ಒಂದು ಅಮೂಲ್ಯ ಪೋಟೊಕ್ಕಾಗಿ ದೇವೇಗೌಡರು ಮನವಿ ಮಾಡಿದ್ದಾರೆ. ದೇವೇಗೌಡರು ಶಾಸಕರಾಗಿದ್ದಾಗ ಮೈಸೂರು ರಾಜವಂಶಸ್ಥ ಶ್ರೀಜಯಚಾಮರಾಜೇಂದ್ರ ಒಡೆಯರ್ ಅವರ ಜತೆ ಹೊಳೆನರಸೀಪುರದ ಪ್ರವಾಸಿ ಮಂದಿರದಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ್ದರು. ಆ ಸಂದರ್ಭದಲ್ಲಿ ಫೋಟೋ ಸೆರೆಹಿಡಿಯಲಾಗಿತ್ತು. ಆದರೆ ಆ ಫೋಟೋ ದೇವೇಗೌಡ ಅವರ ಬಳಿ ಇಲ್ಲ. ಅದು ಕಾಣೆಯಾಗಿದೆ.
ಅಪರೂಪದ ಫೋಟೋ ಹೊಳೆನರಸೀಪುರದಲ್ಲಿ ದೇವೇಗೌಡರು ಇದ್ದ ಮನೆಯಲ್ಲಿ ಇತ್ತಂತೆ. ಆದರೆ ದೇವೇಗೌಡ ಅವರು ಮನೆ ಬದಲಿಸುವ ವೇಳೆ ಆ ಫೋಟೋ ಕಾಣೆಯಾಗಿದೆ. ಆದರೆ ಹೇಗೆ ಕಾಣೆಯಾಗಿದೆ? ಆ ಫೋಟೋವನ್ನು ಯಾರು ತೆಗೆದುಕೊಂಡು ಹೋಗಿದ್ದಾರೆ? ಈಗ ಆ ಫೋಟೋ ಎಲ್ಲಿದೆ? ಎಂಬ ಯಾವುದೇ ಸುಳಿವು ಇಲ್ಲ.
ಯಾರ ಬಳಿಯೇ ಇದ್ದರೂ ಅದನ್ನು ವಾಪಾಸ್ ಮಾಡಿ
. ಆ ಫೋಟೋದ ಪ್ರಿಂಟ್ ಹಾಕಿಸಿ ಮತ್ತೆ ನಿಮಗೇ ವಾಪಾಸ್ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಮನವಿ ಮಾಡಿದ್ದಾರೆ.ಫೋಟೋ ಸಿಕ್ಕವರು 9448653584 ಈ ನಂಬರ್ ಮೂಲಕ ಸಂಪರ್ಕಿಸುವಂತೆಯೂ ಮನವಿ ಮಾಡಿದ್ದಾರೆ.
ಫೋಟೊ ನನ್ನ ಪಾಲಿಗೆ ಅಮೂಲ್ಯ ಮತ್ತು ಅವಿಸ್ಮರಣೀಯ. ಅದು ಯಾರ ಬಳಿಯೇ ಇದ್ದರೂ ದಯವಿಟ್ಟೂ ಹಿಂದಿರುಗಿಸಿ. ಪ್ರಿಂಟ್ ಹಾಕಿಸಿ ನಿಮಗೇ ವಾಪಸ್ ಕೊಡುತ್ತೇನೆ’ ಎಂದು ದೇವೇಗೌಡರು ಮನವಿ ಮಾಡಿದ್ದಾರೆ.