ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ ಬಿಗ್ ಬಾಸ್ ಮುಂದಿನ ಸೀಸನ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ತೆಲುಗಿನ ಬಿಗ್ ಬಾಸ್ ಆರಂಭವಾಗಿ ಯಶಸ್ವಿಯಾಗಿದೆ. ಸದ್ಯ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ. ಇವರೇ ಈ ಬಾರಿಯ ಸ್ಪರ್ಧಿಗಳು ಎನ್ನಲಾಗುತ್ತಿದ್ದು, ಸ್ಪರ್ಧಿಗಳ ಪಟ್ಟಿ ಈ ರೀತಿ ಇದೆ ನೋಡಿ.


‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘನಾ ಶೆಟ್ಟಿ ಇತ್ತೀಚೆಗೆ ಈಗಾಗಲೇ ಅವರ ನಟನೆಯ ‘ದಿಲ್ ಪಸಂದ್’ ಹಾಗೂ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲೂ ನಟಿಸಿದ್ದಾರೆ. ಇವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎನ್ಬಲಾಗಿದೆ. ಜೊತೆಗೆ ‘ಎಕ್ಸ್ಕ್ಯೂಸ್ ಮಿ’ ಸಿನಿಮಾ ಮೂಲಕ ಕನ್ನಡದಲ್ಲಿ ಸಂಚಲನ ಸೃಷ್ಟಿಸಿದ್ದ ನಟ ಸುನೀಲ್ ರಾವ್ ಆಗಮಿಸಲಿದ್ದಾರಂತೆ.

ಇನ್ನುಳಿದಂತೆ ಗಾಯಕ ನಿನಾದ್, ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರ, ದಿ.ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್, ರ್ಯಾಪರ್-ಸಿಂಗರ್ ಇಶಾನಿ, ಇಡೀ ಕರ್ನಾಟಕವನ್ನೇ ಮಾತಿನ ಮೂಲಕ ಮರಳು ಮಾಡಿದ್ದ ಡ್ರೋನ್ ಪ್ರತಾಪ್, ಸೋಶಿಯಲ್ ಮೀಡಿಯಾ ಸ್ಟಾರ್ ಗಳಾದ ಶಿಲ್ಪ ಗೌಡ, ಭೂಮಿಕ ಬಸವರಾಜ್, ಬಿಂದು ಗೌಡ ಕೂಡ ಈ ಬಾರಿಯ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಸದ್ಯ, ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸ್ಪರ್ಧಿಗಳ ಪಟ್ಟಯಲ್ಲಿ ಇವರೆಲ್ಲರ ಹೆಸರು ತಳುಕು ಹಾಕುತ್ತಿದೆ. ಈ ಬಾರಿ ಓಟಿಟಿ ಸೀಸನ್ ಇಲ್ಲದೆ ಮುಂದಿನ ಅಕ್ಟೋಬರ್ ಮೊದಲ ವಾರ ನೇರವಾಗಿ ಟಿ.ವಿ. ಬಿಗ್ ಬಾಸ್ 10 ಆರಂಭವಾಗಲಿದೆ ಎನ್ನಲಾಗಿದೆ. ಬಿಗ್ ಬಾಸ್ 10ರ ಹೊಸ ಪ್ರೋಮೋ ಕೂಡ ಸಕ್ಕತ್ ಸದ್ದು ಮಾಡುತ್ತಿದೆ.



