ಬಹುತೇಕರ ಮನೆಗಳಲ್ಲಿ ಹೊರಗಿನಿಂದ ಬಂದ ತಕ್ಷಣ ಬಟ್ಟೆಯನ್ನು ಬಾಗಿಲಿಗೆ ನೇತು ಹಾಕುವ ಅಭ್ಯಾಸವಿದೆ. ಆದರೆ ಇದು ಸಹ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಮೂಲೆ ಮತ್ತು ವಸ್ತುಗಳ ಸ್ಥಳದ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಏಕೆಂದರೆ ಅದು ನಮ್ಮ ಜೀವನದ ಶಕ್ತಿ, ಸಂತೋಷ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕುವುದು ನಮಗೆ ಸಾಮಾನ್ಯ ಅಭ್ಯಾಸವಾದರೆ ಇದು ವಾಸ್ತು ಪ್ರಕಾರ ಸರಿನಾ ಅಥವಾ ಇಲ್ಲವೋ ಎಂಬುದು ನೋಡೋಣ…
ನಕಾರಾತ್ಮಕ ಶಕ್ತಿಯ ಪ್ರಸರಣ
ವಾಸ್ತು ಶಾಸ್ತ್ರದಲ್ಲಿ ಬಾಗಿಲಿಗೆ ಹೆಚ್ಚಿನ ಮಹತ್ವವಿದೆ. ಶಕ್ತಿಯು ಪ್ರವೇಶಿಸುವ ಸ್ಥಳ ಇದು. ಇಲ್ಲಿ ಧನಾತ್ಮಕ ಶಕ್ತಿಯು ಪ್ರವೇಶಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯು ಬಾಗಿಲಿನ ಮೂಲಕ ಮಾತ್ರವೇ ಹೊರಬರಲು ಸಾಧ್ಯ. ಹಾಗಾಗಿ ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಬಾಗಿಲಿನ ಮೂಲಕ ಬರದಂತೆ ತಡೆಯುತ್ತದೆ.
ಜೀವನದಲ್ಲಿ ಅಡೆತಡೆಗಳು
ಮುಖ್ಯ ಬಾಗಿಲು ಅಥವಾ ಕೋಣೆಯ ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕುವುದು ಅಡೆತಡೆಗಳನ್ನು ಸೃಷ್ಟಿಸುತ್ತದೆ. ಇದು ಜೀವನದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು.
ಆರ್ಥಿಕ ನಷ್ಟ
ವಾಸ್ತು ಪ್ರಕಾರ ಅಸ್ತವ್ಯಸ್ತವಾಗಿರುವ ಅಥವಾ ಕೊಳಕು ಬಟ್ಟೆಗಳನ್ನು ಬಾಗಿಲಿನ ಹಿಂದೆ ನೇತುಹಾಕುವುದು ಆರ್ಥಿಕ ಸಮಸ್ಯೆಗಳು ಮತ್ತು ಸಾಲವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಆರೋಗ್ಯದ ಮೇಲೆ ಪರಿಣಾಮ
ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕುವುದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಆಯಾಸ, ಆಲಸ್ಯ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತದೆ.
ಕುಟುಂಬ ಸಂಬಂಧಗಳಲ್ಲಿ ಹುಳುಕು
ವಾಸ್ತು ಪ್ರಕಾರ, ಬಟ್ಟೆಗಳನ್ನು ಬಾಗಿಲಿನ ಹಿಂದೆ ನೇತುಹಾಕುವುದು ಕುಟುಂಬ ಸದಸ್ಯರ ನಡುವೆ ತಪ್ಪು ತಿಳುವಳಿಕೆ ಮತ್ತು ಜಗಳಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಏನು ಮಾಡಬೇಕು (ಸಕಾರಾತ್ಮಕ ಪರಿಹಾರಗಳಿವು)?
ಬಟ್ಟೆಗಳನ್ನು ನೇತುಹಾಕಲು ಕಪಾಟುಗಳು, ಹ್ಯಾಂಗರ್ಗಳು ಅಥವಾ ಪ್ರತ್ಯೇಕ ಸ್ಟ್ಯಾಂಡ್ಗಳನ್ನು ಬಳಸಿ ಮುಖ್ಯ ಬಾಗಿಲು ಮತ್ತು ಕೋಣೆಯ ಬಾಗಿಲಿನ ಹಿಂದೆ ಯಾವುದೇ ಬಟ್ಟೆ ಅಥವಾ ಪರಿಕರಗಳನ್ನು ಇಡಬೇಡಿ. ಈ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಖಾಲಿಯಾಗಿ ಇರಿಸಿ.
ಇದನ್ನು ಬಾಗಿಲಿನ ಹಿಂದೆ ಇರಿಸಿ
ಸ್ವಸ್ತಿಕ ಅಥವಾ ತೋರಣವನ್ನು ಬಾಗಿಲಿನ ಹಿಂದೆ ಇರಿಸುವುದರಿಂದ ಧನಾತ್ಮಕ ಶಕ್ತಿಯ ಹರಿವನ್ನು ನಿರ್ವಹಿಸುತ್ತದೆ. ಇದರ ಜೊತೆಗೆ ಮನೆಯ ಸುತ್ತಲಿನ ಪ್ರದೇಶವನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಅನಗತ್ಯ ವಸ್ತುಗಳನ್ನು ತೆಗೆದುಹಾಕಿ.
Vastu Tips: ನೀವು ಬಟ್ಟೆಯನ್ನು ಬಾಗಿಲಿನ ಹಿಂದೆ ನೇತು ಹಾಕುತ್ತೀರಾ…ಸರಿಯೋ, ತಪ್ಪೋ?

Leave a Comment
Leave a Comment