ಕ್ರಿಕೆಟ್, ಕಬಡ್ಡಿ, ಪುಟ್ಬಾಲ್ ಇಂತಹ ನೂರಾರು ಆಟಗಳಿವೆ ಅವುಗಳನ್ನು ಆಡಲು ಯಾರು ಕೂಡ ಭಯ ಪಡುವುದಿಲ್ಲ. ಆದರೆ ಸದ್ಯ, ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿರುವ ಈ ಒಂದು ಆಟವನ್ನ ನೋಡಿದ್ರೆ ಜೀವ ಬಾಯಿಗೆ ಬರುತ್ತೆ, ಇದನ್ನ ಆಡೋದಿಕ್ಕೆ ಎರಡೆರಡು ಗುಂಡಿಗೆ ಇರಬೇಕು. ಅದು ಅಷ್ಟೊಂದು ಅಪಾಯಕಾರಿ ಆಟನಾ?, ಹಾಗಿದ್ರೆ ಆ ಆಟ ಯಾವುದು?, ಅದನ್ನ ಆಡೋದು ಹೇಗೆ? ಎಂಬುದನ್ನ ಈ ವರದಿಯಲ್ಲಿ ನೋಡೋಣ.
ನೀವು ಜಾತ್ರೆಗಳಲ್ಲಿ ಅಥವಾ ವಂಡರ್ ಲಾ ಇತ್ಯಾದಿ ಕಡೆ ಜಾಯಿಂಟ್ ವೀಲ್ ಕಂಡಿರಬಹುದು ಅದು ಕೇವಲ ಟ್ರೇಲರ್ ಅಷ್ಟೇ, ಅದನ್ನು ಮೀರಿಸುವಂತಹ ಜಗತ್ತಿನ ಅತ್ಯಂತ ಎತ್ತರದ ಜಾಯಿಂಟ್ ವೀಲ್ ಇರುವುದು ಕೆನಡಾದ ವಂಡರ್ ಲ್ಯಾಂಡ್ ನಲ್ಲಿರುವ ಯುಕಾನ್ ನಲ್ಲಿ. ನೂರಾರು ಅಡಿ ಎತ್ತರದಿಂದ ಹತ್ತಾರು ಜನರನ್ನು ಹೊತ್ತ ಈ ಜಾಯಿಂಟ್ ವೀಲ್ ಒಂದೇ ಬಾರಿಗೆ ನೆಲಕ್ಕೆ ಅಪ್ಪಳಿಸಿದಂತೆ ಕೆಳಗಿಳಿಯುತ್ತದೆ. ಇದರ ಅನುಭವ ಎಂತವರಿಗೂ ಜೀವ ಬಾಯಿಗೆ ಬರುವಂತೆ ಮಾಡುತ್ತದೆ.
ಸದ್ಯ, ಈ ವಿಡಿಯೋ ಟ್ವಿಟ್ಟರ್ ಸೇರಿದಂತೆ ಇತರೆ ಸಾಮಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಈ ವರೆಗೆ 3.4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 28,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 4,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ವಿಡಿಯೋ ಕಂಡವರೆಲ್ಲ ಬಾಯಿಗೊಂದರಂತೆ ಕಮೆಂಟ್ ಹಾಕುತ್ತಿದ್ದಾರೆ.
ವಿಡಿಯೋ ನೋಡಿದ ಒಬ್ಬ ವ್ಯಕ್ತಿ, ‘ಇಂತಹ ವಿಡಿಯೋ ಪೋಸ್ಟ್ ಮಾಡಬೇಡಿ ಇದು ಕನಸಿನಲ್ಲಿಯೂ ಭಯ ಬೀಳಿಸುವಂತಿದೆ’ ಎಂದಿದ್ದಾನೆ. ಮತ್ತೊಬ್ಬ ‘ ಈ ಆಟ ಆಡುವಾದ ಡೈಪರ್ ಹಾಕಿಕೊಳ್ಳಬೇಕು’ ಎಂದಿದ್ದಾನೆ. ಇನ್ನೊಬ್ಬ ‘ಜಾತ್ರೆಯಲ್ಲಿ ಜಾಯಿಂಟ್ ವೀಲ್ ನಲ್ಲಿ ಕುಳಿತೆ ವಾಂತಿ ಮಾಡಿಕೊಂಡಿದ್ದೆ. ಇನ್ನು ಇದರಲ್ಲಿ ಕುಳಿತರೆ ಹಾರ್ಟ್ ಅಟ್ಯಾಕ್ ಆಗೋದು ಗ್ಯಾರಂಟಿ’ ಎಂದಿದ್ದಾನೆ.