ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾ ಗೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ , ಇದರಿಂದ ದೊಡ್ಡ ದೊಡ್ಡ ಟೊರ್ನಾಮೆಂಟ್ಸ್ ಗಳಲ್ಲಿ ಸೋಲನ್ನು ಅನುಭವಿಸಿದೆ , 2023 ರ ಏಕದಿನ ವಿಶ್ವಕಪ್ ಇನ್ನೇನು ಶುರು ಆಗುತ್ತಿದೆ , ಅದಕ್ಕೂ ಮುಂಚೆ ಟೀಮ್ ಇಂಡಿಯಾ ಗೆ ದೊಡ್ಡ ಹೊಡೆತ ಬಿದ್ದಿದೆ , ದೊಡ್ಡ ಆಟಗಾರ ಮ್ಯಾಚ್ ವಿನ್ನರ್ ಕುಲದೀಪ್ ಯಾದವ್ ಗಾಯ ಗೊಂಡಿದ್ದಾರೆ , ಇವರ ಗಾಯ ಎಷ್ಟು ಗಂಭೀರವಾಗಿದೆ , ಹಾಗು ಸೆಲೆಕ್ಷನ್ ಕಮಿಟಿಯ ಟೆನ್ಷನ್ ಏಕೆ ಹೆಚ್ಚಾಗಿದೆ ಎಂದು ಈ ರಿಪೋರ್ಟ್ ನಲ್ಲಿ ತಿಳಿಯೋಣ.

ವೆಸ್ಟ್ ಇಂಡೀಸ್ ವಿರುದ್ಧ ಟಿ ಟ್ವೆಂಟಿ ಸರಣಿ ಆಡುತ್ತಿರುವ ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಗಾಯ ಗೊಂಡಿದ್ದಾರೆ , ಇದೆ ಕಾರಣಕ್ಕೆ ಅವರು ಗಯಾನ ದಲ್ಲಿ ನಡೆದ 2ನೇ ಟಿ ಟ್ವೆಂಟಿ ಪಂದ್ಯದಲ್ಲಿ ಆಡಲಿಲ್ಲ , ಬಿಸಿಸಿಐ ಪ್ರಕಾರ ಕುಲದೀಪ್ ಗೆ ಎಡಗೈ ನ ಹೆಬ್ಬೆಟ್ಟಿಗೆ ಇಂಜುರಿ ಆಗಿದೆ , ಆದರೆ ಇದರ ಬಗ್ಗೆ ಪೂರ್ತಿ ಅಪ್ಡೇಟ್ ಬಂದಿಲ್ಲ , ಮೂರನೇ ಟಿ ಟ್ವೆಂಟಿ ಕೂಡ ಕುಲದೀಪ್ ಆಡಬಹುದು ಎಂದು ಹೇಳಲಾಗುತ್ತಿದೆ.

ಏಷ್ಯಾ ಕಪ್ ಹಾಗು ವಿಶ್ವಕಪ್ ಮುಂದೆ ಇರುವ ಕಾರಣ ಟೀಮ್ ಇಂಡಿಯಾ ಗೆ ಇದು ದೊಡ್ಡ ಹೊಡೆತ ಎನ್ನಲಾಗುತ್ತಿದೆ , ICC ಟೂರ್ನಮೆಂಟ್ಸ್ ಗಳಲ್ಲಿ ಗಾಯಾಳುಗಳ ಸಮಸ್ಯೆ ಇಂದ ಟೀಮ್ ಇಂಡಿಯಾಗೆ ದೊಡ್ಡ ನಷ್ಟವಾಗಿದೆ , ಕಳೆದ ವರ್ಷ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಜಸ್ಪ್ರೀತ್ ಬುಮ್ರಾ ಇಲ್ಲದೆ ಟೀಮ್ ಇಂಡಿಯಾ ಸೆಮಿ ಫೈನಲ್ ಸೋತು ಬಂದಿತ್ತು , ಜೊತೆಗೆ WTC ಫೈನಲ್ ನಲ್ಲಿ ಕೂಡ ಬುಮ್ರಾ , ರಿಷಬ್ ಪಂತ್ , ಕೆ ಎಲ್ ರಾಹುಲ್ , ಶ್ರೇಯಸ್ ಅಯ್ಯರ್ ಇಲ್ಲದೆ ಟೀಮ್ ಇಂಡಿಯಾ ಆಡಿ ಸೋತು ಸುಣ್ಣವಾಗಿತ್ತು.
ಕಳೆದ ವರ್ಷ ಕುಲದೀಪ್ ಯಾದವ್ ಗೆ ಮಂಡಿಯ ಸರ್ಜರಿ ಆಗಿತ್ತು , ಗುಣಮುಖವಾಗಿ ಭಾರತದ ಏಕದಿನ ತಂಡಕ್ಕೆ ವಾಪಾಸ್ ಆದಮೇಲೆ ಸಿಕ್ಕ ಅವಕಾಶವನ್ನೆಲ್ಲ ಉಪಯೋಗಿಸಿಕೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ , ಈಗ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಏಳು ವಿಕೆಟ್ ಗಳನ್ನೂ ಕಬಳಿಸಿದ್ದಾರೆ , ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಅನ್ನು ಪಡೆದುಕೊಂಡಿದ್ದರು.
ಕುಲದೀಪ್ ಯಾದವ್ ಈಗ ಪ್ರಮುಖ ಆಟಗಾರ ಆಗಿದ್ದಾರೆ , ವರ್ಲ್ಡ್ ಕಪ್ ಗೆ ಟೀಮ್ ಸೆಲೆಕ್ಷನ್ ಹತ್ತಿರ ಇರುವಾಗ , ಅವರಿಗಾದ ಇಂಜುರಿ ಇಂದ ಸೆಲೆಕ್ಟರ್ಸ್ ಗೆ ಕಷ್ಟವಾಗಿದೆ , ಆದಷ್ಟು ಬೇಗ ಕುಲದೀಪ್ ಗುಣಮುಖವಾಗಿ ಟೀಮ್ ಗೆ ವಾಪಾಸ್ ಆಗಲಿ ಎಂದು ನಂಬಿಕೆ ಇಟ್ಟುಕೊಳ್ಳಬೇಕಿದೆ.



