ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2018ರಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಏ 29ರಂದು ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆಂಥೋನೀಸ್ ಫೈರಿ ಚರ್ಚ್ನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಕ್ರೈಸ್ತ ಸಂಪ್ರದಾಯದಂತೆ ಇಬ್ಬರೂ ಮದುವೆಯಾಗಿದ್ದರು. ನಟ ಜಗ್ಗೇಶ್ ಅವರು ಚಿರು ಜೊತೆಗಿನ ಹಳೆಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಚಿರು-ಮೇಘನಾ ರಾಜ್ ಮದುವೆ ಆಗುವುದಕ್ಕೆ ತಾವು ಹೇಗೆ ಕಾರಣ ಎಂಬುದನ್ನು ಅವರು, ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

‘ಒಂದು ದಿನ ರಾತ್ರಿ 11 ಗಂಟೆಗೆ ನನಗೆ ಕರೆಬಂತು! ಸಿಟ್ಟಿನಿಂದ ಯಾರು ಅಂದೆ..? ‘ನಾನು ಮಾಮ ಚಿರು’ ಅಂದ. ‘ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು’ ಅಂದೆ. ನಕ್ಕು, ‘ಪ್ಲೀಸ್ ಮಾಮ forget..’ಅಂದ. ‘ನಾನು, ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ-ಅಮ್ಮನ ಜೊತೆ ಮಾತಾಡಬೇಕು’ ಅಂದ.
ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅವರು ಹೇಳಿದ್ದು, ‘ಜಗ್ಗೇಶ್, ಅಷ್ಟಮಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ. ಅದುಮಾಡಿ ಮುಂದುವರೆಯಿರಿ ಎಂದರು. ಎಂದು ಜಗ್ಗೇಶ್ ನೆನಪನ್ನು ಬಿಚ್ಚಿಟ್ಟಿದ್ದಾರೆ.