ಚಿತ್ರರಂಗದ ತಾರೆಯರ ಬದುಕಿನಲ್ಲಿ ಗಾಳಿ ಸುದ್ದಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹಾಗಂತೆ.. ಹೀಗಂತೆ .. ಅಂತ ಹಲವಾರು ಸುದ್ದಿಗಳು ಸದ್ದು ಮಾಡುತ್ತವೆ. ಹೀಗೆ ಸದ್ದು ಮಾಡುವ ಸುದ್ದಿಗಳಲ್ಲಿ ಅರ್ಧ ಸತ್ಯವಾದರೆ ಉಳಿದಿದೆಲ್ಲವೂ ಗಾಳಿ ಸುದ್ದಿ ಆಗಿರುತ್ತಾವೆ. ಕೆಲ ತಾರೆಯರು ತಮ್ಮ ಕುರಿತು ಕೆಲ ಸುದ್ದಿಗಳನ್ನು ಕಂಡು ಸಾಮಾನ್ಯವಾಗಿ ಸುಮ್ಮನಾಗುತ್ತಾರೆ. ಇನ್ನೂ ಕೆಲವರು ಉರಿದು ಬೀಳುತ್ತಾರೆ. ತಮ್ಮ ಕುರಿತು ಇಲ್ಲ ಸಲ್ಲದ ಸುದ್ದಿ ಹಬ್ಬಿಸಿದವರ ವ್ಯಂಗ್ಯವಾಡುತ್ತಾರೆ ಉದಾಹರಣೆಗೆ ತ್ರಿಶಾ ಕೃಷ್ಣನ್. ಹೌದು, ತ್ರಿಶಾಗೆ ಈಗ 42ರ ಹರೆಯ. ಆದರೆ . ಇನ್ನೂ ಮದುವೆಯಾಗಿಲ್ಲ. ಈ ಹಿನ್ನೆಲೆ ಹಲವರಿಗೆ ಇವರ ಮದುವೆ ಚಿಂತೆ ಕಾಡುತ್ತಿದೆ.

ತ್ರಿಶಾ ಅವರ ಅಭಿಮಾನಿಗಳು 42 ವಯಸ್ಸಾದರೂ ತ್ರಿಶಾ ಮದುವೆಯಾಗಲಿಲ್ಲ ಎಂದು ಹಲವು ವರ್ಷಗಳಿಂದ ಬೇಸರ ವ್ಯಕ್ತಪಡಿಸುತ್ತಿದ್ದರು ಈಗ ತಮ್ಮ ಮದುವೆ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ.. ತ್ರಿಶಾ ಖ್ಯಾತ ನಟರೊಬ್ಬರ ಜೊತೆ ಡೇಟಿಂಗ್ನಲ್ಲಿದ್ದಾರೆ, ಅವರನ್ನೇ ಮದುವೆ ಆಗ್ತಾರೆ ಎಂದೆಲ್ಲ ಸುದ್ದಿ ಕೆಲ ವರ್ಷಗಳಿಂದ ಹರಿದಾಡುತ್ತಿತ್ತು. ತ್ರಿಶಾ ಮದುವೆ ಮಾತ್ರವಲ್ಲದೆ, ತಮ್ಮ ಹನಿಮೂನ್ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ.
ನಟಿ ತ್ರಿಶಾ ಇನ್ಸ್ಟಾಗ್ರಾಂನಲ್ಲಿ ತಮ್ಮ ಹನಿಮೂನ್ ಬಗ್ಗೆಯೂ ಮಹತ್ವದ ವಿಚಾರ ರಿವೀಲ್ ಮಾಡಿದ್ದಾರೆ. ಈ ಹಿಂದೆ ಮದುವೆಯ ಬಗ್ಗೆ ಮಾತನಾಡಿದ್ದ ಅವರು ಸರಿಯಾದ ವ್ಯಕ್ತಿಯನ್ನು ಭೇಟಿಯಾದರೆ ಮಾತ್ರ, ಮದುವೆಯನ್ನು ಪರಿಗಣಿಸುತ್ತೇನೆ. ಆದರೆ ಆ ಸಮಯ ಇನ್ನೂ ಬಂದಿಲ್ಲ ಎಂದಿದ್ದರು. ಮದುವೆ ಕುರಿತು ಅವರ ಪ್ರಾಮಾಣಿಕ ಅಭಿಪ್ರಾಯ ಹಾಗೂ ಸ್ಪಷ್ಟತೆಯನ್ನು ಫ್ಯಾನ್ಸ್ ಕೂಡ ಮೆಚ್ಚಿದರು. ಆದರೆ ಈಗ ಉದ್ಯಮಿಯೊಬ್ಬರ ಜೊತೆ ಮದುವೆಯಾಗಲು ತ್ರಿಶಾ ಒಪ್ಪಿಕೊಂಡಿದ್ದಾರೆ ಎಂದು ಭಾರೀ ಚರ್ಚೆ ನಡೆಯುತ್ತಿರುವ ಹಿನ್ನೆಲೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಸಲಿ ವಿಚಾರ ತಿಳಿಸಿದ್ದಾರೆ.

“ಜನರು ನನ್ನ ಜೀವನವನ್ನು ನನಗಾಗಿ ಪ್ಲ್ಯಾನ್ ಮಾಡುವುದನ್ನು ನಾನು ಇಷ್ಟಪಡುತ್ತೇನೆ. ಅವರು ನನ್ನ ಹನಿಮೂನ್ ಅನ್ನು ಸಹ ನಿಗದಿಪಡಿಸುವವರೆಗೆ ಕಾಯುತ್ತಿದ್ದೇನೆ” ಎಂದು ತ್ರಿಶಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಮದುವೆ ವದಂತಿಗಳಿಗೆ ಬುದ್ಧಿವಂತಿಕೆಯಿಂದ ತಿರುಗೇಟು ನೀಡಿದ್ದಾರೆ.. ಈಗ ಮತ್ತೆ ಉದ್ಯಮಿ ಜೊತೆಗೆ ಮದುವೆ ವದಂತಿ ಬೆನ್ನಲ್ಲೇ ನಟಿ ಕ್ಲಾರಿಟಿ ಕೊಟ್ಟಿದ್ದಾರೆ.



