ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ ಅಗ್ನಿಸಾಕ್ಷಿಯ ಸನ್ನಿಧಿ ಎಲ್ಲರ ಮನೆ ಮಗಳು, ಎಲ್ಲಾ ಹುಡುಗರ ಕ್ರಶ್ ಎಂದು ಹೇಳಿದರು ತಪ್ಪಲ್ಲ. ಅಷ್ಟರ ಮಟ್ಟಿಗೆ ಜನಪ್ರಿಯತೆ ಹೊಂದಿತ್ತು ಈ ಪಾತ್ರ. ಈಗ ವೈಷ್ಣವಿ ಅವರು ಸೀತಾರಾಮ ಧಾರಾವಾಹಿಯ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರ ಸಹ ಜನರಿಗೆ ಅಷ್ಟೇ ಇಷ್ಟವಾಗಿದೆ. ಸೀತಾರಾಮನ ಪ್ರೀತಿ, ಸೀತಾ ಸಿಹಿ ಬಾಂಡಿಂಗ್ ಇದೆಲ್ಲವೂ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ.. ಇಷ್ಟು ಒಳ್ಳೆಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ವೈಷ್ಣವಿ ಅವರು ಇದೀಗ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಇದೆಲ್ಲದರ ಜೊತೆಗೆ ಈಗ ಬದುಕಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ ನಟಿ ವೈಷ್ಣವಿ ಗೌಡ.

ನಟಿ ವೈಷ್ಣವಿ ಅವರ ಜರ್ನಿ ಕೆಲವು ವರ್ಷಗಳದ್ದಷ್ಟೇ ಅಲ್ಲ. ಇವರು ಬಹಳ ಚಿಕ್ಕವರಿರುವಾಗಲೇ, ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಅದ್ಭುತವಾದ ಡ್ಯಾನ್ಸರ್ ಸಹ ಹೌದು. ಕ್ಲಾಸಿಕಲ್ ಡ್ಯಾನ್ಸ್ ಅನ್ನು ಕಲಿತಿರುವ ಇವರು ಬಹಳ ಟ್ಯಾಲೆಂಟೆಡ್ ಹುಡುಗಿ. ಡ್ಯಾನ್ಸ್ ಶೋ ಬಳಿಕ ವೈಷ್ಣವಿ ಅವರು ಜೀಕನ್ನಡ ವಾಹಿನಿಯಲ್ಲೇ ದೇವಿ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಈ ಧಾರಾವಾಹಿ ಸಹ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಂತರ ಸ್ವಲ್ಪ ಗ್ಯಾಪ್ ಪಡೆದು ನಟಿಸಿದ ಧಾರಾವಾಹಿಯೇ ಅಗ್ನಿಸಾಕ್ಷಿ. ಈ ಧಾರಾವಾಹಿಯ ಕ್ರೇಜ್ ಇವತ್ತಿಗೂ ಕಡಿಮೆ ಆಗಿಲ್ಲ. ಅಷ್ಟು ಕ್ರೇಜ್ ಹೊಂದಿದೆ ಅಗ್ನಿಸಾಕ್ಷಿ ಧಾರವಾಹಿ. ಅಗ್ನಿಸಾಕ್ಷಿ ನಂತರ ಇನ್ಯಾವುದೇ ಧಾರಾವಾಹಿಯನ್ನು ಒಪ್ಪಿಕೊಳ್ಳದೇ ದೊಡ್ಡ ಗ್ಯಾಪ್ ಪಡೆದ ಬಳಿಕ ವೈಷ್ಣವಿ ಅವರು ಕಾಣಿಸಿಕೊಂಡಿದ್ದು ಸೀತಾರಾಮ ಧಾರಾವಾಹಿಯಲ್ಲಿ.

ಈ ಧಾರಾವಾಹಿ ಸಹ ಅಗ್ನಿಸಾಕ್ಷಿ ತರಹವೆ ಕ್ರೇಜ್ ಹೊಂದತ್ತು. ಇದರಲ್ಲಿ ಜನರಿಗೆ ಸಿಹಿ ಮತ್ತು ಸೀತಾಳ ತಾಯಿ ಮಗಳ ಬಾಂಧವ್ಯ ಸಹ ತುಂಬಾ ಇಷ್ಟವಾಗಿತ್ತು. ಧಾರಾವಾಹಿಯ ಜೊತೆಗೆ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಹ ತುಂಬಾ ಆಕ್ಟಿವ್. ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇವರದ್ದೇ ಆದ ಯೂಟ್ಯೂಬ್ ಚಾನೆಲ್ ಸಹ ಇದೆ, ಈಗಾಗಲೇ ವೈಷ್ಣವಿ ಅವರಿಗೆ ಯೂಟ್ಯೂಬ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಚಂದಾದಾರರು ಇದ್ದಾರೆ. ಯೂಟ್ಯೂಬ್ ನಲ್ಲಿ ಯಶಸ್ವಿ ಮಹಿಳೆ ಆಗಿದ್ದಾರೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹ ತೊಡಗಿಸಿಕೊಂಡಿರುವ ವೈಷ್ಣವಿ ಅವರು, ಇದೀಗ ವೈಯಕ್ತಿಕ ಜೀವನದಲ್ಲಿ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ. ಈಗಷ್ಟೇ ವೈಷ್ಣವಿ ಅವರ ಮದುವೆ ಅನುಕೂಲ್ ಮಿಶ್ರ ಅವರೊಡನೆ ನಡೆದಿದೆ. ಇತ್ತೀಚೆಗೆ ನಡೆದ ಇವರ ಎಂಗೇಜ್ಮೆಂಟ್ ಸುದ್ದಿ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ವೈಷ್ಣವಿ ಮದುವೆಯಾಗಿದ್ದಾರೆ. ಕಳೆದ ವಾರ ಅಷ್ಟೇ ವೈಷ್ಣವಿ ಅವರು ನಟಿಸುತ್ತಿರುವ ಸೀತಾರಾಮ ಧಾರಾವಾಹಿ ಮುಗಿದಿದೆ. ಕಥೆಯಲ್ಲಿ ಬದಲಾವಣೆ ಆಗಿತ್ತು, ಜೊತೆಗೆ ವೈಷ್ಣವಿ ಅವರ ಮದುವೆ ಕೂಡ ಇದ್ದ ಕಾರಣ ಧಾರಾವಾಹಿಯನ್ನು ಬೇಗ ಮುಗಿಸಲಾಯಿತು. ಇದರಿಂದ ವೈಷ್ಣವಿ ಫ್ಯಾನ್ಸ್ ಗೆ ಬೇಸರ ಆಗಿದ್ದಂತೂ ನಿಜ. ಆದರೆ ವೈಷ್ಣವಿ ಅವರು ಮದುವೆಯಾಗಿ ಜೀವನದಲ್ಲಿ ಚೆನ್ನಾಗಿರುತ್ತಾರೆ ಎನ್ನುವುದು ಸಂತೋಷದ ವಿಷಯ ಆಗಿದೆ. ಹಾಗಾಗಿ ಫ್ಯಾನ್ಸ್ ಕೂಡ ಸುಮ್ಮನಾಗಿದ್ದಾರೆ. ಇನ್ನು ವೈಷ್ಣವಿ ಅವರು ಪಕ್ಕಾ ಅರೇಂಜ್ಡ್ ಮ್ಯಾರೇಜ್, ಮ್ಯಾಟ್ರಿಮೋನಿ ಸೈಟ್ ನಲ್ಲಿ ಸಿಕ್ಕ ಹುಡುಗ ಅನುಕೂಲ್ ಮಿಶ್ರ. ಎರಡು ಕುಟುಂಬಕ್ಕೆ ಒಪ್ಪಿಗೆಯಾಗಿ, ಅನುಕೂಲ್ ಮಿಶ್ರ ಅವರೊಡನೆ ಒಂದು ವರ್ಷ ಮಾತನಾಡಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ನಂತರ ಇಬ್ಬರು ಮದುವೆಯಾಗುವ ನಿರ್ಧಾರ ತೆಗೆದುಕೊಂಡರಂತೆ.

ಅನುಕೂಲ್ ಅವರಿಗೆ ಅಷ್ಟಾಗಿ ಕನ್ನಡ ಬರೋದಿಲ್ಲ, ಹಾಗಿದ್ದರೂ ವೈಷ್ಣವಿ ಅವರ ಧಾರಾವಾಹಿಯನ್ನು ಫಾಲೋ ಮಾಡಿ, ಮೆಚ್ಚುಗೆ ಕೊಡುತ್ತಿದ್ದರಂತೆ. ಸೀತಾರಾಮ ಧಾರಾವಾಹಿ ಅನುಕೂಲ್ ಅವರಿಗೆ ಅಷ್ಟು ಇಷ್ಟವಾಗಿತ್ತು. ಈ ಜೋಡಿ ಒಬ್ಬರನ್ನೊಬ್ಬರು ಬಹಳ ಪ್ರೀತಿ ಮಾಡುತ್ತಾರೆ. ಧಾರಾವಾಹಿ ಮುಗಿದ ನಂತರ ವೈಷ್ಣವಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿತ್ತು. ವೈಷ್ಣವಿ ಅವರ ಮನೆಯ ಚಪ್ಪರದ ಪೂಜೆ, ಅರಿಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರ ಇದೆಲ್ಲದರ ಫೋಟೋಸ್ ಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಯಿತು. ಇದೀಗ ಈ ಜೋಡಿ ಮದುವೆ ಸಹ ನಡೆದಿದೆ. ಕೆಂಪು ಬಣ್ಣದ ಸುಂದರವಾದ ಸೀರೆಯೊಂದನ್ನು ಧರಿಸಿದ್ದಾರೆ ವೈಷ್ಣವಿ, ಅನುಕೂಲ್ ಅವರೊಡನೆ ಮದುವೆ ನಡೆದಿದೆ. ಸೆಲೆಬ್ರಿಟಿ ಮದುವೆ ಎಂದರೆ ಅಲ್ಲಿ ಅದ್ಧೂರಿತನ ಇದ್ದೇ ಇರುತ್ತದೆ.

ವೈಷ್ಣವಿ ಮತ್ತು ಅನುಕೂಲ್ ಮದುವೆಯಲ್ಲಿ ಕೂಡ ಇದೇ ರೀತಿ. ಅದ್ಧೂರಿಯಾಗಿ ಮದುವೆ ನಡೆದಿದೆ, ಇವರಿಬ್ಬರ ಮದುವೆಗೆ ವಿಶ್ ಮಾಡಲು ಕನ್ನಡ ಕಿರುತೆರೆಯ ಸಾಕಷ್ಟು ಸೆಲೆಬ್ರಿಟಿಗಳು ಸಹ ಬಂದಿದ್ದರು. ಅಗ್ನಿಸಾಕ್ಷಿ ಧಾರಾವಾಹಿ ವಿಜಯ್ ಸೂರ್ಯ ಪತ್ನಿ ಜೊತೆಗೆ ಬಂದಿದ್ದರು, ಸೀತಾರಾಮ ಧಾರಾವಾಹಿಯ ಇಡೀ ತಂಡ, ಅನುಪಮಾ ಗೌಡ, ನೇಹಾ ಗೌಡ ಸೇರಿದಂತೆ ಕಿರುತೆರೆಯ ಸಾಕಷ್ಟು ಕಲಾವಿದರು ವೈಷ್ಣವಿ ಅವರ ಮದುವೆಗೆ ಬಂದಿದ್ದರು. ಅಷ್ಟೇ ಅಲ್ಲದೇ, ವೈಷ್ಣವಿ ಅವರ ಬೆಸ್ಟ್ ಫ್ರೆಂಡ್ ಆಗಿರುವ ನಟಿ ಅಮೂಲ್ಯ ಹಾಜರಿದ್ದರು. ವೈಷ್ಣವಿ ಅವರ ಸಂಗೀತ್ ಶಾಸ್ತ್ರದಲ್ಲಿ ಕೂಡ ಅಮೂಲ್ಯ ತಮ್ಮ ಬೆಸ್ಟ್ ಫ್ರೆಂಡ್ ಜೊತೆಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು. ಈ ಎಲ್ಲಾ ಫೋಟೋಸ್ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ವೈಷ್ಣವಿ ಅವರ ರಿಸೆಪ್ಶನ್ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ.

ಕೊನೆಗೂ ತಮ್ಮ ಕನಸಿನ ಹಾಗೆ ವೈಷ್ಣವಿ ಅವರ ಮದುವೆ ನಡೆದಿದೆ. ಇಷ್ಟಪಟ್ಟ ಹುಡುಗನ ಜೊತೆಗೆ ಇಡೀ ಜೀವನ ಜೊತೆಯಾಗಿ ಕಳೆಯುವ ಕನಸನ್ನು ವೈಷ್ಣವಿ ಅವರು ನಿಜ ಮಾಡಿಕೊಂಡಿದ್ದಾರೆ. ಮದುವೆ ನಂತರ ವೈಷ್ಣವಿ ಅವರು ಕರ್ನಾಟಕವನ್ನೇ ಬಿಟ್ಟು ಹೋಗಬಹುದು ಎನ್ನುವ ಒಂದು ಸಂಶಯ ಇತ್ತು, ಆದರೆ ಅನುಕೂಲ್ ಮಿಶ್ರ ಅವರು ಕೆಲಸ ಮಾಡುತ್ತಿರುವುದು ಬೆಂಗಳೂರಿನಲ್ಲಿ ಹಾಗಾಗಿ ಅವರು ಕರ್ನಾಟಕ ಬಿಟ್ಟು ಹೋಗೋದಿಲ್ಲ ಇಲ್ಲಿಯೇ ಇರುವುದಾಗಿ ಹೇಳಿದ್ದಾರೆ. ಇನ್ನು ವೈಷ್ಣವಿ ಅವರು ಮದುವೆಯಾದ ಮೇಲೆ ಬ್ರೇಕ್ ಪಡೆದು, ಮತ್ತೆ ಯಾವಾಗ ನಟನೆಗೆ ಮರಳಿ ಬರುತ್ತಾರೆ ಎಂದು ಕಾದು ನೋಡಬೇಕಿದೆ.



