ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಚರ್ಚೆಗೆ ಒಳಗಾದ ವಿಷಯಗಳ ಪೈಕಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಸುದ್ದಿ ಕೂಡ ಒಂದು. ಇವರಿಬ್ಬರ ವಿಚ್ಛೇದನ ಜನರ ಬಾಯಿಗೆ ಸಿಕ್ಕಿ, ಹಲವು ಗಾಸಿಪ್ ಗಳು ಕೇಳಿಬಂದವು. ಈ ಜೋಡಿ ಸಿಕ್ಕಾಪಟ್ಟೆ ಟ್ರೋಲ್ ಸಹ ಆಯಿತು. ಇಬ್ಬರು ವಿಚ್ಛೇದನ ಪಡೆದಿದ್ದು ಆಗಿದೆ, ದೂರ ಆಗಿ ತಮ್ಮ ತಮ್ಮ ಜೀವನಗಳನ್ನು ತಾವು ನೋಡಿಕೊಳ್ಳುತ್ತಿದ್ದಾರೆ. ಆದರೆ ಇವರ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಮಾತ್ರ ಕಡಿಮೆ ಆಗಿಲ್ಲ. ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಏನನ್ನಾದರೂ ಪೋಸ್ಟ್ ಮಾಡಿದಾಗ ವೈರಲ್ ಆಗುತ್ತಾರೆ. ಇದೀಗ ಇವರಿಬ್ಬರ ವಿಚ್ಛೇದನದ ಬಗ್ಗೆ ಇತ್ತೀಚೆಗೆ ರಾಜ್ಯ ಪ್ರಶಸ್ತಿ ಗೆದ್ದಿರುವ ನಟಿ ಅನುಪಮಾ ಅವರು ಮಾತನಾಡಿದ್ದಾರೆ. ಅನುಪಮಾ ಅವರು ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ..
ಅನುಪಮಾ ಗೌಡ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಈ ಮೂವರು ಸಹ ಬಿಗ್ ಬಾಸ್ ಶೋನಲ್ಲಿ ಭೇಟಿಯಾದವರು. ಒಂದೇ ಸೀಸನ್ ನಲ್ಲಿ ಕಾಣಿಸಿಕೊಂಡವರು. ಮೂವರು ಫಿನಾಲೆ ತಲುಪಿದ ಸ್ಪರ್ಧಿಗಳು, ಆದರೆ ವಿನ್ನರ್ ಆಗಿದ್ದು ಚಂದನ್ ಶೆಟ್ಟಿ. ಹಾಗಾಗಿ ಇವರುಗಳ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಬಿಗ್ ಬಾಸ್ ಶೋ ನಡೆಯುವಾಗ ಚಂದನ್ ಹಾಗೂ ನಿವೇದಿತಾ ನಡುವೆ ಅಷ್ಟೇನು ಆತ್ಮೀಯತೆ ಇದ್ದ ಹಾಗೆ ಕಂಡಿರಲಿಲ್ಲ. ಇಬ್ಬರು ಜಸ್ಟ್ ಫ್ರೆಂಡ್ಸ್ ಎನ್ನುವ ಹಾಗೆಯೇ ಇದ್ದರು, ಒಮ್ಮೆ ಚಂದನ್ ಶೆಟ್ಟಿ ನಿವೇದಿತಾ ತಮ್ಮ ತಂಗಿ ಎನ್ನುವ ಹಾಗೆ ಹೇಳಿದ್ದು ಇದೆ. ಆದರೆ ಶೋ ಮುಗಿದ ಬಳಿಕ ಇಬ್ಬರು ಹೆಚ್ಚಾಗಿ ಮೀಟ್ ಮಾಡುವುದಕ್ಕೆ ಶುರು ಮಾಡಿದರು, ಚಂದನ್ ಶೆಟ್ಟಿ ಹಲವು ಸಾರಿ ಮೈಸೂರಿಗೆ ಬಂದು ನಿವೇದಿತಾ ಅವರನ್ನು ಭೇಟಿ ಮಾಡಿದ್ದು ಇದೆ.

ಯುವದಸರಾ ವೇದಿಕೆ ಮೇಲೆ ನಿವೇದಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿ, ಕೆಲವೇ ತಿಂಗಳುಗಳಲ್ಲಿ ಇಬ್ಬರು ಮದುವೆಯಾದರು..ಮದುವೆಯಾದ ನಂತರ ಚೆನ್ನಾಗಿಯೇ ಇದ್ದು, ರಾಜ ರಾಣಿ ಶೋನಲ್ಲಿ ಇಬ್ಬರು ಸ್ಪರ್ಧಿಸಿದ್ದರು, ಆ ಶೋನಲ್ಲಿ ಸಹ ಫಿನಾಲೆ ತಲುಪಿದ್ದರು. ಅನ್ಯೋನ್ಯವಾಗಿದ್ದ ಈ ಜೋಡಿಯ ಮೇಲೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಇವರಿಬ್ಬರು ಸಹ ಕಳೆದ ವರ್ಷ ವಿಚ್ಛೇದನ ಪಡೆದರು. ಇಬ್ಬರು ದೂರ ಆದ ವಿಚಾರಕ್ಕೆ ನೆಟ್ಟಿಗರು ಶಾಕ್ ಆಗಿದ್ದರು. ನಿವೇದಿತಾ ಅವರಿಗೆ ಶೋಕಿ ಜಾಸ್ತಿ ಚಂದನ್ ಶೆಟ್ಟಿ ಅವರಿಗೆ ತಕ್ಕ ಹೆಂಡತಿ ಅಲ್ಲ ಎನ್ನುವ ಮಾತುಗಳು ಮೊದಲಿನಿಂದಲೇ ಕೇಳಿ ಬಂದಿದ್ದು ಇದೆ. ನಿವೇದಿತಾ ಗೌಡ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಆಯಿತು. ಇದೆಲ್ಲವೂ ಒಂದು ಕಡೆಯಾದರೆ ಇವರಿಬ್ಬರು ಸ್ವಇಚ್ಛೆಯಿಂದ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡಿ, ದೂರವಾಗಿ ಇಂದು ನೆಮ್ಮದಿಯ ಜೀವನ ನಡೆಸುತ್ತಿರುವುದಂತೂ ಸತ್ಯ.
ವಿಚ್ಛೇದನ ಸುದ್ದಿ ವೈರಲ್ ಆದ ಬಳಿಕ ನಿವೇದಿತಾ ಗೌಡ ಬಗ್ಗೆ ಹೆಚ್ಚು ನೆಗಟಿವ್ ಕಾಮೆಂಟ್ಸ್ ಗಳು ಬಂದು, ಇಬ್ಬರು ಅತಿಯಾಗಿ ಟ್ರೋಲ್ ಆದ ನಂತರ ಚಂದನ್ ನಿವೇದಿತಾ ಇಬ್ಬರು ಸಹ ಜೊತೆಯಾಗಿ ಬಂದು ಪ್ರೆಸ್ ಮೀಟ್ ನಲ್ಲಿ ಪಾಲ್ಗೊಂಡು, ತಮ್ಮ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ದೂರ ಆಗಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿ, ಇಲ್ಲ ಸಲ್ಲದ ವಿಷಯಗಳನ್ನು ಎಲ್ಲಿಯೂ ಹಬ್ಬಿಸಬೇಡಿ ಎಂದು ಜನರಲ್ಲಿ ಕೇಳಿಕೊಂಡರು. ಇದೆಲ್ಲಾ ಏನೇ ನಡೆದರು ಜನರು ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಂತೂ ನಿಲ್ಲುವುದೇ ಇಲ್ಲ. ಆಗಾಗ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಲೈಫ್ ಬಗ್ಗೆ ನೆಟ್ಟಿಗರ ವಲಯದಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ನಟಿ ಅನುಪಮಾ ಗೌಡ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನ ಒಂದರಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ಉತ್ತರ ಕೊಟ್ಟಿರುವ ಅನುಪಮಾ ಗೌಡ ಅವರು. “ಚಂದನ್ ಹಾಗೂ ನಿವೇದಿತಾ ತಗೊಂಡಿರೋ ಪರ್ಸನಲ್ ಡಿಸಿಷನ್ ಅದು. ಅವರ ನಿರ್ಧಾರವನ್ನ ನಾವು ಜಡ್ಜ್ ಮಾಡೋದು ಸರಿ ಹೋಗೋದಿಲ್ಲ, ತಪ್ಪಾಗುತ್ತದೆ. ದೂರ ಆಗಿದ್ದಾರೆ ಅಂದ್ರೆ ಅದರ ಹಿಂದೆ ಒಂದು ಕಾರಣ ಇದ್ದೇ ಇರುತ್ತದೆ. ಆ ಕಾರಣ ಏನಿದೆಯೋ ಅದನ್ನ ಸರಿಯಾಗಿ ಉಪಯೋಗಿಸಿಕೊಳ್ಳೋದು ಒಳ್ಳೆಯದು ಅನ್ನೋದು ನನ್ನ ಅಭಿಪ್ರಾಯ ನಿವೇದಿತಾ ಜೊತೆಗೆ ನನಗೆ ಹೆಚ್ಚು ಕನೆಕ್ಷನ್ ಇಲ್ಲ ಹಾಗಾಗಿ ಅವರ ಬಗ್ಗೆ ನಾನು ಏನು ಹೇಳೋಕೆ ಹೋಗೋದಿಲ್ಲ. ಬಿಗ್ ಬಾಸ್ ಮನೆಯೊಳಗೆ ಇದ್ದ ಸ್ನೇಹ ಹೊರಗಡೆ ಬಂದಮೇಲೆ ಸಹ ಚಂದನ್ ಜೊತೆಗೆ ನನ್ನ ಫ್ರೆಂಡ್ಶಿಪ್ ಒಂದೇ ರೀತಿ ಇತ್ತು. ನಮ್ಮ ಬಾಂಡ್ ಬೇರೆ ಥರವೇ ಇದೆ..
ಅವರಿಬ್ಬರ ರಿಲೇಶನ್ಷಿಪ್ ಬಗ್ಗೆ ಮಾತಾಡೋದು ನನ್ನ ಕೆಲಸ ಅಲ್ಲ. ಹೀಗೆ ಆದಾಗ ನಾನು ಚಂದನ್ ಗೆ ಹೇಳಿದ್ದು ಒಂದೇ ಮಾತು, ನೀನು ಗಟ್ಟಿಯಾಗಿರು ಅಂತ ಹೇಳಿದ್ದು, ಅದನ್ನ ಬಿಟ್ಟು ಇನ್ನೇನು ಹೇಳಿಲ್ಲ. ಕಾರಣ ಏನು ಅಂತ ಕೂಡ ಕೇಳೋಕೆ ಹೋಗಿಲ್ಲ. ಕೇಳೋ ಅವಶ್ಯಕತೆ ಕೂಡ ಇಲ್ಲ ಅನ್ಸತ್ತೆ. ಒಬ್ಬ ಫ್ರೆಂಡ್ ಆಗಿ ಅವನು ಚೆನ್ನಾಗಿರಬೇಕು ಅಂತ ಅಷ್ಟೇ ನಾನು ಬಯಸೋದು…” ಎಂದಿದ್ದಾರೆ ಅನುಪಮಾ ಗೌಡ. ಒಂದು ಶೋ ಇಂದ ಶುರುವಾದ ಸ್ನೇಹ, ಆರೇಳು ವರ್ಷಗಳ ನಂತರ ಸಹ ಹೀಗೆ ಇದೆ. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಮಿಡಿಯುತ್ತಾರೆ, ಜೊತೆಗಿರುತ್ತಾರೆ ಎನ್ನುವುದು ಬಹಳ ಸಂತೋಷವಾದ ವಿಷಯ. ಚಂದನ್ ಶೆಟ್ಟಿ ಹಾಗೂ ಅನುಪಮಾ ಗೌಡ ಅವರ ಫ್ರೆಂಡ್ಶಿಪ್ ಸದಾ ಹೀಗೆ ಇರಲಿ ಎಂದು ಹಾರೈಸೋಣ.
ಅನುಪಮಾ ಅವರಿಗೆ ಅವಾರ್ಡ್ ಬಂದಿರೋದಕ್ಕೆ ವಿಶ್ ಮಾಡೋಣ..

ಇನ್ನು ಚಂದನ್ ಶೆಟ್ಟಿ ಅವರು ವಿಚ್ಛೇದನ ಪಡೆದ ಬಳಿಕ ಬ್ರೇಕ್ ತೆಗೆದುಕೊಂಡಿಲ್ಲ, ಬದಲಾಗಿ ಸಾಂಗ್ ಕಂಪೋಸ್ ಮಾಡೋದರಲ್ಲಿ ಬ್ಯುಸಿ ಆಗಿದ್ದಾರೆ. ಹೊರದೇಶಗಳಿಗೆ ಟ್ರಿಪ್ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಅವರ ಸಿನಿಮಾ ಕೆಲಸಗಳು ಸಹ ಉತ್ತಮವಾಗಿ ಸಾಗುತ್ತಿದೆ. ಇನ್ನುಮುಂದೆ ತಮ್ಮ ಅಭಿಮಾನಿಗಳಿಗೆ ಹೆಚ್ಚು ಹಾಡುಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಚಂದನ್ ಶೆಟ್ಟಿ. ಈ ಬೆಳೆವಣಿಗೆ ಬೇಕು ಅಂತಿದ್ದಾರೆ ಫ್ಯಾನ್ಸ್. ಇನ್ನು ನಿವೇದಿತಾ ಗೌಡ ಸಹ ಆಲ್ಬಮ್ ಸಾಂಗ್ಸ್ ಹಾಗೂ ಇನ್ನಿತರ ವಿಚಾರಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ರೀಲ್ಸ್ ಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇಬ್ಬರು ತಮ್ಮ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.