೆ ಮಿಂಚುತ್ತಿದ್ದಾರೆ.